ಟೆನಿಸ್‌ ಎಂದರೆ ಮಕ್ಕಳಾಟವೇ?


Team Udayavani, Jan 6, 2018, 12:27 PM IST

32.jpg

ಮದುವೆಯ ನಂತರ ಹೆಣ್ಣಿನ ಜಗತ್ತು ಬದಲಾಗುತ್ತದೆ. ಅದುವರೆಗೂ ನಾನುಂಟು, ಮೂರು ಲೋಕವುಂಟು ಎಂದು ಮೆರೆದಾಡುವ ಹೆಂಗಸರು ಮದುವೆಯ ನಂತರ ಗಂಡ, ಮನೆ, ಮಕ್ಕಳು ಎಂಬ ವಿಶಿಷ್ಟ ಪ್ರಪಂಚದಲ್ಲಿ ಕಳೆದುಹೋಗುತ್ತಾರೆ. ಆದರೆ ಸೆರೆನಾ ವಿಲಿಯಮ್ಸ್‌ ಹಾಗಲ್ಲ. ಬಾಣಂತನ ಮುಗಿಸಿಕೊಂಡಿರುವ ಅವರು ಮತ್ತೆ ಆಟದ ಅಂಕಣಕ್ಕಿಳಿಯುವ ಉತ್ಸಾಹದಲ್ಲಿದ್ದಾರೆ…

ಆಟದ ಪ್ರೀತಿಯೆಂದರೆ ಅದು. ಮಗುವನ್ನು ಪಡೆದ ಕೇವಲ ನಾಲ್ಕು ತಿಂಗಳಲ್ಲಿ ಅಮೆರಿಕಾದ ಸೆರೆನಾ ವಿಲಿಯಮ್ಸ್‌ ಟೆನಿಸ್‌ ಅಂಕಣಕ್ಕೆ ಮರಳಿದ್ದಾರೆ. ಬಾಣಂತನ ಮುಗಿದಿದೆ! ಅಗ್ರಪಟ್ಟದ ಆಳ್ವಿಕೆ, ಗರಿಷ್ಠ ಗ್ರ್ಯಾನ್‌ಸ್ಲಾಮ್‌ ಗಳಿಕೆಯ ಸಾಧನೆಗಳ ನಂತರ ಆಟಗಾರರೊಬ್ಬರು ಸಂಸಾರ, ಮಕ್ಕಳು, ಮನೆ ಎಂದುಕೊಳ್ಳದೆ ಮತ್ತೆ ತಮ್ಮ ವೃತ್ತಿಪರ ಚಟುವಟಿಕೆಗೆ ಮರಳುವುದನ್ನು ಏನೆನ್ನಬೇಕು? ಸಿಂಪಲ್ಲಾಗಿ ಒಂದೇ ವಾಕ್ಯದಲ್ಲಿ ಹೇಳುವುದಾದರೆ, ಆಟದ ಪ್ರೀತಿಯೆಂದರೆ ಅದು!

ಕಳೆದ ವರ್ಷದ ಆರಂಭದಲ್ಲಿ ಆಯೋಜನೆಯಾಗಿದ್ದ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಸೆರೆನಾ ವಿಲಿಯಮ್ಸ್‌ ಆಡಿದ್ದರು. ಹೊಟ್ಟೆಯಲ್ಲಿ ಆರು ವಾರದ ಚಿಗುರು ಮಿಸುಕಾಡುತ್ತಿದ್ದಾಗ ಸೆರೆನಾ ಆಸ್ಟ್ರೇಲಿಯನ್‌ ಗ್ರ್ಯಾನ್‌ಸ್ಲಾಮ್‌ ವಿಜೇತರಾಗಿದ್ದರು. ಮಧ್ಯದ ಮೂರು ಗ್ರ್ಯಾನ್‌ಸ್ಲಾಮ್‌ಗಳನ್ನು ತಪ್ಪಿಸಿಕೊಂಡ ಸೆರೆನಾ ಮತ್ತೆ ಅದೇ ಮೆಲ್ಬೋರ್ನ್ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಓಪನ್‌ನಲ್ಲಿ ಮತ್ತೂಮ್ಮೆ ರ್ಯಾಕೆಟ್‌ ಝಳಪಿಸಲಿದ್ದಾರೆ. ಈಗ ಖಾತೆಯಲ್ಲಿರುವ 23 ಗ್ರ್ಯಾನ್‌ಸ್ಲಾಮ್‌ ವೃತ್ತಿಪರ ದಿನಗಳ ಗರಿಷ್ಠ ಸಾಧನೆ. 36 ವರ್ಷದ ಪ್ರಾಯವೂ ಸಣ್ಣದಲ್ಲ. 

ಆ್ಯಕ್ಸಿಡೆಂಟಲ್‌ ಪ್ರಕರಣ!
ಕಳೆದ ವರ್ಷ ಆಸ್ಟ್ರೇಲಿಯನ್‌ ಗ್ರ್ಯಾನ್‌ಸ್ಲಾಮ್‌ ಆಡುವ ಸಮಯದಲ್ಲಿ ತಾವು “ಆ್ಯಕ್ಸಿಡೆಂಟಲ್‌ ಆಗಿ ಗರ್ಭಿಣಿಯಾಗಿರುವುದು ಸೆರೆನಾ ಗಮನಕ್ಕೆ ಬಂದಿತ್ತು. ಇದೆಲ್ಲ ಸುದ್ದಿ ಮತ್ತು ಅದು ಕೊಡುವ ಸುಸ್ತಿನ ನಡುವೆಯೂ ಅಕ್ಕ ವೀನಸ್‌ರಿಗೂ ಮಣ್ಣು ಮುಕ್ಕಿಸಿ ಏಳನೇ ಆಸ್ಟ್ರೇಲಿಯನ್‌ ಗ್ರ್ಯಾನ್‌ಸ್ಲಾಮ್‌ ಗೆದ್ದದ್ದೂ ಆಯ್ತು. ಇದರ ಜೊತೆಗೆ WTA ನಂಬರ್‌ ಒಂದು ಕ್ರಮಾಂಕದ ಬೋನಸ್‌ ಕೂಡ ಸಿಕ್ಕಿತ್ತು. ಮಾರ್ಗರೇಟ್‌ ಕೋರ್ಟ್‌ರ ಸಾರ್ವಕಾಲಿಕ 24 ಗ್ರ್ಯಾನ್‌ಸ್ಲಾಮ್‌ಗಿಂತ ಒಂದು ಕಡಿಮೆ ಇರುವಾಗಲೇ ಸೆರೆನಾ ರ್ಯಾಕೆಟ್‌ ಸಂನ್ಯಾಸ ಸ್ವೀಕರಿಸುವುದು ಅನಿವಾರ್ಯವಾಗಿತ್ತು. ಸೆಪ್ಟೆಂಬರ್‌ನಲ್ಲಿ ಮಗಳು ಅಲೆಕ್ಸಿಸ್‌ ಒಲಂಪಿಯಾ ಒಹಾನಿಯನ್‌ ಜೂನಿಯರ್‌ ಅವತರಿಸಿದಳು. ಆ ನಂತರ ನವೆಂಬರ್‌ನಲ್ಲಿ ದೀರ್ಘ‌ಕಾಲದ ಗೆಳೆಯ, ಉದ್ಯಮಿ ಅಲೆಕ್ಸಿಸ್‌ ಒಹಾನಿಯನ್‌ ಅವರನ್ನು ಸೆರೆನಾ ಮದುವೆಯಾದರು. ಆದರೆ ಮದುವೆಯ ನಂತರವೂ ಅವರ ತುಡಿತ ಟೆನಿಸ್‌ ಕಡೆಗಿತ್ತು.

ಏರಿಳಿತಗಳು ಸೆರೆನಾಗೆ ಹೊಸದಲ್ಲ. 2007ರಲ್ಲಿ 81ನೇ ರ್‍ಯಾಂಕಿಂಗ್‌ಗೆ ಕುಸಿದಾಕೆ ಆನಂತರದಲ್ಲಿ ಆಸ್ಟ್ರೇಲಿಯನ್‌ ಓಪನ್‌ ಗೆದ್ದದ್ದಿದೆ. ಇಂತಹ ಸಾಧನೆಯನ್ನು ರೋಜರ್‌ ಫೆಡರರ್‌ ಕೂಡ ಮಾಡಿದ್ದಾರೆ. ಅಷ್ಟೇ ಅಲ್ಲ, ಮಕ್ಕಳನ್ನು ಬದಿಗಿಟ್ಟುಕೊಂಡು ಗ್ರ್ಯಾನ್‌ಸ್ಲಾಮ್‌ ಗೆದ್ದವರ ಪರಂಪರೆಯೂ ಇದೆ. ಮುಕ್ತ ಯುಗದ 11 ಗ್ರ್ಯಾನ್‌ಸ್ಲಾಮ್‌ ಸೇರಿದಂತೆ 24 ಗ್ರ್ಯಾನ್‌ಸ್ಲಾಮ್‌ ಗೆದ್ದಿರುವ ಮಾರ್ಗರೇಟ್‌ ಕೋರ್ಟ್‌, 1971ರಲ್ಲಿ ವಿಂಬಲ್ಡನ್‌ ಫೈನಲ್‌ ಆಡಿದಾಗ ಅವರ ಮೊದಲ ಮಗು ಉದರದಲ್ಲಿ ಆಟವಾಡುತ್ತಿತ್ತು. ಮರಳಿ ಬಂದವರು ಅಮೆರಿಕನ್‌ ಓಪನ್‌ ಹೊರತಾಗಿ ಉಳಿದೆಲ್ಲ ಗ್ರ್ಯಾನ್‌ಸ್ಲಾಮ್‌ ಗೆದ್ದ ದಾಖಲೆಯಿದೆ. 74ರಲ್ಲಿ ಎರಡನೇ ಮಗುವಿಗಾಗಿ ಹಿಂದೆಸರಿದವರು ಮತ್ತೆ ಆಡಿ ಒಂದು WTA ಟೂರ್ನಿ ಗೆದ್ದರು. 75ರಲ್ಲಿ ಯುಎಸ್‌ ಓಪನ್‌ನ ಕ್ವಾರ್ಟರ್‌ ಫೈನಲ್‌ ಆಡಿದ ನಂತರ ಅವರು 77ರಲ್ಲಿ ಪೂರ್ಣಪ್ರಮಾಣದ ನಿವೃತ್ತಿ ಘೋಷಿಸಬೇಕಾಯಿತು. ಆ ಸಂದರ್ಭದಲ್ಲಿ ಅವರ ನಾಲ್ಕನೇ ಮಗು ಪ್ರಪಂಚ ಕಾಣುವ ಆತುರ ತೋರಿಸಿತ್ತು!

ಆಸ್ಟ್ರೇಲಿಯಾದ ಎವೋನೇ ಗೊಲಗಾಂಗ್‌ 76ರಲ್ಲಿ ಅಗ್ರಪಟ್ಟ ಏರಿದವರು ಮಗುವಿನ ನಂತರ ಆಸ್ಟ್ರೇಲಿಯನ್‌, ವಿಂಬಲ್ಡನ್‌ ಗೆದ್ದರು. ತೀರಾ ಇತ್ತೀಚೆಗೆ ಕಿಂ ಕ್ಲಿಸ್ಟರ್ 2008ರಲ್ಲಿ ಮಗು ಪಡೆದ ನಂತರ 2010ರ ಯುಎಸ್‌ ಓಪನ್‌, 2011ರ ಆಸ್ಟ್ರೇಲಿಯನ್‌ ಓಪನ್‌ ಗೆದ್ದಿದ್ದರು. ಪ್ರಶಸ್ತಿ ಅಂಕಣದಲ್ಲಿ ಮಗುವಿನೊಂದಿಗೆ ಕಾಣಿಸಿದ ಕ್ಲಿಸ್ಟರ್ ಫೋಟೋ ದೊಡ್ಡ ಮಟ್ಟದ “ಲೈಕ್‌ಗೆ ಕಾರಣವಾಗಿತ್ತು. ಇನ್ನೂ ಎರಡು ಪ್ರಮುಖ ಪ್ರಶಸ್ತಿಗಳ ನಂತರ ಕಿಂ ಕೂಡ ಗುಡ್‌ಬೈ ಹೇಳಲೇಬೇಕಾಯಿತು.

ಪಟ್ಟಿಯನ್ನು ಹೀಗೇ ಮುಂದುವರಿಸುತ್ತಾ ಹೋಗಬಹುದು, ಲಿಂಡ್ಸೆ ಡೆವನ್‌ಫೋರ್ಟ್‌, ಕಟೆರಿನಾ ಬೊನಾxರೆನ್ಕೋ, ತಾಜಾನಾ ಮಾರಿಯಾ…ಹೀಗೆ ಹಲವರು ಈ ಸಂದರ್ಭದಲ್ಲಿ ನೆನಪಾಗುತ್ತಿದ್ದಾರೆ. ಸ್ವಾರಸ್ಯ ಎಂದರೆ ಸೆರೆನಾ ಜೊತೆ ಅವರ ಹಲವು ವರ್ಷಗಳ ಎದುರಾಳಿ ವಿಕ್ಟೋರಿಯಾ ಅಜರೆಂಕಾ ಕೂಡ ಇದೀಗ ಅಂಕಣಕ್ಕೆ ಮರಳುತ್ತಿದ್ದಾರೆ. ಈ ಎರಡು ಬಾರಿಯ ಆಸ್ಟ್ರೇಲಿಯನ್‌ ಚಾಂಪಿಯನ್‌ ಕೂಡ ಮೊದಲ ಮಗು ಪಡೆದ ನಂತರ ಸ್ಟಾನ್‌ಫೋರ್ಡ್‌ ಮೂಲಕ ಅಮ್ಮ ಆಟಗಾರ್ತಿಯಾಗಿ ಸಾಮರ್ಥ್ಯ ಪರೀಕ್ಷಿಸುತ್ತಿದ್ದಾರೆ!

ಮತ್ತೆ ಅವಘಡದ ಸೌಲಭ್ಯ!
ಟೂರ್ನಿಯಲ್ಲಿ ಮಹತ್ವದ ಸಾಧನೆ ಮಾಡಲು ಶ್ರೇಯಾಂಕ ಅನುಕೂಲಕರವಾಗುತ್ತದೆ. ದೀರ್ಘ‌ಕಾಲದಿಂದ ಗಾಯಗೊಂಡು ಟೆನಿಸ್‌ನಿಂದ ಹೊರಗಿದ್ದವರಿಗೆ WTA ಒಂದು ಸೌಲಭ್ಯ ಒದಗಿಸುತ್ತದೆ. 2 ಗ್ರ್ಯಾನ್‌ಸ್ಲಾಮ್‌ ಸೇರಿದಂತೆ ವರ್ಷದ 8 ಟೂರ್ನಿಗಳಲ್ಲಿ ಸೀಡಿಂಗ್‌ಗೆ ಕೋರಿಕೆ ಸಲ್ಲಿಸಲು ಅನುವು ಮಾಡಿಕೊಟ್ಟಿದೆ. ಸಂಘಟಕರು ಮಾನ್ಯತೆ ನೀಡಿದರೆ ಅಂಥವರಿಗೆ ಶ್ರೇಯಾಂಕ ನೀಡಬಹುದು. ಈ ಅವಕಾಶದಲ್ಲಿ ಪ್ರಗ್ನೆನ್ಸಿಯೂ ಸೇರಿದೆ, ಅದೂ ಒಂದು ರೀತಿಯ ಅವಘಡವೇ ತಾನೇ!? ಆದರೆ ಈ ರಿಯಾಯ್ತಿಯಲ್ಲಿ ಟೂರ್ನಿಯ ಸಂಘಟಕರದ್ದೇ ಅಂತಿಮ ಮಾತು. ಹಾಗಾಗಿ ಸೆರೆನಾರಿಗೆ ಶ್ರೇಯಾಂಕ ಸಿಗುವ ಕುರಿತು ಈವರೆಗೆ ಖಚಿತವಾಗಿ ತಿಳಿಸಲಾಗಿಲ್ಲ.

ಸದ್ಯ ಸೆರೆನಾ ಸಮಸ್ಯೆ ಎದುರಾಳಿಗಳದ್ದಲ್ಲ. ಆಕೆಯ ಮಗಳು ಹಾಗೂ ಅದರ ಹೊಸ ಹಲ್ಲುಗಳದ್ದು. ಈಗಾಗಲೇ ಆಕೆ ಟ್ವಿಟರ್‌ನಲ್ಲಿ ಸಲಹೆ ಕೊಡ್ರಪ್ಪಾ ಎಂದು ಕೇಳಿದ್ದಾರೆ. ಹಲ್ಲು ಮೂಡುವ ಸಂದರ್ಭದಲ್ಲಿ ಮೂಡುವ ಇರುಸುಮುರಿಸಿನ ಕಾರಣ ಮಗು ಕೈ ಮೇಲೆಯೇ ನಿದ್ದೆ ಹೋಗಲು ತವಕಿಸುತ್ತದೆ. ಸೆರೆನಾಗೆ ಇದು ಇಷ್ಟ ಮತ್ತು ಕಷ್ಟ. ಟೆನಿಸ್‌ ಆಟದ ವಿಷಯದಲ್ಲಿ ಸೆರೆನಾಗೆ ಸಲಹೆ ನೀಡಿ ಸಹಾಯ ಮಾಡಲಾಗದವರು ಕೂಡ ಈ ಮಗು ಆರೈಕೆಯ ವಿಚಾರದಲ್ಲಿ ಸಹಾಯ ಹಸ್ತ ಚಾಚಬಹುದು!

ಮಾ.ವೆಂ.ಸ.ಪ್ರಸಾದ್‌

ಟಾಪ್ ನ್ಯೂಸ್

Bidar: Waqf should be removed from India : Yatnal

‌Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್

Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್‌ ಫಿಕ್ಸ್

Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್‌ ಫಿಕ್ಸ್

BGT 2024: team India won the test in Perth

BGT 2024: ಪರ್ತ್‌ ನಲ್ಲಿ ಪಲ್ಟಿ ಹೊಡೆದ ಆಸೀಸ್:‌ ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ

IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್

IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್

ಕಡಬ, ಬೆಳ್ತಂಗಡಿ ಸೇರಿದಂತೆ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು

ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bidar: Waqf should be removed from India : Yatnal

‌Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್

Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್‌ ಫಿಕ್ಸ್

Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್‌ ಫಿಕ್ಸ್

BGT 2024: team India won the test in Perth

BGT 2024: ಪರ್ತ್‌ ನಲ್ಲಿ ಪಲ್ಟಿ ಹೊಡೆದ ಆಸೀಸ್:‌ ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.