ಟೆನಿಸ್ ಅಂಕಣದಲ್ಲಿ ಮತ್ತೆ ಸೆರೆನಾ,ಜೊಕೊ
Team Udayavani, Dec 9, 2017, 12:31 PM IST
ಸದ್ಯ ಟೆನಿಸ್ ಪ್ರೇಮಿಗಳಲ್ಲಿ ಇಂಥದೊಂದು ಯೋಚನೆ ಹುಟ್ಟಿಕೊಂಡಿದೆ. ಯಾಕೆಂದರೆ ವರ್ಷಗಳ ಕಾಲ ಅಂಕಣದಿಂದ ಹೊರಗುಳಿದಿದ್ದ ಖ್ಯಾತ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್, 12 ಗ್ರ್ಯಾನ್‌ಸ್ಲಾಮ್‌ಗಳ ಒಡೆಯ ನೊವಾಕ್ ಜೊಕೊವಿಚ್ ಪುನಃ ಕೋರ್ಟ್ ಗೆ ಮರಳಲು ಸಜ್ಜಾಗಿದ್ದಾರೆ.
ಆಸ್ಟ್ರೇಲಿಯಾ ಓಪನ್‌ಗೆ ಸೆರೆನಾ?
23 ಗ್ರ್ಯಾನ್‌ಸ್ಲಾಮ್‌ಗಳ ಒಡತಿಯಾದ ಅಮೆರಿಕದ ಸೆರೆನಾ ವಿಲಿಯಮ್ಸ್ ಮದುವೆ, ಮಗು ಅಂತ ಒಂದು ವರ್ಷಗಳ ಕಾಲ ಟೆನಿಸ್ ಕೋರ್ಟ್‌ನಿಂದ ದೂರ ಇದ್ದರು. 2017ರ ಜನವರಿಯಲ್ಲಿ ನಡೆದ ಆಸ್ಟ್ರೇಲಿಯಾ ಓಪನ್ ಸೆರನಾ ಆಡಿರುವ ಕೊನೆಯ ಅಂತಾರಾಷ್ಟ್ರೀಯ ಟೂರ್ನಿ. ಇದೀಗ ಮತ್ತೆ ಟೆನಿಸ್ ಅಭ್ಯಾಸ ಆರಂಭಿಸಿರುವ ಅವರು, 2018ರ ಜನವರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಓಪನ್‌ಗೆ ಮರಳುವ ಸೂಚನೆ ನೀಡಿದ್ದಾರೆ. ಇದು ಸಹಜವಾಗಿ ಕ್ರೀಡಾಭಿಮಾನಿಗಳಲ್ಲಿ ಉತ್ಸಾಹವನ್ನೂ ಪ್ರತಿಸ್ಪರ್ಧಿಗಳಿಗೆ ನಡುಕವನ್ನೂ ಹುಟ್ಟಿಸಿದೆ.
ಮಾಜಿ ವಿಶ್ವ ನಂ.1 ಶ್ರೇಯಾಂಕಿತ ಆಟಗಾರ್ತಿಯಾದ ಸೆರೆನಾ, ಈವರೆಗೆ 23 ಗ್ರ್ಯಾನ್‌ಸ್ಲಾಮ್‌ಗಳನ್ನು ಗೆದ್ದುಕೊಂಡಿದ್ದಾರೆ. ಅದರಲ್ಲಿ 7 ಆಸ್ಟ್ರೇಲಿಯಾ ಓಪನ್, 3 ಫ್ರೆಂಚ್ ಓಪನ್, 7 ವಿಂಬಲ್ಡನ್, 6 ಯುಎಸ್ ಓಪನ್ ಸೇರಿವೆ. ಎದುರಾಳಿ ಆಟಗಾರ್ತಿಯರು ನಡುಗುವಂಥ ಬಲಾಡ್ಯ ಹೊಡೆತಗಳನ್ನು ಬಾರಿಸುವ ಸಾಮರ್ಥ್ಯ ಸೆರೆನಾಗಿದೆ.
ಜೊಕೊ ಕೂಡ ಮರಳುವ ಸಾಧ್ಯತೆ
ರೋಜರ್ ಫೆಡರರ್, ರಾಫೆಲ್ ನಡಾಲ್, ಆ್ಯಂಡಿ ಮರ್ರೆ, ಸ್ಟಾನ್ ವಾವ್ರಿಂಕಾ…. ಇಂತಹ ಬಲಾಡ್ಯ ಆಟಗಾರರಿಗೆ ಬಿಸಿ ಮುಟ್ಟಿಸುವ ಸಾಮರ್ಥ್ಯ ಇರುವ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್. ಭುಜದ ಶಸ್ತ್ರಚಿಕಿತ್ಸೆಯ ಹಿನ್ನೆಲೆಯಲ್ಲಿ ಕಳೆದ ವಿಂಬಲ್ಡನ್ ಆಡಿರುವುದೇ ಕೊನೆ. ಆಮೇಲೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ವೈದ್ಯರ ಸಲಹೆಯಂತೆ ದೀರ್ಘಾವಧಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದೀಗ ಚೇತರಿಸಿಕೊಂಡಿರುವ ಅವರು, ಪುನಃ ಟೆನಿಸ್ ಕೋರ್ಟ್‌ಗೆ ಮರಳುವ ಸಾಧ್ಯತೆ ಇದೆ. ಇದಕ್ಕೆ ಆಸ್ಟ್ರೇಲಿಯಾ ಓಪನ್ ವೇದಿಕೆಯಾದರೂ ಆಗಬಹುದು.
2017ರಲ್ಲಿ ಹಳೇ ಹುಲಿಗಳದ್ದೇ ಕಾದಾಟ
2017ರ ಅವಧಿಯಲ್ಲಿ ಟೆನಿಸ್ ಅಂಗಳದಲ್ಲಿ ಅಬ್ಬರಿಸಿದ್ದು, ಹಳೇ ಹುಲಿಗಳು. ಆಸ್ಟ್ರೇಲಿಯಾ ಓಪನ್‌ನಲ್ಲಿ ನಡೆದ ಫೈನಲ್‌ನಲ್ಲಿ ಭರ್ಜರಿ ಹೋರಾಟ ನಡೆಸಿದ್ದು, ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್. ಇಬ್ಬರೂ ಖ್ಯಾತ ಆಟಗಾರರು. ಆದರೆ ಮರ್ರೆ, ಜೊಕೊ, ವಾವ್ರಿಂಕಾ ಕೈಚಳಕ ಆರಂಭವಾದ ಮೇಲೆ ಇವರ ಪ್ರಭಾವ ಕುಗ್ಗಿತ್ತು. ಆದರೆ 2017 ಹಳೇ ಹುಲಿಗಳಿಗೆ ಮರುಜೀವ ನೀಡಿದೆ. ಆಸ್ಟ್ರೇಲಿಯಾ ಓಪನ್ ಫೈನಲ್‌ನಲ್ಲಿ ನಡಾಲ್‌ಗೆ ಸೋಲುಣಿಸಿದ ಫೆಡರರ್ 5 ವರ್ಷಗಳ ನಂತರ ಪುನಃ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಪಡೆದರು. ಆನಂತರ ಫ್ರೆಂಚ್ ಓಪನ್‌ನಲ್ಲಿ ವಾವ್ರಿಂಕಾಗೆ ಸೋಲುಣಿಸಿದ ನಡಾಲ್ ಟ್ರೋಫಿ ಎತ್ತಿದರು. ಹಾಗೇ ವಿಂಬಲ್ಡನ್, ಯುಎಸ್ ಓಪನ್‌ನಲ್ಲಿಯೂ ಫೆಡರರ್ ಜಯ ಸಾಧಿಸಿದರು. ವರ್ಷದಲ್ಲಿ ನಡೆಯುವ 4 ಗ್ರ್ಯಾನ್‌ಸ್ಲಾಮ್‌ಗಳಲ್ಲಿ ನಾಲ್ಕೂ ಪ್ರಶಸ್ತಿಯನ್ನು ಫೆಡರರ್, ನಡಾಲ್ ಪಡೆದಿರುವುದು ವಿಶೇಷ.
ರೋಚಕತೆ ಯಾಕೆ?
ಟೆನಿಸ್‌ನಲ್ಲಿ ತೀವ್ರ ಹಣಾಹಣಿ ಇದ್ದರೆ ಮಾತ್ರ ರೋಚಕತೆ ಹುಟ್ಟಿಕೊಳ್ಳುತ್ತೆ. ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಪಂದ್ಯ ವೀಕ್ಷಿಸುತ್ತಾರೆ. ಫೆಡರರ್, ನಡಾಲ್, ಮರ್ರೆ… ಇಂತಹ ದಿಗ್ಗಜರಿಗೆ ಸವಾಲು ನೀಡಬೇಕು ಅಂದರೆ ಜೊಕೊ ಕೋರ್ಟ್‌ಗೆ ಬರಲೇಬೇಕು. ಹಾಗೆಯೇ ಮಹಿಳೆ ಆಟಗಾರ್ತಿಯರಲ್ಲಿ ಸಿಮೊನಾ ಹಾಲೆಪ್, ಯುಂಗ್ ಜಾನ್‌ಚಾಂಗ್, ಗಾರ್ಬಿಯನ್ ಮುಗುರುಜ, ಕ್ಯಾರೊಲಿನ್ ಒಜ್ನಿಯಾಕಿ… ಇವರ ಗೆಲುವಿನ ಓಟಕ್ಕೆ ತಡೆ ನೀಡಬೇಕಾದರೆ ಅಲ್ಲಿ ಸೆರೆನಾ ವಿಲಿಯಮ್ಸ್ ಇರಲೇಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.