ಶಿವಗಂಗೆಯ ಗಂಗಾಧರ 


Team Udayavani, Mar 10, 2018, 11:19 AM IST

5.jpg

ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ಶಿವಗಂಗೆ ಬೆಟ್ಟ, ಒಂದೊಂದು ದಿಕ್ಕಿನಿಂದ ಒಂದೊಂದು ರೂಪದಲ್ಲಿ ಗೋಚಸಿರುತ್ತದೆ. ಇಲ್ಲಿರುವ ಪಾತಾಳಗಂಗೆಯಲ್ಲಿ ಮಳೆಗಾಲದಲ್ಲಿ ಆಳಕ್ಕೆ ಹೋಗುವ ನೀರು, ಬೇಸಿಗೆಯಲ್ಲಿ ಮೇಲೆ ಬಂದಿರುತ್ತದೆ !

ಬೆಂಗಳೂರು ನಗರದಿಂದ ಸುಮಾರು 54 ಕಿ.ಮೀ. ದೂರದಲ್ಲಿರುವ ಒಂದು ಪಾವನ ಪುಣ್ಯ ಕ್ಷೇತ್ರವೇ ಈ ಶಿವಗಂಗೆ ಬೆಟ್ಟ.  ಇದು  ಕರ್ನಾಟಕದ ಪ್ರಮುಖ ಯಾತ್ರಾ ಸ್ಥಳವೂ ಆಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸವಾಲಾಗಿರುವ ಸಂಗತಿಗಳಲ್ಲಿ ಈ ಶಿವಗಂಗೆಯ ಲಿಂಗ ಮಹಾತೆ¾ಯೂ ಒಂದು.  ಇಲ್ಲಿರುವ ಈಶ್ವರ ಲಿಂಗಕ್ಕೆ ತುಪ್ಪವನ್ನು ಹಚ್ಚಿದರೆ ಅದು ಬೆಣ್ಣೆಯಾಗಿ ಪರಿವರ್ತನೆಯಾಗುತ್ತದೆ.  ಬೆಣ್ಣೆಯನ್ನು ಒಲೆಯ ಮೇಲಿಟ್ಟು ಕಾಯಿಸಿ, ಕರಗಿಸಿದರೆ ಅದು ತುಪ್ಪವಾಗುತ್ತದೆ. ವಾಸ್ತವ ಏನೆಂದರೆ, ನಮಗೆಲ್ಲ ಗೊತ್ತಿರುವಂತೆ ಒಮ್ಮೆ ತುಪ್ಪವಾದ ಬೆಣ್ಣೆಯನ್ನು ಪ್ರಿಡ್ಜ್‌ನಲ್ಲಿ ಇಟ್ಟರೂ ಅದು ಮತ್ತೆ ಬೆಣ್ಣೆಯಾಗುವುದು ಅಸಾಧ್ಯದ ಮಾತು. ಆದರೆ, ಈ ಶಿವಗಂಗೆಯಲ್ಲಿ ಈ ಪವಾಡವನ್ನು ಪ್ರತ್ಯಕ್ಷ ಕಾಣಬಹುದು. ಭಗವಂತನ ಕೃಪೆ ಇದ್ದರೆ ಯಾವುದೂ ಅಸಾಧ್ಯವಲ್ಲ ಎಂಬ ಮಾತು ಇದಕ್ಕೆ ಅನ್ವಯಿಸುತ್ತದೆ. ಇಂಥ ವೈಶಿಷ್ಟ್ಯ ಪೂರ್ಣ ಪುಣ್ಯಕ್ಷೇತ್ರ ಕರ್ನಾಟಕದಲ್ಲಿದೆ ಎಂಬುದೇ  ಹೆಮ್ಮೆಯ ವಿಷಯ.

 ಈ ಬೆಟ್ಟದ ಮೇಲೆ ಅಷ್ಟಲಿಂಗ, ಅಷ್ಟಗಣಪ,ಅಷ್ಟ ವೃಷಭ, ಅಷ್ಟತೀರ್ಥಗಳಿವೆ. ಶಿವಗಂಗೆಯ ಪ್ರಸ್ತಾಪ ಪುರಾಣ ಹಾಗೂ ಗುರುಚರಿತ್ರೆಯಲ್ಲೂ ಬರುತ್ತದೆ. ಹೊಯ್ಸಳರ ಕಾಲದ ವಿಷ್ಣುವರ್ಧನ ಹಾಗೂ ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿ¨ªಾರೆ ಎನ್ನಲಾಗುತ್ತದೆ.  ಇಲ್ಲಿ ಸ್ವರ್ಣಾಂಭ ಸಹಿತ ಗಂಗಾಧರೇಶ್ವರ, ಶಾಂತೇಶ್ವರ, ಓಂಕಾರೇಶ್ವರ, ರೇವಣ ಸಿದ್ಧೇಶ್ವರ, ಕುಂಬೇಶ್ವರ, ಸೋಮೇಶ್ವರ, ಮುದ್ದು ವೀರೇಶ್ವರನೆಂಬ ಅಷ್ಟ ಲಿಂಗಗಳಿವೆ.  ಅಗಸ್ತ್ಯ, ಶಂಕರತೀರ್ಥ, ಕಣ್ವತೀರ್ಥ, ಕದಂಬತೀರ್ಥ, ಮೈತ್ಲಾ ತೀರ್ಥ, ಪಾತಾಳಗಂಗೆ, ಒರಳಕಲ… ತೀರ್ಥ, ಕಪಿಲತೀರ್ಥ ಎಂಬ ಅಷ್ಟ ತೀರ್ಥಗಳು ಮತ್ತು 108 ಶಿವಲಿಂಗಗಳಿವೆ.   ಇದಲ್ಲದೆ, ನಂದಿ, ವೃಷಭ, ಮಕರಬಸವ, ಮಹಿಷ ಬಸವ, ಗಾರೆ ಬಸವ, ದೊಡ್ಡ ಬಸವ, ಕಡಲೆ ಬಸವ, ಗಿರಿಬಸವ, ಕೋಡುಗಲ್ಲು ಬಸವ ಎಂಬ ಅಷ್ಟ ಮಹಾ ವೃಷಭಗಳೂ ಇಲ್ಲಿವೆ.   ಇನ್ನು  ಈ ಬೆಟ್ಟದ ಮೇಲೆ ಒಂದು ಸಣ್ಣ ಸುರಂಗವಿದೆ. ಈ ಸುರಂಗದಲ್ಲಿ ಮುಂದುವರೆದರೆ ಶ್ರೀರಂಗಪಟ್ಟಣ ತಲುಪಬಹುದು ಎಂಬ ನಂಬಿಕೆಯೂ ಚಾಲ್ತಿಯಲ್ಲಿದೆ.  ಬೆಟ್ಟದ ಮೇಲಿರುವ  ಒರಳಕಲ್ಲು ತೀರ್ಥದಲ್ಲಿ   ವರ್ಷದ 365 ದಿನಗಳೂ ನೀರು ದೊರೆಯುತ್ತದೆ. ಕಡಿದಾದ ಬೆಟ್ಟವನ್ನು ಏರುತ್ತಾ ಹೋದರೆ ಒಂದು ಎತ್ತರವಾದ ಬಂಡೆಯ ಮೇಲೆ ನಂದಿ ವಿಗ್ರಹವಿದೆ. ಇದನ್ನು ಪ್ರದಕ್ಷಿಣೆ ಹಾಕುವುದೇ ಒಂದು ಸಾಹಸದ ಕೆಲಸ. ಕಾಲು ಇಡಲು ಕೂಡ ಜಾಗ ಚಿಕ್ಕದು ಹಾಗೂ ಮತ್ತೂಂದು ಕಡೆ ಆಳವಾದ ಪ್ರಪಾತ. ನಂತರ ಹಾಗೇ ಮುಂದುವರೆದರೆ ಬೆಟ್ಟದ ಮೇಲೆ ಗಂಗಾಧರೇಶ್ವರನ ಸುಂದರವಾದ ದೇವಾಲಯವಿದೆ. ಇಲ್ಲಿನ ಗರ್ಭಗುಡಿಯಲ್ಲಿ  ಗಂಗಾಧರೇಶ್ವರ  ಲಿಂಗರೂಪದಲ್ಲಿ  ನೆಲೆಸಿದ್ದಾನೆ.  

ಮುಖ್ಯವಾದದ್ದು ಈ  ಬೆಟ್ಟದ ಮೇಲಿರುವ ಶ್ರೀ ಹೊನ್ನಾದೇವಿ ದೇವಸ್ಥಾನವೂ ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ದಿನ ಎರಡೂ ದೇವರುಗಳಿಗೆ ವಿವಾಹ ಮಹೋತ್ಸವವನ್ನು ಮಾಡಲಾಗುತ್ತದೆ. ಆ ದಿನ ಮುಂಜಾನೆ, ಬೆಟ್ಟದ ಮೇಲಿನ ಕಲ್ಲಿನಿಂದ ಗಂಗಾ ಜಲ ಹೊರ ಹೊಮ್ಮುತ್ತದೆ. ಆದೇ ಜಲವನ್ನು ವಾದ್ಯಗೋಷ್ಟಿಗಳ ಸಮೇತ ತಂದು ಆ ಪವಿತ್ರ ನೀರಿನಿಂದ ಶ್ರೀಹೊನ್ನಾದೇವಿಯನ್ನು ಶ್ರೀ ಗಂಗಾಧರೇಶ್ವರನಿಗೆ ಧಾರೆ ಎರೆದು ಕೊಡಲಾಗುತ್ತದೆ. ಇನ್ನು  ಇಲ್ಲಿ ಶಂಕರಾಚಾರ್ಯರ ಶಾಖಾ ಮಠ, ಶಾರದಾಂಬೆಯ ದೇವಸ್ಥಾನ, ಬೃಹದಾಕಾರವಾದ ತೋಪಿನ ಗಣೇಶ ಹಾಗೂ 108 ಲಿಂಗಗಳನ್ನುಳ್ಳ ಅಗಸ್ತ್ಯ ದೇವಸ್ಥಾನಗಳಿವೆ.  

ಹತ್ತಿರದಲ್ಲಿಯೇ ಪಾತಾಳ ಗಂಗೆ ಇದೆ. ಇದು ಸದಾ ನೀರಿನಿಂದ ತುಂಬಿರುತ್ತದೆ. ವಿಚಿತ್ರವೆಂದರೆ ಇಲ್ಲಿ ಮಳೆಗಾಲದಲ್ಲಿ ನೀರು ಆಳಕ್ಕೆ ಹೋಗಿರುತ್ತದೆ. ಬೇಸಿಗೆಯಲ್ಲಿ ನೀರು ಮೇಲಕ್ಕೆ ಬರುತ್ತದೆ. ಈ ಕ್ಷೇತ್ರವನ್ನು  ದಕ್ಷಿಣ ಕಾಶಿ ಎಂದೂ ಕೂಡ ಕರೆಯುತ್ತಾರೆ.  ಒಂದೊಂದು ದಿಕ್ಕಿನಿಂದ ಒಂದೊಂದು ಆಕಾರದಲ್ಲಿ ಗೋಚರಿಸುವ ಈ ಬೆಟ್ಟವನ್ನು ಉತ್ತರದಿಂದ ನೋಡಿದರೆ ಸರ್ಪದಂತೆಯೂ, ದಕ್ಷಿಣದಿಂದ ಗಣೇಶನಂತೆಯೂ, ಪೂರ್ವದಿಂದ ನಂದಿಯಂತೆಯೂ, ಪಶ್ಚಿಮದಿಂದ ಲಿಂಗದಂತೆಯೂ ಕಾಣುತ್ತದೆ.  ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ತಾಣ ಇದಾಗಿದೆ. ಇದೇ ಬೆಟ್ಟದÇÉೇ ನಾಟ್ಯರಾಣಿ ಶಾಂತಲೆ ಆತ್ಮಹತ್ಯೆ ಮಾಡಿಕೊಂಡಿದ್ದು ಎಂಬ ಐತಿಹ್ಯವಿದೆ.

 ತಲುಪುವ ಮಾರ್ಗ 
ಬೆಂಗಳೂರು ನಗರದಿಂದ ಸುಮಾರು 54 ಕಿಮೀ. ದಾಬಸ್‌ ಪೇಟೆಯಿಂದ ಸುಮಾರು 6 ಕಿ.ಮೀ. ತುಮಕೂರಿನಿಂದ 20 ಕಿ.ಮೀ. ಅಂತರದಲ್ಲಿರುವ ಈ ಬೆಟ್ಟಕ್ಕೆ  ಸಾಕಷ್ಟು ಬಸ್‌ ಸೌಕರ್ಯವಿದೆ.

ಆಶಾ. ಎಸ್‌ ಕುಲಕರ್ಣಿ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.