ಆಕಾಶ,ವಾಯು ನಮ್ಮ ಗುರುಗಳೇ…
Team Udayavani, Feb 9, 2019, 12:35 AM IST
ಜ್ಞಾನ ಎಂಬುದು ಒಂದು ವಿಶೇಷವಾದ ಸಂಪತ್ತು. ಯಾರಿಂದಲೂ ಕದಿಯಲಾಗದ, ಆದರೆ ಹಂಚಿದಷ್ಟೂ ವಿಸ್ತಾರಗೊಳ್ಳುವ ಸಂಪತ್ತು. ಆದುದರಿಂದಲೇ ನಹೀ ಜ್ಞಾನೇನ ಸದೃಶಂ ಎಂಬ ಉಕ್ತಿ ಹುಟ್ಟಿಕೊಂಡಿದೆ. ಅಂದರೆ ಜ್ಞಾನಕ್ಕಿಂತಲೂ ಮಿಗಿಲಾದುದು ಯಾವುದೂ ಇಲ್ಲ ಎಂದರ್ಥ. ಜ್ಞಾನವನ್ನು ಎÇÉೆಲ್ಲಿ ಯಾವಯಾವ ಮೂಲಗಳಿಂದ ಪಡೆಯಲಾಗುತ್ತದೋ ಅವೆಲ್ಲವುಗಳಿಂದಲೂ ಪಡೆಯಬೇಕಂತೆ. ಒಂದಲ್ಲ ಒಂದು ದಿನ ಬದುಕಿನ ಪಯಣದಲ್ಲಿ ಅವು ಸಹಾಯಕ್ಕೊದಗಿ ಬರುವುದಂತೆ.
ಇಪ್ಪತ್ತನಾಲ್ಕು ಗುರುಗಳಲ್ಲಿ ಎರಡನೆಯ ಗುರುವೆಂದರೆ ವಾಯು. ನಮ್ಮ ಪರಿಸರದಲ್ಲಿ ಕಣ್ಣಿಗೆ ಕಾಣದ ವಿಶೇಷ ಶಕ್ತಿಯಾದ ಗಾಳಿಯಿಂದಲೂ ನಾವು, ಕಲಿಯಬೇಕಾದದ್ದಿದೆ. ಗಾಳಿಯಿಂದಾಗಿಯೇ ಉಸಿರಾಡುತ್ತಿರುವ ನಾವು, ವಾಯುದೇವ ಎಂದು ದೇವರ ರೂಪದಲ್ಲಿ ಗಾಳಿಯನ್ನು ಕಂಡಿದ್ದೇವೆ; ನಮಿಸುತ್ತೇವೆ. ನಮ್ಮೆಲ್ಲರ ಸುತ್ತ ಹರಡಿಕೊಂಡಿರುವ ಗಾಳಿಯಿಂದ ಯಾವ ಜ್ಞಾನವನ್ನು ಹೊಂದಬೇಕು? ಅದು ಏನನ್ನು ತಿಳಿಸಿಕೊಡುತ್ತದೆ ಎಂಬುದನ್ನು ಮದ್ಭಾಗವತದ ಏಕಾದಶ ಸ್ಕಂಧದ ಏಳನೆಯ ಅಧ್ಯಾಯದಲ್ಲಿ ಹೇಳಲಾಗಿದೆ.
ಗಾಳಿಯು ಎಲ್ಲೆ ಡೆಯೂ ಸಂಚರಿಸುತ್ತದೆ. ಆದರೆ ಯಾವುದರಲ್ಲಿಯೂ ನಿರ್ಲಿಪ್ತವಾಗುವುದಿಲ್ಲ. ಗಂಧವನ್ನು ಗ್ರಹಿಸುತ್ತದೆ ಮತ್ತು ಬಿಡುತ್ತದೆ. ಗಾಳಿಯು ಗಂಧವನ್ನು ಹೊತ್ತುಕೊಂಡು ಹೋದರೂ ಅದರ ಗುಣ-ದೋಷಗಳಲ್ಲಿ ಸೇರುವುದಿಲ್ಲ. ಅಲ್ಲಿ ಅದು ಅಸಂಗವಾಗಿಯೇ ಇರುತ್ತದೆ. ನಾವು ಕೂಡ ವಾಯುವಿನಂತೆ ಎಲ್ಲೆಡೆ ಸಂಚರಿಸಿದರೂ ಅಲ್ಲಿನ ಗುಣ ದೋಷಗಳಿಂದ ಪ್ರಭಾವಿತರಾಗದೆ ಅದರಿಂದ ದೂರವಿರಬೇಕು. ನಾವು ಸಂಚರಿಸಿದ ಪ್ರದೇಶದಲ್ಲಿ ಕ್ರೌರ್ಯವನ್ನು ನೋಡಿ ಕ್ರೌರ್ಯಕ್ಕೆ ಮುಂದಾಗಬಾರದು. ನಮ್ಮ ಮನಸ್ಸು ಅದನ್ನು ಕಂಡಿದ್ದರೂ, ಅನಭವಿಸಿದ್ದರೂ ಅದರಿಂದ ದೂರವೇ ಇರಬೇಕು. ಅಂಥ ಕ್ರೌರ್ಯ ನಮ್ಮಲ್ಲಿ ಹುಟ್ಟಿಕೊಳ್ಳಬಾರದು. ಗಾಳಿಯು ಇದ್ದಲ್ಲೆಲ್ಲಾ ಒಂದು ಸುಂದರವಾದ ವಾತಾವರಣವಿರುತ್ತದೆ. ಮನಸ್ಸು ಉಲ್ಲಸಿತವಾಗುವಂತೆ ಮಾಡುತ್ತದೆ. ನಾವೂ ಕೂಡ ಎಲ್ಲಿರುತ್ತೇವೆಯೋ ಅಲ್ಲಿ ಸಂತಸದ ವಾತಾವರಣಕ್ಕೆ ಕಾರಣರಾಗಬೇಕು. ಮನಸ್ಸು ವಿಚಲಿತವಾಗದಂತೆ ಜಗತ್ತನ್ನು ಸ್ವೀಕರಿಸಬೇಕು. ಹೇಗೆ ಗಾಳಿಯೊಂದು ಉರಿಯುವ ದೀಪಕ್ಕೆ ಗಾಳಿ ಹೇಗೆ ಮಾಧ್ಯಮವಾಗಿ ಕಾರ್ಯನಿರ್ವಹಿಸುವುದೋ ಹಾಗೇ ನಾವು ಜಗತ್ತಿನ ಒಳಿತಿಗೆ ಮಾಧ್ಯಮವಾಗಿ ಬಾಳಬೇಕು.
ಗಾಳಿಯು ಎಲ್ಲೆಡೆಯೂ ಚಲಿಸುತ್ತದೆ. ಒಂದೊಂದು ಕಡೆಯಲ್ಲಿ ಒಂದೊಂದು ಬಗೆಯ ಗಂಧವನ್ನು ಹೊತ್ತೂಯ್ಯುತ್ತದೆ. ಆದರೆ ಅದನ್ನು ತನ್ನಲ್ಲಿ ಇಟ್ಟುಕೊಳ್ಳುವುದಿಲ್ಲ. ಅದರಿಂದ ಹೊರಗಿರುತ್ತದೆ. ಪ್ರಕೃತಿಯ ಆಗು ಹೋಗುಗಳಿಗೆ ಕಾರಣವಾಗುತ್ತದೆ. ನಾವು ಕೂಡ ಗಾಳಿಯಂತೆ ಎಲ್ಲವುದರಿಂದಲೂ ಹೊರತಾಗಿರಬೇಕು. ಆತ್ಮವೂ ಶರೀರದಲ್ಲಿಯೇ ಇದ್ದರೂ ಶರೀರದಿಂದ ಹೊರತಾದದ್ದು. ಹಾಗಾಗಿ, ದೇಹದಲ್ಲಿನ ಗುಣ ದೋಷಗಳೊಂದಿಗೆ ಆತ್ಮವನ್ನು ಒಂದಾಗಿಸಬಾರದೆಂದು ಹೇಳಲಾಗಿದೆ.
ಆತ್ಮವು ಶುದ್ಧವಾಗಿರಬೇಕು. ಯಾವುದರಿಂದಲೂ ಪ್ರಭಾವಿತವಾಗದೆ ದೂರವೇ ಇರಬೇಕು. ಶರೀರದ ಆಗು ಹೋಗುಗಳು ಈ ಆತ್ಮಕ್ಕೆ ಬೇಕಾಗಿ ಇರಬೇಕು. ಆಹಾರ ಸೇವನೆಯು ಪ್ರಾಣಧಾರಣೆಗೆ ಬೇಕಾದಷ್ಟಿರಬೇಕು. ಇಂದ್ರಿಯ ತೃಪ್ತಿಗಾಗಿ ಅಲ್ಲ. ಪ್ರಾಣ ಎಂಬುದು ವಾಯು. ಈ ಪ್ರಾಣ, ವಾಯುವಿನಿಂದಾಗಿಯೇ ಶರೀರವನ್ನು ಸೇರಿದೆ. ಅಂತಹ ಪ್ರಾಣಕ್ಕೆ ಬೇಕಾಗುವಷ್ಟು ಆಹಾರವನ್ನು ತೆಗೆದುಕೊಂಡಾಗ ಮನಸ್ಸಿನ ಅಲೆದಾಟ ಇರುವುದಿಲ್ಲ. ಆಗ ಚಿತ್ತದ ಏಕಾಗ್ರತೆ ಸುಲಭ. ಬದುಕಿನ ಪ್ರತಿಯೊಂದು ಘಟ್ಟವೂ ಒಂದು ಬಗೆಯ ಸಂಚಾರವೇ. ಈ ಸಂಚಾರದಲ್ಲಿ ವಿಷಯಗಳೊಳಗಿದ್ದರೂ ಅದರಿಂದ ಹೊರತಾಗಿರುವ ಜಾಣ್ಮೆ ಈ ವಾಯುವಿನ ಸ್ವರೂಪದಿಂದ ಅರಿಯಬೇಕಾದ ಜ್ಞಾನ.
..ಜ್ಞಾನ ಎಂಬುದು ಒಂದು ವಿಶೇಷವಾದ ಸಂಪತ್ತು. ಯಾರಿಂದಲೂ ಕದಿಯಲಾಗದ, ಆದರೆ ಹಂಚಿದಷ್ಟೂ ವಿಸ್ತಾರಗೊಳ್ಳುವ ಸಂಪತ್ತು. ಆದುದರಿಂದಲೇ ನಹೀ ಜ್ಞಾನೇನ ಸದೃಶಂ ಎಂಬ ಉಕ್ತಿ ಹುಟ್ಟಿಕೊಂಡಿದೆ. ಅಂದರೆ ಜ್ಞಾನಕ್ಕಿಂತಲೂ ಮಿಗಿಲಾದುದು ಯಾವುದೂ ಇಲ್ಲ ಎಂದರ್ಥ. ಜ್ಞಾನವನ್ನು ಎÇÉೆಲ್ಲಿ ಯಾವಯಾವ ಮೂಲಗಳಿಂದ ಪಡೆಯಲಾಗುತ್ತದೋ ಅವೆಲ್ಲವುಗಳಿಂದಲೂ ಪಡೆಯಬೇಕಂತೆ. ಒಂದಲ್ಲ ಒಂದು ದಿನ ಬದುಕಿನ ಪಯಣದಲ್ಲಿ ಅವು ಸಹಾಯಕ್ಕೊದಗಿ ಬರುವುದಂತೆ. ಹಾಗಾಗಿಯೇ, ಮದ್ಭಾಗವತದಲ್ಲಿ ಆಕಾಶದಿಂದಲೂ ನಾವು ಅರಿತುಕೊಳ್ಳಬೇಕಾದ ಸಂಗತಿಯಿದೆ ಎಂಬುದನ್ನು ಹೇಳಲಾಗಿದೆ.
ಮೂರನೆಯ ಗುರು: ಆಕಾಶ
ಇದು ವೈಜ್ಞಾನಿಕವಾಗಿಯೂ ವಿಸ್ಮಯವಾದ ಪ್ರದೇಶವಾಗಿದೆ. ಭೂಮಿಯ ಮೇಲಿನ ಕಾರ್ಯಗಳನ್ನು ನಿಯಂತ್ರಿಸುವ ಸಾಧನಗಳನ್ನು ಆಕಾಶ ಹಿಡಿದಿಟ್ಟುಕೊಂಡಿದೆ. ಜ್ಞಾನ ವಿಜ್ಞಾನದ ಬೆಳವಣಿಗೆಗೆ, ಪ್ರಪಂಚದ ಅಭಿವೃದ್ಧಿಗೆ ಅನುಕೂಲಕರವಾಗಿರುವ ಆಕಾಶದಿಂದ ಕಲಿಯಬೇಕಾದ, ನಮ್ಮ ಜೀವನಕ್ಕೆ ಬೇಕಾದ ಜ್ಞಾನ ಇದರಲ್ಲಿದೆ. ಆಕಾಶ ಎಂದರೆ ಅವಕಾಶ ಎಂದರ್ಥ. ಮಾನವನ ಜೀವನವೂ ಒಂದು ಅವಕಾಶವೇ. ಹೇಗೆ ಆಕಾಶವು ಸರ್ವವ್ಯಾಪಿಯಾಗಿ ಸರ್ವರಿಗೆ ಉಪಕಾರಿಯಾಗಿ ಹರಡಿಕೊಂಡಿದೆಯೋ ಹಾಗೇ ನಮ್ಮ ಜೀವನವೂ ವಿಶಾಲವಾದ ಮನೋಭಾವದಿಂದ ಕೂಡಿರಬೇಕು. ನಾವು ಎಲ್ಲಿ ಹೋದರೂ ಅಲ್ಲಿ ಕಾಣುವ ಆಕಾಶ ಒಂದೇ ರೂಪವನ್ನು ಹೊಂದಿರುತ್ತದೆ. ಏಕರೂಪ ಎಂಬುದು ಒಂದು ಸತ್ಯದ ರೂಪವೇ ಆಗಿದೆ. ನಾವು ಕೂಡ ಎಲ್ಲಿದ್ದರೂ ಒಂದೇ ಭಾವದಿಂದ ಇರುವುದನ್ನು ಕಲಿಯಬೇಕು. ನಮ್ಮತನ ಎಂಬುದು ಸತ್ಯದ ಕಡೆಗೆ ಇರಬೇಕು. ಯಾಕೆಂದರೆ, ಸತ್ಯ ಎಂಬುದು ಆಕಾಶದಂತೆ ಎಲ್ಲಿದ್ದರೂ ಸತ್ಯವೇ. ಆಕಾಶವೂ ಪ್ರಪಂಚದ ಯಾವುದೇ ಮೂಲೆಗೆ ಹೋಗಿ ನೋಡಿದರೂ ಅದು ಆಕಾಶವೇ. ಆದರೆ ಸುಳ್ಳು ಕ್ಷಣದಿಂದ ಕ್ಷಣಕ್ಕೆ, ಊರಿಂದ ಊರಿಗೆ, ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಬೇರೆ ರೂಪ ಹೊಂದುವಂತದ್ದು. ಹಾಗಾಗಿ, ಸುಳ್ಳನ್ನು ಸಂಭಾಳಿಸುವುದೇ ಜೀವನದ ಗುರಿಯಾಗಿಬಿಡುತ್ತದೆ.
ಇನ್ನು, ಆಕಾಶದಷ್ಟು ಬೇಕು ಎಂದುಕೊಳ್ಳುವುದು ಮಹದಾಸೆ. ಅಂಥ ಆಸೆಯನ್ನು ಬಿಡುವುದಕ್ಕೂ ಆಕಾಶವೇ ನಿದರ್ಶನವಾಗಿದೆ. ಆಕಾಶದಲ್ಲಿ ಏನೇನಲ್ಲ ಇವೆ. ಮಳೆಗೆ ಕಾರಣವಾಗುವ ಮೋಡದಿಂದ ಹಿಡಿದು ಗ್ರಹಗಳು, ನಕ್ಷತ್ರಗಳು, ಸೂರ್ಯ, ಚಂದ್ರ ಮೊದಲಾದವುಗಳು ಆಕಾಶದ ಒಡಲಿನಲ್ಲಿಯೇ ಇದ್ದರೂ ಅವುಗಳಿಂದ ಆಕಾಶ ಹೊರತಾಗಿದೆ. ಎಲ್ಲವೂ ಇದ್ದು ಅವು ಯಾವುದೂ ತನ್ನದ್ದಲ್ಲ ಎಂಬ ಭಾವನೆಯು ಸುಖ-ದುಃಖದಿಂದ ನಮ್ಮ ಮನಸ್ಸು ದೂರ ಉಳಿಯುವಂತೆ ಮಾಡುತ್ತದೆ. ಗುಣಾತೀತನಾಗುವುದಕ್ಕೂ ಆಕಾಶವೇ ಉದಾಹರಣೆ.
..ಮುಂದುವರಿಯುವುದು.
ವಿಷ್ಣು ಭಟ್ ಹೊಸ್ಮನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.