ನಮ್ಮ ಮುಂದೆ ಮತ್ತೊಂದು ಯುದ್ಧ ನಿಂತಿದೆಯೇ?


Team Udayavani, May 6, 2017, 2:23 PM IST

658.jpg

ಜಗತ್ತು ಅಪಾಯದ ಅಂಚಿನಲ್ಲಿದೆಯೇ? ಎಂಬ ಪ್ರಶ್ನೆಗೆ ಮಹತ್ವ ಬಂದಿರುವುದು ಶನೈಶ್ಚರಸ್ವಾಮಿಯ ಯುದ್ಧ ಭೂಮಿಯ ಪ್ರಧಾನ ಘಟಕವಾದ ಧನುಸ್ಸು ಎಂಬ ಅಂಶದ ವಿಧಿ ಬಿಂದುವಿನಲ್ಲಿ.  ಸಧ್ಯದ ವರ್ತಮಾನ ಘಟ್ಟದಲ್ಲಿ ಬಹಳ ರೀತಿಯ ಒತ್ತಡಕ್ಕೆ ಸಿಕ್ಕುಬಿದ್ದು ಅತಂತ್ರಗೊಂಡಿರುವುದರಿಂದ, ಜೊತೆಗೆ ಮತ್ತೆ ಹಿಂತಿರುಗಿ ಜೂನ್‌ ಮೂರನೇ ವಾರದಲ್ಲಿ ತನ್ನ ವೈರಿಯಾದ ಕುಜನ ನೇತೃತ್ವದ ವೃಶ್ಚಿಕ ರಾಶಿಗೆ ಹಿಂತಿರುಗುತ್ತಾನೆ. ಅಕ್ಟೋಬರ್‌ 25ರ ವರೆಗೆ ವೃಶ್ಚಿಕದಲ್ಲಿಯೇ ಅವನ ವಾಸ. ಕಾಲರಾಯನ ಅಷ್ಟಮ ಸ್ಥಾನ ವೃಶ್ಚಿಕವಾಗಿದ್ದು ಧನಸ್ಸು ರಾಶಿಯಿಂದ ವಾಪಸ್ಸಾದ ಶನೈಶ್ಚರ ಕೆಲಮಟ್ಟಿನ ಸ್ವಾಸ್ಥ್ಯದ ಮಟ್ಟವನ್ನು ಪ್ರಪಂಚದ ರಾಜಕೀಯ ನಾಯಕರು ಕಳೆದುಕೊಂಡು ಶಸ್ತ್ರಾಸ್ತ್ರಗಳನ್ನು ಝಳಪಿಸುವ ಅವಸರದಲ್ಲಿ ನಿರತರಾಗುವ ಅತಿರೇಕತನ ಪ್ರದರ್ಶಿಸಲು ಸಾಧ್ಯ. ಮುಖ್ಯವಾಗಿ ಉತ್ತರ ಕೊರಿಯಾದ ಸರ್ವಾಧಿಕಾರಿಯಾಗಿರುವ ಕಿಮ್‌ ಜಂಗ್‌ ಉನ್‌ ಹಾಗೂ ಚೀನಾದ ಕಮ್ಯೂನಿಸ್ಟ್‌ ಸರ್ಕಾರದ ವರಿಷ್ಠ ಕ್ವಿ ಜನ್‌ ಪಿಂಗ್‌ ಒಂದು ಕೈ ನೋಡಿಬಿಡೋಣ ಎಂಬ ಸಾಧ್ಯತೆಯನ್ನು, ಜಗತ್ತಿನ ತಮ್ಮ ಇತರ ವಿರೋಧಿಗಳು ಎಂದು ಗುರುತಿಸಿಕೊಂಡ ರಾಷ್ಟ್ರಗಳ ವಿರುದ್ಧ ಸಜಾjಗುವ ಉತ್ಕಟೇಚ್ಛೆ ಪ್ರದರ್ಶಿಸುತ್ತಾರೆ. 

ಚಂದ್ರಗ್ರಹಣದ ಪ್ರಭಾವ ಯುದ್ಧಕ್ಕೆ ಅವಕಾಶ ಕಲ್ಪಿಸಬಹುದೇ?
ಏಷಿಯಾ ಖಂಡದಲ್ಲಿ ಸಂಭವಿಸಲಿರುವ ಈ ಗ್ರಹಣ ಬರುವ ಆಗಸ್ಟ್‌ ತಿಂಗಳ 7ನೇ ತಾರೀಖೀನ ಸೋಮವಾರದ ದಿನ ಸಂಭಸುತ್ತದೆ.  ಪ್ರಭಾವಿ ನಾಯಕರೊಬ್ಬರಿಗೆ ಭಾರತದಲ್ಲಿ ಈ ಗ್ರಹಣ ಅಪಾಯಕಾರಿಯಾಗಿದ್ದು ಕ್ವಿ ಜನ್‌ ಪಿಂಗ್‌  ಪ್ರದರ್ಶಿಸುವ ಸಮರೋತ್ಸಾಹ  ಭಾರತದ ಬಗೆಗೂ ತನ್ನ ಸಂಘರ್ಷದ ದಾರಿ ತಿರುಗಿಸಿಕೊಳ್ಳಲು ಅವಕಾಶ ಕಲ್ಪಿಸಬಹುದು. ಚೂಡಾಮಣಿ ಕೇತುಗ್ರಸ್ತ ಪಾರ್ಶ್ವ ಚಂದ್ರಗ್ರಹಣ ಭಾರತದ ಮಟ್ಟಿಗೆ ಹಲವು ಜಂಜಾಟಗಳನ್ನು ಸೃಷ್ಟಿಸಲು ಸಾಧ್ಯವಿರುವಂಥದ್ದು. ಮೋದಿಯವರು ಬಹಳಷ್ಟು ಜಾಗರೂಕರಾಗಿ ಇರಬೇಕಾದ ಸಂದರ್ಭವಾಗಿರುತ್ತದೆ. ಈ ಕಾಲಘಟ್ಟ ಪ್ರತಿದಿನವೂ ಭಯೋತ್ಪಾದಕರು ಹುಟ್ಟಿಸುವ ಘಾತಕತನವನ್ನು ನಿಯಂತ್ರಿಸುವುದರೊಂದಿಗೆ ಆರ್ಥಿಕ ವಿಚಾರದ ಕಾರಣಕ್ಕಾಗಿ ಮೋದಿ ಗರಿಷ್ಠ ಮಟ್ಟದ ಚಾತುರ್ಯವನ್ನು ಅವಸರವಾಗದ ಕಾರ್ಯತಂತ್ರ ರೂಪಿಸಿ  ಸಂಭಾವ್ಯ ಆರ್ಥಿಕ ಕುಸಿತವನ್ನು ತಡೆಯಬೇಕಾಗಿ ಬರುತ್ತದೆ. ಕಾಶ್ಮೀರದ ವಿಚಾರದಲ್ಲಾಗಲೀ ನೂರಕ್ಕೆ ನೂರು ಅನಾವಶ್ಯಕವಾಗುವ ಯುದ್ಧವೊಂದಕ್ಕೆ ಅಣಿಗೊಳ್ಳಬೇಕಾಗಿ ಬರಬಹುದು. ಟ್ರಂಪ್‌ ಕೂಡಾ ಅಮೆರಿಕದಲ್ಲಿ ಈಗಾಗಲೇ ಒತ್ತಡವನ್ನು ಎದುರಿಸುತ್ತಿದ್ದು ಖಾಸಗಿತನ ಕಳೆದುಕೊಳ್ಳುತ್ತಿರುವ ವಿಚಾರದಲ್ಲಿ ಚಿಂತಿತರಾಗಿದ್ದಾರೆ. ಉತ್ತರ ಕೊರಿಯಾದ ಕಿಮ್‌ ಜಂಗ್‌ ಉನ್‌ ಕೆಣಕುವುದು ಅಮೆರಿಕಾವನ್ನೇ ಆಗಿರುವುದರಿಂದ ಅಮೆರಿಕಾ ಯುದ್ಧಕ್ಕೆ ಪ್ರವೇಶೀಸುತ್ತಿರುವುದು ಅನಿವಾರ್ಯವಾದಾಗ ಯುದ್ಧದ ಕಾರ್ಯಕ್ಷೇತ್ರ ಏಷಿಯಾ ಖಂಡವೇ ಆಗಿರುತ್ತದೆ. ಯಾರಿಗೂ ಬೇಕಾಗಿರದ ಯುದ್ಧ ಉತ್ತರ ಕೊರಿಯಾದಂಥ ರಾಷ್ಟ್ರದ ಕಾರಣಕ್ಕಾಗಿ ಜಗತ್ತು ಎದುರಿಸಬೇಕಾಗಿ ಬಂದೀತು. ಮೊದಲ ಮಹಾಯುದ್ಧವಾಗಲೀ, ಎರಡನೇ ಮಹಾಯುದ್ಧದ ಸಂದರ್ಭವಾಗಲೀ ಚಿಕ್ಕ ಕಾರಣಕ್ಕಾಗಿ ಬೃಹತ್‌ ರೂಪವನ್ನು ಪಡೆದ ವಿಚಾರಗಳನ್ನು ನಾವು ಇತಿಹಾಸದಲ್ಲಿ ಓದಿದ್ದೇವೆ. ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಂಗ್‌ ಉನ್‌ ಅಮೆರಿಕಾವನ್ನು ಎದುರಿಸಬಲ್ಲೆ ತಕ್ಕ ಪಾಠ ಕಲಿಸುತ್ತೇನೆ ಎಂಬಿತ್ಯಾದಿ ಮಾತನಾಡಲು ಧೈರ್ಯ ಪಡೆಯುವುದು ಚೀನಾದ ಬೆಂಬಲ ಆ ದೇಶಕ್ಕೆ ಅಬಾಧಿತವಾಗಿರುವುದೇ ಕಾರಣ. ಹೀಗಾಗಿ ಕಿಮ್‌ ಬಿಬ್ಬೆ ಹೊಡೆದಷ್ಟೂ ಚೀನಾ ಮುಗುಳ್ನಗುತ್ತ ಇರುತ್ತದೆ. ದಕ್ಷಿಣ ಚೀನಾ ಸಮುದ್ರದ ವಿಷಯಕ್ಕೆ ಅದು ಎದುರಿಸುತ್ತಿರುವ ಮುಖ ಭಂಗವನ್ನು ತಪ್ಪಿಸಿಕೊಳ್ಳಲು ಹೆಣಗಾಡುತ್ತಲೇ ಇದೆ. ಪ್ರತಿಷ್ಠೆಯ ವಿಚಾರವಾಗಿ ಈ ಅಂಶವನ್ನು ಪರಿಗಣಿಸಿರುವ ಚೀನಾಕ್ಕೆ ಈ ವ್ಯಾಜ್ಯದ ವಿಚಾರ ಪ್ರತಿಷ್ಠೆಯ ವಿಚಾರವಲ್ಲದೆ ಅದಕ್ಕೆ ಬೇಕಾದ ಅಮೂಲ್ಯವಾದ ಭೂಗರ್ಭದ ಸಂಪತ್ತನ್ನು ಬಾಚಿಕೊಳ್ಳಲೂ ಅವಶ್ಯವಾದ ಸಂಗಾತಿಯಾಗಿದೆ. 

ಪಶ್ಚಿಮ ದೇಶಗಳಿಗೆ ಬೇಕಾದ ಪಾಕಿಸ್ತಾನ
ನೆಹರು ಕಾಲದಿಂದಲೂ ಭಾರತ ದೇಶ ಎಷ್ಟೇ ಶಾಂತಿ ಮಂತ್ರ ಜಪಿಸಿದರೂ ಅಮೆರಿಕಾ ಸೇರಿದಂತೆ ಪಶ್ಚಿಮದ ರಾಷ್ಟ್ರಗಳಿಗೆ ಭಾರತ ಇಕ್ಕಟ್ಟಿನ ಸ್ಥಿತಿ ಎದಿರಿಸಿಕೊಂಡೇ ಇರಬೇಕು. ನೀಚ ಗುರುವಿನ ಜೊತೆ ಕರ್ಮ ಕ್ಷೇತ್ರದಲ್ಲಿರುವ ಶುಕ್ರಗ್ರಹದ ದಶಾಕಾಲ ಈಗಿನ ಪಾಕಿಸ್ತಾನದ ಪ್ರಧಾನಿಗೆ ಒಳಿತಿನ ಕಾಲಘಟ್ಟವಂತೂ ಆಗಿರುವುದಿಲ್ಲ. ಇನ್ನು ಮುಂದಿನ ಎರಡೂ ಕಾಲು ವರ್ಷಗಳಲ್ಲಿ ಕೂಡಿಬರುವ ಸಾಡೆಸಾತಿ ತಪ್ಪುಗಳನ್ನು ಮಾಡಲು ಗುರುವಿನ ಮೂಲಕವಾಗಿ ಪ್ರಯತ್ನಿಸುತ್ತಲೇ ಇರುತ್ತಾನೆ. ಪ್ರಸ್ತುತ ಒಂದು ತೂಗುಕತ್ತಿ ( ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ) ‚ಶರೀಫ‌ರ ಮೇಲೆ ಇದ್ದೇ ಇದೆ. ಅನ್ಯರ ಲಕ್ಷ್ಯ ಬೇರೆಡೆಗೆ ಸೆಳೆಯಲು ಯುದೊœàನ್ಮಾದವಂತೂ ‚ಷರೀಫ್ ವ್ಯಕ್ತ ಪಡಿಸುವ ಸಾಧ್ಯತೆ ಇದೆ. ಬಂಧನ ಯೋಗ ಜಾತಕದಲ್ಲಿ ಅವರಿಗೆ ಯಾವಾಗಲೂ ಒಂದು ಮಗ್ಗುಲ ಮುಳ್ಳು. ಭಾರತವನ್ನು ದಣಿವುಗೊಳಿಸಲು ಪಶ್ಚಿಮದ ರಾಷ್ಟ್ರಗಳು ಚೈನಾವೂ ಪಾಕಿಸ್ತಾನವನ್ನು ಕಟುವಾಗಿ ವಿಮರ್ಶಿಸುತ್ತ ಇದ್ದಂತೆ ಕಂಡರೂ ಮೃದುತ್ವದೊಂದಿಗೆ ಬೆನ್ನು ಸವರುತ್ತಲೇ ಇರುತ್ತದೆ. ಪಾಕಿಸ್ತಾನ ಹಲವು ಪಾಪಗಳನ್ನು ಮಾಡಿ ದಕ್ಕಿಸಿಕೊಳ್ಳುತ್ತಲೇ ಇದೆ. ಅಮೆರಿಕ ಮೈ ಪರಚಿಕೊಳ್ಳುವ ಸ್ಥಿತಿ ಇದ್ದರು ಸಹಿಸಿಕೊಳ್ಳದೆ ವಿಧಿ ಇಲ್ಲ. ಭಾರತವನ್ನು ದುರ್ಬಲಗೊಳಿಸಲು ಇದು ಅನಿವಾರ್ಯ.

ಭಾರತದಲ್ಲಿ ಮೋದಿ ಆಡಳಿತ
ಶನಿಕಾಟದ ಏಳೂವರೆ ವರ್ಷದ ಅವಧಿಯಲ್ಲಿ ಮೋದಿ ಪ್ರಧಾನಿಯಾಗಿದ್ದಾರೆ. ಪ್ರತಿನಿತ್ಯವೂ ಗೆದ್ದರೂ ಸೋತಂತೆ ಬಸವಳಿಯುತ್ತಾರೆ. ಗೆಲ್ಲಿಸಬಲ್ಲದು ಎಂಬ ಉತ್ಸಾಹ ತಳೆಯುತ್ತಾರೆ. ಇದು ತನ್ನ ಸಾಧನೆ ಎಂದು ವಿರೋಧಿಗಳ ಬಾಯಿ ಮುಚ್ಚಿಸುತ್ತಾರೆ. ಮೋದಿಯವರ ಏಳೂವರೆ ಶನಿ ಮಹಾರಾಜ ಅಡೆತಡೆಗಳನ್ನು ನಿರ್ಮಿಸುತ್ತಲೇ ಇದ್ದಾನೆ. 

ಮೋದಿ ನಿಸ್ವಾರ್ಥಿ ಎನ್ನಲು ಯಾವುದೇ ಪ್ರತಿರೋಧ ವ್ಯಕ್ತ ಪಡಿಸಲಾಗದು. ಆದರೆ ಆರ್ಥಿಕ ನೀತಿ, ಭಯೋತ್ಪಾದಕತೆ ಪಕ್ಷದ ಒಳಗೇ ಇರುವ ವೈರಿಗಳು ಅಗಾಧವಾದುದನ್ನು ನಿರೀಕ್ಷಿಸುತ್ತಿರುವ ಜನಸಮೂಹ ತನ್ನ ಅಭಿಮಾನಿಗಳ ತೀವ್ರತರವಾದ ಮುಜುಗರ ಹುಟ್ಟಿಸುವ ನೀತಿಗಳು ಮೋದಿಯವರ ನಿರಂತರ ಸಮಸ್ಯೆಗಳಾಗಿವೆ. ಪೂರ್ವದ ಗಡಿಯಲ್ಲಿ ದಂಗೆಕೋರರು ಸೈನಿಕರನ್ನು ಭಯೋತ್ಪಾದನೆಯೊಂದಿಗೆ ಸಾಗಿಸುತ್ತಿರುವ ದಾಳ.  ಬೇಸ್ತು ಬೀಳಿಸುವ ಈ ಕ್ರಮದಲ್ಲಿ ಚೀನಾದ ಕುಮ್ಮಕ್ಕು ಇದೆ. ಹೀಗೆಂದ ಮಾತ್ರಕ್ಕೆ ಚೀನಾದ ವಿರುದ್ಧ ದಾಳಿ ಸಾರಲಾಗದು. ದಂಗೆಕೋರರನ್ನು ನಿಗ್ರಹಿಸುವಲ್ಲಿ ರಾಜತಾಂತ್ರಿಕ ನೈಪುಣ್ಯತೆ ಗುಪ್ತಚಾರ ದಳಗಳ ಚಾಕಚಕ್ಯತೆಗಳು ದುರ್ಬಲವಾದಂತೆ ಕಾಣಿಸುತ್ತದೆ. ಪಾಕಿಸ್ತಾನವು ಭಯೋತ್ಪಾದಕರ ಮೂಲಕ ನಡೆಸುವ ಮೇಲ್ನೋಟಕ್ಕೆ ನೇರವಲ್ಲದ ಆದರೆ ಪಾಕಿಸ್ತಾನದ ವ್ಯವಸ್ಥಾಪೂರ್ವ ದಾಳಿ ಸರ್ರನೆ ಏನೋ ಕಠಿಣ ಕ್ರಮ ತಳೆಯುವ ನಿಟ್ಟಿನಲ್ಲಿ ಮುಂದಾಗುವ ಕೆಚ್ಚನ್ನು ತೋರಿಸಲು ಸಾಧ್ಯವಾಗುತ್ತಿಲ್ಲ. 

ರಶಿಯಾದ ಪುಟಿನ್‌ ಅಮೆರಿಕಾದ ವಿರುದ್ಧ ಪುಟಿಯುತ್ತಿದ್ದಾರೆ. ಸಿರಿಯಾ, ಜಪಾನ್‌, ತೈವಾನ್‌ ನೆಪದಲ್ಲಿ ಪುಟಿನ್‌ಗೆ ಅಮೆರಿಕಾದ ಟ್ರಂಪ್‌ ಅನ್ನು ತುಡುಕುವ ಸಾಹಸ ನಿಯಂತ್ರಣ ಮೀರಿ ಹೊರಗೆ ಬಂದು ಬಿಡಬಹುದು ಎಂಬ ಸ್ಥಿತಿ ಇದೆ. ವಾಸ್ತವವಾಗಿ ಹಿಲರಿ ಕ್ಲಿಂಟನ್‌ ಸೋಲಿಸಿ ಟ್ರಂಪ್‌ ಗೆಲ್ಲುವಂತೆ ಪುಟಿನ್‌ ಆಟ ಆಡಿದರು ಎಂಬ ಆರೋಪ ಬಹಿರಂಗವಾಗಿಯೇ ಕೇಳಿಸುತ್ತಿದೆ. ಪುಟಿನ್‌ರಿಗೆ ಟ್ರಂಪ್‌ರನ್ನು ತನ್ನ ತೋರು ಬೆರಳಲ್ಲಿ ನಿಯಂತ್ರಣದಲ್ಲಿಟ್ಟು ಕೊಳ್ಳುವ ಬಯಕೆ.

ಈ ಎಲ್ಲಾ ಅಂಶಗಳು ಭಗ್ಗನೆ ಉರಿಯುವ ಪೆಟ್ರೋಲಿನಂತೆ ಸಂಘರ್ಷದ ಸೂಕ್ಷ್ಮಗಳು ಕಾದ ಕಾವಲಿಯಂತೆ ಸೋರುವ ಅನಿಲದಂತೆ ಎಲ್ಲಿ ಬೇಕಾದಲ್ಲಿ ಸ್ಫೋಟಿಸಬಹುದು. ಮೇಲೆ ವಿವರಿಸಿದ ನಾಯಕರ ಮೇಲೆ ವರ್ತಮಾನದಲ್ಲಿ ಶನೈಶ್ಚರ ಹೊಂದಿರುವ ಹಿಡಿತ,  ಬರಲಿರುವ ಚಂದ್ರಗ್ರಹಣ ಜಾಗತಿಕವಾದ ದೊಡ್ಡ ಯುದ್ಧಾದಿ ಅವಗಢಗಳಿಗೆ ಮುನ್ನುಡಿ ಬರೆಯಬಹುದು.

ಅನಂತ ಶಾಸ್ತ್ರಿ 

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.