ಕಟಕ, ಸಿಂಹ ರಾಶಿಯವರ ಚಂದ್ರಯೋಗ…
Team Udayavani, Jul 21, 2018, 2:43 PM IST
ಈ ಹಿಂದಿನ ಅಂಕಣದಲ್ಲಿ ಯಾವ ರಾಶಿಗೆ ಯಾರು ಮುಖ್ಯರು ಎನ್ನುವ ಮಾಹಿತಿಯಲ್ಲಿ ಮೇಷ-ವೃಶ್ಚಿಕ, ವೃಷಭ-ತುಲಾ, ಮಿಥುನ-ಕನ್ಯಾ ರಾಶಿಗಳ ಬಗ್ಗೆ ತಿಳಿದುಕೊಂಡೆವು. ಈ ವಾರ ಕಟಕ ಹಾಗೂ ಸಿಂಹ ರಾಶಿಯ ಅಧಿಪತಿಗಳ ಬಗ್ಗೆ ತಿಳಿಯೋಣ.
ಒಟ್ಟು ಹನ್ನೆರಡು ರಾಶಿಗಳಿವೆ. ಇದರಲ್ಲಿ ಹತ್ತು ರಾಶಿಗಳಲ್ಲಿ ಎರಡು ರಾಶಿಗಳಿಗೆ ಒಂದು ಗ್ರಹದಂತೆ ಐದು ಗ್ರಹಗಳು ಹಂಚಿಕೊಂಡಿವೆ. ಕಟಕ ಹಾಗೂ ಸಿಂಹ ರಾಶಿಗೆ ಅಧಿಪತಿ ಕ್ರಮವಾಗಿ ಚಂದ್ರ ಮತ್ತು ಸೂರ್ಯ. ಇವರಿಗೆ ಒಂದೊಂದೇ ರಾಶಿಗಳನ್ನು ಹಂಚಲಾಗಿದೆ. ಕಟಕ ರಾಶಿಗೆ ಅಧಿಪತಿ ಚಂದ್ರ. ಚಂದ್ರನಿಗೆ ಉತ್ಛ ರಾಶಿ ಹಾಗೂ ಮೂಲ ತ್ರಿಕೋಣಸ್ಥಾನ ವೃಷಭ ರಾಶಿಯಾಗುತ್ತದೆ. ನೀಚ ಸ್ಥಾನ ವೃಶ್ಚಿಕ ರಾಶಿ. ರೋಹಿಣಿ, ಹಸ್ತಾ ಹಾಗೂ ಶ್ರವಣ ನಕ್ಷತ್ರಗಳು ಚಂದ್ರನ ನಕ್ಷತ್ರಗಳು. ಚಂದ್ರನಿಗೆ ಲಗ್ನದಿಂದ ನಾಲ್ಕನೇ ಮನೆಯಲ್ಲಿ ದಿಕºಲ. ಚಂದ್ರನು ತಾಯಿಯನ್ನು ಸೂಚಿಸುತ್ತಾನೆ. ಜಾತಕದಲ್ಲಿ ಚಂದ್ರನು ಚೆನ್ನಾಗಿದ್ದರೆ ಅಂಥವರಿಗೆ ತಾಯಿಯ ಆರೋಗ್ಯ ಚೆನ್ನಾಗಿರುತ್ತದೆ. ಅಂದರೆ ತಾಯಿಯ ಪ್ರೀತಿ, ಬೆಂಬಲ, ತಾಯಿಯ ಸಹಕಾರ, ತಾಯಿಯಿಂದ ಆಸ್ತಿ ಲಾಭ, ತಾಯಿಯಿಂದ ಹಣಕಾಸಿನ ನೆರವು ಮುಂತಾದ ಲಾಭಗಳು ಹೇರಳವಾಗಿರುತ್ತವೆ. ಚಂದ್ರನು ಮುಖದ ಅಂದವನ್ನೂ ಸೂಚಿಸುತ್ತಾನೆ. ಜಾತಕದಲ್ಲಿ ಚಂದ್ರನು ಒಳ್ಳೆಯ ಮನೆಯಲ್ಲಿ ಅಂದರೆ ತನ್ನದೇ ನಕ್ಷತ್ರಗಳಾದ ರೋಹಿಣಿ, ಹಸ್ತಾ, ಶ್ರವಣಗಳಲ್ಲಿ ಅಥವಾ ಉತ್ಛರಾಶಿಯಾದ ವೃಷಭದಲ್ಲಿ ಗುರುವಿನ ರಾಶಿಯಾದ ಧನುಸ್ಸು ಮೀನದಲ್ಲಿ ಅಥವಾ ಸೂರ್ಯನ ರಾಶಿಯಾದ ಸಿಂಹದಲ್ಲಿ ಇದ್ದರೆ ಅಂಥವರು ನೋಡಲು ಅಂದವಾಗಿ ಆಕರ್ಷಕವಾಗಿ ಇರುತ್ತಾರೆ. ಆದರೆ ಚಂದ್ರನು ಶನಿ ಅಥವಾ ರಾಹುವಿನ ಜೊತೆ ಯುತಿ ಯೋಗದಲ್ಲಿ ಇದ್ದರೆ ಅಥವಾ ಶನಿ ಹಾಗೂ ರಾಹುವಿನ ದೃಷ್ಟಿ ಚಂದ್ರನ ಮೇಲಿದ್ದರೆ ಇಂಥ ಜಾತಕದವರ ಮುಖ ಅಂದವಾಗಿರುವುದಿಲ್ಲ. ಮುಖದ ಮೇಲೆ ಕಲೆಗಳು, ಮೊಡವೆಗಳು ಇದ್ದು ಮುಖದ ಅಂದ ಕೆಡಿಸಿರುತ್ತದೆ.
ಚಂದ್ರನು ನೀರಿನ ರಾಶಿಯಾಗಿರುವುದರಿಂದ ಲಗ್ನದಲ್ಲಿ ಚಂದ್ರನಿದ್ದರೆ ಅಂಥವರು ಶೀತ ಪ್ರಕೃತಿಯವರಾಗಿರುತ್ತಾರೆ. ಚಂದ್ರನು ವೃಶ್ಚಿಕ ರಾಶಿಯಲ್ಲಿದ್ದರೆ ಅದು ಅವನಿಗೆ ನೀಚಸ್ಥಾನವಾಗಿರುವುದರಿಂದ ವೃಶ್ಚಿಕ ರಾಶಿಯವರು ಮಾನಸಿಕವಾಗಿ ಕೊಂಚ ದುರ್ಬಲರು, ಶೀಘ್ರಕೋಪಿಗಳು, ಖನ್ನತೆಯುಳ್ಳವರು, ಒಳಗೊಳಗೇ ಏನೋ ಲೆಕ್ಕಾಚಾರ ಹಾಕುತ್ತ ಪ್ರಕಟವಾಗಿ ಏನೂ ಮಾತನಾಡದವರು, ಯಾರನ್ನೂ ಸಂಪೂರ್ಣ ನಂಬದವರು, ಸೂಕ್ಷ್ಮ ಪ್ರಕೃತಿಯವರೂ ಆಗಿರುತ್ತಾರೆ. ಈ ಗುಣಗಳಲ್ಲಿ ಎಲ್ಲವೂ ಇರಬೇಕೆಂದೇನಿಲ್ಲ. ಕೆಲವು ಇರಬಹುದು ಅಥವಾ ಒಂದು ಗುಣ ಇರಬಹುದು. ಏನಾದರೂ ಎಲ್ಲವನ್ನೂ ವಿಪರೀತಾರ್ಥಗಳಲ್ಲಿ ಚಿಂತಿಸಿ ತಮ್ಮ ಮನಸ್ಸಿಗೆ ತಾವೇ ಕ್ಷೊàಭೆ ಮಾಡಿಕೊಳ್ಳುವುದಂತೂ ನಿಜ.
ವೃಶ್ಚಿಕ ರಾಶಿಯಲ್ಲಿ ಚಂದ್ರನಿದ್ದರೂ ಜೊತೆಯಲ್ಲಿ ಗುರು ಅಥವಾ ಕುಜನಿದ್ದರೆ ಚಂದ್ರನಿಗೆ ಬಲ ಇರುತ್ತದೆ. ವೃಶ್ಚಿಕ ರಾಶಿಯಲ್ಲಿ ಚಂದ್ರನಿದ್ದು ಜೊತೆಯಲ್ಲಿ ರಾಹು ಅಥವಾ ಶನಿ ಇದ್ದರೆ ಅಂಥವರು ತೀವ್ರ ಖನ್ನತೆಗೊಳಗಾಗಿ ಆತ್ಮಹತ್ಯೆಗೆ ಪ್ರಯತ್ನಿಸಲೂ ಬಹುದು. ಚಂದ್ರನೊಟ್ಟಿಗೆ ರಾಹು ಹಾಗೂ ಶನಿಗಳ ಸಂಬಂಧ ಅತಿ ಮರೆವಿಗೂ ಕಾರಣವಾಗಬಹುದು. ಇಂಥವರು ವಿದ್ಯೆಯಲ್ಲಿ ಹಿಂದುಳಿಯಬಹುದು. ಚಂದ್ರ ಮನಸೋಜಾತಃ ಎನ್ನುತ್ತಾರೆ. ಹೀಗಾಗಿ ಚಂದ್ರನು ಯಾವ ರಾಶಿಯಲ್ಲಿದ್ದಾನೆ ಎಂಬುದರ ಮೇಲೆ, ಆ ಜಾತಕದವರ ಗುಣಗಳನ್ನು ತೀರ್ಮಾನಿಸಬಹುದು. ಚಂದ್ರನೊಂದಿಗೆ ರಾಹು ಶನಿಗಳ ಸಂಬಂಧದ್ದರೆ ಇಂಥವರು ತಾಯಿಯಿಂದ ಬೇರ್ಪಟ್ಟು ದೂರ ಇರುವ ಪ್ರಸಂಗ ಬರಬಹುದು ಅಥವಾ ತಾಯಿ ವಿಯೋಗವೂ ಆಗಬಹುದು.
ಚಂದ್ರನು ಗುರುವಿನ ಜೊತೆಗೆ ಇದ್ದರೆ, ಅದನ್ನು ಗಜಕೇಸರಿ ಯೋಗ ಎನ್ನುತ್ತಾರೆ. ಗುರುವಿನ ಜೊತೆ ಅಥವಾ ಚಂದ್ರನಿಂದ ನಾಲ್ಕನೇ ಮನೆ, ಏಳನೇ ಮನೆ ಹಾಗೂ ಹತ್ತನೇ ಮನೆಯಲ್ಲಿ ಗುರು ಇದ್ದರೆ ಅದು ಗಜಕೇಸರಿ ಯೋಗವಾಗುತ್ತದೆ. ಇದರ ಬಗ್ಗೆ ಮುಂಚಿನ ಕಂತುಗಳಲ್ಲಿ ಚರ್ಚಿಸಲಾಗಿದೆ. ಚಂದ್ರನು ಜಾತಕದಲ್ಲಿ ಲಗ್ನದಿಂದ ಎರಡನೇ ಮನೆಯಲ್ಲಿದ್ದರೆ ಅಂಥವರು ಮೃದು ಮಧುರವಾಗಿ ಮಾತನಾಡುತ್ತಾರೆ. ಹಣಕಾಸಿಗೆ ಯಾವುದೇ ತೊಂದರೆ ಬಾರದು. ಸಂಸಾರದಲ್ಲಿ ಜಗಳಗಳು ಇರುವುದಿಲ್ಲ. ಮೂರನೇ ಮನೆಯಲ್ಲಿದ್ದರೆ ಸಹೋದರಿಯರ ಭಾಗ್ಯ ಇರುತ್ತದೆ. ನಾಲ್ಕನೇ ಮನೆಯಲ್ಲಿದ್ದರೆ ಸುಖವಾಗಿ ಇರುತ್ತಾರೆ. ಐದನೇ ಮನೆಯಲ್ಲಿ ಚಂದ್ರ ಒಳ್ಳೆಯ ವಿದ್ಯೆಯನ್ನು ಕೊಡುತ್ತಾನೆ. ಆರನೇ ಮನೆಯಲ್ಲಿರುವ ಚಂದ್ರ, ಮನಸ್ಸನ್ನು ತಳಮಳಗೊಳಿಸುತ್ತಾನೆ. ಏಳನೇ ಮನೆಯಲ್ಲಿದ್ದಾಗ, ಉತ್ತಮ ಸಂಗಾತಿಯನ್ನು ದೊರಕಿಸಿಕೊಡುತ್ತಾನೆ. ಎಂಟನೇ ಮನೆಯಲ್ಲಿ ಚಂದ್ರನಿದ್ದರೆ, ಆತ ನಮ್ಮ ಮೃತ್ಯುವನ್ನು ಶಾಂತಿಯುತವಾಗಿರುವಂತೆ ಮಾಡುತ್ತಾನೆ. ಒಂಭತ್ತನೇ ಮನೆ ಚಂದ್ರ ಪುಣ್ಯಕಾರ್ಯಗಳನ್ನು ಮಾಡಿಸುತ್ತಾನೆ. ಪ್ರವಾಸಗಳನ್ನು ದೂರಪ್ರಯಾಣವನ್ನೂ ಮಾಡಿಸುತ್ತಾನೆ. ಹತ್ತನೇ ಮನೆ ಚಂದ್ರ ಒಳ್ಳೆಯ ಉದ್ಯೋಗವನ್ನು ಕೊಡಿಸುತ್ತಾನೆ. ನೀವೇ ಬಾಸ್ ಆಗಿರುವಂಥ ಯೋಗವಿರುತ್ತದೆ. ಉನ್ನತ ಅಧಿಕಾರ, ಒಳ್ಳೆಯ ಹೆಸರು, ಹಣ, ಕೀರ್ತಿ ಮುಂತಾದವನ್ನು ಕೊಡುತ್ತಾನೆ. ಹತ್ತನೇ ಮನೆಯಲ್ಲಿ ಚಂದ್ರನೊಟ್ಟಿಗೆ ಗುರು ಇದ್ದರೆ ಅಂಥವರು ವೈದ್ಯರಾಗಬಹುದು. ನೌಕಾಪಡೆಯಲ್ಲಿ ಉನ್ನತ ಪದವಿಯಲ್ಲಿರಬಹುದು. ವ್ಯಾಪಾರ ಮಾಡುವವರಾದರೆ ಹಾಲು, ಮೊಸರು, ಐಸ್ ಕ್ರೀಮ್, ಹೂವು, ತಂಪು ಪಾನೀಯ, ಬೆಳ್ಳಿ ಹಾಗೂ ಬಿಳಿಬಣ್ಣಕ್ಕೆ ಸಂಬಂಧಿಸಿದ ಯಾವುದೇ ವಸ್ತುಗಳ ವ್ಯಾಪಾರ ಮಾಡಬಹುದು. ಹನ್ನೊಂದನೇ ಮನೆ ಚಂದ್ರ ಒಳ್ಳೆಯ ಸ್ನೇತರನ್ನು ಕೊಡುತ್ತಾನೆ. ವ್ಯಾಪಾರದಲ್ಲಿ ಲಾಭವನ್ನು ತಂದುಕೊಡುತ್ತಾನೆ. ಹನ್ನೆರಡನೇ ಮನೆ ಚಂದ್ರ ಪುಣ್ಯಕಾರ್ಯಗಳಿಗೆ ಖರ್ಚು ಮಾಡಿಸುತ್ತಾನೆ.
ಸೂರ್ಯ ಸಿಂಹರಾಶಿಗೆ ಅಧಿಪತಿ. ಮೂಲ ತ್ರಿಕೋಣವೂ ಸೂರ್ಯನಿಗೆ ಸಿಂಹ ರಾಶಿಯೇ ಆಗಿರುತ್ತದೆ, ಉತ್ಛ ರಾಶಿ ಮೇಷವಾದರೆ ನೀಚ ರಾಶಿ ತುಲಾ. ಸೂರ್ಯನಿಗೆ ಹತ್ತನೇ ಮನೆ ದಿಕºಲ. ಕೃತ್ತಿಕಾ, ಉತ್ತರಫಾಲ್ಗುಣಿ ಹಾಗೂ ಉತ್ತರಾಷಾಢ ಇವು ಸೂರ್ಯನ ನಕ್ಷತ್ರಗಳು. ಸೂರ್ಯನಿಗೆ ಶತ್ರು ಶನಿ, ರಾಹು ಹಾಗೂ ಶುಕ್ರ. ಯಾರ ಜಾತಕದಲ್ಲಿ ಸೂರ್ಯ ಉತ್ಛನಾಗಿರುವನೋ ಅಂಥವರು ಜೀವನದಲ್ಲಿಯೂ ಉನ್ನತವಾಗಿ ಬದುಕುತ್ತಾರೆ. ಇಂಥವರು ಯಾರಿಗೂ ತಲೆಬಾಗರು. ಸೂರ್ಯ ಉತ್ಛನಾಗಿರುವ ಜಾತಕದವರು ಕೊಂಚ ಅಹಂಕಾರಿಗಳು ಆಗಿರಬಹುದು. ಶಿರೋ ಭಾನು ಎನ್ನುತ್ತಾರೆ ಅವರನ್ನು. ಅಂದರೆ ಸೂರ್ಯನು ಜಾತಕದಲ್ಲಿ ಚೆನ್ನಾಗಿಲ್ಲದಿದ್ದರೆ ಅವರಿಗೆ ತಲೆಗೆ ಸಂಬಂಧಿಸಿದ ಕಾಯಿಲೆಗಳು ಬರುತ್ತದೆ. ಮೈಗ್ರೇನ್, ತಲೆ ನೋವು, ಚಿಕ್ಕ ವಯಸ್ಸಿಗೇ ಕನ್ನಡಕ ಧರಿಸುವುದು, ಕಣ್ಣಿನ ದೋಷಗಳು, ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಇವೆಲ್ಲಾ ಜಾತಕದಲ್ಲಿ ಸೂರ್ಯನು ದುರ್ಬಲನಾಗಿದ್ದರೆ ಬರುವಂಥದ್ದು. ಜಾತಕದಲ್ಲಿ ಸೂರ್ಯನು ಶನಿ ದೃಷ್ಟಿಗೆ ತುತ್ತಾಗಿದ್ದರೆ ಅಂಥವರು ತಂದೆಯಿಂದ ದೂವಿರುತ್ತಾರೆ ಅಥವಾ ತಂದೆಗೆ ವಿರೋಧಿಗಳಾಗಿರುತ್ತಾರೆ. ಸೂರ್ಯನಿಗೆ ರಾಹು ದೃಷ್ಟಿ ಇದ್ದರೆ ಅಂಥವರಿಗೆ ಸಂಕಲ್ಪ ಶಕ್ತಿ ಕಡಿಮೆ ಇರುತ್ತದೆ. ಸೂರ್ಯ ಕುಜ ಜಾತಕದಲ್ಲಿ ಒಟ್ಟಿಗೆ ಇದ್ದರೆ ಅಪರಿಮಿತ ಬಲ. ಸೂರ್ಯ-ಗುರು ಜಾತಕದಲ್ಲಿ ಒಟ್ಟಿಗೆ ಇದ್ದರೆ ಅಂಥವರು ದೇವರಲ್ಲಿ ಭಕ್ತಿಯುಳ್ಳವರಾಗಿರುತ್ತಾರೆ. ಧರ್ಮದರ್ಶಿಗಳು ಅಥವಾ ದೇವಾಲಯಗಳ ಮುಖ್ಯಸ್ಥರೂ ಆಗಿರುತ್ತಾರೆ. ಸೂರ್ಯ ಅಪಾರ ಶಕ್ತಿವಂತ. ಗ್ರಹಗಳ ರಾಜ. ಇಂಥ ಸೂರ್ಯ ಗುರುನೊಟ್ಟಿಗೆ ಯಾರ ಜಾತಕದಲ್ಲಿ ಇರುತ್ತಾನೋ ಅವರು ಧರ್ಮ ಬೀರಿಗಳಾಗಿರುತ್ತಾರೆ. ಸಾತ್ವಿಕೆಯ ಶಕ್ತಿ ಅಪಾರವಾಗಿರುತ್ತದೆ. ಧರ್ಮಬೋಧಕರೂ ಆಗಿರುತ್ತಾರೆ. ಸೂರ್ಯ ಹತ್ತನೆ ಮನೆಯಲ್ಲಿದ್ದರೆ ಅದು ದಿಕºಲ. ಸೂರ್ಯ ಇಲ್ಲಿ ಅಪಾರ ಬಲಶಾಲಿ. ಇಂಥವರು ಒಂದು ದೊಡ್ಡ ಸಂಸ್ಥೆಯ ಸ್ಥಾಪಕರಾಗಿರುತ್ತಾರೆ. ಅವರು ಯಾವುದೇ ಕ್ಷೇತ್ರವನ್ನು ಆಯ್ದುಕೊಂಡರೂ ಅದರಲ್ಲಿ ಅವರೇ ನಾಯಕರು. ಅವರಿಗೆ ಅಪಾರ ಮನೋಬಲ ಹಾಗೂ ಅವರು ಸ್ವಾಭಿಮಾನಿಗಳಾಗಿರುತ್ತಾರೆ. ಒಂದೇ ಅಲ್ಲ ಹಲವಾರು ಸಂಸ್ಥೆಗಳ ಒಡೆಯರೂ ಆಗಿರಬಹುದು. ರಾಜಕೀಯ ನಾಯಕರೂ ಆಗಬಹುದು. ಸೂರ್ಯ ಜಾತಕದಲ್ಲಿ ಚೆನ್ನಾಗಿದ್ದರೆ ಮಾತ್ರವೇ ರಾಜಕೀಯ ರಂಗದಲ್ಲಿ ಉತ್ತಮ ಭವಿಷ್ಯ ಇರುತ್ತದೆ.
ಸೂರ್ಯನ ಅನುಗ್ರಹವಿದ್ದರೆ ರಾಜ ವೈಭವ
ಸೂರ್ಯ ಉತ್ಛ ರಾಶಿಯಲ್ಲಿರುವಾಗ ಅಂದರೆ ಏಪ್ರಿಲ್ 14 ರಿಂದ ಮೇ 14ರ ಒಳಗೆ ಹುಟ್ಟಿದವರು ಬದುಕಿರುವವರೆಗೂ ತುಂಬಾ ಶ್ರೇಷ್ಠಮಟ್ಟದಲ್ಲಿಯೇ ಬದುಕುತ್ತಾರೆ. ತುಂಬಾ ಕೀರ್ತಿ, ಪ್ರಸಿದ್ಧಿಗಳನ್ನು ಗಳಿಸುತ್ತಾರೆ. ತಮ್ಮ ಕ್ಷೇತ್ರದಲ್ಲಿ ಅದ್ವಿತೀಯರಾಗಿರುತ್ತಾರೆ. ಉದಾ: ಕನ್ನಡ ಕಂಠೀರವ ಡಾ. ರಾಜ್ ಕುಮಾರ್, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಹೀಗೆ ಪಟ್ಟಿ ಬೆಳೆಯುತ್ತದೆ. ಸೂರ್ಯ ಉನ್ನತ ಅಧಿಕಾರವನ್ನು, ಆಡಳಿತ ಕ್ಷೇತ್ರವನ್ನೂ, ರಾಜಕಾರಣವನ್ನೂ ಪ್ರತಿನಿಧಿಸುತ್ತಾನೆ. ಹೀಗಾಗಿ ಸೂರ್ಯ ಯಾರ ಜಾತಕದಲ್ಲಿ ಬಲವಾಗಿರುತ್ತಾನೋ ಅವರು ಎಂದಿಗೂ ಇನ್ನೊಬ್ಬರ ಹಂಗಿನಲ್ಲಿ, ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವುದಿಲ್ಲ. ಮಾಡಿದರೂ ಅದು ಅಲ್ಪಕಾಲ ಮಾತ್ರ. ತಮ್ಮದೇ ಒಂದು ವ್ಯಾಪಾರ ಅಥವಾ ಸಂಸ್ಥೆಯನ್ನು ಪ್ರಾರಂಭಿಸಿ ಯಶಸ್ಸು ಕಾಣುತ್ತಾರೆ. ಸೂರ್ಯ ತಂದೆಯನ್ನು ಪ್ರತಿನಿಧಿಸುವುದರಿಂದ ಸೂರ್ಯ ಜಾತಕದಲ್ಲಿ ಬಲವಾಗಿದ್ದರೆ ತಂದೆಯಿಂದ ಲಾಭ, ಸಹಕಾರ, ಬೆಂಬಲ, ಪಿತ್ರಾರ್ಜಿತ ಆಸ್ತಿ ಸಿಗುವುದು ಮುಂತಾದ ಲಾಭಗಳಿರುತ್ತವೆ. ತಂದೆಯ ವೃತ್ತಿಯನ್ನು ಪರಂಪರಾಗತವಾಗಿ ಮುಂದುವರೆಸಿಕೊಂಡು ಹೋಗಲೂ ಸೂರ್ಯನ ಅನುಗ್ರಹವೇ ಕಾರಣವಾಗಿರುತ್ತದೆ. ಸೂರ್ಯ ನಿಷ್ಕಳಂಕ ಹೀಗಾಗಿ ಸೂರ್ಯನ ಅನುಗ್ರಹ ಹೊಂದಿರುವವರು ಸುಳ್ಳು, ಕಪಟ, ಮೋಸ ಕೊಳಕು ಇಂಥವೆಲ್ಲ ಸಹಿಸುವುದಿಲ್ಲ. ಸೂರ್ಯನ ಅನುಗ್ರಹ ರಾಜ ವೈಭವವನ್ನೂ, ಉನ್ನತ ಅಧಿಕಾರವನ್ನೂ ಕೀರ್ತಿ, ಸಂಪತ್ತನ್ನೂ ಪ್ರಸಿದ್ಧಿಯನ್ನು ಸಾಮಾಜಿಕ ಗೌರವವನ್ನೂ ತಂದುಕೊಡುತ್ತದೆ.
ವೀಣಾ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Astrology 2024: 2024ರಲ್ಲಿ ಮಿಶ್ರ ಫಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?
ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?
ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…
ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?
ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಗಾಂಜಾ ಸೇವನೆ; ಯುವಕನ ಬಂಧನ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.