ವಿಶ್ವಮಟ್ಟದಲ್ಲಿ ಸಾಧನೆಗೈದರೂ ರಾಜ್ಯದಲ್ಲಿಲ್ಲ ಮನ್ನಣೆ!
Team Udayavani, Dec 16, 2017, 12:41 PM IST
ಒಂದಲ್ಲ ಎರಡಲ್ಲ, 4 ಬಾರಿ ವಿಶ್ವ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಪಡೆದರೂ ರಾಜ್ಯದಲ್ಲಿ ಒಂದು ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಿದರೂ ಈವರೆಗೆ ಉದ್ಯೋಗ ಲಭಿಸಿಲ್ಲ. ಲಕ್ಷಾಂತರ ರೂ. ಸಾಲ ಮಾಡಿ, ಕ್ರೀಡಾ ತರಬೇತಿ ಪಡೆದು ಪದಕ ಗೆದ್ದರೂ ಇಲ್ಲಿಲ್ಲ ಮನ್ನಣೆ. 2014ರಲ್ಲಿ ರಾಷ್ಟ್ರೀಯ ಪದಕ ಗೆದ್ದಿದ್ದಕ್ಕೆ ಸರ್ಕಾರ ಇನ್ನೂ ನಗದು ಪುರಸ್ಕಾರ ಕೊಟ್ಟಿಲ್ಲ.
ಇದು ಆಳುವ ವರ್ಗದ ನಿರ್ಲಕ್ಷéವೋ ಅಥವಾ ಕ್ರೀಡಾಪಡುಗಳ ದುರಂತವೋ ಗೊತ್ತಿಲ್ಲ. ಇದರಿಂದ ಅಂತಾರಾಷ್ಟ್ರೀಯ ಕ್ರೀಡಾಪಟುವೊಬ್ಬರಿಗೆ ನಿತ್ಯ ಅನ್ಯಾಯವಾಗುತ್ತಿರುವುದಂತೂ ಸುಳ್ಳಲ್ಲ. ಅಂದಹಾಗೆ, ಇದು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ಗ್ಳಲ್ಲಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿರುವ ಕುಂದಾಪುರ ಮೂಲದ ಹೆಮ್ಮೆಯ ಕ್ರೀಡಾಪಟು ವಿಶ್ವನಾಥ ಭಾಸ್ಕರ ಗಾಣಿಗ ಅವರ ನೋವಿನ ಕತೆ.
ಬೆಂಗಳೂರಿನ ಜಿಟಿ ನೆಕ್ಸಸ್ ಸಾಫ್ಟ್ವೇರ್ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ, ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕಟ್‌ಬೆಳೂ¤ರಿನ ವಿಶ್ವನಾಥ ಗಾಣಿಗ, ಅವರು ಇತ್ತೀಚೆಗೆ ಕೇರಳದ ಅಲೆಪ್ಪಿಯಲ್ಲಿ ನಡೆದ ಏಷ್ಯನ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಈ ಟೂರ್ನಿಯಲ್ಲಿ 3 ಚಿನ್ನ ಸಹಿತ ಒಟ್ಟು 5 ಪದಕಗಳನ್ನು ರಾಜ್ಯದ ಸ್ಪರ್ಧಿಗಳು ಗೆದ್ದಿರುವುದು ವಿಶೇಷ.
ವಿಶ್ವದಾಖಲೆ ಸ್ವಲ್ಪದರಲ್ಲೇ ಮಿಸ್: ವಿಶ್ವನಾಥ ಗಾಣಿಗ 300 ಕೆಜಿ ಭಾರವನ್ನೆತ್ತಿ ಚಿನ್ನ ಗೆದ್ದರೂ ವಿಶ್ವದಾಖಲೆ ಮುರಿಯುವ ಪ್ರಯತ್ನದಲ್ಲಿ ಸ್ವಲ್ಪದರಲ್ಲಿಲೇ ವಂಚಿತರಾದರು. 326 ಕೆಜಿ ಭಾರವನ್ನು ಎತ್ತಲು ಪ್ರಯತ್ನಪಟ್ಟರೂ ಅದು ಸಾಧ್ಯವಾಗಿಲ್ಲ. 325.5 ಕೆಜಿ ವಿಶ್ವದಾಖಲೆಯಾಗಿದ್ದರೆ, 325 ಕೆಜಿ ತೂಕ ಎತ್ತಿರುವುದು ಏಷ್ಯಾ ಕ್ರೀಡಾಕೂಟದ ದಾಖಲೆಯಾಗಿದೆ. ಮುಂಬರುವ ವಿಶ್ವ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಈ ಸಾಧನೆ ಮಾಡುವೆ ಎಂದು ವಿಶ್ವನಾಥ ಗಾಣಿಗ ಅವರು ವಿಶ್ವಾಸದಿಂದ ಹೇಳುತ್ತಾರೆ.
ಸಾಧಕನ ಹಿನ್ನೆಲೆ: ದೇವಲ್ಕುಂದ ಬಾಳಿಕೆರೆಯ ಭಾಸ್ಕರ ಗಾಣಿಗ ಹಾಗೂ ಪದ್ಮಾವತಿ ದಂಪತಿಯ ಪುತ್ರನಾಗಿರುವ ವಿಶ್ವನಾಥ ಅವರು, ನೆಂಪುವಿನಲ್ಲಿ ಪ್ರಾಥಮಿಕ, ವಂಡ್ಸೆಯ ನೆಂಪು ಕಾಲೇಜಿನಲ್ಲಿ ಪಿಯುಸಿ, ಕುಂದಾಪುರದ ಭಂಡಾರ್‌ಕರ್ ಕಾಲೇಜಿನಲ್ಲಿ ಬಿಸಿಎ ಪದವಿ ಪಡೆದು, ಆ ಬಳಿಕ ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪೂರೈಸಿದರು. ಮೊದಲಿಗೆ ಕುಂದಾಪುರದ ಪ್ರಶಾಂತ ಶೇರಿಗಾರ್ ಗರಡಿಯಲ್ಲಿ ಪಳಗಿದ ವಿಶ್ವನಾಥ್ ಆ ಬಳಿಕ ಬೆಂಗಳೂರಿನಲ್ಲಿ, ಅನಂತರ ಪುಣೆಯಲ್ಲಿ ತರಬೇತಿ ಪಡೆದು ರಾಷ್ಟ್ರ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಹಲವು ಪದಕ ಜಯಿಸಿ ಖ್ಯಾತಿ ಗಳಿಸಿದ್ದಾರೆ.
3 ರಾಷ್ಟ್ರೀಯ ದಾಖಲೆ: 2017 ರಲ್ಲಿ ಕೇರಳದಲ್ಲಿ ನಡೆದ ಏಷ್ಯನ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ, ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‌ನಲ್ಲಿ 1 ಚಿನ್ನ, ಅದೇ ಟೂರ್ನಿಯ ಬೆಂಚ್ ಪ್ರಸ್ ಚಾಂಪಿಯನ್ ಶಿಪ್‌ನಲ್ಲಿ 1 ಬೆಳ್ಳಿ ಪದಕ, ಜಮ್ಶೆಡ್‌ಪುರದಲ್ಲಿ ನಡೆದ ಸುಬ್ರತಾ ಕ್ಲಾಸಿಕ್ ಇಂಟರ್‌ನ್ಯಾಶನಲ್ ಪವರ್ ಲಿಫ್ಟಿಂಗ್‌ನಲ್ಲಿ 1 ಚಿನ್ನ, ಅಂತಾರಾಷ್ಟಿಯ ಪವರ್ ಲಿಫ್ಟಿಂಗ್‌ನಲ್ಲಿ ಬಲಿಷ್ಠ ಪುರುಷ ಪ್ರಶಸ್ತಿ ಪಡೆದದ್ದು, ಒಟ್ಟಾರೆಯಾಗಿ 6 ಅಂತಾರಾಷ್ಟ್ರೀಯ, 17 ರಾಷ್ಟ್ರೀಯ ಪ್ರಶಸ್ತಿಯೊಂದಿಗೆ 3 ವೈಯಕ್ತಿಕ ರಾಷ್ಟ್ರೀಯ ದಾಖಲೆ ಇವರ ಹೆಸರಲ್ಲಿದೆ.
2014ರದೇ ನಗದು ಪುರಸ್ಕಾರ ಕೊಟ್ಟಿಲ್ಲ!: ಕ್ರೀಡಾಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದವರಿಗೆ ರಾಜ್ಯ ಸರ್ಕಾರ ನಗದು ಪುರಸ್ಕಾರ ನೀಡುವುದು ವಾಡಿಕೆ. ಆದರೆ ವಿಶ್ವನಾಥ ಗಾಣಿಗ ಅವರು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ 20ಕ್ಕೂ ಅಧಿಕ ಪದಕಗಳನ್ನು ಗೆದ್ದರೂ ಅವರಿಗೆ 2014ರಲ್ಲಿ ರಾಷ್ಟ್ರೀಯ ಪದಕ ಗೆದ್ದಿರುವುದಕ್ಕೆ ಇನ್ನೂ ನಗದು ಪುರಸ್ಕಾರ ಸಿಕ್ಕಿಲ್ಲ. ಕ್ರೀಡೆಗೆ ಅದರಲ್ಲೂ ಪವರ್ ಲಿಫ್ಟಿಂಗ್‌ನಂತಹ ಕಠಿಣ ಕ್ರೀಡೆಗೆ ಸರ್ಕಾರ ಕೊಡುವ ಬೆಲೆಯೇ ಇದು?!
ತರಬೇತಿಗೆ 2.50 ಸಾಲ: “ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಾಮನ್‌ವೆಲ್ತ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ನಾನು ಬ್ಯಾಂಕಿಂದ ಸುಮಾರು 2.50 ಲಕ್ಷ ರೂ. ಸಾಲ ಮಾಡಿದೆ. ಸರ್ಕಾರ ಪದಕ ಗೆದ್ದಿರುವುದಕ್ಕೆ ನಗದು ಪುರಸ್ಕಾರ ಏನಾದರೂ ಕೊಟ್ಟಿದ್ದರೆ ಸ್ವಲ್ಪವಾದರೂ ಅನುಕೂಲವಾಗುತ್ತಿತ್ತು. ಆದರೀಗ ಕೆಲಸವೂ ಸಿಕ್ಕಿಲ್ಲ. ಸಾಲವೂ ಸುಮಾರು 3.50 ಲಕ್ಷದಷ್ಟಿದೆ. ಅದನ್ನು ತೀರಿಸುವುದೇ ಸವಾಲಾಗಿದೆ.
ಕ್ರಿಕೆಟ್, ಹಾಕಿಯಂತಹ ಕ್ರೀಡೆಗಳಿಗೆ ಮಾತ್ರ ಸರ್ಕಾರ ಮನ್ನಣೆ ಕೊಡುತ್ತಿದೆ. ಪವರ್ ಲಿಫ್ಟಿಂಗ್ ಬಹಳಷ್ಟು ತ್ರಾಸದಾಯಕ ಕ್ರೀಡೆಯಾಗಿದ್ದರೂ ಅದಕ್ಕೆ ಪ್ರೊತ್ಸಾಹ ಕೊಡಲು ಯಾರೂ ಗಮನ ಕೊಡುವುದಿಲ್ಲ. ಕೆಲಸ ಕೊಡುತ್ತೇನೆಂದು ಕರೆಸಿ, ಶೈಕ್ಷಣಿಕ ಅರ್ಹತೆ ಕೇಳಿದರು. ಹಾಗಾದರೆ ನನ್ನ ಸಾಧನೆ, ಸ್ನಾತಕೋತ್ತರ ಪದವಿಗೆ ಬೆಲೆ ಇಲ್ಲವೇ?’ ಎಂದು ವಿಶ್ವನಾಥ ಭಾಸ್ಕರ ಗಾಣಿಗ ತಮ್ಮ ಅಳಲು ತೋಡಿಕೊಂಡರು.
ಕ್ರೀಡಾ ಕೋಟಾದಡಿ ಕರೆಸಿ ಅರ್ಹತೆ ಕೇಳಿದರು!: ರಾಜ್ಯದಲ್ಲಿ ಈಗ ಸಾಧಕ ಕ್ರೀಡಾಪಟುಗಳಿಗೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಹೊರತುಪಡಿಸಿದರೆ ಬೇರೆ ಇಲಾಖೆಯಲ್ಲಿ ಕ್ರೀಡಾ ಕೋಟಾದಡಿ ಕೆಲಸ ನೀಡುತ್ತಿಲ್ಲ. ವಿಶ್ವನಾಥ ಗಾಣಿಗ ಅವರನ್ನು 2015 ರಲ್ಲಿ ಅರಣ್ಯ ಇಲಾಖೆಯಲ್ಲಿ ಕ್ರೀಡಾ ಕೋಟಾದಡಿ ಕೆಲಸ ಕೊಡುತ್ತೇವೆ ಎಂದು ಕರೆಸಿಕೊಳ್ಳಲಾಗಿತ್ತು.
ದೈಹಿಕ ಪರೀಕ್ಷೆಯಲ್ಲಿ ಪ್ರಥಮ, ಲಿಖೀತ ಪರೀಕ್ಷೆಯಲ್ಲಿ 4ನೇ ಸ್ಥಾನ ಪಡೆದು ಉದ್ಯೋಗಾಂಕ್ಷಿಯಾಗಿದ್ದರು. ವಾಸ್ತವ ಆಗಿದ್ದರೂ “ನೀವು ಪದವಿಯಲ್ಲಿ ಬಿಸಿಎ ಮಾಡಿದ್ದು, ಅದಕ್ಕೆ ಮಾನ್ಯತೆಯಿಲ್ಲ. ಸೈನ್ಸ್ ಮಾಡಿದ್ದರೆ ಕೊಡಬಹುದಿತ್ತು’ ಎಂಬ ಕಾರಣ ಹೇಳಿ ಉದ್ಯೋಗ ನೀಡಲು ನಿರಾಕರಿಸಲಾಯಿತು ಎಂದು ವಿಶ್ವನಾಥ್ ಬೇಸರದಿಂದ ಹೇಳಿಕೊಳ್ಳುತ್ತಾರೆ.
* ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.