ಸದ್ಗುರು ಪ್ರಸಾದ: ಶ್ರೀ ಶ್ರೀಧರಾಶ್ರಮ, ವರದಪುರ, ಸಾಗರ 

ಶ್ರೀಧರ ಪುಣ್ಯಧಾಮದ, ಪಾಕಪರಿಮಳ

Team Udayavani, Dec 7, 2019, 5:23 AM IST

sw-11

ಸದ್ಗುರು ಕ್ಷೇತ್ರಗಳ ಸಾಲಿನಲ್ಲಿ ವರದಪುರದ ಶ್ರೀಧರಾಶ್ರಮ, ಭಕ್ತರ ಜನಮಾನಸದಲ್ಲಿ ಹೆಸರು ಮಾಡಿರುವ ತಾಣ. ಸುಂದರ ಬೆಟ್ಟದ ತಪ್ಪಲಿನಲ್ಲಿ, ಮಲೆನಾಡಿನ ಹಸಿರಿನ ತಂಪಿನಲ್ಲಿರುವ ಈ ಕ್ಷೇತ್ರ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಇಲ್ಲಿನ ಅನ್ನಸಂತರ್ಪಣೆಯನ್ನು ಶ್ರೀಧರ ಸ್ವಾಮಿಗಳ ಪ್ರಸಾದವೆಂದೇ ಸದ್ಭಕ್ತರು ಭಾವಿಸುತ್ತಾರೆ. ಶ್ರೀಧರರ ಆಣತಿಯಂತೆ ಅನ್ನ ಸಂತರ್ಪಣೆಯನ್ನು ಜಾರಿಗೊಳಿಸಿದ ಕ್ಷೇತ್ರ, ವರದಪುರ.

ನಿತ್ಯಅನ್ನಸಂತರ್ಪಣೆ
ಮಲೆನಾಡು ಶೈಲಿಯ ಮತ್ತು ಸಾತ್ವಿಕ ಭೋಜನದ ರುಚಿ ಇಲ್ಲಿನ ವಿಶೇಷತೆ. ಪ್ರತಿನಿತ್ಯ ಕನಿಷ್ಠ 3 ಸಾವಿರ ಭಕ್ತರಿಗೆ ಅನ್ನಸಂತರ್ಪಣೆ ನಡೆಯುತ್ತದೆ. ಗುರುವಾರದಂದು ಭಕ್ತಾದಿಗಳ ಸಂಖ್ಯೆ ತುಸು ಹೆಚ್ಚಿರುತ್ತದೆ. ವಿಶೇಷ ದಿನಗಳಂದು 6 ಸಾವಿರ ದಾಟುವುದೂ ಉಂಟು.

ಒಂದು ದಿನವೂ ನಿಂತಿಲ್ಲ…
ಸುಮಾರು ಅರ್ಧ ಶತಮಾನದ ಹಿಂದೆ ಶ್ರೀಧರ ಸ್ವಾಮಿಗಳ ಸಮ್ಮುಖದಲ್ಲಿ ಮೊದಲ ಅನ್ನದಾನ ನಡೆದಿತ್ತು. ಅಂದಿನಿಂದ ಇಂದಿನವರೆಗೆ ನಿತ್ಯವೂ ಅನ್ನಸಂತರ್ಪಣೆ ಸುಲಲಿತವಾಗಿ ನಡೆದುಕೊಂಡು ಬಂದಿದೆ. ಘಟ್ಟದ ಮೇಲಿನ ಪುಣ್ಯ ಕ್ಷೇತ್ರಗಳಲ್ಲಿ ಭಕ್ತರಿಗೆ ಪ್ರಸಾದ ಭೋಜನ ಒದಗಿಸಿದ ಪ್ರಪ್ರಥಮ ಕ್ಷೇತ್ರ ಇದಾಗಿದೆ. ಪ್ರತಿ ಏಕಾದಶಿಯ ದಿನ ಅನ್ನ ದಾಸೋಹ ಇಲ್ಲ. ಆ ದಿನ ಉಪ್ಪಿಟ್ಟು, ಅವಲಕ್ಕಿ ಕೊಡಲಾಗುತ್ತದೆ. ಗ್ರಹಣಗಳ ಆಚರಣೆಯ ಸಂದರ್ಭದಲ್ಲಿ ಪಂಚಾಂಗ ಆಧಾರಿತವಾಗಿ ಭೋಜನ ವಿನ್ಯಾಸ.

ಭೋಜನ ಸಮಯ
– ಬೆಳಗ್ಗೆ: 8- 11ರ ವರೆಗೆ ಉಪಾಹಾರ
– ಮಧ್ಯಾಹ್ನ: 12.45 - 2.30ರವರೆಗೆ ಭೋಜನ
– ರಾತ್ರಿ: 8 - 9.30ರವರೆಗೆ ಭೋಜನ

ಸಂಖ್ಯಾ ಸೋಜಿಗ
8- ಬಾಣಸಿಗರಿಂದ ಅಡುಗೆ
3- ಕ್ವಿಂಟಲ್‌ ಅಕ್ಕಿಯಿಂದ ಅನ್ನ
18- ಸಿಬ್ಬಂದಿಯಿಂದ ಪಾಕಶಾಲೆಯ ಸ್ವಚ್ಛತೆ
150- ಕಿಲೋ ತರಕಾರಿ ನಿತ್ಯ ಬಳಕೆ
1500- ಮಂದಿಗೆ ಏಕಕಾಲದಲ್ಲಿ ಭೋಜನ
3000- ಭಕ್ತರಿಗೆ ನಿತ್ಯ ಅನ್ನಸಂತರ್ಪಣೆ
10,00,000 - ಕ್ಕೂ ಅಧಿಕ ಜನ, ಈ ವರ್ಷ ಭೋಜನ ಸ್ವೀಕರಿಸಿದವರು

ಭಕ್ಷ್ಯ ಸಮಾಚಾರ
– ನಿತ್ಯ ಭೋಜನದಲ್ಲಿ ಅನ್ನ, ಸಾರು, ಚಿತ್ರಾನ್ನ, ಪಾಯಸ, ಮಜ್ಜಿಗೆ ಇರುತ್ತದೆ.
– ಅನ್ನ ಸಂತರ್ಪಣೆಯನ್ನು ನಡೆಸಿಕೊಡುವ ಭಕ್ತರು ಇಚ್ಛಿಸಿ ವೆಚ್ಚ ಭರಿಸುವ ಸಿಹಿ ಭಕ್ಷ್ಯಕ್ಕೂ ಅವಕಾಶ.
– ಭಕ್ತರಿಂದ ಅಕ್ಕಿ, ಬೆಲ್ಲ, ಕಾಯಿ, ತರಕಾರಿ, ಹಾಲು, ಕಾಳು ಬೇಳೆಗಳು ಸೇವಾರ್ಥವಾಗಿ ಭೋಜನ ಶಾಲೆ ಸೇರುತ್ತವೆ.
– ಉಪಾಹಾರದ ಜೊತೆ ಕಾಫಿ, ಟೀ, ಕಷಾಯ ಹಾಗೂ ಮಧ್ಯಾಹ್ನ 4.30ಕ್ಕೂ ಕಾಫಿ, ಟೀ, ಕಷಾಯವಿರುತ್ತದೆ.
ಶಿಸ್ತು- ಸ್ವತ್ಛತೆಗೆ ಆದ್ಯತೆ
– ವರದಪುರದ ಕೆಲವು ನಿಯಮಗಳನ್ನು ಭಕ್ತರು ಪಾಲಿಸಿ ಭೋಜನ ಸ್ವೀಕರಿಸಬೇಕು. ಪುರುಷರು ಅಂಗಿ ಕಳಚಿ ಭೋಜನ; ಊಟ ಮಾಡಿದ ತಟ್ಟೆ, ಲೋಟಗಳನ್ನು ತೊಳೆದಿಡುವುದು… ಇತ್ಯಾದಿ.
– ಸ್ವಚ್ಛತೆಗೆ ಹೆಚ್ಚು ಆದ್ಯತೆ. ತಟ್ಟೆ- ಲೋಟ 3 ಬಾರಿ ಸ್ವತ್ಛಗೊಂಡು ಮರುಬಳಕೆ.
– ಗೊಂದಲಗಳಿಗೆ ಅವಕಾಶವಿಲ್ಲದಂತೆ, ಕ್ಯೂ ನಿಲ್ಲುವವರಿಗೂ ತಲೆ ಮೇಲೆ ಸೂರಿನ ವ್ಯವಸ್ಥೆ.

ಶ್ರೀಧರ ಸ್ವಾಮಿಗಳ ಅನುಗ್ರಹದಿಂದ ನಿರಂತರವಾಗಿ ಇಲ್ಲಿ ಅನ್ನ ದಾಸೋಹ ನಡೆಯುತ್ತಿದೆ. ಕೇವಲ ಭಕ್ತರಲ್ಲದೆ, ಊಟದ ಸಮಯದಲ್ಲಿ ಆಗಮಿಸುವ ಪ್ರವಾಸಿಗರಿಗೆ ಕೂಡ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಮಧ್ಯಾಹ್ನ 2.30ರ ಸಮಯ ನಿಗದಿಯಾಗಿದ್ದರೂ ಕೆಲವೊಮ್ಮೆ 3.30ರವರೆಗೂ ಪ್ರಸಾದ ಭೋಜನ ನೀಡಲಾಗುತ್ತದೆ.
– ಮಹಾಬಲೇಶ್ವರ್‌, ಮುಖ್ಯ ಬಾಣಸಿ

ಟಾಪ್ ನ್ಯೂಸ್

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

3-vitla

Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

RBI ಗವರ್ನರ್‌ ಶಕ್ತಿಕಾಂತ್‌ ದಾಸ್‌‌ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್‌ ಚಾರ್ಜ್

RBI ಗವರ್ನರ್‌ ಶಕ್ತಿಕಾಂತ್‌ ದಾಸ್‌‌ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್‌ ಚಾರ್ಜ್

1-mundaragi

Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.