ದಾರಿಯಲ್ಲಿ ಕಂಡ ಪ್ರಾಣಿಗಳಿಗೆ ಹಣ್ಣು ಕೊಡೋರು…
Team Udayavani, Feb 2, 2019, 12:55 AM IST
ಶ್ರೀ ಶಿವಕುಮಾರ ಸ್ವಾಮೀಜಿಯವರು ಮಠದ ಅಧ್ಯಕ್ಷರಾಗಿದ್ದ ಆರಂಭದ ದಿನಗಳಲ್ಲಿ, ಮಠ ಆರ್ಥಿಕವಾಗಿ ಸಂಕಷ್ಟದಲ್ಲಿತ್ತು. ಹೀಗಾಗಿ, ಹಳ್ಳಿ ಹಳ್ಳಿಗೆ ಹೋಗಿ ಭಿಕ್ಷಾಟನೆ ಮಾಡಿ, ಮಠದಲ್ಲಿ ಮಕ್ಕಳಿಗೆ ಅನ್ನ ದಾಸೋಹ ಏರ್ಪಡಿಸುತ್ತಿದ್ದರು. ಆ ಕಾಲದಲ್ಲಿ ಯಾವುದೇ ಸಂಪರ್ಕ ಸಾರಿಗೆ ಇಷ್ಟೊಂದು ಅಭಿವೃದ್ಧಿಯಾಗಿರಲಿಲ್ಲ. ಕುದುರೆಯ ಮೇಲೆ, ಎತ್ತಿನಗಾಡಿಯಲ್ಲಿ ಹೋಗಬೇಕಿತ್ತು. ಕೆಲವು ವರ್ಷಗಳ ನಂತರ ಭಕ್ತರು ಒಂದು ಡಾರ್ಜ್ ಕಾರನ್ನು ನೀಡಿದ್ದರು. ಅದರಲ್ಲಿ ಶ್ರೀಗಳು ಸಂಚರಿಸುತ್ತಿದ್ದರು. ಅದಾದನಂತರ ಅಂಬಾಸಿಡರ್, ನಿಷಾನ್, ಕ್ಯಾಪ್ಟಿನೊ ಕಾರುಗಳಲ್ಲಿ ಓಡಾಡಿದ್ದಾರೆ. ಶ್ರೀಗಳು ಕಾರಿನಲ್ಲಿ ಓಡಾಡಲು ಆರಂಭಿಸಿದ ಮೇಲೆ ಮೂರು ಜನ ಚಾಲಕರು ಕೆಲಸ ಮಾಡುತ್ತಿದ್ದರು. ಮೊದಲನೆ ಚಾಲಕ ಶಿವಣ್ಣ, ಎರಡನೇ ಚಾಲಕ ರಾಜ ಶೇಖರಯ್ಯ, ಮೂರನೇ ಚಾಲಕ ಮಹಾದೇವ ಸ್ವಾಮಿ.
ಮೂರನೇ ಚಾಲಕ ಮಹಾದೇವ ಸ್ವಾಮಿಯು, ಮೂಲತಃ ಟಿ. ನರಸೀಪುರ ತಾಲೂಕಿನ ಮೂಡರಹಳ್ಳಿ ಇಂದ ವಿದ್ಯಾಭ್ಯಾಸಕ್ಕೆ ಅಂತ ಬಂದು ಶ್ರೀಗಳ ಕಾರು ಚಾಲಕರಾಗಿ ಇಲ್ಲೇ ನಲೆಸಿದ್ದಾರೆ. 15 ವರ್ಷಗಳ ಕಾಲ ನಡೆದಾಡುವ ದೇವರು ಎಲ್ಲಿಗೆ ಹೋದರೂ ಆಗೆಲ್ಲ ಮಾದೇವ ಸ್ವಾಮಿಯವರೇ ಕಾರು ಚಾಲಕ. ಸ್ವಾಮೀಜಿಗಳ ಒಡನಾಟದ ಬಗ್ಗೆ ಅವರು ಹೀಗೆನ್ನುತ್ತಾರೆ: ಶ್ರೀಗಳು ಎಷ್ಟೇ ದೂರ ಪ್ರಯಾಣಿಸಿದರೂ ಮಠಕ್ಕೆ ವಾಪಸ್ಸು ಬಂದು, ಮಕ್ಕಳೊಂದಿಗೆ ಇರಬೇಕು ಎನ್ನುವುದೇ ಅವರ ಆಸೆಯಾಗಿತ್ತು. ಕೆಲ ಭಕ್ತರು ಕೋಟ್ಯಂತರ ರೂ. ಬೆಲೆಬಾಳುವ ಕಾರುಗಳಲ್ಲಿ ಶ್ರೀಗಳನ್ನು ಕರೆದು ಕೊಂಡು ಹೋಗುತ್ತಿದ್ದರು. ಆಗ ಶ್ರೀಗಳು ಇದರ ಬೆಲೆ ಎಷ್ಟು ಎಂದು ಕೇಳುತ್ತಿದ್ದರು. ಒಂದು ಕೋಟಿ ಬುದ್ದಿ ಎಂದರೆ, ಅಷ್ಟೊಂದು ಬೆಲೆಯೇ? ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದರು. “ಇಂಧನವನ್ನು ಮಿತವಾಗಿ ಬಳಸಿ. ಅನಗತ್ಯವಾಗಿ ಕಾರು ಓಡಿಸಬೇಡಿ. ಅವಶ್ಯಕತೆ ಇದ್ದರೆ ಮಾತ್ರ ಕಾರು ಬಳಸಿ’ ಎಂದೆಲ್ಲಾ ಸಲಹೆ ನೀಡುತ್ತಿದ್ದರು.
ಶ್ರೀಗಳ ಕಾರಿನಲ್ಲಿ ಬಿಸ್ಕತ್ತು ಮತ್ತು ಬಾಳೆಹಣ್ಣು ಇರುತ್ತಿತ್ತು. ಏಕೆಂದರೆ, ದಾರಿಯಲ್ಲಿ ನಾಯಿ ಕಂಡರೆ ಶ್ರೀಗಳು ಬಿಸ್ಕತ್ತು ಹಾಕುತ್ತಿದ್ದರು. ಅದೇ ರೀತಿಯಲ್ಲಿ ಜಾನುವಾರುಗಳು ಕಂಡರೆ ಅವುಗಳಿಗೆ ಬಾಳೆಹಣ್ಣು ತಿನ್ನಿಸುತ್ತಿದ್ದರು.
ಶ್ರೀಗಳು ಮಠದ ಶಕ್ತಿಪೀಠ ಮಂಚದ ಮೇಲೆ ಕುಳಿತರೆ ಸಾಕು ನೂರಾರು ಪಾರಿವಾಳಗಳು ಮಠದ ಆವರಣಕ್ಕೆ ಬರುತ್ತಿದ್ದವು. ಅವಕ್ಕೆ ಕಾಳುಗಳನ್ನು ಹಾಕಿಸುತ್ತಿದ್ದರು. ಪ್ರಾಣಿ, ಪಕ್ಷಿ$ಗಳೆಂದರೆ ಶ್ರೀಗಳಿಗೆ ಎಲ್ಲಿಲ್ಲದ ಪ್ರೀತಿ’ ಇಷ್ಟು ಹೇಳಿದ ಮಹದೇವ ಸ್ವಾಮಿಯ ಕಣ್ಣು ತೇವವಾಯಿತು.
ಚಿ. ನಿ. ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.