![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jul 13, 2019, 12:04 PM IST
ಪ್ರತಿ ವ್ಯಕ್ತಿಯೂ ತಮಗಿಷ್ಟಬಂದಂತೆ ಧರ್ಮವನ್ನು ಬೋಧಿ ಸಲು ತೊಡಗಿದರೆ ಅದು ನಾಶಕ್ಕೆ ದಾರಿ ಮಾಡುತ್ತದೆ.”ದೊಡ್ಡ ಧರ್ಮ ಯಾವುದು?’ ಎಂದು ಯುದಿಷ್ಠಿರ, ಭೀಷ್ಮನನ್ನು ಕೇಳಿದಾಗ ಅವರು, “ಶ್ರದ್ಧಾ ಭಕ್ತಿಗ ಳಿಂದ ಪರಮಾತ್ಮನನ್ನು ನಿರಂತರ ಧ್ಯಾನಿಸುವುದೇ ಶ್ರೇಷ್ಠ ಧರ್ಮ’ ಎಂದು ಹೇಳಿದರು. ಈ ಜಗತ್ತಿನ ಕ್ಷೇಮಕ್ಕೆ ಮೂಲ ಆಧಾರವೇ ಧರ್ಮ. ಆದ್ದರಿಂದ, ಕೇವಲ ಧರ್ಮಸಮ್ಮತವಾದ ಕೆಲಸಗಳನ್ನು ಮಾಡಿದರಷ್ಟೇ, ನಾವು ಒಳ್ಳೆಯ ಮನುಷ್ಯರಾಗುತ್ತೇವೆ. ನಮ್ಮ ಜೀವನ ಸಾರ್ಥಕವಾಗುತ್ತದೆ. ಧರ್ಮವನ್ನು ಬಿಟ್ಟು ತಪ್ಪು ದಾರಿ ಹಿಡಿದರೆ, ನಾವು ಈ ಮಾನವ ಜನ್ಮವನ್ನು ವ್ಯರ್ಥಮಾಡಿಕೊಂಡವರಾಗುತ್ತೇವೆ. ಕೊನೆಗೆ, ನಾಶ ಹೊಂದುತ್ತೇವೆ. ನಾವು ಧರ್ಮವನ್ನು ಗೌರವಿಸಿ, ಆಚರಿಸಿದರೆ, ಅದು ನಮಗೆ ಶ್ರೇಯಸ್ಸನ್ನು ಉಂಟು ಮಾಡುತ್ತವೆ. ಧರ್ಮ ತನ್ನನ್ನು ರಕ್ಷಿಸುವವರನ್ನು ರಕ್ಷಿಸುತ್ತದೆ.
ಈ ದಿನ ನಾವು ಅನುಭಸುತ್ತಿರುವ ಸುಖ, ಪೂರ್ವ ಜನ್ಮದಲ್ಲಿ ನಾವು ಮಾಡಿದ ಧರ್ಮದ ಫಲ. ಅಧರ್ಮದಿಂದ ಕೇವಲ ಶೋಕ- ದುಃಖಗಳು ಉಂಟಾಗುತ್ತವೆ. ಇದು ನಿತ್ಯ ಸತ್ಯವಾದ ನಿಯಮ. ಈ ವಿಷಯದಲ್ಲಿ ಎಂಥ ಸಂದೇಹವು ಇರಲೂ ಅವಕಾಶವಿರುವುದಿಲ್ಲ. ಆದ್ದರಿಂದ, ಧರ್ಮವನ್ನು ಆಚರಿಸುವುದು, ಅಧರ್ಮವನ್ನು ಬಿಡುವುದು ಎನ್ನುವುದು ಸಾರ್ಥಕ ಜೀವನದ ಲಕ್ಷಣ. ಈ ನಿಯಮವನ್ನು ಜಾಗರೂಕತೆಯಿಂದ ಅನುಸರಿಸಿದರೆ, ಅದರಿಂದ ಕೀರ್ತಿ, ಶಾಂತಿ, ಸುಖಗಳು ಲಭಿಸುತ್ತವೆ. ಎಂಥ ಪರಿಸ್ಥಿತಿಯಲ್ಲೂ ಧರ್ಮವನ್ನು ನಿರ್ಲಕ್ಷ್ಯ ಮಾಡಬಾರದು. ಧರ್ಮವನ್ನು ಆಚರಿಸಿದರೆ, ನಮಗೆ ಒಳ್ಳೆಯದಾಗುತ್ತದೆ. ಮೋಕ್ಷ ದೊರೆಯುತ್ತದೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.