ಸಾಲು ಸಾಲು ಸಾಧಕಿಯರು 

Team Udayavani, Aug 19, 2017, 3:09 PM IST

10.jpg

ದೇಶದ ಯಾವುದೇ ಭಾಗಕ್ಕೆ ಹೋದರೂ ಗಾಂಧೀಜಿ, ಅಂಬೇಡ್ಕರ್‌ ಸೇರಿದಂತೆ  ಸಾಧಕ ಮಹಾತ್ಮರ ಪುತ್ಥಳಿ, ಮೂರ್ತಿಗಳು ಕಾಣಸಿಗುತ್ತವೆ. ಆದರೆ ಮಹಿಳಾ ಸಾಧಕಿಯರ ಶಿಲ್ಪಗಳು? ಇದು ಅಪರೂಪ. ಆದರೆ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಆವರಣಕ್ಕೆ ಬಂದರೆ,  ಎಲ್ಲಾ ಸಾಧಕಿಯರನ್ನು ಕಣ್ತುಂಬಿಕೊಂಡು ಹೋಗಬಹುದು. 

ನಾಡಿನ ಖ್ಯಾತ ಕಲಾವಿದ ರಾಜಹರ್ಷ.ಟಿ. ಸೊಲಬಕ್ಕನವರ್‌ ಅವರೊಂದಿಗೆ 100 ಕಲಾವಿದರು,  ಕುಲಪತಿ ಪ್ರೊ.ಸಬೀನಾ ಭೂಮಿಗೌಡ ಅವರ ಕನಸಿನ  ಈ ಕಲಾ ಗ್ರಾಮಕ್ಕೆ ಜೀವ ನೀಡಿದ್ದಾರೆ.

  ಆಡಳಿತ ಕಚೇರಿ ಎದುರು ಮಹಾಶರಣೆ ಅಕ್ಕಮಹಾದೇವಿಯ 16 ಅಡಿ ಆಳೆತ್ತರದ ಹಾಗೂ 3.5 ಟನ್‌ ತೂಕದ ಬೃಹತ್‌ ಮೂರ್ತಿ ತಲೆ ಎತ್ತಿದೆ. ಇದನ್ನು ನೋಡಿದವರಿಗೆ 12ನೇ ಶತಮಾನದ ಅಕ್ಕಮಹಾದೇವಿ ಮತ್ತೆ ಹುಟ್ಟಿ ಬಂದಳೆ ಅನಿಸಿದರೆ ಅಚ್ಚರಿಯಿಲ್ಲ. 

ಇದರ ಜೊತೆಗೆ ದೇಶಕ್ಕೆ ವಿಶಿಷ್ಟ ಕೊಡುಗೆ ನೀಡಿದ ಖ್ಯಾತ ಮಹಿಳಾ ಸಾಧಕಿಯರ ಶಿಲ್ಪಗಳೂ ಇಲ್ಲಿವೆ. ಅದರಲ್ಲಿ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆ, ಅಸಹಾಯಕರ ಕಣ್ಣು ತೆರೆಸಿದ ಮದರ್‌ ತೆರೇಸಾ, ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ, ವೀರರಾಣಿ ಕಿತ್ತೂರು ಚೆನ್ನಮ್ಮ, ಚಾಂದ್‌ಬೀಬಿ, ಸಾಲುಮರದ ತಿಮ್ಮಕ್ಕ, ಮೇಡಂ ಮೇರಿ ಕ್ಯೂರಿ, ಟೆನಿಸ್‌ ತಾರೆ ಸಾನಿಯಾ ಮಿಜಾì, ಬಾಹ್ಯಾಕಾಶ ವಿಜ್ಞಾನಿ ಕಲ್ಪನಾ ಚಾವ್ಲಾ, ಭಾರತ ರತ್ನ ಎಂ.ಎಸ್‌ ಸುಬ್ಬಲಕ್ಷ್ಮೀ , ಪಿ.ಟಿ ಉಷಾ ಸೇರಿದಂತೆ 20 ಸಾಧಕಿಯರ  ಸುಂದರ ರಾಕ್‌ ಕಲಾಕೃತಿಗಳು ಮಂತ್ರಮುಗªಗೊಳಿಸುತ್ತವೆ.

ಮುಖ್ಯದ್ವಾರದ ಆರಂಭದಲ್ಲೇ ಹಳ್ಳಿ ಪರಂಪರೆಯಿಂದ ಜಾಗತಿಕ ಮಟ್ಟದ ಆಧುನಿಕ ಪರಂಪರೆಯ ಕಲಾಕೃತಿಗಳ ಅನಾವರಣವಾಗಿದೆ. ಬದುಕು ಬಿಂಬಿಸುವ ಚಿತ್ರಣವಿದೆ. ಅಲ್ಲಿನ ಜನಜೀವನ, ಬಾಲಕಿಯರ ಶಿಕ್ಷಣ, ಮಹಿಳೆಯರ ಕೆಲಸದ ಒತ್ತಡ, ಗ್ರಾಮದ ಬಾಲಕಿ ಹಂತ-ಹಂತವಾಗಿ ಪಟ್ಟಣ, ನಗರ ಪ್ರದೇಶಕ್ಕೆ ಕಾಲಿಟ್ಟು ಉನ್ನತ ಶಿಕ್ಷಣ ಪಡೆಯುವ ಹಂತಗಳನ್ನು ಇಲ್ಲಿ ಕೆತ್ತಿಟ್ಟಿದ್ದಾರೆ. ಈ ಮೂರ್ತಿಗಳ ಜೊತೆಗೆ ವೈದ್ಯ, ನ್ಯಾಯವಾದಿ, ಸ್ನಾತಕೋತ್ತರ ಪದವೀಧರೆ,  ಮಹಿಳೆಯರ ಧ್ಯಾನ, ಓದುವ ಭಂಗಿಗಳು ಗಮನಸೆಳೆಯುತ್ತವೆ. 

ಹೆಚ್ಚಾ ಕಡಿಮೆ ಶಿಲ್ಪಗಳ ರಚನೆಗಾಗಿಯೇ 50ಲಕ್ಷ ರೂಪಾಯಿಗೂ ಹೆಚ್ಚು ವ್ಯಯಿಸಲಾಗಿದೆ. ಈ ಶಿಲ್ಪಗಳನ್ನು ಇಟ್ಟಿಗೆ, ಮರಳು, ಕಬ್ಬಿಣ, ಸಿಮೆಂಟ್‌ ಬಳಸಿ ಅತ್ಯಾಕರ್ಷಕವಾಗಿ ರಚಿಸಲಾಗಿದೆ. ಒಂದೊಂದು ಶಿಲ್ಪವೂ ಸುಮಾರು 6.5 ಅಡಿಯಷ್ಟು ಎತ್ತರವಾಗಿದ್ದು, ಸುಮಾರು 450 ಕೆ.ಜಿ ಭಾರವಿದೆ. ಈ ಶಿಲ್ಪಗಳು ಸುಮಾರು 100ರಿಂದ 150 ವರ್ಷಗಳವರೆಗೆ ಬಾಳಿಕೆ ಬರುವ ಅಂದಾಜಿದೆ ಎನ್ನುತ್ತಾರೆ ವಿವಿ ಅಧಿಕಾರಿಗಳು. ಇವುಗಳ ವೀಕ್ಷಣೆಗೆ ಯಾವುದೇ ಪ್ರವೇಶ ಶುಲ್ಕವಿಲ್ಲ. ವಿಜಯಪುರಕ್ಕೆ ಹೋದರೆ ನಿಮ್ಮ ಪ್ರವಾಸದ ಪಟ್ಟಿಯಲ್ಲಿ ಮಹಿಳಾ ವಿವಿಯನ್ನು ಸೇರಿಸುವುದು ಮರೆಯಬೇಡಿ.  ಇದೂ ಕೂಡ ನೋಡಲೇಬೇಕಾದ, ಭೇಟಿ ನೀಡಲೇ ಬೇಕಾದ ಸ್ಥಳ. 

ಗುರುರಾಜ.ಕನ್ನೂರ

ಟಾಪ್ ನ್ಯೂಸ್

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2-shirva

Shirva ಹ‌ಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.