ವಿಘ್ನ ನಿವಾರಕ ಸಿದ್ಧ ಪ್ರದಾಯಕ ಶರಣು ಸಿದ್ಧಿ ವಿನಾಯಕ


Team Udayavani, Aug 19, 2017, 1:47 PM IST

8.jpg

ವಿಘ್ನೇಶ್ವರ, ವಿಘ್ನನಿವಾರಕ, ವಿನಾಯಕ, ಗಣಪತಿ, ಗಜಾನನ ಎಂತೆಲ್ಲಾ  ಕರೆಸಿಕೊಳ್ಳುವ ಮಹಾಗಣಪತಿ ನೆಲೆಸಿರುವ ಪಾವನ ಪುಣ್ಯ ಕ್ಷೇತ್ರವೇ ಗೋಕರ್ಣ. ಈ ಮಹಾಗಣಪತಿ ದೇವಸ್ಥಾನದಿಂದ ಪ್ರಸಿದ್ಧ ಮಹಾಬಲೇಶ್ವರ  ದೇವಸ್ಥಾನವು ಅನತಿ ದೂರದಲ್ಲಿದೆ ಇಲ್ಲಿರುವ  ಗಣೇಶನನ್ನು ಸಿದ್ಧ  ಗಣೇಶ ಎಂತಲೂ ಕರೆಯಲಾಗುತ್ತದೆ. ಅತ್ಯಂತ ಪುರಾತನವಾದ ಈ ಗಣೆೇಶನ  ದೇವಾಲಯದ ಇನ್ನೊಂದು ವೈಶಿಷ್ಟ್ಯವೇನೆಂದರೆ  ಇಲ್ಲಿ  ಪ್ರತಿಷ್ಠಾಪಿತ‌ನಾಗಿರುವ  ಗಣೆೇಶನಿಗೆ  ಬರೀ ಎರಡು  ಕೈಗಳು  ಮಾತ್ರ  ಇವೆ.  ಪುರಾಣ ಪ್ರಸಿದ್ಧ‌ವಾದ  ಈ ದೇಗುಲದಲ್ಲಿ  ಗಣಪತಿ  ಬಂದು ನೆಲೆಸಲು ಕಾರಣ ತಿಳಿಸುವ ಒಂದು ಐತಿಹ್ಯವೇ ಇದೆ.

 ಸ್ಥಳ ಪುರಾಣ 
ಇಲ್ಲಿನ ಸ್ಥಳ  ಪುರಾಣ   ಈ ರೀತಿ ಇದೆ.  ಹಿಂದೆ ತ್ರೇತ್ರಾಯುಗದ ಸಮಯದಲ್ಲಿ   ರಾವಣನು  ಶಿವನನ್ನು  ಕುರಿತು ಘೋರ ತ‌ಪಸ್ಸನ್ನಾಚರಿಸುತ್ತಿದ್ದನು. ಅವನ  ಭಕ್ತಿಗೆ ಮೆಚ್ಚಿ ಶಿವ ಪ್ರತ್ಯಕ್ಷನಾದಾಗ  ರಾವಣನು  ತನ್ನ  ತಾಯಿಗೋಸ್ಕರ  ಪೂಜಿಸಲು ಆತ್ಮಲಿಂಗವನ್ನು ಕೊಡುವಂತೆ ಶಿವನನ್ನು ಕೇಳಿಕೊಳ್ಳುತ್ತಾನೆ.   ಆಗ  ಶಿವ  “ತಥಾಸ್ತು’ ಅನ್ನುತ್ತಾನೆ. ಇದರಿಂದ ಚಿಂತಿತರಾದ ದೇವತೆಗಳು  ಆತ್ಮಲಿಂಗದ ಬಲದಿಂದ ರಾವಣನು ಇನ್ನಷ್ಟು  ಪರಾಕ್ರಮಶಾಲಿಯಾಗಿ  ತಮ್ಮನ್ನೆಲ್ಲಾ  ಸೋಲಿಸಿಬಿಡುತ್ತಾನೆ ಎಂಬ ಭಯದಲ್ಲಿ  ಅದನ್ನು  ತಪ್ಪಿಸಲು  ಗಣೇಶನ ಮೊರೆ ಹೋಗುತ್ತಾರೆ.   ಆಗ ಗಣೇಶನು  ಒಬ್ಬ  ಬ್ರಾಹ್ಮಣ  ಬಾಲಕನ  ರೂಪ ತಾಳಿ  ಈ ಕ್ಷೇತ್ರದಲ್ಲಿ  ಬಂದು ನಿಲ್ಲುತ್ತಾನೆ.   ರಾವಣನು  ಕೈಲಾಸದಿಂದ  ಆತ್ಮಲಿಂಗವನ್ನು  ಪಡೆದುಕೊಂಡು ಇದೇ ಮಾರ್ಗವಾಗಿ ಲಂಕೆಗೆ  ತೆರಳುತ್ತಿದ್ದಾಗ  ದೇವತೆಗಳು  ತಮ್ಮ ಪ್ರಭಾವದಿಂದ ಸೂರ್ಯನನ್ನು  ಮರೆಮಾಚಿ ಸಂಜೆಯ  ವಾತಾವರಣ ಸೃಷ್ಟಿ ಮಾಡುತ್ತಾರೆ. ಶಿವನ ಅನನ್ಯ ಭಕ್ತನಾಗಿದ್ದ ರಾವಣ ಸಂಧ್ಯಾವಂದನೆ ಮಾಡುವ  ಸಮಯವಾಯಿತು ಎಂದು ಭಾವಿಸುತ್ತಾನೆ. ಸಂಧ್ಯಾವಂದನೆಗೂ ಮೊದಲು ಸ್ನಾನ ಮಾಡಿ ಬರಲು ಹೊರಡುವ ಮುನ್ನ,  ಅಲ್ಲಿಯೇ  ನಿಂತಿದ್ದ ಬಾಲಕನಿಗೆ  ಆತ್ಮಲಿಂಗವನ್ನು  ಹಿಡಿದುಕೊಳ್ಳಲು  ಹೇಳಿ ಹೋಗುತ್ತಾನೆ.  ಬಾಲಕನ ರೂಪದಲ್ಲಿದ್ದ  ಗಣೇಶ ಮೂರು ಸಾರಿ ಕೂಗಿದಾಗ ನೀನು ಬರದಿದ್ದರೆ   ಈ ಲಿಂಗವನ್ನು  ಕೆಳಗಿಡುವುದಾಗಿ ಹೇಳಿಯೇ ಲಿಂಗವನ್ನು  ಹಿಡಿದುಕೊಳ್ಳುತ್ತಾನೆ.   ಸ್ವಲ್ಪ  ಸಮಯದಲ್ಲಿಯೇ  ಈ ಲಿಂಗ ತುಂಬಾ ಭಾರವಾಗಿದೆ. ನನಗೆ ಹಿಡಿದುಕೊಳ್ಳಲು ಕಷ್ಟವಾಗುತ್ತಿದೆ.  ಬೇಗ ಬಂದು ತೆಗೆದುಕೋ ಎಂದು ಕೂಗಿಕೊಳ್ಳುತ್ತಾನೆ. ಆಗ ತಾನೆ ಎರಡು ಮುಳುಗು ಹಾಕಿದ್ದ ರಾವಣ, ಲಿಂಗವನ್ನು ನೆಲಕ್ಕಿಡಬೇಡ ಎಂದು ಜೋರಾಗಿ ಕೂಗಿ ಹೇಳಿ, ಅವಸರದಲ್ಲೇ ಮೂರನೇ ಬಾರಿ ಮುಳುಗು ಹಾಕಿ ಓಡೋಡಿ ಬರುತ್ತಾನೆ. ಆ ವೇಳೆಗೆ ಬಾಲಕನ ರೂಪದಲ್ಲಿದ್ದ ಗಣಪತಿ, ಶಿವನ ಆತ್ಮಲಿಂಗವನ್ನು ನೆಲಕ್ಕ ಇಟ್ಟು ಬಿಡುತ್ತಾನೆ. ಈ ಅನಿರೀಕ್ಷಿತ ಘಟನೆಯಿಂದ ದಿಗೂ¾ಢನಾದ ರಾವಣ, ಲಿಂಗವನ್ನು ಎತ್ತಲು ಸಾಕಷ್ಟು  ಪ್ರಯತ್ನಿಸಿದರೂ ಲಿಂಗ ಮೇಲೇಳಲೇ ಇಲ್ಲ. ಇದರಿಂದ  ಕೋಪಗೊಂಡ ರಾವಣ ಬಾಲಕನ ರೂಪದಲ್ಲಿದ್ದ  ಗಣೇಶನ ತಲೆಯ ಮೇಲೆ ಜೋರಾಗಿ ಗುದ್ದುತ್ತಾನೆ. ಇನ್ನು  ಏನಾದರೂ ಅನಾಹುತ ನಡೆಯುತ್ತದೆಂದು ಎಲ್ಲ  ದೇವತೆಗಳೂ  ಪ್ರಕಟಗೊಳ್ಳುತ್ತಾರೆ.ಆಗ ರಾವಣ ಇದೆಲ್ಲಾ  ದೇವತೆಗಳೇ  ಆಡಿದ ನಾಟಕವೆಂದು ತಿಳಿದು ದುಃಖೀತನಾಗುತ್ತಾನೆ.ಅಲ್ಲದೇ ತಾನು ಹೊಡೆದದ್ದು ಶಿವನ ಪುತ್ರನಾದ ಗಣೇಶನಿಗೆ  ಎಂದು ತಿಳಿದು ಬೇಸರಗೊಂಡು ಹೊರಟುಹೋಗುತ್ತಾನೆ.ಆಗಿನಿಂದ ಇಲ್ಲಿಯೇ  ಇದೇ ರೂಪದಲ್ಲಿ  ನೆಲೆಸಿದ  ಗಣೇಶನ  ಈ ವಿಗ್ರಹ  ಅಪರೂಪವಾಗಿದ್ದು ಎರಡು ಕೈಗಳನ್ನುಮಾತ್ರ ಹೊಂದಿದೆ.  ಈ  ವಿಗ್ರಹದ ತಲೆಯ ಮೇಲೆ  ರಾವಣನು ಗುದ್ದಿದ  ಕುರುಹೂ ಇದೆ.ಈ ದೇಗುಲ ಪುಟ್ಟದಾದರೂ ಇದರ ಐತಿಹ್ಯ ಬಹಳ ಸ್ವಾರಸ್ಯಕರವಾಗಿದೆ.ಬೇಡಿ ಬಂದ ಭಕ್ತರಿಗೆ ಎಲ್ಲವನ್ನೂ  ಕರುಣಿಸುವ  ಇತನಿಗೆ ಸಿದ್ಧ ಗಣಪತಿ ಎಂದು ಕರೆಯಲಾಗುತ್ತದೆ.

ತಲುಪುವ  ಮಾರ್ಗ
ದೇಶದ ನಾನಾ ಭಾಗಗಳಿಂದ ಮಹಾಬಲೇಶ್ವರಕ್ಕೆ  ತಲುಪಲು  ಸಾಕಷ್ಟು ಬಸ್‌, ರೈಲು  ಸಂಪರ್ಕಗಳಿವೆ.ಇದಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಗೋವಾದ  ದಾಬೊಲಿಮ್‌ ವಿಮಾನ ನಿಲ್ದಾಣ.ಹತ್ತಿರದ ರೈಲು ನಿಲ್ದಾಣವೆಂದರೆ  ಗೋಕರ್ಣದಿಂದ  20 ಕಿ.ಮೀ ಅಂತರದಲ್ಲಿರುವ  ಅಂಕೋಲಾ.

 ಆಶಾ ಎಸ್‌. ಕುಲಕರ್ಣಿ

ಟಾಪ್ ನ್ಯೂಸ್

Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ

Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ

Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ

13-bng

Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

12-muniratna

Bengaluru: ಶಾಸಕ ಮುನಿರತ್ನ ಕೇಸ್‌: ವಿಕಾಸಸೌಧದಲ್ಲಿ ಸ್ಥಳ ಮಹಜರು

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ

Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ

3

Udupi: ಭತ್ತದ ಕಟಾವು ಚುರುಕು; ದ್ವಿದಳ ಧಾನ್ಯ ಬಿತ್ತನೆಗೆ ಸಿದ್ಧತೆ

15-bishop

Bengaluru: ಬಿಷಪ್‌ ಕಾಟನ್‌ ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ ಇ-ಮೇಲ್‌: ಆತಂಕ

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ

Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.