ಗವಿಮಠದ ದಾಸೋಹ ವೈಭವ

ದೇವರ ಪಾಕಶಾಲೆ; ಶ್ರೀ ಗವಿಸಿದ್ದೇಶ್ವರ ಸಂಸ್ಥಾನ ಮಠ, ಕೊಪ್ಪಳ ಜಿಲ್ಲೆ

Team Udayavani, Sep 14, 2019, 5:00 AM IST

e-6

ಶರಣರ ನಾಡಿನ, ಕೊಪ್ಪಳದ ಸುಪ್ರಸಿದ್ಧ ಶ್ರೀ ಗವಿಸಿದ್ದೇಶ್ವರ ಮಹಾ ಸಂಸ್ಥಾನವು ದಾಸೋಹದ ವೈಭವ ಪ್ರಖ್ಯಾತಿ ಪಡೆದುಕೊಂಡಿದೆ. ಅನ್ನ, ಅಕ್ಷರ, ಅಧ್ಯಾತ್ಮ ಎಂಬ ತ್ರಿವಿಧದ ದಾಸೋಹ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು “ಉತ್ತರ ಕರ್ನಾಟಕದ ಸಿದ್ಧಗಂಗೆ’ ಎಂದು ಹೆಸರು ಪಡೆದಿದೆ. ದಾಸೋಹ ಸೇವೆಯ ಭಕ್ತಿ ಭಾವ ಇಲ್ಲಿನ ಭಕ್ತ ಮನ, ಮನೆಗಲ್ಲೂ ಕಾಣುತ್ತದೆ.

ಭಕ್ಷ್ಯ ಸಮಾಚಾರ
– ನಿತ್ಯ ಉಪಾಹಾರ ಉಪ್ಪಿಟ್ಟು
– ಊಟಕ್ಕೆ ಅನ್ನ- ಸಾಂಬಾರು, ಜೋಳದ ಅಂಬಲಿ, ಉಪ್ಪಿನಕಾಯಿ, ಚಟ್ನಿ, ಶೇಂಗಾ ಪುಡಿ.
– ಮಠದ ಮೂಲ ಪದ್ಧತಿಯಂತೆ ನಿತ್ಯವೂ ಜೋಳದ ಅಂಬಲಿಯ ವಿತರಣೆ.
– ವಿಶೇಷ ಸಂದರ್ಭದಲ್ಲಿ ಸಿಹಿ ಸಿರಾ, ಗೋಧಿ ಹುಗ್ಗಿ, ಪುಡಿ ಚಟ್ನಿ ಇರುತ್ತದೆ.
– ಟೊಮೇಟೊ, ಸೌತೆಕಾಯಿ, ಗಜ್ಜರಿ, ಬದನೆಕಾಯಿ- ಹೆಚ್ಚು ಬಳಕೆಯಾಗುವ ತರಕಾರಿಗಳು.

ಭೋಜನ ಶಾಲೆ ಹೇಗಿದೆ?
ಗವಿಮಠದ ಪಕ್ಕದಲ್ಲೇ ಮಹಾ ಪ್ರಸಾದ ನಿಲಯದ್ದು, ಕೆಳ ಹಾಗೂ ಮೇಲ್ಮಹಡಿಯಲ್ಲಿ ಟೇಬಲ್‌ ಊಟದ ವ್ಯವಸ್ಥೆಯಿದೆ. ಏಕಕಾಲದಲ್ಲಿ 4 ಸಾವಿರಕ್ಕೂ ಹೆಚ್ಚು ಭಕ್ತರು, ಅನ್ನ ಪ್ರಸಾದ ಸವಿಯಬಹುದು.

ನಿತ್ಯ ಎಷ್ಟು ಮಂದಿಗೆ ಭೋಜನ?
ಇಲ್ಲಿ ನಿತ್ಯ 2500-3000 ಭಕ್ತರು ಅನ್ನಪ್ರಸಾದ ಸವಿಯುತ್ತಾರೆ. ಸೋಮವಾರ ಈ ಸಂಖ್ಯೆ 4 ಸಾವಿರವನ್ನು ಮೀರುತ್ತದೆ. ಅಮಾವಾಸ್ಯೆ ದಿನದಂದು 25 ಸಾವಿರಕ್ಕೂ ಹೆಚ್ಚು ಭಕ್ತರು ಪ್ರಸಾದ ಸವಿದ ದಾಖಲೆ ಇಲ್ಲಿದೆ. ಜಾತ್ರಾ ಮಹೋತ್ಸವ ವೇಳೆ, ನಿತ್ಯ 2-3 ಲಕ್ಷ ಭಕ್ತರು ಭೋಜನಕ್ಕೆ ಸಾಕ್ಷಿಯಾಗುತ್ತಾರೆ.

ಯಂತ್ರಗಳ ಮೋಡಿ
ಇಲ್ಲಿ ಒಟ್ಟು 10 ಬಾಯ್ಲರ್‌ಗಳಿದ್ದು, ಸಾಂಬಾರ್‌ ಸಿದ್ಧಮಾಡಲು ಎರಡು ಬಾಯ್ಲರ್‌ಗಳು ಬಳಕೆಯಾಗುತ್ತವೆ. ಇಡ್ಲಿ ತಯಾರಿಕೆಗೂ ಇಲ್ಲಿ ಯಂತ್ರವಿದೆ. ಗ್ಯಾಸ್‌ ಸಿಲಿಂಡರ್‌ ಜೊತೆಗೆ ಸೋಲಾರ್‌ ವ್ಯವಸ್ಥೆ ಈ ಪಾಕಶಾಲೆಯ ಇಂಧನಶಕ್ತಿ. ಜಾತ್ರೆ ವೇಳೆ ತರಕಾರಿ ಕತ್ತರಿಸುವ ಯಂತ್ರ, ವಿಶೇಷವಾಗಿ ಬಳಕೆಯಾಗುತ್ತದೆ.

ಊಟದ ಸಮಯ
ಬೆಳಗ್ಗೆ 7 ರಿಂದ ಸಂಜೆ 5 ಗಂಟೆ ವರೆಗೂ, ಸಂಜೆ 7 ರಿಂದ ರಾತ್ರಿ 11 ಗಂಟೆ ವರೆಗೂ ಇಲ್ಲಿನ ಭೋಜನ ಪ್ರಸಾದ ವ್ಯವಸ್ಥೆಯಿದೆ.

ಬುತ್ತಿ ಕಟ್ಟುವ ಸಂಪ್ರದಾಯ
ಗವಿಮಠಕ್ಕೆ ಪಾದಯಾತ್ರೆ ಬರುವ ಭಕ್ತರಿಗೆ ಅಥವಾ ಬೇರೆ ದೇವಸ್ಥಾನ, ಮಠಮಾನ್ಯಗಳಿಗೆ ಪಾದಯಾತ್ರೆ ತೆರಳುವ ಭಕ್ತರು ಆಗಮಿಸಿದರೆ, ಇಲ್ಲಿ ವಿಶೇಷ ಆದರಾತಿಥ್ಯ. ಮುಂದಿನ ಪಾದಯಾತ್ರೆಗೆ ಶುಭಹಾರೈಸುತ್ತಾ, ಅವರಿಗೆ ಬುತ್ತಿ ಕಟ್ಟಿ ಕಳಿಸುವ ಪದ್ಧತಿಯೂ ಇಲ್ಲಿದೆ. ವೃದ್ಧರಿಗೆ, ಗರ್ಭಿಣಿಯರಿಗೂ ಈ ಸೇವೆಯಿದೆ.

ಸಂಖ್ಯಾ ಸೋಜಿಗ
2- ಬಾಣಸಿಗರಿಂದ ಕಾಯಂ ಸೇವೆ
4- ಕ್ವಿಂಟಲ್‌ ಅಕ್ಕಿ ಬಳಕೆ
10- ಬಾಯ್ಲರ್‌ಗಳಿಂದ ಅಡುಗೆ
50- ಕಿಲೋ ತರಕಾರಿ ಅವಶ್ಯ
2500- ಮಂದಿಗೆ ನಿತ್ಯ ಭೋಜನ
3,00,000- ಜಾತ್ರೆ ವೇಳೆ ಪ್ರಸಾದ ಸವಿಯುವ ಭಕ್ತರು

ಉಂಡವನ ಮುಖದ ಮೇಲಿನ ಖುಷಿಗಿಂತ, ಉಣಿಸಿದವನ ಮುಖದ ಮೇಲಿನ ಖುಷಿ ಹೆಚ್ಚಿದ್ದರೆ ಅದೇ ದಾಸೋಹ. ಆತನೇ ನಿಜವಾದ ದಾಸೋಹಿ. ನಾವು ಈ ವಿಶ್ವದಲ್ಲಿ ಏನನ್ನು ಗಳಿಸಿದ್ದೇವೆಯೋ ಅದು ಪರರಿಗೆ ಹೋಗುತ್ತದೆ. ಕೊಟ್ಟಿದ್ದು, ಹಂಚಿದ್ದು, ಸೇವೆ ಮಾಡಿದ್ದು ಮಾತ್ರ ನಮಗೆ ಉಳಿಯುತ್ತದೆ. ಈ ಜಗದ ದುಃಖ ನಿವಾರಣೆಗೆ ಮತ್ತು ಸಂತೋಷ ಪ್ರಾಪ್ತಿಯಾಗಲು ಇದೊಂದೇ ದಾರಿ.
– ಶ್ರೀ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳು, ಸಂಸ್ಥಾನ ಗವಿಮಠ, ಕೊಪ್ಪಳ

ಮಠಕ್ಕೆ ಬರುವ ಭಕ್ತರಿಗೆ ಭಕ್ತಿಯಿಂದ ಪ್ರಸಾದ ನೀಡುವುದೇ ನಮ್ಮ ಸೇವೆ. ಭಕ್ತರು ತಡರಾತ್ರಿ ಬಂದರೂ ಅವರಿಗೆ ಪ್ರಸಾದದ ವ್ಯವಸ್ಥೆಯ ಸೇವೆ ಮಾಡುತ್ತೇವೆ.
– ವೀರೇಶ, ನಿತ್ಯ ದಾಸೋಹ ಉಸ್ತುವಾರಿ

– ದತ್ತು ಕಮ್ಮಾರ್‌

ಟಾಪ್ ನ್ಯೂಸ್

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.