ನಾಯಕ ಸ್ಥಾನ ಕೊಹ್ಲಿಗೆ ಸವಾಲಾಗ್ತಾರೆ ರೋಹಿತ್‌


Team Udayavani, Jan 6, 2018, 12:24 PM IST

30.jpg

ಕೊಹ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್‌ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಟೆಸ್ಟ್‌ನಲ್ಲಿ ಕೊಹ್ಲಿ ಉತ್ತಮ ಬ್ಯಾಟಿಂಗ್‌ ಮಾಡುತ್ತಿದ್ದರೂ, ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಕೊಹ್ಲಿಗಿಂತ ರೋಹಿತ್‌ ಮುಂದಿದ್ದಾರೆ. ಇದನ್ನು ಭಾರತ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಸಂದೀಪ್‌ ಪಾಟೀಲ್‌ ಕೂಡ ಹೇಳಿಕೊಂಡಿದ್ದಾರೆ.

ನಾಯಕನಾಗಿ ಮತ್ತು ವೈಯಕ್ತಕವಾಗಿಯೂ ಭರ್ಜರಿ ಯಶಸ್ಸು ಕಾಣುತ್ತಿರುವ ವಿರಾಟ್‌ ಕೊಹ್ಲಿಗೆ ಯಾರೂ ಸವಾಲಾಗಲು ಸಾಧ್ಯವಿಲ್ಲ ಅನ್ನುವ ವಾತಾವರಣ ಕೆಲವೇ ತಿಂಗಳುಗಳ ಹಿಂದೆ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಲಂಕಾ ವಿರುದ್ಧದ ಪಂದ್ಯಗಳಲ್ಲಿ ನಾಯಕನಾಗಿ ರೋಹಿತ್‌ ಶರ್ಮ ಏಕದಿನ ಮತ್ತು ಟಿ20 ಸರಣಿ ಗೆಲ್ಲುವ ಮೂಲಕ ನಾಯಕ ಪಟ್ಟಕ್ಕೆ ಕೊಹ್ಲಿಗೆ ಪ್ರತಿಸ್ಪರ್ಧಿಯಾಗುವ ಸೂಚನೆ ನೀಡಿದ್ದಾರೆ.

ನಾಯಕ ವಿರಾಟ್‌ ಕೊಹ್ಲಿ ವಿಶ್ರಾಂತಿ ಪಡೆದ ಹಿನ್ನೆಲೆಯಲ್ಲಿ ಶ್ರೀಲಂಕಾದೊಂದಿಗಿನ ಮೂರು ಏಕದಿನ ಹಾಗೂ 3 ಟಿ20 ಪಂದ್ಯಗಳಿಗೆ ನಾಯಕನಾಗಿ ರೋಹಿತ್‌ ಆಯ್ಕೆಯಾಗಿದ್ದರು. ಆ ಮೂಲಕ, ಟೀಂ ಇಂಡಿಯಾದ ಕ್ಯಾಪ್ಟನ್‌ ಅನ್ನಿಸಿಕೊಳ್ಳಬೇಕೆಂಬ ಅವರ ಬಹುವರ್ಷಗಳ ಕನಸು ಈಡೇರಿತಾದರೂ, ಶ್ರೀಲಂಕಾ ಎದುರಿನ ಮೊದಲ ಏಕದಿನ ಪಂದ್ಯದಲ್ಲಿಯೇ ಕ್ಯಾಪ್ಟನ್‌ ರೋಹಿತ್‌ಗೆ ಹೀನಾಯ ಸೋಲೊಂದು ಎದುರಾಯಿತು. 

ಮೊದಲ ಸೋಲಿನಿಂದ ಪಾಠ ಕಲಿತ ರೋಹಿತ್‌, ಎರಡನೇ ಹಾಗೂ ಮೂರನೇ ಏಕದಿನ ಪಂದ್ಯಗಳಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಮೂಲಕ ತಮ್ಮ ನಾಯಕತ್ವದಲ್ಲಿ ಮೊದಲ ಏಕದಿನ ಸರಣಿಯನ್ನು ಗೆದ್ದರು. ಜತೆಗೆ ಎರಡನೇ ಏಕದಿನ ಪಂದ್ಯದಲ್ಲಿ ಮೂರನೇ ದ್ವಿಶತಕ ಬಾರಿಸುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೂ ಪಾತ್ರವಾದರು. 

ಆನಂತರ ಮೂರು ಪಂದ್ಯಗಳ ಟಿ20 ಪಂದ್ಯದಲ್ಲಿಯೂ ಅತಿ ವೇಗದ ಶತಕ ಸಿಡಿಸುವ ಮೂಲಕ ದಾಖಲೆ ನಿರ್ಮಿಸಿದ ರೋಹಿತ್‌, ಶ್ರೀಲಂಕಾ ತಂಡದ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿ ಶ್ರೀಲಂಕಾಗೆ ವೈಟ್‌ವಾಷ್‌ ರುಚಿ ತೋರಿಸಿದರು. ಹೀಗೆ ಎರಡು ಸರಣಿಗಳನ್ನು ಗೆದ್ದ ರೋಹಿತ್‌ ತಂಡದ ಕಾಯಂ ನಾಯಕ ಕೊಹ್ಲಿಗೆ ಸವಾಲಾಗುವ ಮಟ್ಟಕ್ಕೆ ಖಂಡಿತ ಬೆಳೆಯಲಿದ್ದಾರೆ ಎಂಬುದು ಈಗ ಕ್ರೀಡಾ ವಿಶ್ಲೇಷಕರ ಮಾತಾಗಿದೆ.

ಕೊಹ್ಲಿ ಸಮರ್ಥ
ನಾಯಕ ಸ್ಥಾನಕ್ಕೆ ಮಹೇಂದ್ರ ಸಿಂಗ್‌ ಧೋನಿ ವಿದಾಯ ಹೇಳಿದ ನಂತರ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡ ವಿರಾಟ್‌ ಕೊಹ್ಲಿ, ಈವರೆಗೆ ಎಲ್ಲ ಮಾದರಿಗಳಲ್ಲಿಯೂ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಇದರೊಂದಿಗೆ ಉತ್ತಮ ಫಾರ್ಮ್ ಮುಂದುವರಿಸಿರುವ ಕೊಹ್ಲಿ ಎರಡೂ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. 

ಹೀಗಾಗಿ ತಂಡದ ಆಯ್ಕೆ ಹಾಗೂ ಪ್ರಮುಖ ನಿರ್ಧಾರಗಳಲ್ಲಿ ಕೊಹ್ಲಿ ನಿರ್ಧಾರವೇ ಅಂತಿಮ ಎನ್ನುವ ಪರಿಸ್ಥಿತಿ ಸದ್ಯ ಬಿಸಿಸಿಐನಲ್ಲಿದೆ. ಇದರಿಂದಾಗಿ ಕ್ರಿಕೆಟ್‌ ಮಂಡಳಿಯ ಕೆಲ ಸದಸ್ಯರಿಗೆ ಕೊಹ್ಲಿ ಮೇಲೆ ಮುನಿಸಿದ್ದರೂ, ಕೊಹ್ಲಿ ಉತ್ತಮ ಫಾರ್ಮ್ನಲ್ಲಿರುವುದರಿಂದ ಅದನ್ನು ಬಹಿರಂಗವಾಗಿ ವ್ಯಕ್ತಪಡಿಸಲಾಗಿದೆ ಸುಮ್ಮನಿದ್ದಾರೆ ಎಂಬ ಮಾತುಗಳಿವೆ. ಅವಕಾಶ ಸಿಕ್ಕರೆ ಅವರೆಲ್ಲ ಕೊಹ್ಲಿ ಮೇಲೆ ಮುಗಿಬೀಳುವುದು ಖಚಿತ.

ರೋಬೋಟ್‌ ಅಲ್ಲ ಎಂದ ಕೊಹ್ಲಿ
ನ್ಯೂಜಿಲೆಂಡ್‌ ವಿರುದ್ಧ ಸರಣಿ ಜಯಿಸಿದ ವಿರಾಟ್‌ ಕೊಹ್ಲಿ, ತಾನೇನು ರೋಬೋಟ್‌ ಅಲ್ಲ. ತನಗೂ ವಿಶ್ರಾಂತಿ ಬೇಕಿದೆ ಎಂದಿದ್ದರು. ಜತೆಗೆ ಅನುಷ್ಕಾ ಜತೆ ವಿವಾಹ ಇದ್ದುದರಿಂದ ಟೂರ್ನಿಯಿಂದ ಹಿಂದೆ ಸರಿದಿದ್ದರು. ಅದನ್ನೇ ಕಾದಿದ್ದ ಬಿಸಿಸಿಐ ಶ್ರೀಲಂಕಾ ನಡುವಿನ ಏಕದಿನ ಹಾಗೂ ಟಿ20 ಸರಣಿಗೆ ಕೊಹ್ಲಿ ಜಾಗದಲ್ಲಿ ರೋಹಿತ್‌ ಶರ್ಮಾ ಅವರನ್ನು ತಂದು ಕೂರಿಸಿತು. ಅದಕ್ಕೆ ತಕ್ಕಂತೆ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ರೋಹಿತ್‌ ತಂಡವನ್ನು ಜಯದ ಹಾದಿಯಲ್ಲಿ ತೆಗೆದುಕೊಂಡು ಹೋಗುವ ಜತೆಗೆ, ವೈಯಕ್ತಿಕವಾಗಿಯೂ ಉತ್ತಮ ರನ್‌ ಕಲೆಹಾಕಿದ್ದಾರೆ.

ಯುವಕರಿಗೆ ಅವಕಾಶ
ಶ್ರೀಲಂಕಾ ಸರಣಿಗೆ ಆಯ್ಕೆಯಾಗಿದ್ದ ಎಲ್ಲ ಯುವ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿಕೊಳ್ಳಲು ರೋಹಿತ್‌ ಅವಕಾಶ ನೀಡಿದರು. ತಂಡಕ್ಕೆ ಆಯ್ಕೆಯಾಗಿದ್ದ ವಾಷಿಂಗ್‌ಟನ್‌ ಸುಂದರ್‌, ಜಯದೇವ್‌ ಉನಡ್ಕಟ್‌, ಮೊಹಮದ್‌ ಸಿರಾಜ್‌ಗೆ ಅವಕಾಶ ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸಿದ್ದು ವಿಶೇಷವಾಗಿತ್ತು. 

ಅಂದೇ ಭವಿಷ್ಯ ನುಡಿದಿದ್ದ ಪಾಂಟಿಂಗ್‌
ರೋಹಿತ್‌ ಶರ್ಮಾ 2013ರಿಂದಲೂ ಮುಂಬೈ ಇಂಡಿಯನ್ಸ್‌ ತಂಡದ ನಾಯಕತ್ವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಈ ಹಿಂದೆ ಸಚಿನ್‌ ತೆಂಡುಲ್ಕರ್‌ ಹಾಗೂ ಹರ್ಭಜನ್‌ ಸಿಂಗ್‌ ನಾಯಕತ್ವ ಬೇಡ ಎಂದಾಗ, ರೋಹಿತ್‌ ಆ ಜವಾಬ್ದಾರಿ ವಹಿಸಿಕೊಂಡಿದ್ದರು. ರೋಹಿತ್‌ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ಸೀಮಿತ ಓವರ್‌ಗಳಲ್ಲಿ ವಿರಾಟ್‌ ಕೊಹ್ಲಿಗೆ ರೋಹಿತ್‌ ಪರ್ಯಾಯವಾಗಬಲ್ಲರು ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಟಿಂಗ್‌ 2015ರಲ್ಲಿ ಮುಂಬೈ ಐಪಿಎಲ್‌ ಟ್ರೋಫಿ ಗೆದ್ದಾಗ ಹೇಳಿದ್ದರು.

3 ಐಪಿಎಲ್‌ ಕಪ್‌ ಗೆದ್ದ ಶ್ರೇಯಸ್ಸು
ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಮುಂಬೈ ಇಂಡಿಯನ್ಸ್‌ ತಂಡದ ನಾಯಕನಾದ ಬಳಿಕ ರೋಹಿತ್‌ ಶರ್ಮಾ 2013, 2015 ಹಾಗೂ 2017ರಲ್ಲಿ ತಂಡವನ್ನು ಚಾಂಪಿಯನ್‌ ಮಾಡುವ ಮೂಲಕ ತಾನೊಬ್ಬ ಉತ್ತಮ ನಾಯಕ ಎಂಬುದನ್ನು ಸಾಬೀತುಪಡಿಸಿದ್ದಾರೆ. ಆದರೆ, ಟೀಂ ಇಂಡಿಯಾ ನಾಯಕನಾಗಿರುವ ವಿರಾಟ್‌ ಕೊಹ್ಲಿ ಈವರೆಗೆ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವನ್ನು ಚಾಂಪಿಯನ್‌ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ, ರೋಹಿತ್‌ ಶರ್ಮಾಗೆ ಐಪಿಎಲ್‌ ಸಾಧನೆ ಬೆನ್ನಿಗಿದ್ದು, ಕೊಹ್ಲಿ ಫಾರ್ಮ್ ಕಳೆದುಕೊಂಡರೆ ಭಾರತ ತಂಡದ ನಾಯಕತ್ವ ಸ್ಥಾನ ರೋಹಿತ್‌ಗೆ ಒಲಿದರೂ ಅಚ್ಚರಿ ಇಲ್ಲ.

ವೆಂ.ಸುನೀಲ್‌ ಕುಮಾರ್‌

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.