ಶಿವ-ಪಾರ್ವತಿಯ ಕಲ್ಯಾಣ ಧಾಮ


Team Udayavani, Dec 14, 2019, 6:07 AM IST

shiva-parvati

ನಿಸರ್ಗದ ಮಡಿಲಲ್ಲಿ ನೂರು ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಪಾತ… ಅದರ ಮಗ್ಗುಲಿನಲ್ಲೇ ಬೆಟ್ಟಕ್ಕೆ ಮೆಟ್ಟಿಲುಗಳು… ಅದನ್ನು ಏರುತ್ತಾ ಹೋದಂತೆ, ಆ ರಮಣೀಯ ತಾಣದ ಸ್ಥಳಮಹಿಮೆಗಳು ಭಕ್ತಿಭಾವದಲ್ಲಿ ಮೀಯುವಂತೆ ಮಾಡುತ್ತವೆ. ಸೋಮೇಶ್ವರ, ಶಿವ- ಪಾರ್ವತಿ, ಭ್ರಮರಾಂಭ, ವೀರಭದ್ರ ದೇಗುಲಗಳು, ಕಾಳಿಕಾ ಮಂದಿರ, ಸೂರ್ಯದೇವರ ಗುಡಿ, ಕಣ್ವಋಷಿ ಮಂದಿರ, ಅಜ್ಜನ ಗುಡಿ, ಮಾತಾನಂದಜಿ ಸಮಾಧಿ, ಕತ್ತನ­ಕೋಟೆ, ಜಿಂಕೆವನ ಹಾಗೂ ಜಲಪಾತ­ಗಳು… ಹೀಗೆ ಒಂದೇ, ಎರಡೇ? ಸೊಗಲ ಕ್ಷೇತ್ರ ನಿಜಕ್ಕೂ ಸೋಜಿಗ.

ಬೆಳಗಾವಿಯ ಬೈಲಹೊಂಗಲ ಸಮೀಪ­ವಿರುವ ಈ ಪಾವನ ಧಾಮ, ಶಿವ- ಪಾರ್ವತಿಯರ ವಿವಾಹಕ್ಕೆ ಪೌರಾಣಿಕ ಸಾಕ್ಷಿಯಾಗಿ ನಿಂತಿದೆ. ಪಾರ್ವತಿಯು ಉಗ್ರವಾದ ತಪಸ್ಸನ್ನು ಮಾಡಿ ಶಿವನನ್ನು ಒಲಿಸಿಕೊಂಡು, ಇಲ್ಲಿಯೇ ವಿವಾಹವಾದಳು ಎಂದು ನಂಬಲಾಗಿದೆ. ಇಲ್ಲಿ ಶಿವ- ಪಾರ್ವತಿಯರು ಬಾಸಿಂಗ ಕಟ್ಟಿ ನಿಂತಿರುವ ವಿಗ್ರಹಗಳು ಹಾಗೂ ಲಗ್ನಕ್ಕಾಗಿ ಆಗಮಿಸಿದ ದೇವಾನುದೇವತೆಗಳ ಶಿಲ್ಪಕೆತ್ತನೆಗಳು ಗಮನ ಸೆಳೆಯುತ್ತವೆ.

ಶಿವ- ಪಾರ್ವತಿ ಕಲ್ಯಾಣವಾದ ಜಾಗದಲ್ಲಿ ತಾವೂ ಮದುವೆಯಾಗಬೇಕು ಎಂದು ಬಯಸಿ, ಈಗಲೂ ಇಲ್ಲಿ ಅನೇಕ ಜೋಡಿಗಳು ಹೊಸ ಬಾಳಿಗೆ ಕಾಲಿಡುತ್ತಾರೆ. ಸೋಮೇಶ್ವರನ ದೇಗುಲವನ್ನು ಚಾಲುಕ್ಯರ ಹಾಗೂ ರಾಷ್ಟ್ರಕೂಟರ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ. 10ನೇ ಶತಮಾನದ ದೇಗುಲದ ರಚನೆ, ಚಿಕ್ಕದಾದರೂ ಆಕರ್ಷಣೀಯ­ವಾಗಿದೆ. ಗರ್ಭಗೃಹದ ಮೇಲೆ ಕದಂಬ ನಾಗರ ಶೈಲಿಯ ಶಿಖರ, ಮಧ್ಯದಲ್ಲಿ ಬೃಹತ್‌ ಲಿಂಗವೊಂದಿದೆ. ಹಿಂಬದಿಯ ಗೋಡೆಗೆ ಶಿವನ ಮೂರ್ತಿಯನ್ನು ಇರಿಸಲಾಗಿದೆ. ಗರ್ಭಗೃಹಕ್ಕೆ ಹೊಂದಿಕೊಂಡಂತೆ ಚೌಕಾಕಾರದ ಅರ್ಧಮಂಟಪವಿದೆ.

ನವರಂಗಕ್ಕೆ ಮೂರು ಪ್ರವೇಶ ದ್ವಾರಗಳಿದ್ದು, ನರಸಿಂಹ, ನಟರಾಜ, ಸೂರ್ಯ, ಅಪ್ಸರೆ, ವೀರಭದ್ರ, ಭೈರವ, ಬ್ರಹ್ಮ, ವಿಷ್ಣು ಮತ್ತು ಶಿವನ ಮೂರ್ತಿಗಳನ್ನು ಸುಂದರವಾಗಿ ಕೆತ್ತನೆ ಮಾಡಲಾಗಿದೆ. ನಿತ್ಯವೂ ವಿಶೇಷ ಪೂಜೆ, ರುದ್ರಾಭಿಷೇಕಗಳು ಜರುಗುತ್ತವೆ. ಸೋಮೇಶ್ವರ ದೇವಸ್ಥಾನದ ಬಲಬದಿಗೆ 10ನೇ ಶತಮಾನದ ಶಿಲಾಶಾಸನವಿದೆ. ಎಲ್ಲಿ ನೋಡಿದರಲ್ಲಿ ಅಚ್ಚುಕಟ್ಟಾದ ಮೆಟ್ಟಿಲುಗಳಿದ್ದು, ಬೃಹತ್‌ ಆಕಾರದ ಪರಮೇಶ್ವರನ ಮೂರ್ತಿ ಇಲ್ಲಿ ಇನ್ನೊಂದು ಆಕರ್ಷಣೆ. ಜಿಂಕೆವನದಲ್ಲಿ ನೂರಾರು ಜಿಂಕೆಗಳಿದ್ದು, ವಿಶೇಷವಾಗಿ ಮಕ್ಕಳ ಮನರಂಜನೆಗೆ ಪ್ರಮುಖ ತಾಣ.

ಪವಿತ್ರ ಸ್ನಾನ: ದೇಗುಲದ ಎದುರು 40 ಅಡಿ ಎತ್ತರದಿಂದ ಧುಮುಕುವ ಜಲಪಾತವಿದ್ದು, ಇಲ್ಲಿ ಭಕ್ತಾದಿಗಳು ಪವಿತ್ರಸ್ನಾನ ಮಾಡಿ, ಸೋಮೇಶ್ವರನನ್ನು ದರ್ಶಿಸುತ್ತಾರೆ. ಅಲ್ಲದೆ, ಇಲ್ಲಿ ಸ್ನಾನ ಮಾಡಿದರೆ, ರೋಗರುಜಿನಗಳು ನಿವಾರಣೆಯಾಗುತ್ತವೆ ಎನ್ನುವ ನಂಬಿಕೆಯೂ ಇದೆ.

ದರುಶನಕೆ ದಾರಿ…: ಸೊಗಲ ಕ್ಷೇತ್ರವು ಬೆಳಗಾವಿಯಿಂದ 56 ಕಿ.ಮೀ. ಹಾಗೂ ಬೈಲಹೊಂಗಲದಿಂದ 16 ಕಿ.ಮೀ. ದೂರದಲ್ಲಿದೆ. ಬೆಳಗಾವಿ, ಬೈಲಹೊಂಗಲ, ಸವದತ್ತಿ, ಗೋಕಾಕ್‌, ರಾಮದುರ್ಗ, ಯರಗಟ್ಟಿಗಳಿಂದ ನಿರಂತರ ಬಸ್ಸಿನ ವ್ಯವಸ್ಥೆ ಇದೆ.

* ಸುರೇಶ ಗುದಗನ‌ವರ

ಟಾಪ್ ನ್ಯೂಸ್

Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…

Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…

CM-Feet

Gandhi Jayanthi:ರಾಷ್ಟ್ರಧ್ವಜ ಹಿಡಿದೇ ಸಿಎಂ ಸಿದ್ದರಾಮಯ್ಯ ಶೂ ಲೇಸ್‌ ಬಿಚ್ಚಿದ ಕಾರ್ಯಕರ್ತ!

12

Vettaiyan Trailer: ಪಾಪಿಗಳ ಎನ್‌ಕೌಂಟರ್‌ ಮಾಡಲು ಖಾಕಿ ತೊಟ್ಟು ಬಂದ ʼತಲೈವಾʼ

ಪ್ರವಾಹ ಪೀಡಿತ ಪ್ರದೇಶಕ್ಕೆ ಪರಿಹಾರ ಕಿಟ್ ಒದಗಿಸಲು ಬಂದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

IAF Chopper: ಪ್ರವಾಹದ ನೀರಿನಲ್ಲೇ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್… ತಪ್ಪಿದ ದುರಂತ

ಮುತ್ತೋಡಿ ಅಭಯಾರಣ್ಯಕ್ಕೆ ರಜತ ಸಂಭ್ರಮ; ಕಣ್ಮನ ಸೆಳೆಯುತ್ತಿವೆ ಜೀವ ಸಂಕುಲ

ಮುತ್ತೋಡಿ ಅಭಯಾರಣ್ಯಕ್ಕೆ ರಜತ ಸಂಭ್ರಮ; ಕಣ್ಮನ ಸೆಳೆಯುತ್ತಿವೆ ಜೀವ ಸಂಕುಲ

14-koppala

ಯುವಜನರಿಗೆ ಬಾಪೂಜಿಯನ್ನು ಸ್ಟ್ಯಾಂಪ್‌, ನೋಟ್, ನಾಣ್ಯಗಳ ಮೂಲಕ ಪರಿಚಯಿಸುವ ಜಯಂತ್ ಕುಮಾರ್!

13-sirawara

Sirawara: ಸಹೋದರತ್ತೆ ಕಾಟಕ್ಕೆ ಬೇಸತ್ತು ಅಳಿಯ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…

Gudibande: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಕನ್ನ…

023

Sandalwood: ಶೀಘ್ರಮೇವ ಗೆಲುವು ಪ್ರಾಪ್ತಿರಸ್ತು

CM-Feet

Gandhi Jayanthi:ರಾಷ್ಟ್ರಧ್ವಜ ಹಿಡಿದೇ ಸಿಎಂ ಸಿದ್ದರಾಮಯ್ಯ ಶೂ ಲೇಸ್‌ ಬಿಚ್ಚಿದ ಕಾರ್ಯಕರ್ತ!

12

Vettaiyan Trailer: ಪಾಪಿಗಳ ಎನ್‌ಕೌಂಟರ್‌ ಮಾಡಲು ಖಾಕಿ ತೊಟ್ಟು ಬಂದ ʼತಲೈವಾʼ

15-Chincholi

Chincholi: ಬಟ್ಟೆ ಒಗೆಯುವ ವೇಳೆ ‌ನದಿ ನೀರಿನ ಪ್ರವಾಹಕ್ಕೆ ಕೊಚ್ಚಿ ಹೋದ ಮಹಿಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.