ಧ್ಯಾನಸ್ಥ ಆಗುವುದೇ ಒಂದು ದಿವ್ಯ ಅನುಭೂತಿ;ಆದಿಯೋಗಿಗೆ ಶರಣು
Team Udayavani, Feb 15, 2020, 6:06 AM IST
ಕೊಯಂಬತ್ತೂರಿನ ಈಶಾ ಫೌಂಡೇಶನ್ ತಲುಪಿದಾಗ ಸಂಜೆಯಾಗಿತ್ತು. ಶಿವನ ಭವ್ಯ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ಕಣ್ಣುಗಳು ಕಾತರವಾಗಿದ್ದವು. ದೂರದಿಂದ ಚಿಕ್ಕ ಮೂರ್ತಿಯಂತೆ ಕಾಣುತ್ತಿದ್ದ ಶಿವ ಹತ್ತಿರವಾದಂತೆ ಬೃಹದಾಕೃತಿ ತಾಳಿದ್ದ. ವಿಶಾಲವಾದ ಬಯಲಿನಲ್ಲಿ ಧ್ಯಾನಸ್ಥ ಕಪ್ಪು ಮೂರ್ತಿ. ಆಗಸ ಚುಂಬಿಸುವ ಆದಿಯೋಗಿ ಶಿವನ ಮೂರ್ತಿ. ಕತ್ತಲಾದ ಮೇಲೆ ಎಲೆಕ್ಟ್ರಿಕ್ ದೀಪ ಉರಿಸಿದ ಮೇಲೆ ಶಿವನ ಮೂರ್ತಿಯ ಶೋಭೆ ಮತ್ತೂಂದು ತೆರನದು.
ಮೂರ್ತಿಯೆಡೆಗೆ ಬಂದು, ಶಿವನಿಗೊಂದು ಪ್ರದಕ್ಷಿಣೆ ಹಾಕಿ ಅವನೆದುರಲ್ಲಿ ಕುಳಿತು ಆ ಮೂರ್ತಿಯ ಭವ್ಯತೆಯನ್ನೂ, ಹದವಾದ ವಾತಾವರಣವನ್ನು, ಸುತ್ತಲಿನ ಸ್ವತ್ಛ ಪರಿಸರವನ್ನು, ವಿಶಾಲ ಖಾಲಿ ಜಾಗವನ್ನು ಕಣ್ಗಳಲ್ಲಿ ತುಂಬಿಕೊಳ್ಳುತ್ತಾ ಕುಳಿತುಬಿಟ್ಟೆ! 112 ಅಡಿ ಎತ್ತರದ ಶಿವ ಇವನು. ಈ ಶಿವ ಹೀಗೆಯೇ ಇದ್ದರೆ ಸೆಳೆಯುತ್ತಾನೆಂದು, ರೂಪ ವಿನ್ಯಾಸಿಸಿದವರು ಫೌಂಡೇಶನ್‌ನ ರೂವಾರಿ ಜಗ್ಗಿ ವಾಸುದೇವ್ ಅವರು.
ಆ ಪರಿಸರದಲ್ಲಿ ಧ್ಯಾನಸ್ಥ ಆಗುವುದೇ ಒಂದು ದಿವ್ಯ ಅನುಭೂತಿ. ಮನಸ್ಸು ಶಿವನಲ್ಲಿಯೇ ಏಕವಾಗಿ ಹೋಗಿತ್ತು. ಹೊರಗಿನ ಯಾವ ವಿಚಾರಗಳೂ ಮನಸ್ಸಿನೊಳಗೆ ಇರಲೇ ಇಲ್ಲ. ಪ್ರಪಂಚವನ್ನೆಲ್ಲ ತನ್ನಲ್ಲಿಯೇ ಲೀನವಾಗಿಸಿಕೊಳ್ಳಬಲ್ಲ ಶಿವನಿಗೆ ನನ್ನ ಮನವನ್ನು ತನ್ನೊಳಗೆ ಒಂದಾಗಿಸಿಕೊಳ್ಳುವುದು ದೊಡ್ಡ ಕೆಲಸವೇನು?
* ಸುರೇಖಾ ಭೀಮಗುಳಿ, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.