ಸಿಂಧು ಯಶಸ್ಸಿನ ಹಿಂದೊಂದು ನೋಟ
Team Udayavani, Sep 23, 2017, 3:55 AM IST
ರಿಯೋ ಒಲಿಂಪಿಕ್ಸ್ ಬೆಳ್ಳಿ ತಾರೆ ಪಿ.ವಿ.ಸಿಂಧು ಸದ್ಯ ಮುಟ್ಟಿದೆಲ್ಲ ಚಿನ್ನವಾಗುತ್ತಿದೆ. ಯಾವ ಕೂಟದಲ್ಲಿ ಪಾಲ್ಗೊಂಡರೂ ಎದುರಾಳಿಯನ್ನು ಬಗ್ಗುಬಡಿದು ಪದಕವನ್ನು ಬೇಟೆಯಾಡುತ್ತಾರೆ. ಒಮ್ಮೆ ಸೋತರೂ ಅದು ಹೋರಾಟದ ಸೋಲಾಗಿರುತ್ತೇ ಹೊರತು ಸುಲಭವಾಗಿ ಮಣಿಯುವುದಿಲ್ಲ. ಇಂತಹ ಒಂದು ಪ್ರತಿಭೆಯ ಯಶಸ್ಸಿನ ಹಿಂದೆ ಏನೇನಿದೆ ಅನ್ನುವುದರ ಬಗ್ಗೆ ಒಂದು ಕಿರು ನೋಟ.
ಬೆಳಗ್ಗೆ 4 ಗಂಟೆಗೆ ಅಭ್ಯಾಸ ಆರಂಭ
ಸಿಂಧು ದಿನಚರಿ ಆರಂಭವಾಗುವುದು ಬೆಳಗ್ಗೆ 3.30 ರಿಂದ. ಮುಂಜಾನೆ 4 ಗಂಟೆಯಿಂದ 7 ಗಂಟೆಯ ವರೆಗೆ ಗೋಪಿಚಂದ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಾರೆ. ನಂತರ ಸಂಜೆ 6.30 ರಿಂದ ಮತ್ತೆ ಕ್ರೀಡಾಂಗಣಕ್ಕೆ ಆಗಮಿಸಿ ಸುಮಾರು 2 ತಾಸು ಅಭ್ಯಾಸ ನಡೆಸುತ್ತಾರೆ. ಕೆಲವೊಮ್ಮೆ ತಡವಾಗಿ ಮಲಗಿದರೂ ಕೂಡಎಂದಿನಂತೆ ಮುಂಜಾನೆಯ ಅಭ್ಯಾಸಕ್ಕೆ ಕ್ರೀಡಾಂಗಣದಲ್ಲಿ ಹಾಜರಿರುತ್ತಾರೆ. ಮಹತ್ವದ ಕೂಟ ಮುಗಿದ ಮೇಲೆ ಸಂಜೆ ಸಮಯದಲ್ಲಿ ಮಾಡುವ ಅಭ್ಯಾಸವನ್ನು ಕೈಬಿಟ್ಟು ವಿಶ್ರಾಂತಿ ಪಡೆಯುತ್ತಾರೆ. ಆದರೆ ಮುಂಜಾನೆ ಸಮಯದ ಅಭ್ಯಾಸವನ್ನು ನಿಲ್ಲಿಸುವುದಿಲ್ಲ.
ಪ್ರತಿದಿನ ಓಡುತ್ತಾರೆ, ಸ್ವಿಮ್ಮಿಂಗ್ ಮಾಡುತ್ತಾರೆ
ಫಿಟೆ°ಸ್‌ಗೆಗಾಗಿ ಸಿಂಧು ಜಿಮ್‌ನಲ್ಲಿ ಬೆವರಿಳಿಸುವುದು ಅಷ್ಟೇ ಅಲ್ಲ. ಪ್ರತಿದಿನ ಸುಮಾರು 2 ಕಿ.ಮೀ. ಓಡುತ್ತಾರೆ. ವಾರದಲ್ಲಿ ಒಮ್ಮೆ 10 ಕಿ.ಮೀ ಓಡುತ್ತಾರೆ. ಅಭ್ಯಾಸದ ಸಮಯ ಮುಗಿದ ಮೇಲೆ, ಇಲ್ಲಿವೇ ಸಂಜೆ ಸಮಯದಲ್ಲಿ ಓಡುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಹಾಗೇ ಪ್ರತಿದಿನ ಅರ್ಧಗಂಟೆಯಿಂದ ಒಂದು ಗಂಟೆಯವರೆಗೆ ಸ್ವಿಮ್ಮಿಂಗ್ ಮಾಡುತ್ತಾರೆ. ಪ್ರತಿದಿನ 100 ಪುಶ್‌ಅಪ್, 200 ಸಿಟ್‌ಅಪ್ ಮಾಡುತ್ತಾರೆ. ಇದು ಸಿಂಧು ಫಿಟೆ°ಸ್‌ನಲ್ಲಿ ಮಹತ್ವ ವಹಿಸುತ್ತಿದೆ.
ಆಹಾರದಲ್ಲಿ ಕಟ್ಟು ನಿಟ್ಟು
ಕೈಯಲ್ಲಿ ದುಡ್ಡಿದೆ. ತಿನ್ನುವ ಬಯಕೆ ಇದೆ. ಆದರೂ ತಿನ್ನುವಂತಿಲ್ಲ. ಹೌದು, ಇಂದು ಸಿಂಧು ಸ್ಥಿತಿಗತಿ. ಆಕೆಗೆ ಸಿಹಿ ಪದಾರ್ಥವನ್ನು ತಿನ್ನುವ ಬಯಕೆ ಇದ್ದರೂ ಫಿಟೆ°ಸ್‌ಗಾಗಿ ತ್ಯಾಗ ಮಾಡಿದ್ದಾರೆ. ಕೂಟ ಇಲ್ಲದ ಸಮಯದಲ್ಲಿ ಅಲ್ಪಸ್ವಲ್ಪ ಉಪಯೋಗಿಸುತ್ತಾರೆ ಅಷ್ಟೇ, ಆದರೆ ಮಹತ್ವದ ಕೂಟ ಬಂದಾಗ ಸಿಹಿ ಪದಾರ್ಥಕ್ಕೆ ಸಂಪೂರ್ಣ ನಿಷೇಧ ಹಾಕುತ್ತಾರೆ. ಯಾವುದೇ ಕಾರಣಕ್ಕೂ ಅವುಗಳನ್ನು ತಿನ್ನುವುದಿಲ್ಲ. ನೀರನ್ನು ಹೆಚ್ಚಿನದಾಗಿ ಕುಡಿಯುತ್ತಾರೆ. ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟ ಈ ಮೂರು ಸಮಯದಲ್ಲಿಯೂ ಮಿತವಾದ ಆಹಾರವನ್ನು ಸೇವಿಸುತ್ತಾರೆ. ರಾತ್ರಿ ಊಟವನ್ನು ಬೇಗ ಮಾಡಿ ಬೇಗ ಮಲಗುವುದನ್ನು ರೂಢಿಸಿಕೊಂಡಿದ್ದಾರೆ.
ಕೆಲವು ಕೂಟಗಳನ್ನು ಕೈಬಿಡುವುದು ಯಾಕೆ?
ಯಾವುದೇ ಗಾಯದ ಸಮಸ್ಯೆ ಇಲ್ಲದೇ, ಫಿಟೆ°ಸ್ ಇದ್ದರೂ ಕೂಡ ಸಿಂಧು ಎಲ್ಲಾ ಕೂಟಗಳಲ್ಲಿಯೂ ಪಾಲ್ಗೊಳ್ಳುವುದಿಲ್ಲ. ಆಯ್ದ ಕೂಟಗಳಲ್ಲಿ ಮಾತ್ರ ಪಾಲ್ಗೊಳ್ಳುತ್ತಾರೆ. ಸತತವಾಗಿ 2 ಟೂರ್ನಿ ಯಾಡಿದರೆ ಮೂರನೇ ಟೂರ್ನಿಯನ್ನು ಕೈಬಿಡುತ್ತಾರೆ.
ಹೀಗೆ ಮಾಡುವ ಮುಖ್ಯ ಉದ್ದೇಶ ದೇಹ ದಣಿಯದಂತೆ ನೋಡಿ ಕೊಳ್ಳುವುದು. ಗಾಯಕ್ಕೆ ತುತ್ತಾಗದಂತೆ ಜಾಗೃತೆವಹಿಸುವುದು. ಒಮ್ಮೆ ನಿರಂತರವಾಗಿ ಒಂದರ ಹಿಂದೆ ಒಂದರಂತೆ ಕೂಟದಲ್ಲಿ ಪಾಲ್ಗೊಂಡರೆ ಸಿಂಧು ಯಾವಗಲೋ ವಿಶ್ವ ನಂ.1 ಶ್ರೇಯಾಂಕವನ್ನು ಪಡೆದಿರುತ್ತಿದ್ದರು. ಆಕೆಯ ಶ್ರೇಯಾಂಕ ವಿಶ್ವ ನಂ.1ಕ್ಕೇರದಿರಲು ಮುಖ್ಯ ಕಾರಣ ಆಕೆ ಕೆಲವು ಟೂರ್ನಿಗಳನ್ನು ಫಿಟೆ°ಸ್‌ಗಾಗಿ ಕೈಬಿಡುತ್ತಾರೆ. ಇದು ಸಿಂಧು ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ.
ಫ್ಯಾಷನ್‌ಗೂ ಸೈ
22 ವರ್ಷದ ಸಿಂಧು ಕೇವಲ ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಮಾತ್ರ ಮಿಂಚುತ್ತಿಲ್ಲ. ಅದರಾಚೆಗೂ ಹೆಸರು ಮಾಡುತ್ತಿದ್ದಾರೆ. ಹಲವು ಫ್ಯಾಷನ್ ಶೋದಲ್ಲಿ ಪಾಲ್ಗೊಂಡು ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ. ಕೆಲವು ಮ್ಯಾಗಜಿನ್ ಮುಖಪುಟಕ್ಕಾಗಿ ಸ್ಟೈಲೀಶ್ ನೋಟ ಬೀರಿದ್ದಾರೆ. ಫ್ಯಾಷನ್ ಶೋದಲ್ಲಿ ಪಾಲ್ಗೊಂಡ ಚಿತ್ರಗಳು ಯುವ ಹೃದಯವನ್ನ ಸೆಳೆಯುವುದಂತೂ ಖಚಿತ.
ಯಶಸ್ಸಿನ ಹಿಂದೊಬ್ಬ ಪ್ರಬಲ ಗುರು
ಇವತ್ತು ಸಿಂಧು ಒಲಿಂಪಿಕ್ಸ್, ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಪದಕ,ಈಗಾಗಲೇ ಮೂರು ಸೂಪರ್ ಸೀರೀಸ್ ಜಯ, ವಿವಿಧ ಕೂಟದಲ್ಲಿ ಪ್ರಶಸ್ತಿ ಕಿರೀಟ, ಚೀನಿ ಆಟಗಾರ್ತಿಯನ್ನು ಬಗ್ಗುಬಡಿದು ಮೇಲೆ ಬರುತ್ತಿದ್ದಾರೆ ಎಂದರೆ ಅದಕ್ಕೆಲ್ಲ ಮುಖ್ಯ ಕಾರಣ ಪಿ.ಗೋಪಿಚಂದ್. ಕೋಚ್ ಆಗಿರುವ ಗೋಪಿಚಂದ್ ಬ್ಯಾಡ್ಮಿಂಟನ್ ಪ್ರತಿಭೆಗಳನ್ನು ಹೇಗೆ ಬೆಳೆಸಬೇಕು ಅನ್ನುವುದನ್ನು ಚೆನ್ನಾಗಿ ಅರಿತುಕೊಂಡವರು. ಗೋಪಿಚಂದ್ ತರಬೇತಿ ನೀಡುವುದಕ್ಕಾಗಿ ಪ್ರತಿದಿನ ಮುಂಜಾನೆ 4 ಗಂಟೆಗೆ ಅಕಾಡೆಮಿಗೆ ಆಗಮಿಸುತ್ತಾರೆ. ಇದು ಅವರ ವೃತ್ತಿ ನಿಷ್ಠೆಯನ್ನು ತೋರಿಸುತ್ತದೆ.
ಸಿಂಧು ಗೆದ್ದಿರುವ ಪ್ರಮುಖ ಪ್ರಶಸ್ತಿಗಳು
2011 ಇಂಡೋನೇಷ್ಯಾ ಓಪನ್
2013 ಮಲೇಷ್ಯಾ ಮಾಸ್ಟರ್
2013 ಮಕಾವ್ ಓಪನ್
2013 ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಕಂಚು
2014 ಮಕಾವ್ ಓಪನ್
2014 ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಕಂಚು
2014 ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚು
2015 ಮಕಾವ್ ಓಪನ್
2016 ಮಲೇಷ್ಯಾ ಮಾಸ್ಟರ್
2016 ಚೀನಾ ಓಪನ್
2017 ಸೈಯದ್ ಮೋದಿ
2017 ಇಂಡಿಯಾ ಓಪನ್
2017 ಕೋರಿಯಾ ಓಪನ್
2016 ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ
2017 ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ
ಮಂಜು ಮಳಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.