ರೋಜರ್ ಫೆಡರರ್; ಫ್ರೆಂಚ್ ಓಪನ್‌ನಿಂದ ವಿಮುಖ
Team Udayavani, May 20, 2017, 11:43 AM IST
ಫೆಡರರ್‌ನ ಫ್ರೆಂಚ್ ಓಪನ್ ಆಡದಿರುವ ನಿರ್ಧಾರ ಹೆಚ್ಚು ಜಾಣ್ಮೆಯದು ಎಂದೇ ವಿಶ್ಲೇಷಿಸಲಾಗುತ್ತಿದೆ. ಹತ್ತಿರಹತ್ತಿರ 36 ವರ್ಷದ ಫೆಡರರ್ ಕಳೆದ ವರ್ಷವಷ್ಟೇ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿ ಆರು ತಿಂಗಳು ಟೆನಿಸ್‌ನಿಂದ ಹೊರಗಿದ್ದವರು. ಜನವರಿಯಲ್ಲಿ ಮರಳಿದ ಅವರು ಹೊಸ ಚೈತನ್ಯವನ್ನೇ ಪ್ರದರ್ಶಿಸಿದ್ದು ನಿಜ. ಆದರೂ ಅತಿ ಹೆಚ್ಚಿನ ಫಿಟ್‌ನೆಸ್ ಕೇಳುವ, ದೇಹದ ಶಕ್ತಿಯನ್ನೆಲ್ಲ ಬಸಿಯುವಂತೆ ಮಾಡುವ ಕ್ಲೇ ಕೋರ್ಟ್ ಫೆಡರರ್ ಅವರನ್ನು ಹಿಂಡಿಹಾಕುತ್ತದೆ. ಕೇವಲ ಸ್ಪರ್ಧಿಸಬೇಕು ಎಂಬ ಭಾರತೀಯ ಧ್ಯೇಯಕ್ಕಿಂತ ಆಡಿದರೆ ಪ್ರಶಸ್ತಿ ಗುರಿಯಿಟ್ಟುಕೊಂಡೇ ಆಡಬೇಕು ಎಂಬುದು ಫೆಡರರ್ ಇರಾದೆ ಎಂಬ ಮಾತೂ ಕೇಳಿಬಂದಿದೆ.
ಭಾರತೀಯರಿಗೆ ಕ್ರಿಕೆಟ್‌ನಿಂದ ಆಯ್ದ ಉದಾಹರಣೆಗಳಾದರೆ ಅರ್ಥ ಮಾಡಿಕೊಳ್ಳುವುದು ಸಲೀಸು. ಮೊದಲೆಲ್ಲ ಈ ಕ್ರಿಕೆಟಿಗರು ನಿವೃತ್ತಿ ಘೋಷಿಸಿದರು ಎಂದರೆ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಅವರು ಸ್ಥಾನ ತ್ಯಾಗ ಮಾಡುತ್ತಿದ್ದಾರೆ ಎಂದುಕೊಳ್ಳಬೇಕಾಯಿತು. ಆಟಗಾರರು ಬದಲಾದರು. ಒಬ್ಬ ಸದ್ಯ ಟೆಸ್ಟ್‌ಗೆ ನಿವೃತ್ತಿ ಎಂದರೆ ಇನ್ನೊಬ್ಬ ಟೆಸ್ಟ್ ಆಟಗಾರ ಕ್ರಿಕೆಟ್‌ನ ಉಳಿದ ಮಾದರಿಗಳಿಗೆ ನಿವೃತ್ತಿ ಅನ್ನುತ್ತಾನೆ. ನಾನಿನ್ನು ಕೇವಲ ಟಿ20 ಆಡುತ್ತೇನೆ ಎನ್ನುವವರಿದ್ದಾರೆ. ವಿಶ್ವದ ಅಪ್ರತಿಮ ಟೆನಿಸಿಗ ಸ್ವಿಜರ್‌ಲೆಂಡ್‌ನ ರೋಜರ್ ಫೆಡರರ್ ದಿನಗಳ ಹಿಂದೆ, ಈ ಬಾರಿ ರೋಲ್ಯಾಂಡ್ ಗ್ಯಾರಸ್‌ನ ಫ್ರೆಂಚ್ ಓಪನ್‌ನಲ್ಲಿ ಆಡುವುದಿಲ್ಲ ಎಂದು ಘೋಷಿಸಿದಾಗ ಟೆನಿಸ್ ಪ್ರಪಂಚ ಮೈ ಕುಲುಕಿ ನೋಡಿತು, ಗಾಬರಿಯಾಗಲಿಲ್ಲ. ಫೆಡರರ್ ಅಭಿಪ್ರಾಯಕ್ಕೆ ಬಹುಪಾಲು ಸಿಕ್ಕಿದ್ದು ಸಮ್ಮತಿ!
ಒಂದರ್ಥದಲ್ಲಿ ಫೆಡರರ್ ಮಾಡಿದ್ದು ಕ್ರಿಕೆಟಿಗರ ತರಹವೇ, ನಾನಿನ್ನು ಕ್ಲೇ ಕೋರ್ಟ್ ಅಂಕಣಗಳಲ್ಲಿ ಆಡುವುದಿಲ್ಲ. ಹಾರ್ಡ್‌ಕೋರ್ಟ್ ಹಾಗೂ ಹುಲ್ಲಿನಂಕಣದ ನನ್ನ ಕೆರಿಯರ್‌ನ್ನು ಇನ್ನೂ ಕೆಲ ಕಾಲ ವಿಸ್ತರಿಸುತ್ತೇನೆ. ಹಾಗಾಗೇ ಕೆಂಪು ಅವೆ ಮಣ್ಣಿನ ಫ್ರೆಂಚ್ ಓಪನ್‌ಗೆ ತಾವು ತೆರಳುವುದಿಲ್ಲ ಎಂಬರ್ಥದ ಟ್ವೀಟ್ ಮಾಡಿ ಪ್ರಕಟಿಸಿದರು. ಬಹುಸಂಖ್ಯಾತ ಪರಿಣಿತರು, ದಿಗ್ಗಜರು ಸ್ವಾಗತ ಮಾಡಿದ್ದು ಕೂಡ ತಪ್ಪರ್ಥದಲ್ಲಲ್ಲ.
ಫೆಡರರ್‌ಗೆ ಕ್ಲೇ ಆಗಿಬರದೇ?
ಹಾಗಾಗುವುದಿದೆ, ಕಪಿಲ್‌ದೇವ್ ನಿವೃತ್ತಿ ಘೋಷಿಸಿದಾಗ ಅದು ಭಾರತೀಯ ತಂಡಕ್ಕೇ ಒಳಿತಾಗಿತ್ತು! ಕಪಿಲ್ ಮೇಲಿನ ಪ್ರೀತಿಯ ಹೊರತಾಗಿಯೂ ಹೆಚ್ಚಿನ ಜನ ಇದನ್ನು ಸ್ವಾಗತಿಸಿದ್ದರು. ಫೆಡರರ್‌ರ ವಿಚಾರ ಬೇರೆ. 2017ರಲ್ಲಂತೂ ಅವರು ಅದ್ಭುತ ಫಾರ್ಮ್ನಲ್ಲಿದ್ದಾರೆ. ಈವರೆಗೆ ಒಂದು ಪಂದ್ಯದ ಪರಾಜಯದ ಹೊರತಾಗಿ ಗೆದ್ದಿರುವುದು 19 ಪಂದ್ಯ. ಬರೋಬ್ಬರಿ ಐದು ವರ್ಷಗಳ ತರುವಾಯ ಫೆಡರರ್ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದಾರೆ. ಅದರ ಜೊತೆಗೆ ಇಂಡಿಯಾನಾ ವೆಲ್ಸ್ ಹಾಗೂ ಮಿಯಾಮಿ ಎಟಿಪಿ ಟೂರ್ನಿಗಳ ಗೆಲುವು ಅವರದ್ದು. ಅವರು ಗಳಿಸಿರುವ 18 ಸಿಂಗಲ್ಸ್ ಗ್ರಾÂನ್‌ಸ್ಲಾಂ ಬುತ್ತಿಯ ಹತ್ತಿರಕ್ಕೂ ಸದ್ಯ ಯಾರೂ ಇಲ್ಲ ಬಿಡಿ!
ಹುಲ್ಲು ಮತ್ತು ಸಿಂಥೆಟಿಕ್ ಹಾರ್ಡ್ ಕೋರ್ಟ್‌ಗಳ ವೇಗದ ಅಂಕಣಗಳ ಪರಿಣತರಾದ ಫೆಡರರ್ ಕ್ಲೇ ಕೋರ್ಟ್‌ನಲ್ಲಿ ದುರ್ಬಲರೇ ಎಂಬ ಪ್ರಶ್ನೆ ಹಲವರಲ್ಲಿದೆ. 18 ಪ್ರಶಸ್ತಿಗಳಲ್ಲಿ ಫೇವರಿಟ್ ಅಂಕಣಗಳಿರುವ ವಿಂಬಲ್ಡನ್‌ನಲ್ಲಿ 7 ಹಾಗೂ ಯು.ಎಸ್.ಓಪನ್‌ನಲ್ಲಿ 5 ಪ್ರಶಸ್ತಿ ಪಡೆದಿರುವ ಫೆಡರರ್ ಫ್ರಂಚ್ ಓಪನ್‌ನಲ್ಲಿ ಸಂಪಾದಿಸಿರುವುದು ಏಕೈಕ ಪ್ರಶಸ್ತಿ, 2009ರಲ್ಲಿ ರಫೆಲ್ ನಡಾಲ್‌ರನ್ನು ಮಣಿಸಿ ಸಂಪಾದಿಸಿದ್ದು. ಈ ಒಂದು ಪ್ರಶಸ್ತಿ ಫೆಡರರ್ ಸಾಮರ್ಥ್ಯದ ಬಗ್ಗೆ ಶಂಕೆ ಮೂಡಿಸುತ್ತದೆ.
ವಾಸ್ತವ ಭಿನ್ನ. ಒಂದು ಫ್ರೆಂಚ್ ಸೇರಿದಂತೆ 11 ಕ್ಲೇ ಕೋರ್ಟ್ ಟೂರ್ನಿಗಳನ್ನು ಫೆಡರರ್ ಗೆದ್ದಿದ್ದಾರೆ. ಫ್ರೆಂಚ್ ಓಪನ್‌ನಲ್ಲಿಯೇ ಅವರು 5 ಫೈನಲ್ ಆಡಿದ್ದಾರೆ ಎಂಬುದು ಸರಳ ಸಂಗತಿಯಲ್ಲ. ಫೇವರಿಟ್ ಅಲ್ಲ ಎಂದು ಪ್ರಥಮ ಸುತ್ತಿನ ಸೋಲುಗಳ ಅವಮಾನ ಕಂಡಿಲ್ಲ. ಅಷ್ಟಕ್ಕೂ ಅವರ ಕ್ಲೇ ಕೋರ್ಟ್‌ಗಳ 211-66ರ ಸೋಲು ಗೆಲುವಿನ ಪ್ರದರ್ಶನ ತೀರಾ ಆಕರ್ಷಣೀಯವಲ್ಲ. ತಮ್ಮ ಕೆರಿಯರ್‌ನಲ್ಲಿ ಸತತ 65 ಗ್ರಾÂನ್ ಸ್ಲಾಂ ಆಡಿದ ಇತಿಹಾಸ ಬರೆದಿರುವ ರೋಜರ್ ಫೆಡರರ್ ಅವರು ಈವರೆಗೆ “ತಪ್ಪಿಸಿಕೊಂಡ 5 ಗ್ರಾÂನ್ ಸ್ಲಾಂನಲ್ಲಿ ಮೂರು ಫ್ರೆಂಚ್ ಓಪನ್! ಕಳೆದ ವರ್ಷವೂ ಅವರು ರೋಲ್ಯಾಂಡ್ ಗ್ಯಾರಸ್‌ನಲ್ಲಿ ಗಾಯ ಸಮಸ್ಯೆಯಿಂದ ಆಡಿರಲಿಲ್ಲ.
ನಡಾಲ್ ಎದುರು ಭಯ?
ಮತ್ತೆ ಫೆಡರರ್ ಪ್ರತಿಭೆ ಕುರಿತು ತಪ್ಪು ನಿರ್ಧಾರ ತರವಲ್ಲ. 1998ರಲ್ಲಿ ವೃತ್ತಿಪರ ಟೆನಿಸ್‌ಗಿಳಿದ ನಂತರ ಫೆಡರರ್ ಇದೇ ಪ್ರಥಮ ಬಾರಿಗೆ ಒಂದು ಸೀಸನ್‌ನಲ್ಲಿ ಕ್ಲೇ ಕೋರ್ಟ್‌ನಲ್ಲಿ ಒಂದೂ ಪಂದ್ಯವಾಡುತ್ತಿಲ್ಲ. 18 ಗ್ರ್ಯಾನ್ ಸ್ಲಾಂ ಜೊತೆಗೆ 10
ಗ್ರ್ಯಾನ್ ಸ್ಲಾಂ ಫೈನಲ್ ಆಡಿದ್ದಾರೆ. ಅದರಲ್ಲಿ ನಾಲ್ಕು ಬಾರಿ ನಡಾಲ್ ವಿರುದ್ಧ ಫ್ರೆಂಚ್ ಹಾಗೂ ಉಳಿದೆಡೆ 2 ಬಾರಿ ನಡಾಲ್‌ಗೆ ಪರಾಜಿತರಾಗುತ್ತಾರೆ. ಫೆಡರರ್‌ಗೆ ರಫೆಲ್ ನಡಾಲ್ ಎದುರಾಳಿಯಾಗದಿದ್ದರೆ ಗ್ರ್ಯಾನ್ ಸ್ಲಾಂ ಅಂಕಿಅಂಶಗಳೇನಾಗುತ್ತಿತ್ತು ಎಂಬುದನ್ನು ಊಹಿಸಬಹುದು. ಗ್ರ್ಯಾನ್ ಸ್ಲಾಂನಲ್ಲಿ ಈಗಲೂ ಅತಿ ಹೆಚ್ಚಿನ ಫೈನಲ್-28, ಅತಿ ಹೆಚ್ಚಿನ ಸೆಮಿಫೈನಲ್-41, ಗರಿಷ್ಠ ಕ್ವಾರ್ಟರ್ ಫೈನಲ್-49 ಕಂಡಿರುವುದು ಫೆಡರರ್ ಎಂಬುದು ನೆನಪಿನಲ್ಲಿರಲಿ.
ಸ್ವಾರಸ್ಯವೆಂದರೆ, ಫೆಡರರ್‌ನ ಫ್ರೆಂಚ್ ಓಪನ್ ಆಡದಿರುವ ನಿರ್ಧಾರ ಹೆಚ್ಚು ಜಾಣ್ಮೆಯದು ಎಂದೇ ವಿಶ್ಲೇಷಿಸಲಾಗುತ್ತಿದೆ. ಹತ್ತಿರಹತ್ತಿರ 36 ವರ್ಷದ ಫೆಡರರ್ ಕಳೆದ ವರ್ಷವಷ್ಟೇ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿ ಆರು ತಿಂಗಳು ಟೆನಿಸ್‌ನಿಂದ ಹೊರಗಿದ್ದವರು. ಜನವರಿಯಲ್ಲಿ ಮರಳಿದ ಅವರು ಹೊಸ ಚೈತನ್ಯವನ್ನೇ ಪ್ರದರ್ಶಿಸಿದ್ದು ನಿಜ. ಆದರೂ ಅತಿ ಹೆಚ್ಚಿನ ಫಿಟ್‌ನೆಸ್ ಕೇಳುವ, ದೇಹದ ಶಕ್ತಿಯನ್ನೆಲ್ಲ ಬಸಿಯುವಂತೆ ಮಾಡುವ ಕ್ಲೇ ಕೋರ್ಟ್
ಫೆಡರರ್ ಅವರನ್ನು ಹಿಂಡಿಹಾಕುತ್ತದೆ. ಕೇವಲ ಸ್ಪರ್ಧಿಸಬೇಕು ಎಂಬ ಭಾರತೀಯ ಧ್ಯೇಯಕ್ಕಿಂತ ಆಡಿದರೆ ಪ್ರಶಸ್ತಿ ಗುರಿಯಿಟ್ಟುಕೊಂಡೇ ಆಡಬೇಕು ಎಂಬುದು ಫೆಡರರ್ ಇರಾದೆ ಎಂಬ ಮಾತೂ ಕೇಳೀಬಂದಿದೆ.
ಇದರ ಜೊತೆಗೆ ಮತ್ತೆ ಮರಳಿರುವ ರಫೆಲ್ ನಾಡಾಲ್ ಅಪ್ರತಿಮ ಫಾರ್ಮ್ನಲ್ಲಿದ್ದಾರೆ. ಮೊಂಟೆ ಕಾರ್ಲೊ, ಬಾರ್ಸಿಲೋನಾ, ಮ್ಯಾಡ್ರಿಡ್‌ನಲ್ಲಿನ ಪ್ರಶಸ್ತಿ, ಈ ವರ್ಷದ ಎಟಿಪಿ ಅಂಕ ಗಳಿಕೆಯ ಅಗ್ರಸ್ಥಾನದ ಪ್ರದರ್ಶನ 9 ಫ್ರೆಂಚ್ ಓಪನ್ ಸೇರಿದಂತೆ 47 ಕ್ಲೇ ಕೋರ್ಟ್ ಪ್ರಶಸ್ತಿ ಪಡೆದಿರುವ ನಡಾಲ್‌ರನ್ನು ಫೇವರಿಟ್ ಮಾಡಿದೆ. ಫ್ರಾನ್ಸ್‌ನಲ್ಲಿ ನಡಾಲ್, ಇಂಗ್ಲೆಂಡ್‌ನ ಆ್ಯಂಡ್ರಿ ಮರ್ರೆ, ನೋವಾಕ್ ಜೋಕೋವಿಕ್ ಬಡಿದಾಡಿಕೊಂಡಿರಲಿ. ಎಟಿಪಿ ಅಂಕ ಗಳಿಕೆಯಲ್ಲಿ ನಡಾಲ್ ಅವರ ಬೆನ್ನಿಗೇ ಇದ್ದರೂ ಫೆಡರರ್ ವಿಂಬಲ್ಡನ್‌ಗೆ ತಯಾರಾಗಿ ಕಾಯುತ್ತಿರುತ್ತಾರೆ!
ಮತ್ತೆ ಕ್ಲೇ ಕೋರ್ಟ್ ಪ್ರವೇಶ?
ಫೆಡರರ್‌ರ ಟೆನಿಸ್ ಪ್ರೀತಿ ಪ್ರಶ್ನಾತೀತ. ಅವರು ಟೆಸ್ಟ್ ನಿವೃತ್ತಿ ಘೋಷಿಸುವ ಕ್ರಿಕೆಟಿಗರಂತೆ ಇನ್ನು ಮುಂದೆಂದೂ ಕ್ಲೇ ಕೋರ್ಟ್‌ನಲ್ಲಿ ಆಡುವುದಿಲ್ಲ ಎಂಬ ತರ್ಕವೇ ತಪ್ಪು. ಅವರ ಹೇಳಿಕೆಯಲ್ಲಿಯೇ ಮುಂದಿನ ವರ್ಷ ರೋಲ್ಯಾಂಡ್ ಗ್ಯಾರಸ್ ಸ್ಟೇಡಿಯಂಗೆ ಬರುವ ಆಶಾವಾದವಿದೆ. ಬಹುಷಃ 40ರ ಹರೆಯದಲ್ಲೂ ಫೆಡರರ್ ರ್ಯಾಕೆಟ್ ಬೀಸಿಯಾರು. ಸರಿಸುಮಾರು 5 ವರ್ಷ ಒಂದೂ ಗ್ರಾÂನ್‌ಸ್ಲಾಂ ಬಾರದಿದ್ದಾಗ, ಈ ನಡಾಲ್, ಜೋಕೋವಿಕ್, ಮರ್ರೆ ತರದವರು ವಿಜೃಂಭಿಸುವಾಗ ರೋಜರ್ ಫೆಡರರ್ ನಿವೃತ್ತರಾಗಿ ಗೌರವಪೂರ್ಣ ನಿರ್ಗಮನ ಪಡೆಯಲಿ ಎಂದು ಆಶಿಸಿದವರು ಕೋಟಿ ಮಂದಿ. ಆದರೆ ಫೆಡರರ್‌ಗೆ ತಮ್ಮ ದೇಹ ಗೊತ್ತು, ಸಾಮರ್ಥ್ಯ ಅರ್ಥವಾಗಿತ್ತು. ನಿವೃತ್ತಿಯ ತೂಗುಕತ್ತಿಯನ್ನು
ಲೆಕ್ಕಿಸದೆ ಮುಂದಡಿ ಇಟ್ಟಿದ್ದರಿಂದಲ್ಲವೇ ಈ ವರ್ಷದ ಆಸ್ಟ್ರೇಲಿಯನ್ ಓಪನ್ ಸಿಕ್ಕಿದ್ದು? ಅವರನ್ನು ಅವರ ಪಾಡಿಗೆ ಆಡಲು ಬಿಡೋಣ!
ಮಾ.ವೆಂ.ಸ.ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್- ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.