ಸಾಡೇಸಾತಿ ಕಾಟ ಎಂದರೆ ಏನು, ಹೇಗೆ, ಗೊತ್ತಾ?
Team Udayavani, Jan 21, 2017, 4:00 AM IST
ಬರುವ ಜನವರಿ 26 ನೇ ತಾರೀಖು ಶನೈಶ್ಚರ ಸ್ವಾಮಿಯು ಧನುರ್ ರಾಶಿಗೆ ಪ್ರವೇಶವಾಗಲಿದ್ದಾನೆ. ಶನಿಗ್ರಹದ ನಡೆ ನಿಧಾನವಾದುದು. ಕಪ್ಪು ಇದ್ದಿಲನ್ನೂ ಹೊಳೆವ ವಜ್ರವನ್ನಾಗಿಸುವ ಅತ್ಯದ್ಭುತ ಕರುಣಾಶೀಲತೆ ಅವನಲ್ಲಿದೆ. ಹೊತ್ತಿ ಉರಿವ ದುರಹಂಕಾರಿಗಳನ್ನು ಲಟಲಟನೆ ಮುರಿದು ಮೂಲೆಗೊತ್ತಿ ಎಸೆಯಬಲ್ಲ ಬಹು ಬಲಾಡ್ಯ. ನೋಡಲು ಕಾಲುತೆವಳುತ್ತ ಸಾಗುವ ಕುಂಟನಾದರೂ ಅತ್ಯುತ್ಸಾಹವನ್ನೂ ಆಳುಕಾಳುಗಳನ್ನು ಬುದ್ಧಿಯನ್ನೂ ಸಂಪತ್ತನ್ನೂ ಕ್ರಮವಾಗಿ ಗುರು, ರವಿ, ಬುಧ, ಶುಕ್ರರಿಂದ ಒದಗಿಸಬಲ್ಲ ಕರುಣಾಮಯಿ. ಅತ್ಯುತ್ಸಾಹವನ್ನು ಕೊಡಬಲ್ಲ ಶಕ್ತಿಯನ್ನು ಮಿಥುನ ರಾಶಿಯವರಿಗೆ ಕೊಡಬಲ್ಲ. ಬುದ್ಧಿಶಕ್ತಿಯನ್ನು ಧನುರ್ ರಾಶಿಯವರಿಗೆ ಒದಗಿಸಿದಾಗ ಪಾಂಡಿತ್ಯದಿಂದಲೇ ಅಧಿಕಾಧಿಕ ಸಂಪತ್ತಿನ ಆಗರ ನಿರ್ಮಾಣ ಮಾಡಿಕೊಡಬಲ್ಲ. ವೃಷಭ ರಾಶಿಯವರಿಗೆ ಪ್ರಪಂಚದಲ್ಲಿಯೇ ಅತ್ಯಧಿಕ ಪ್ರಚಂಡ ಶಕ್ತಿಶಾಲಿಯಾಗುವ ಕಾಂತಿಯುಕ್ತ ಸ್ಥಾನಮಾನ ಒದಗಿಸಬಲ್ಲ. ಆದರೆ ಚಂದ್ರನ ಜೊತೆಗೋ ರವಿಯ ಜೊತೆಗೋ ಮಂಗಳ ರಾಹು ಕೇತುಗಳ ಜೊತೆಗೋ ಅಸಮತೋಲನ ಉಂಟಾದರೆ ಸುನಾಮಿಯ ಅಲೆಗಳನ್ನೇ ನಿರ್ಮಿಸಿ ರುದ್ರತಾಂಡವನ್ನಾಡುವ ಸಂದರ್ಭ ನಿರ್ಮಿಸಿಬಿಡುತ್ತಾನೆ. ಇಂಥ ಸಂದರ್ಭದಲ್ಲಿ ಅಗತ್ಯವಾಗಿ ಓಂ ಹ್ರಾಂ ಹ್ರೀಂ ಹೌÅಂ ಸೂರ್ಯಾಯ ನಮಃ ಎಂಬ ಸೂರ್ಯನ ಬಗೆಗಿನ ಬೀಜ ಮಂತ್ರದಿಂದ ಶನಿಯನ್ನು ಒಲಿಸಿಕೊಳ್ಳಬೇಕು. ಸೂರ್ಯ ಶನೈಶ್ಚರನ ತಂದೆಯೇ ಆದರೂ ಪರಸ್ಪರರಲ್ಲಿ ಸಹಮತವಿಲ್ಲ. ವೈರತ್ವ. ಆದರೂ ಸೂರ್ಯನ ಸಂಬಂಧವಾದ ಬೀಜಮಂತ್ರದಿಂದ ಸೂರ್ಯನಿಗೆ ಒಪ್ಪಿಸುವ ಅರ್ಘಯಗಳ ಕಾರಣದಿಂದ ಶನೈಶ್ಚರನಿಗೆ ಹಚ್ಚುವ ಎಳ್ಳುಗಳಿಂದ ಸುಪ್ರೀತನಾಗುತ್ತಾನೆ. ಯಾಕೆಂದರೆ ಶನೈಶ್ಚರನಿಗೆ ಸೂರ್ಯಪುತ್ರ ದೀರ್ಘ ದೇವಿ ಸದಾ ನಿಧಾನಿಯಾಗಿ ತಾಳ್ಮೆಯಿಂದಿರುವ ನೀಲಾಂಜನಕ್ಕೆ ಸಮನಾದ ಕಾಂತಿಪೂರ್ಣ ಎಂದು ನಂಬಿ ಶರಣಾದಾಗ ಮೃದುವಾಗುತ್ತಾನೆ. ಧಾವಂತ, ಅತಿಬುದ್ಧಿ ದುರಾಕ್ರಮಶೀಲ ಪ್ರವೃತ್ತಿ ಆತುರ ತೋರಿದಾಗ ಗೋಡೆಗೆ ತಳ್ಳಿ ಹೊಸಕಿ ಹಾಕುತ್ತಾನೆ. ಒಸಾಮ ಬಿನ್ ಲಾಡೆನ್, ಸದ್ದಾಂ ಹುಸೇನ್ ಹಿಟ್ಲರ್ ನಿಕ್ಸನ್, ಗಡಾಫಿ, ಮುಸುಲೋನಿ ಮುಂತಾದ ಜಗತ್ತಿನ ಪ್ರಭಲ ಪ್ರಭುತ್ವಕ್ಕಾಗಿ ಯಾವುದೇ ಮಾರ್ಗ ಹಿಡಿದು ಮುಷ್ಟಿಯಿಂದ ಗುದ್ದಿ ನಿಯಂತ್ರಿಸಬೇಕೆಂದು ಮುಂದಾದ ಎಲ್ಲರನ್ನೂ ಮೂಲೆಗುಂಪಾಗಿಸಿದ್ದಾನೆ. ನಿಕ್ಸನ್ ಹಿಂಸೆಯನ್ನು ಪ್ರತಿಪಾದಿಸದಿದ್ದರೂ ವಿರೋಧಿಗಳನ್ನು ಧೂರ್ತತನದಲ್ಲಿ ಕಟ್ಟಿ ಹಿಡಿಯಲೆತ್ನಿಸಿದ್ದರು ಪದಚ್ಯುತರಾದರು.
ಧನುರ್ ರಾಶಿ ಪ್ರವೇಶದಿಂದ ಯಾರಿಗೆ ಕಾಟ? ಯಾರಿಗೆ ಬಿಡುಗಡೆ?
ತುಲಾರಾಶಿಯವರಿಗೆ ಸಾಡೆ ಸಾತಿ ಕಾಟದಿಂದ ಬಿಡುಗಡೆ ಲಭ್ಯ. ಮೇಷ ರಾಶಿಯವರಿಗೆ ಅಷ್ಠಮ ಶನಿಕಾಟದಿಂದ ಬಿಡುಗಡೆಯ ಭಾಗ್ಯ. ಕರ್ಕರಾಶಿಯವರಿಗೆ ಪಂಚಮ ಶನಿಕಾಟದಿಂದ ಮುಕ್ತ. ವೃಶ್ಚಿಕ ರಾಶಿಯವರಿಗೆ ಕೊನೆಯ ಎರಡೂವರೆ ವರ್ಷ ಉಳಿದುಕೊಂಡಿದೆ. ಧನುರ್ ರಾಶಿಯವರಿಗೆ ಇನ್ನೂ ಐದು ವರ್ಷಗಳ ಕಾಲ ಸಾಡಸಾತಿ ಕಾಟ ಇರುತ್ತದೆ. ಮಕರ ರಾಶಿಯವರಿಗೆ ಏಳುವರೆ ವರ್ಷಗಳ ಸಾಡೆಸಾತಿ ಪ್ರಾರಂಭ. ವೃಷಭರಾಶಿಯವರಿಗೆ ಎರಡೂವರೆ ವರ್ಷಗಳ ಕಾಲ ಅಷ್ಟಮ ಶನಿಕಾಟ. ಸಿಂಹರಾಶಿಯವರಿಗೆ ಪಂಚಮ ಶನಿಕಾಟ ಪ್ರಾರಂಭವಾಗುತ್ತದೆ. ಈ ರಾಶಿಗಳ ಜನರೆಲ್ಲಾ ಹನುಮಾನ್ ಚಾಲೀಸಾ, ರಾಮ ರûಾ ಸ್ತೋತ್ರ, ಪಂಚಮುಖೀ ಹನುಮಂತ ಕವಚ, ದಶರಥ ರಾಜ ರಚಿತ ಶನೈಶ್ಚರ ಸ್ತೋತ್ರ, ಸುಂದರಕಾಂಡ ಇತ್ಯಾದಿ ಪಠಣ ಮಾಡುವುದು ಸೂಕ್ತ. ಹೊಸ ಕಾಲಘಟ್ಟದ ಪ್ರಸ್ತುತ ದಿನಗಳ ಒತ್ತಡಗಳಿಲ್ಲ. ಈ ಎಲ್ಲಾ ಸ್ತೋತ್ರಗಳನ್ನೂ ಪಠಣ ಮಾಡುವುದು ಕಷ್ಟ. ಆದರೆ ಯಾವುದಾದರೂ ಒಂದು ಸ್ತೋತ್ರವನ್ನು ಶ್ರದ್ಧೆಯಿಂದ ಪಠಿಸಿ. ಶಮೀಪತ್ರೆಯಿಂದ ಶನೈಶ್ಚರನನ್ನು ಪೂಜಿಸಿ. ದಶರಥ ಕೃತ ಶನಿ ಸ್ತೋತ್ರ ಕೂಡ ಪಠಿಸಿದರೆ ಒಳ್ಳೆಯದು. ಹಣದ ಕುರಿತು ಖರ್ಚಿನ ರೂಪುರೇಷೆಗಳ ಕುರಿತು ಶಿಸ್ತಿನ ವಿಷಯವಾಗಿ ಎಚ್ಚರ ಇರದಿದ್ದರೆ ನಿಧಾನ ಪ್ರವೃತ್ತಿಯಿಂದ ಆದರೆ ಜಾಣತನದಿಂದ ಮಿತಿ ಹಾಗೂ ಶಕ್ತಿ ತಿಳಿದುಕೊಳ್ಳದೆ ಮುಂದುವರೆದರೆ ಕಷ್ಟಗಳಿಗೆ ಆಹ್ವಾನ.
ಶನೈಶ್ಚರ ಪೀಡಾ ಸ್ತೋತ್ರ ಓದುವುದಾದರ 108 ಬಾರಿ ಓದಿ. ಅಂಡಾಕೃತಿಯ ಕರಿಯ ಕಲ್ಲನ್ನು ಶನೈಶ್ಚರ ಎಂದು ನಂಬಿ ಪೂಜಿಸಿ ಅಥವಾ ಎಳ್ಳೆಣ್ಣೆಯನ್ನು ಶನಿದೇಗುಲದ ಜ್ಯೋತಿಗೆ ಸುರಿದು ಏಳು ಪ್ರದಕ್ಷಿಣೆ ಮಾಡಿ ಬಂದರೂ ಶನಿಕಾಟದಿಂದ ಮುಕ್ತಿ ಸಿಗುತ್ತದೆ.
ಸಾಡೆ ಸಾತಿ ಕಾಟ ಎಂದರೆ ಏನು, ಹೇಗೆ?
ವೇಗವಾಗಿ ಚಲಿಸುವ ಚಂದ್ರನಿಗೆ ಮನಸ್ಸಿನ ಮೇಲಿನ ನಿಯಂತ್ರಣ ಸಿಗುತ್ತದೆ. ಚಂದ್ರ ಎಡವಟ್ಟಾದರ ನಿಯಂತ್ರಣ ತಪ್ಪಿ ಎಲ್ಲಾ ಅಯೋಮಯವೇ. ಶನೈಶ್ಚರನು ನಿಧಾನ ಚಲನೆಯವನಾಗಿ ಒಬ್ಬ ವ್ಯಕ್ತಿಯ ಚೈತನ್ಯಕ್ಕೆ ಕಾರಣವಾಗುವ ಪ್ರಮುಖ ಅಂಗಾಂಗಗಳನ್ನು ನಿಯಂತ್ರಿಸುತ್ತಾನೆ. ಚಂದ್ರನ ವೇಗದಿಂದಾಗಿ ಓಡುವಮನಸ್ಸು ಶನೈಶ್ಚರ ನಿಧಾನದಿಂದಾಗಿ ಎಚ್ಚರಿಕೆಯ ಹೆಜ್ಜೆ ಇರಿಸುವ ದೇಹ. ಹೀಗೆ ಪರಸ್ಪರ ಅಂಶಗಳು ಸಮತೋಲನ ಕಳೆದುಕೊಂಡು ಮನಸ್ಸಿನ ವ್ಯಾಕುಲತೆಗಳು ದೇಹಕ್ಕೆ ಬಾಧೆ ತರುತ್ತದೆ. ನಿಮ್ಮನ್ನು ಮಕ್ಕಳು ಅರ್ಥ ಮಾಡಿಕೊಳ್ಳದೆ ಹೋಗಬಹುದು. ಬಾಳ ಸಂಗಾತಿಗೂ ನಿಮ್ಮಿಂದ ಕಿರಿಕಿರಿಗಳಾಗಬಹುದು. ತಮ್ಮೆಲ್ಲಾ ಯೋಜನೆಗಳನ್ನೂ ಒಂದು ಸಹಾನುಭೂತಿಯಿಂದ ಗಮನಿಸಲಾರಿರಿ ಎಂಬ ಅಪವಾದಕ್ಕೆ ಗುರಿಯಾಗುವಿರಿ. ನಿಮ್ಮಿಂದ ಉಪಕೃತರಾದವರು ತಿರುಗಿ ಬೀಳಬಹುದು. ತಿಳಿದಿರದ ವಹಿವಾಟಿಗೆ ಹಣ ಹಾಕಿ ಪೋಲಾಗಬಹುದು. ತಾವಾಗಿಯೇ ನಿಮ್ಮನ್ನು ಉದ್ರೇಕಿಸಿ ಲೈಂಗಿಕ ವಿಷಯದ ನೆಪದಲ್ಲಿ ನಿಮ್ಮ ಮೇಲೆ ಆರೋಪ ಮಾಡಬಹುದು.
ನಿಮ್ಮ ರಾಶಿಯ ಹಿಂದಿನ ಮನೆ ಪ್ರವೇಶ, ನಿಮ್ಮ ರಾಶಿಯ ಪ್ರವೇಶ, ನಿಮ್ಮ ರಾಶಿಯ ಮುಂದಿನ ಮನೆ ಪ್ರವೇಶ ಈ ಅವಧಿಯು ಏಳುವರೆ ವರ್ಷಗಳು. ಇದೇ ಸಾಡೆಸಾತಿ ಕಾಟ. ಹೀಗಾಗಿ ಯಾವುದೇ ವಿಚಾರದ ಸಂಬಂ«ವಾಗಿ ನಷ್ಟ, ವರ್ಚಸ್ಸಿನ ನಾಶ, ಶೋಭಿಸದ ಮಾತು. ದನ ಸಂಬಂಧಿ ವಿಚಾರಗಳಲ್ಲಿ ದುರ್ಭರತೆ ಇತ್ಯಾದಿ ಸಾಧ್ಯ. ಮೂಲ ಜಾತಕದಲ್ಲಿನ ಚಂದ್ರ ಹಾಗೂ ಶನೈಶ್ಚರರ ಸ್ಥಿತಿಗತಿಗಳ ಮೇಲಿಂದಲೇ ಹೆಚ್ಚಿನ ವಿಶ್ಲೇಷಣೆ. ಪ್ರಸ್ತುತ ದಶಾಕಾಲದ ವಿಶ್ಲೇಷಣೆ ಆಗಬೇಕು. ಪಂಚಮ ಶನಿಕಾಟದಲ್ಲಿ ಮುಖ್ಯವಾಗಿ ಜನ್ಮ ಜನ್ಮಾಂತರದ ಪಾಪಪುಣ್ಯಗಳ ಮೇಲಿಂದ ಹೇಗೆ ಕಾಡುವುದು ಎಂದು ನಿರ್ಧರಿಸುತ್ತಾನೆ. ಅಷ್ಟಮ ಶನಿಕಾಟದಲ್ಲಿ ಆರೋಗ್ಯ, ತಂದೆತಾಯಿಗಳು, ಅವಗಡ, ವಾಹನ ಭಯ, ಈ ಜನ್ಮದ ತಪ್ಪುಗಳೇ ಹೆಡೆಯೆತ್ತಿ ಕಾಡುವ ವಿಚಾರಗಳು ತೊಂದರೆ ತರಬಹುದು. ಇಂದಿರಾಗಾಂಧಿ, ಅಮಿತಾಬ್ ಬಚ್ಚನ್, ತೆಂಡೂಲ್ಕರ್ ಸೆಹ್ವಾಗ್, ದ್ರಾವಿಡ್ ದೋನಿ ವಾಜಪೇಯಿ, ಪ್ರಮೋದ್ ಮಹಾಜನ್ ಸೋನಿಯಾ ಗಾಂಧೀ ಪ್ರಸ್ತುತ ಈಗ ಮೋದಿ, ರಾಹುಲ್ ಇತ್ಯಾದಿ ಶ್ರೇಷ್ಠರೆಲ್ಲ ಪರಿತಪಿಸಿದ್ದು ಈ ಶನಿಕಾಟದ ಸಂದರ್ಭದಲ್ಲೇ.
ಒಂದು ಇನ್ನೊಂದಕ್ಕಿಂತ ಭಿನ್ನ
ವಾಜಪೇಯಿ ಚಲಾವಣೆಯ ನಾಣ್ಯ ಎಂದು ತಿಳಿದಾಗಲೇ 2004ರಲ್ಲಿ ಹಿನ್ನೆಲೆಗೆ ಸರಿದದ್ದು. ಅಮಿತಾಬ್ ಚಿತ್ರೀಕರಣದ ವೇಳೆಯಲ್ಲಿ ಗಂಭೀರವಾಗಿ ಗಾಯಗೊಂಡದ್ದು. ಸೋನಿಯಾಗೆ ಪತಿಯ ಸಾವು ಎದುರಾದದ್ದು. ರಾಹುಲ್ ತೀರಾ ದುರ್ಬಲನಾದದ್ದು. ಪ್ರಬಲ ಎಂದುಕೊಂಡ ಮೋದಿಯವರ ವಿಚಾರಗಳು ಸೂಕ್ತವಾಗಿ ಕ್ಲಿಕ್ ಆಗದೇ ಇದ್ದದ್ದು. ಅಧಿಕಾರಗಳ ಪರಮೋತ್ಛ ಹರಿದಷ್ಟೇ ವೇಗದಲ್ಲಿ ಅಧಿಕಾರ ಕಳೆದುಕೊಂಡ ದೇವೇಗೌಡರ ದಾರುಣತೆ. ತೆಂಡೂಲ್ಕರರ ಭುಜನೋವಿನ ಒದ್ದಾಟ, ರಾಹುಲ್ ನಾಯಕರಾಗಿ ಮೊದಲ ಸುತ್ತಿನಲ್ಲೇ (ವಿಶ್ವಕಪ್ ಕ್ರಿಕೆಟ್) ಎಡವುದು ನಡೆದು ಭಾರತದ ಸಾಧನೇ ಹೀನಾಯವಾದದ್ದು, ರಾಜ್‌ಕಪೂರ್ ಸಿನಿಮಾ ಅಂದರೆ ಮುಗಿಬೀಳುತ್ತಿದ್ದ ಜನರು ಸಿನಿಮಾಗಳಿಗೆ ಬೆನ್ನುತಿರುಗಿಸಿದ್ದು ಇತ್ಯಾದಿ ಒಂದಲ್ಲಾ, ಎರಡಲ್ಲಾ ಒಬ್ಬೊಬ್ಬರದು ಒಂದೊಂದು ಬಗೆಯ ಪತನ. ಪೂರ್ತಿ ಜಾತಕ ನೋಡಿಯೇ ನಿರ್ಧಾರ ತಳೆಯಬೇಕು. ಶನೈಶ್ಚರ ನೀಡುವ ಆಖೈರಿನ ಪೆಟ್ಟು ಹೇಗಿರುತ್ತದೆ ಎಂದು. ಮೊದಲೇ ಮುಳುಗಿಸುತ್ತಾನೋ ಮೇಲೆಬ್ಬಿಸಿ ಕೆಳಗೆ ತಳ್ಳುತ್ತಾನೋ ಜಾತಕ ನೋಡಿಯೇ ತಿಳಿಯಬೇಕು.
ಅನಂತ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Astrology 2024: 2024ರಲ್ಲಿ ಮಿಶ್ರ ಫಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?
ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?
ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…
ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?
ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.