ರಂಗನಾಥನ ದರ್ಶನ ಪಡೆದು ಪಾವನರಾಗೋಣ ಬನ್ನಿ


Team Udayavani, Feb 25, 2017, 1:51 PM IST

6.jpg

ಮಾಂಡವ್ಯ ಮಹರ್ಷಿಗಳ ತಪೋಭೂಮಿ ಮಾಗಡಿ. ಶ್ರೀರಂಗನಾಥಸ್ವಾಮಿಯ ಪುಣ್ಯ ಕ್ಷೇತ್ರವೂ ಹೌದು. ಈ ಭೂ ಪ್ರದೇಶವು ಅಷ್ಟ ತೀರ್ಥಗಳಿಂದಲೂ, ಅಷ್ಟ ಪರ್ವತಗಳಿಂದಲೂ, ಪವಿತ್ರ ಕಣ್ವ ನದಿಗಳಿಂದ ಕೂಡಿದೆ. ಸುಂದರ ಗಿರಿ ಕಾನನಗಳಿಂದಲೂ ಕೂಡಿರುವ ರಮ್ಯತಾಣವಾಗಿದೆ. ಈ ದಿವ್ಯ ಕ್ಷೇತ್ರ. 

ತಿರುಪತಿ ಶ್ರೀನಿವಾಸಸ್ವಾಮಿ ಆಜ್ಞಾನುಸಾರ ಮಾಂಡವ್ಯ ಮಹರ್ಷಿಗಳು ಸ್ವರ್ಣಾದ್ರಿ ಎಂಬ ಹೆಸರಿನಿಂದ ಕರೆಯಲ್ಪಡುವ ತಿರುಮಲೆ ಶ್ರೀ ಪಶ್ಚಿಮ ವೆಂಕಟಾಚಲಪತಿ ಸ್ವಾಮಿಯನ್ನು ಪ್ರತಿಷ್ಟಾಪಿಸಿ ಆರಾಧಿಸಿದ್ದರು ಎಂದು ಬ್ರಹ್ಮಾಂಡ ಪುರಾಣದಿಂದ ತಿಳಿಯುತ್ತದೆ.

ಚೋಳರ ರಾಜ, ರಾಜೇಂದ್ರ ಚೋಳ ಎಂಬ ರಾಜನು 11-12ನೇ ಶತಮಾನದಲ್ಲಿ ಮಾಗಡಿ ಪ್ರದೇಶಕ್ಕೆ ಬಂದಾಗ ಇಲ್ಲಿ ಕಾಣುವ ಸುಂದರ ಗಿರಿಕಾನನಗಳಿಗೆ ಆಕರ್ಷಿತನಾಗುತ್ತಾನೆ. ಜೊತೆಗೆ ಮಾಂಡವ್ಯ ಮಹರ್ಷಿಗಳ ಪವಿತ್ರ ಕ್ಷೇತ್ರವೆಂದು ತಿಳಿದು ಆನಂದದಿಂದ ಮಾಗಡಿ ಪಟ್ಟಣವನ್ನು ನಿರ್ಮಿಸಿದನು ಎಂದು ಹೇಳಲಾಗಿದೆ.  ಮಾ ಎಂದರೆ ಲಕ್ಷಿ$¾à, ಗಡಿ ಎಂದರೆ ಸ್ಥಳ.  ಶ್ರೀ ಲಕ್ಷಿ$¾àನಿವಾಸವಾಗಿದ್ದರಿಂದ ಮಾಗಡಿ ಎಂಬ ಹೆಸರು ಬಂತು ಎಂದು ಹೇಳಲಾಗಿದೆ. ತಿರುಮಲೆ ಶ್ರೀರಂಗನಾಥಸ್ವಾಮಿ ದೇವಾಲಯವು ಮಾಂಡವ್ಯ ಮಹರ್ಷಿಗಳ ತಪೋ¸‌ೂಮಿ ಹಾಗೂ ವಿಜಯನಗರದ ಮಹಾಗಡಿಯಾಗಿದ್ದರಿಂದ ಮಾಗಡಿ ಎಂದು ಹೆಸರು ಬಂತು ಎಂದು ಪ್ರತೀತಿಯೂ ಇದೆ. 

ಮಾಗಡಿ ಶ್ರೀರಂಗನಾಥಸ್ವಾಮಿ ದೇವಾಲಯದ ಬಗ್ಗೆ 1524 ಮತ್ತು 1579 ರ ಶಾಸನಗಳಿಂದ ಹಾಗೂ ದಾನ ಪತ್ರಗಳಲ್ಲಿ ಶ್ರೀರಂಗನಾಥಸ್ವಾಮಿಯನ್ನು “ತಿರುವೆಂಗಳನಾಥ’ ಎಂದು ಕರೆಯಲ್ಪಡುತ್ತಿತ್ತು. ಮೈಸೂರು ಹುಲಿ ಟಿಪ್ಪು ಸುಲ್ತಾನ್‌ ಕಾಲದಿಂದೀಚಗೆ ತಿರುಮಲೆ ಶ್ರೀರಂಗನಾಥಸ್ವಾಮಿ ಎಂದು ನಾಡಿನಾದ್ಯಂತ ಪ್ರಸಿದ್ಧಿ ಪಡೆದು ಪ್ರಖ್ಯಾತಗೊಂಡಿದೆ. 

ಶ್ರೀರಂಗನಾಥಸ್ವಾಮಿ ಅನ್ನದಾಸೋಹ ಪ್ರತಿ ಶನಿವಾರ ಮತ್ತು ಭಾನುವಾರ ನಡೆಯುತ್ತದೆ. ಜೊತೆಗೆ ಶ್ರೀರಂಗ ಸೇವಾ ಟ್ರಸ್ಟ್‌  ಹೆಸರಿನಲ್ಲಿ ಸಹ ಅನ್ನದಾಸೋ ನಡೆದಿದೆ. ಟ್ರಸ್ಟ್‌ ವತಿಯಿಂದ ದೇವರಿಗೆ ಸುಮಾರು 2 ಕೋಟಿಗೂ ಹೆಚ್ಚು ವಜ್ರ ಖಚಿತ ಬಂಗಾರದ ಕಿರೀಟ, ಉತ್ಸವ ಮೂರ್ತಿಗೂ ಕಿರೀಟ, ಇತರೆ ಅಭರಣಗಳನ್ನು ನೀಡಿದೆ. ನಿತ್ಯ ವಿಶೇಷ ಅಲಂಕಾರ, ಶಾಸ್ತ್ರೋಕ್ತವಾಗಿ ಧಾರ್ಮಿಕ ಪೂಜಾ ಕೈಂಕರ್ಯ ನಡೆಸಿಕೊಂಡು ಬರುತ್ತಿರುವುದರಿಂದ ಈ ದೇವಾಲಯವು ದಿನೇ ದಿನೇ ಭಕ್ತರನ್ನು ಆಕರ್ಷಿಸಿದೆ. 

ಕಪ್ಪು ಶಿಲೆಯಿಂದ ಕೂಡಿರುವ 4.5 ಎತ್ತರದ ಮೂಲ ವಿಗ್ರಹ ಅತ್ಯಂತ ಸುಂದರವಾಗಿದೆ. ಈ ವಿಗ್ರಹ ಮುಂದೆ ಮಾಂಡವ್ಯ ಮಹರ್ಷಿಗಳು ಆರಾಧಿಸಿದ ಸಾಲಿಗ್ರಾಮವಿದೆ. ಈ ಸಾಲಿಗ್ರಾಮಕ್ಕೆ ಎಷ್ಟೇ ಕೊಡ ನೀರು ಅಭಿಷೇಕ ಮಾಡಿದರೂ ಎಲ್ಲಿ ಸೇರುತ್ತದೆ ಎಂದು ಯಾರರಿಗೂ ತಿಳಿಯದು.  ದೇಗುಲದ ಆವರಣದ ನವರಂಗದಲ್ಲಿ ಶ್ರೀದೇವಿ, ಭೂದೇವಿ ಸಮೇತರಾಗಿ ಪವಡಿಸುತ್ತಿರವ ನಿತ್ಯಲೋಲ ಶ್ರೀರಂಗನಾಥಸ್ವಾಮಿಯ ಕಂಚಿನ ಸುಂದರ ಮೂರ್ತಿ ಇದೆ. ದೇಗುಲಕ್ಕೆ ಪ್ರವೇಶವಾಗುತ್ತಿದ್ದಂತೆ ಆಲದ ಮುಂಭಾಗ ಎಡ ಭಾಗದಲ್ಲಿ ಗರುಡ, ಬಲದಲ್ಲಿ ಆಂಜನೇಯಸ್ವಾಮಿ ಮೂರ್ತಿಯಿದೆ. ಸುತ್ತಲೂ ರಾಮಾನುಜಾಚಾರ್ಯರ ಮತ್ತು ಆಳ್ವರುಗಳು ಮತ್ತು ವೈಷ್ಣವ ಭಕ್ತರ ಪ್ರತಿಮೆಗಳಿವೆ.  ಮೂಲ ಮೂರ್ತಿ ಹಿಂಭಾಗ ಕಲ್ಲಿನ ಗೋಡೆಯಲ್ಲಿ ವಿರಾಜಮಾನವಾಗಿ ಮಲಗಿರುವ ಭಂಗಿಯಲ್ಲಿ ಶ್ರೀರಂಗನಾಥ ಸ್ವಾಮಿ ಇದೆ. ಈ ಮೂರ್ತಿ ಬೆಳೆಯೋರಂಗ, ಮಕ್ಕಳ ರಂಗ, ಮುದ್ದು ಮಾಗಡಿರಂಗ, ಮೂಲ ರಂಗ ಎಂದು ವಿವಿಧ ಹೆಸರುಗಳಿಂದ ಕರೆಯುವುದುಂಟು. ಆನತಿ ದೂರದಲ್ಲಿ ಸ್ಥಂಭಗಿರಿ ಎಂಬ ಹೆಸರಿನಿಂದ ಕೂಡಿರುವ ಶ್ರೀ ಯೋಗನರಸಿಂಹಸ್ವಾಮಿ ಬೆಟ್ಟವಿದೆ. 

ಬ್ರಹ್ಮರಥೋತ್ಸವಕ್ಕೆ ಪೂಜೆ ಆರಂಭವಾಗುತ್ತಿದ್ದಂತೆ ಲಕ್ಷಾಂತರ ಭಕ್ತರು ಜಮಾಯಿಸುತ್ತಾರೆ. 

ತಿರುಮಲೆ ಶ್ರೀನಿವಾಸ್‌

ಟಾಪ್ ನ್ಯೂಸ್

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

Andaman: ಮೀನುಗಾರಿಕಾ ದೋಣಿಯಲ್ಲಿದ್ದ 5 ಟನ್ ಮಾದಕ ವಸ್ತು ವಶಕ್ಕೆ ಪಡೆದ ಕೋಸ್ಟ್ ಗಾರ್ಡ್

Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

2

Puttur: ಚೆನ್ನಾಗಿ ಮಳೆ ಬಂದರೂ ಕುಸಿದ ಅಂತರ್ಜಲ ಮಟ್ಟ

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

1

Belthangady: ಕಡೆಗೂ ಬಂತು ಇಂದಿರಾ ಕ್ಯಾಂಟೀನ್‌

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.