ಗುಲಾಬಿ ಮೈನಾ
Team Udayavani, Nov 11, 2017, 11:32 AM IST
ಈ ಹಕ್ಕಿಗಳು ಸಾಮೂಹಿಕವಾಗಿ ವಲಸೆ ಹೋಗುತ್ತವೆ ಮತ್ತು ಅನೇಕ ಗೂಡುಗಳನ್ನು ಒಂದೇ ಕಡೆ ಕಟ್ಟಿ ಅದರಲ್ಲಿ ತಮ್ಮ ವಂಶಾಭಿವೃದ್ಧಿ ಮಾಡುತ್ತವೆ.
ಇದನ್ನು ಕೇಸರಿ ಮೈನಾ ಅಂತಲೂ ಕರೆಯುತ್ತಾರೆ. ಗೊರವಂಕ ಅಥವಾ ಮೈನಾದಷ್ಟು ದೊಡ್ಡ ದೇಹದ ಹಕ್ಕಿ ಇದು. ROSY STARLING (Sturnus roseus( Linnaeus) ) M-Myna + ಬೆನ್ನು, ಹೊಟ್ಟೆ ದೇಹದ ಪಾರ್ಶ್ವ ತಿಳಿ ಗುಲಾಬಿ ಬಣ್ಣ ಇದಿಂದ ಕೂಡಿರುತ್ತದೆ. ಗುಲಾಬಿ ಮೈನಾ 23 ಸೆಂ.ಮೀ ಗಾತ್ರವಿದೆ. ಎದೆ. ತಲೆ, ಬಾಲದ ಪುಕ್ಕವು ತಿಳಿ ಗುಲಾಬಿ ಬಣ್ಣ ಹೊಂದಿದೆ. ಕುಳಿತಾಗ ಮತ್ತು ಹಾರುವಾಗಲೂ ಈ ಬಣ್ಣ ಎದ್ದು ಕಾಣುತ್ತದೆ. ಇದರಿಂದಾಗಿಯೇ ಗುಲಾಬಿ ಮೈನಾ ಹಕ್ಕಿಯನ್ನು ಸುಲಭವಾಗಿ ಗುರುತಿಸ ಬಹುದು. ಗಂಡು ಹಕಿಯ ಭಾರ 59 ಗ್ರಾಂ ನಿಂದ 90 ಗ್ರಾಂ. ನಷ್ಟಿದೆ. ತುಂಬಾ ಸೂಕ್ಷ್ಮವಾಗಿ ಗಮನಿಸಿದರೆ ಹೆಣ್ಣು ಸ್ವಲ್ಪ ಚಿಕ್ಕದಾಗಿದೆ ಅನ್ನೋದು ತಿಳಿಯುತ್ತದೆ. ದಟ್ಟ ಗುಲಾಬಿ ಇಲ್ಲವೇ ತಿಳಿ ಹಳದಿಬಣ್ಣದ ಕಾಲು, ಚುಂಚನ್ನು ಹೊಂದಿದೆ. ಇದರ ರೆಕ್ಕೆ ದೃಢವಾಗಿದೆ. ಇದರಿಂದ ಬಹುದೂರ ವಲಸೆ ಹೋಗಲು ಅನುಕೂಲವಾಗಿದೆ.
ಗಂಡು, ಹೆಣ್ಣು ಮರಿಯಿಂದ ಒಂದುವರ್ಷದ ವರೆಗೆ ಒಂದೇರೀತಿ ಕಾಣುತ್ತವೆ. ಮರಿ ಬಲಿತು ಪ್ರೌಢಾವಸ್ಥೆ ತಲುಪಲು ಒಂದು ವರ್ಷ ಬೇಕು. ಆಗ ಗಂಡು ಹಕ್ಕಿಯ ನೆತ್ತಿಯಲ್ಲಿ ನೀಲಿಗಪ್ಪು ಬಣ್ಣ ಇರುವ, ಮುಮ್ಮುಖವಾಗಿ ಬಾಗಿದಂಥ ಜುಟ್ಟು ಮೂಡುತ್ತದೆ. ಈ ಜುಟ್ಟನ್ನು ಪ್ರಣಯಕಾಲದಲ್ಲಿ ಹೆಣ್ಣನ್ನು ಆಕರ್ಷಿಸಲು ಹೇಗೆ ಕುಣಿಸುವುದು, ಬಾಲದ ಪುಕ್ಕದಿಂದ ಕುಣಿಸಿ ಹೆಣ್ಣಿನ ಜೊತೆ ಪ್ರಣಯದಾಟ ಆಡುವುದು ಇತ್ಯಾದಿ ಅಂಶದ ಕುರಿತು ಪರಿಪಕ್ವ ವಿವರಗಳು ಲಭ್ಯವಿಲ್ಲ.
ಭಾರತ, ಬಾಂಗ್ಲಾದೇಶ, ಸಿಲೋನ್‌ನಲ್ಲೂ ಇಂಥ ಹಕ್ಕಿಗಳಿವೆ. ಇದು ಚಳಿಗಾಲದಲ್ಲಿ ಭಾರತಕ್ಕೆ ವಲಸೆ ಬರುವ ಹಕ್ಕಿ. ಇದು ಏಕ ಪತಿ ಮತ್ತು ಪತ್ನಿತ್ವವನ್ನು ಪಾಲಿಸುವ ಅಪರೂಪ ಹಕ್ಕಿ . ತನ್ನ ಸಂಗಾತಿಯ ಜೊತೆ ಜೀವಮಾನ ಪೂರ್ತಿ ಇರುವುದು. ಈ ಹಕ್ಕಿಗಳು ಸಾಮೂಹಿಕವಾಗಿ ವಲಸೆ ಹೋಗುತ್ತವೆ ಮತ್ತು ಅನೇಕ ಗೂಡುಗಳನ್ನು ಒಂದೇ ಕಡೆ ಕಟ್ಟಿ ಅದರಲ್ಲಿ ತಮ್ಮ ವಂಶಾಭಿವೃದ್ಧಿ ಮಾಡುತ್ತವೆ.
ಹಳ್ಳಿ ಪೇಟೆಗಳ ಸುತ್ತಮುತ್ತಾ ಚಿಕ್ಕ ಗುಂಪಿನಲ್ಲಿ ಇಲ್ಲವೇ ಕೆಲವೊಮ್ಮೆ ದೊಡ್ಡ ಗುಂಪಿನಲ್ಲೂ ಕಾಣಸಿಗುತ್ತದೆ. ಗುಂಪು ಗುಂಪಾಗಿ ಹೊಲಗಳ ಮೇಲೆ ಎರಗಿ ಬೆಳೆಗಳನ್ನೆಲ್ಲಾ ತಿನ್ನುವುದರಿಂದ ರೈತರ ಕೆಂಗಣ್ಣಿಗೆ ಗುರಿಯಾಗುತ್ತದೆ. ಆದರೆ, ಬೆಳೆಗಳಿಗೆ ಹಾನಿಮಾಡುವ ಚಿಕ್ಕ ಹುಳು , ಕಂಬಳಿ ಹುಳ ನಿಯಂತ್ರಣದಲ್ಲಿ ಇವುಗಳ ಪಾತ್ರ ಅತಿ ಹೆಚ್ಚು . ಇದನ್ನು ಗಮನಿಸಿದರೆ ಈ ಹಕ್ಕಿಗಳಿಂದ ಆಗುವ ಉಪದ್ರವಕ್ಕಿಂತ ಉಪಕಾರವೇ ಹೆಚ್ಚು.
ಹವಾಮಾನ,ಮಿಡತೆ ಹುಳಗಳ ಲಭ್ಯತೆಯನ್ನು ಆಧರಿಸಿ, ಇವು ಆಯಾ ಪ್ರದೇಶದಲ್ಲಿ ಬೀಡು ಬಿಡುತ್ತವೆ. ವಿಶೇಷ ಎಂದರೆ ವಲಸೆ ಪ್ರಾರಂಭಿಸುವ ಮುನ್ನ ಆ ಮಾರ್ಗ ಮಧ್ಯದಲ್ಲಿ ಆಹಾರ ದೊರೆಯದಿದ್ದಾಗ, ಆ ಬಗ್ಗೆ ಯಾವ ಮುನ್ನೆಚ್ಚರಿಕೆ ಕ್ರಮ ಏನು ಕೈಗೊಳ್ಳುತ್ತವೆ, ವಾತಾವರಣದಲ್ಲಿ ಏರು ಪೇರಾಗುವುದನ್ನು ಮೊದಲೇ ತಿಳಿದು- ಅವಗಡಗಳಿಂದ ಹೇಗೆ ಪಾರಾಗುತ್ತವೆ ಎನ್ನುವುದೆಲ್ಲಾ ಆಸಕ್ತಿದಾಯಕ ವಿಷಯವಾದರೂ, ಯಾರೂ ಈ ಬಗ್ಗೆ ಸಂಶೋಧನೆ ನಡೆಸಿಲ್ಲ.
ಗುಲಾಬಿ- ಮೈನಾ, ಮರಿ ಮಾಡುವ ಸಮಯ ಅತಿ ಕಡಿಮೆ. ಇದು ಚಿಕ್ಕ ಗುಂಪಿನಲ್ಲಿ ಇಲ್ಲವೇ ಈ ಜಾತಿಯ ಇತರ ಹಕ್ಕಿಗಳಾದ ಮೈನಾಗಳ ಗುಂಪಿನಲ್ಲೂ ಹುಲ್ಲುಗಾವಲಲ್ಲಿ, ಹಾರುವ ಮಿಡತೆಗಳನ್ನು ಕಬಳಿಸಲು ದನಗಳನ್ನು ಹಿಂಬಾಲಿಸಿ ಹೋಗುತ್ತಿರುತ್ತದೆ. ಇದು ಇತರೆ ಮೈನಾ ಹಕ್ಕಿಗಳಂತೆ ಜನರ ಬಳಿ ಸುಳಿಯುವುದು ಕಡಿಮೆ. ಮೆಲುದನಿಯಲ್ಲಿ ಸಿಳ್ಳೆ ಹೊಡೆಯುತ್ತದೆ. ಕೆಲವೊಮ್ಮೆ ಕುರ್ರೂ, ಕುರ್ರೂ ಎಂದು ಕೂಗುವುದಿದೆ. ಇದರ ದನಿ ವ್ಯತ್ಯಾಸ ಮತ್ತು ವಿಶೇಷತೆ ಕುರಿತು ಹೆಚ್ಚಿನ ಮಾಹಿತಿ ಇಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
GST: ಪರೀಕ್ಷಾ ಫಾರಂ ಮೇಲೆ ಜಿಎಸ್‌ಟಿ: ಸರಕಾರ ವಿರುದ್ಧ ಪ್ರಿಯಾಂಕಾ ವಾಗ್ಧಾಳಿ
JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ
Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು
Nitish Kumar ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಎನ್‌ಡಿಎ ಸ್ಪರ್ಧೆ: ಬಿಜೆಪಿ
Hindu Temple: ಸಂಭಲ್ ಬಳಿಕ ಬುಲಂದ್‌ಶಹರ್‌ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.