ಅಗೋ, ನೋಡು ಜಲಪಾತ!!


Team Udayavani, Jul 14, 2018, 4:03 PM IST

5663.jpg

ಮಲೆನಾಡು- ಮಳೆನಾಡಾಗಿ ಬಿಟ್ಟಿದೆ. ಆಕಾಶಕ್ಕೆ ತೂತು ಬಿದ್ದಿದೆಯೇನೋ ಎಂಬಂತೆ ಒಂದೇ ಸಮನೆ ಮಳೆ ಬೀಳುತ್ತಿದೆ. ಪರಿಣಾಮ, ಎಲ್ಲ ಜಲಪಾತಗಳೂ ಮೈದುಂಬಿ ಹರಿಯುತ್ತಿವೆ. ಜಲಪಾತಗಳ ತವರು ಎನಿಸಿಕೊಂಡಿರುವ ಶಿರಸಿ ಸಿದ್ದಾಪುರ ಸೀಮೆಯಲ್ಲಿರುವ ಹೆಸರಾಂತ ಜಲಪಾತಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ. ಇದು ಪ್ರತಿವಾರದ ಸಂಭ್ರಮ. 

ಜಲಲ ಜಲಲ ಜಲಧಾರೆ, ಅಗೊ, ಅಗೋ ನೋಡು ಜಲಪಾತ! ವಾಹ್‌, ಸೂಪರ್‌, ಫೆಂಟಾಸ್ಟಿಕ್‌, ಹೀಗೆಂದು ಈ ಜಲಪಾತಗಳನ್ನು ನೋಡಲು ಬಂದವರು ಹೇಳುವುದು ರೂಢಿ. ಹೌದು, ವಯ್ನಾರದ ಜಲಧಾರೆಯನ್ನು ನೋಡುವುದೇ ಒಂದು ಸಂಭ್ರಮ. ಧುಮ್ಮಿಕ್ಕುವ ಹರಿಯುವ ಜಲಪಾತಗಳು ಮನಸ್ಸಿಗೆ ಆಹ್ಲಾದ ಮತ್ತು ಸಂಭ್ರಮವನ್ನು ಮೊಗೆ ಮೊಗೆದು ಕೊಡುತ್ತವೆ. ಇಂಥ ಹಿನ್ನೆಲೆ ಹೊಂದಿದ ಸೊಗಸಿನ ಜಲಪಾತಗಳನ್ನು ನೋಡಬೇಕಾದರೆ ಬರಬೇಕು ಶಿರಸಿಗೆ.

  ಸಿದ್ದಾಪುರ, ಯಲ್ಲಾಪುರ ತಾಲೂಕುಗಳಂತೂ ಜಲಪಾತಗಳ ತವರುಮನೆಯೇ.  ಈ ಪರಿಸರದಲ್ಲಿ ಪ್ರತಿ ಇಪ್ಪತ್ತು ಮೂವತ್ತು ಕಿಲೋಮೀಟರ್‌ಗೆ ಒಂದೊಂದು ಜಲಪಾತ ಕಾಣಸಿಗುತ್ತದೆ.  ಸುತ್ತಲೂ ಹಸಿರು, ಕಾನನದ ನಡುವೆ ಪುಟ್ಟಹಳ್ಳಿ, ಹಳ್ಳಿ ಪಕ್ಕದಲ್ಲಿ ಸಾಗಿದರೆ ಜುಳು ಜುಳು ಜಲಪಾತಗಳು. ಸಮೃದ್ಧ ಪರಿಸರದ ನಡುವೆ ತುಂಬಿ ಹರಿಯುವ  ಜಲಧಾರೆಯ ವೈಭವವನ್ನು ನೋಡಲು ಜೊತೆಗೆ ಸಮಯ ಇಟ್ಟುಕೊಂಡು ಬರಬೇಕು. ಆದರೂ ಮಳೆಗಾಲದ ಚಾರಣದ ಅಪಾಯಗಳು, ನೀರಿನ ಸೆಳೆತಗಳು, ಅತಿ ಮಳೆಗೆ ಮಂಜು ಮುಸುಕಿನ ಜಲಪಾತಗಳು, ಪೇಟಿಗರಿಗೆ ಪರಿಚಯ ಇರದ ಉಂಬಳಗಳು ಹೀಗೆ ಜಲಪಾತ ನೋಡಲು ಬಂದರೆ ಎದುರಾಗುವ ಸಮಸ್ಯೆಗಳು ಒಂದೆರಡು ಅಲ್ಲ.

 ಶಿರಸಿ ಕೇಂದ್ರವಾಗಿಟ್ಟುಕೊಂಡರೆ ಕಣ್ಮನ ಸೆಳೆಯುವ ಜಲಪಾತಗಳು ಸಿಗುತ್ತವೆ. ಯಲ್ಲಾಪುರ, ಸಿದ್ದಾಪುರ ಹತ್ತಿರ. ಹೀಗಾಗಿ ಆ ಕಡೆ ಹೆಜ್ಜೆ ಇಟ್ಟರಂತೆ ಕಣ್ಣುಗಳಿಗೆ ಹಬ್ಬವೇ. ಬನ್ನಿ ಇಲ್ಲೊಂದಷ್ಟು ಜಲಪಾತಗಳು ಇವೆ. ನೋಡೋಣ. 

ಹಾಗೇ ಸಾಗಿದರೆ ಜೋಗ 
ವಿಶ್ವಖ್ಯಾತಿಯ ರಾಜಾ, ರಾಣಿ, ರೋರರ್‌, ರಾಕೆಟ್‌ ಒಳಗೊಂಡ ಜೋಗ ಶಿರಸಿಗೆ ಹತ್ತಿರವೇ ಇದೆ.  ಸಾಯೋದೊÅಳಗೆ ಒಮ್ಮೆ ನೋಡು ಜೋಗಾದ್‌ ಗುಂಡಿ ಎಂಬ ಅಣ್ಣೋರ ಹಾಡನ್ನು ಗುನಗುಗಿಸುತ್ತ ಜೋಗ ಜಲಪಾತ ಕಣ್ತುಂಬಿಕೊಳ್ಳಬಹುದು.  960 ಅಡಿಯಿಂದ ದರದರನೇ ಧುಮ್ಮಿಕ್ಕುವ ಶರಾವತಿ ನದಿ ಜಿಗಿಯುವುದು ಶಿವಮೊಗ್ಗ ಜಿಲ್ಲೆಯಲ್ಲಿ,  ಹರಿಯುವುದು ಉತ್ತರ ಕನ್ನಡದ ಸಿದ್ದಾಪುರ ತಾಲೂಕಿನ ಕಡೆಯಲ್ಲಿ. 
ಮಾರ್ಗ-  ಶಿರಸಿ, ಸಾಗರ ನಡುವೆ ಜೋಗ. 
ಊಟ, ತಿಂಡಿ,ವಸತಿ- ಶಿರಸಿ ಅಥವಾ ಸಾಗರ
ತೊಂದರೆ ಏನು? ಮಳೆ ಹೆಚ್ಚಿದ್ದರೆ ಹಿಮ ಜಾಸ್ತಿ. ಹೀಗಾಗಿ ಚಳಿ, ಮಳೆಗಾಲದಲ್ಲಿ ನೋಡಿದರೂ ನಿಜವಾದ ಸೌಂದರ್ಯ ಕಾಣುವುದಿಲ್ಲ. 

ಉಂಚಳ್ಳಿ
ಉಂಚಳ್ಳಿ ಅಂದಾಕ್ಷಣ ನೆನಪಾಗೋದು ಬೋರ್ಗರೆಯುತ್ತ ಧುಮುಕುವ ನೀರು.  ಇದಕ್ಕೆ ಸ್ಥಳೀಯ ಹೆಸರು ಕೆಪ್ಪಜೋಗ. ಈ ಜಲಪಾತದ ಬಳಿ ನಿಂತು ಎಷ್ಟೇ ಜೋರಾಗಿ ಕೂಗಿದರೂ ಕೂಗಿದರೂ ಕೇಳುವುದೇ ಇಲ್ಲ. ಹಾಗಾಗಿ, ಈ ಹೆಸರು ಬಂದಿದೆ. ಲೂಸಿಂಗ್‌ಟನ್‌ ಎಂಬ ವಿದೇಶಿ ಪ್ರವಾಸಿಗ ಈ ಜಲಪಾತದ ಬಗ್ಗೆ ಮೊದಲು (1845) ದಾಖಲಿಸಿದ ಎಂಬ ಕಾರಣಕ್ಕೆ ಲೂಸಿಂಗ್‌ಟನ್‌ ಜಲಪಾತ ಅಂತಲೂ ಕರೆಯುವುದಿದೆ. ಸಸ್ಯ ಸಿರಿವಂತಿಕೆ, ಅಪರೂಪದ ವನಸ್ಪತಿಗಳ ನಡುವೆ ಸೃಷ್ಟಿಯಾಗಿರುವ ಉಂಚಳ್ಳಿ ಜಲಪಾತದಲ್ಲಿ 166 ಮೀಟರ್‌ ಎತ್ತರದಿಂದ ನೀರು ಬೀಳುತ್ತದೆ. ಎಳೆ ಅಥವಾ ಇಳಿ ಬಿಸಿಲು ಜಲಪಾತದ ಮೇಲೆ ಬಿದ್ದರೆ ಅಲ್ಲಿ ಕಾಮನ ಬಿಲ್ಲೂ ಮೂಡುತ್ತದೆ. ಅಘನಾಶಿನಿ ಎಂಬ ಜೀವಂತ ನದಿಯ ಕೊಟ್ಟ ಕೊಡುಗೆ ಈ ಜಲಪಾತ. ಫಾಲ್ಸ್‌ ಮೇಲಗಡೆಯಿಂದಲೇ ನೋಡಬೇಕು. ಕೆಳಗಡೆ ಇಳಿಯಬಾರದು. 

 ಮಾರ್ಗ-ಶಿರಸಿಯಿಂದ 35 ಕಿ.ಮೀ.  ಶಿರಸಿಯಿಂದ ಹೆಗ್ಗರಣಿ ಮಾರ್ಗದಲ್ಲಿ ತೆರಳಬೇಕು. ಸಿದ್ದಾಪುರದಿಂದಲೂ ಬರಬಹುದು. 

ತಿಂಡಿ, ಊಟ,ವಸತಿ – ತಿಂಡಿ, ಊಟ ಶಿರಸಿಯಲ್ಲೇ. ಅಮೀನಹಳ್ಳಿ, ಹೆಗ್ಗರಣಿಯಲ್ಲಿ ತಿಂಡಿ ಸಿಗುತ್ತದೆ. 
ತೊಂದರೆ ಏನು?- ಹೆಗ್ಗರಣಿ ತನಕ ಬಸ್‌ ಇದೆ.ಆಮೇಲೆ ಅಲ್ಲಿ ಬಾಡಿಗೆಗೆ ಸಿಗುವ  ಕಾರು ಬೈಕುಗಳಲ್ಲಿ ತಲುಪಬೇಕು. ಈ ಫಾಲ್ಸ್‌ ತಲುಪಲು ಮುಕ್ಕಾಲು ಕಿ.ಮೀ ನಡೆಯಬೇಕು. 

ಬುರುಡೆ ಜಲಪಾತ
ಸಿದ್ದಾಪುರ ತಾಲೂಕಿನಲ್ಲಿ ಈ ಬುರುಡೆ ಜಲಪಾತವಿದೆ. ಇದಕ್ಕೆ  ಯಾನೆ ಇಳಿಮನೆ ಫಾಲ್ಸ್‌ ಅನ್ನೋ ಹೆಸರೂ ಇದೆ. ಎರಡು ಹಂತದಲ್ಲಿ ಜಿಗಿಯುವ ಜಲಪಾತ ಇದು. ಪ್ರಥಮ ಹಂತದಲ್ಲಿ 60 ಮೀಟರ್‌, ಎರಡನೇ ಹಂತದಲ್ಲಿ 48 ಮೀಟರ್‌. ಮಳೆ ಬಂದ ಮರುದಿನ  ಇಲ್ಲಿಗೆ ಬಂದರೆ ಇದರ ಸೌಂದರ್ಯ ಮತ್ತಷ್ಟು ಹೆಚ್ಚಿರುತ್ತದೆ. 
 ಮಾರ್ಗ- ಶಿರಸಿಯಿಂದ ಸಿದ್ದಾಪುರ, ಕುಮಟ ರಸ್ತೆಯಲ್ಲಿ ಸಾಗಿದರೆ ಕ್ಯಾದಗಿ ಅನ್ನೋ ಊರು ಸಿಗುತ್ತದೆ. ಅಲ್ಲಿಂದ ಜಲಪಾತಕ್ಕೆ ತೆರಳಬೇಕು. 

ತಿಂಡಿ, ಊಟ,ವಸತಿ  
ಸಿದ್ದಾಪುರದಲ್ಲಿ ಊಟ, ತಿಂಡಿ ಸಿಗುತ್ತದೆ. ಕ್ಯಾದಗಿಯಲ್ಲಿ  ತಿಂಡಿ ಸಿಗುತ್ತದೆ. 

ತೊಂದರೆಗಳೇನು? 
ಮಳೆಗಾಲದಲ್ಲಿ ಹೋಗಲು ಆಗೋಲ್ಲ. ಸಿದ್ದಾಪುರದಿಂದ ಕ್ಯಾದಿಗಿ ತನಕ ಬಸ್‌ ಇದೆ. ದಿನಕ್ಕೆ ಎರಡು ಬಸ್‌. ಕ್ಯಾದಗಿಯಿಂದ ನಾಲ್ಕು  ಕಿ.ಮೀ. ಇಳಿಮನೆಯಿಂದ ಮುಂದೆ ಎರಡು.ಕಿ.ಮೀ. ವಾಹನದಲ್ಲಿ ಹೋಗಬೇಕು.

ಶಿವಗಂಗಾ
ಶಾಲ್ಮಲಾ ನದಿಯಿಂದಾಗಿ ಹುಟ್ಟಿದ ಫಾಲ್ಸ್‌ ಇದು. 74 ಮೀಟರ್‌ ಎತ್ತರದಿಂದ ಧುಮುಕುತ್ತದೆ. ಜಡ್ಡಿಗದ್ದೆ ಪಕ್ಕದಲ್ಲಿ ಗಣೇಶಪಾಲ್‌ ಅನ್ನೋ ಊರಿದೆ. ಅದರ ಹತ್ತಿರವೇ ಈ ಫಾಲ್ಸ್‌ ಇದೆ. ಮೈ ಮೇಲೆ ಎಚ್ಚರವಿಲ್ಲದೆ ವರ್ತಿಸುವವರು, ಮೋಜು ಮಸ್ತಿಗಾಗಿ ಹೋದವರಲ್ಲಿ ಅನೇಕ ಅವಘಡಗಳೂ ಆಗಿವೆ. ಫಾಲ್ಸ್‌ನ ಸೌಂದರ್ಯ ಸವಿಯಬಹುದು. ಆದರೆ ಅಲ್ಲಿ ಹೋಗಿ ಈಜುವುದು, ನೀರಲ್ಲಿ ಸ್ನಾನ ಮಾಡುವುದು ನಿಷಿದ್ಧ. 

ಮಾರ್ಗ-  ಶಿರಸಿಯಿಂದ (36ಕಿ.ಮೀ.)ಗಣೇಶ್‌ ಪಾಲ್‌ ರಸ್ತೆಯಲ್ಲಿ ಸಾಗಿದರೆ ಜಡ್ಡಿಗದ್ದೆ ಸಿಗುತ್ತದೆ. ಅಲ್ಲಿ ಈ ಫಾಲ್ಸ್‌ ಸಿಗುತ್ತದೆ. 
ತಿಂಡಿ, ಊಟ,ವಸತಿ – ಶಿರಸಿ, ಜಡ್ಡಿಗದ್ದೆ ತಿಂಡಿ ವ್ಯವಸ್ಥೆ ಇದೆ. 
ತೊಂದರೆ ಏನು?- ಫಾಲ್ಸ್‌ನ ಪಾದದ ತನಕ (ಕೆಳಗಡೆ) ಹೋದರೆ ಪ್ರಾಣಾಪಾಯ. ವರ್ಷಕ್ಕೆ ಮೂರು ನಾಲ್ಕು ಮಂದಿ ಪ್ರಮಾಣ ಕಳೆದುಕೊಂಡ ಘಟನೆಗಳು ಸಂಭವಿಸುತ್ತಲೇ ಇವೆ. ಉಂಬಳ ಕಾಟ ಇದೆ. 

ಹಸೆ ಹಳ್ಳ
ಮತ್ತೀಘಟ್ಟ ಸಮೀಪ ಹಸೆಹಳ್ಳ ಅನ್ನೋ ಜಲಪಾತವಿದೆ. ಸುಮಾರು 65 ಮೀಟರ್‌ ಎತ್ತರದಿಂದ ನೀರು ಧಾರೆಯಾಗಿ ಬೀಳುತ್ತದೆ. ಸಣ್ಣ ನದಿ ಹಸೆಹಳ್ಳ ಸೃಷ್ಟಿಸಿದ ಜಲಪಾತ ಇದಾಗಿರುವುದರಿಂದ ಜಲಪಾತವನ್ನು ಹಸೇಹಳ್ಳ ಜಲಪಾತ ಎಂದೇ ಕರೆಯಲಾಗಿದೆ. ಮಳೆಗಾಲದಲ್ಲಿ ವೀಕ್ಷಣೆ ಕಷ್ಟ. ಉಂಬಳಗಳ ಕಾಟವೂ ಇದೆ. ಅಕ್ಟೋಬರ್‌ನಿಂದ ಮಾರ್ಚ್‌ ಜಲಪಾತ ವೀಕ್ಷಣೆಗೆ ಸಕಾಲ. 
ಮಾರ್ಗ-ಶಿರಸಿಯಿಂದ ಮತ್ತಿಘಟ್ಟ. ಅಲ್ಲಿಂದ ಎರಡು ಕಿ.ಮೀ ಒಳಗೆ ನಡೆಯಬೇಕು. 
ತಿಂಡಿ, ಊಟ,ವಸತಿ -ದೇವನಹಳ್ಳಿಯಲ್ಲಿ ಊಟ, ತಿಂಡಿ ಸಿಗುತ್ತದೆ. ವಸತಿ ಶಿರಸಿಗೆ ಬರಬೇಕು. 
ತೊಂದರೆ ಏನು? – ಜಲಪಾತದ ತನಕ ನೇರವಾಗಿ ವಾಹನ ಸೌಲಭ್ಯಗಳಿಲ್ಲ. ಉಂಬಳದ ಕಾಟವಿದೆ. 

ಬೆಣ್ಣೆ ಹೊಳೆ
ಬಂಡಲ ಸಮೀಪದ ಕಸಗೆ ಬಳಿ ಬೆಣ್ಣೆಹೊಳೆ ಜಲಪಾತವಿದೆ.  ಇಲ್ಲಿ ಸುಮಾರು 60 ಮೀಟರ್‌ ಎತ್ತರದಿಂದ ನೀರು ಬೀಳುತ್ತದೆ. ಹಾಲಿನ ನೊರೆಯಂತೆ ಹರಿಯುವ ನೀರನ್ನು ನೋಡುವುದೇ ಆನಂದ. ಹೀಗೆ ದುಮುಕುವಾಗ  ಬೆಣ್ಣೆ ಮುದ್ದೆ ಬಿದ್ದಂತೆ ಭಾಸವಾಗುತ್ತದೆ.  ಈ ಕಾರಣಕ್ಕೇ ಬೆಣ್ಣೆಫಾಲ್ಸ್‌ ಅನ್ನೋ ಹೆಸರು ಬಂದಿದೆ. 
ಮಾರ್ಗ-ಶಿರಸಿಯಿಂದ ಕುಮಟ ಮಾರ್ಗದಲ್ಲಿ ಹೋದರೆ ಕಸಗೆ ಕ್ರಾಸ್‌ಸಿಗುತ್ತದೆ. ಅಲ್ಲಿ ಎಡಕ್ಕೆ ತಿರುಗಿ ಮೂರು ಕಿ.ಮೀ ನಡೆಯಬೇಕು  


ತಿಂಡಿ, ಊಟ,ವಸತಿ – ಶಿರಸಿಯೇ ಮೂಲ. 
ತೊಂದರೆಗಳೇನು?- ಈ ಜಲಪಾತ ನೋಡಲು ಸ್ಥಳೀಯ ಮಾರ್ಗ ದರ್ಶಕರು ಅಗತ್ಯ. ಇಲ್ಲವಾದರೆ ದಾರಿ ತಪ್ಪುವ ಸಾಧ್ಯತೆ ಇರುತ್ತದೆ.  ಉಂಬಳಗಳ ಕಾಟ ಇದೆ. ಮಳೆಗಾಲದಲ್ಲಿ ವೀಕ್ಷಣೆ ಕಷ್ಟ. ಮಳೆಗಾಲ ಮುಗಿದ ನಂತರ ಪ್ರಾಕೃತಿಕ ಸೊಬಗೇ ಭಿನ್ನ. 

 ವಿಭೂತಿ
 ಶಿರಸಿಗೆ ಸಮೀಪದಲ್ಲಿಯೇ ಇರುವ ಪ್ರೇಕ್ಷಣೀಯ ಸ್ಥಳ-ಯಾಣ. ಈ ಜಗತ್‌ ಪ್ರಸಿದ್ಧ ಯಾಣಕ್ಕೆ ಹೋದರೆ, ವಿಭೂತಿ ಜಲಪಾತ ನೋಡಲು ಮರೆಯಬೇಡಿ. ಇಲ್ಲಿ 200 ಮೀಟರ್‌ ಎತ್ತರದಿಂದ ಎರಡು ಹಂತದಲ್ಲಿ ನೀರು ಬೀಳುತ್ತದೆ. ಜಲಪಾತದ ಮುಂದೆ ನಿಂತರೆ ಕುಣಿಯುತ್ತ ಜಿಗಿಯುತ್ತ ವಯ್ನಾರವಾಗಿ ಬೀಳುವ ನೀರ ಸೊಬಗು ಮೈಮನವನ್ನು ಸೊರೆಗೊಳಿಸುತ್ತದೆ. ಅದನ್ನು ನೋಡುವುದೇ ಒಂಥರಾ ಖುಷಿ. ಇದಕ್ಕೆ ಮಾಬಗೆ ಜಲಪಾತ ಎಂದೂ ಹೆಸರಿದೆ. 
ಮಾರ್ಗ-ಯಾಣದಿಂದ 8 ಕಿ.ಮೀ.


ತಿಂಡಿ, ಊಟ,ವಸತಿ – ಊಟಕ್ಕೆ ದೇವನಹಳ್ಳಿ, ವಸತಿಗೆ ಶಿರಸಿ
ತೊಂದರೆಗಳೇನು?-ಮುಕ್ಕಾಲು ಕಿ.ಮೀ ನಡೆಯಬೇಕು. ಉಂಬಳಗಳ ಕಾಟ ಇದೆ. 

ಮುರೇಗಾರ ಜಲಪಾತ 
ಶಿರಸಿಯಿಂದ 20ಕಿ.ಮೀ. ದೂರದಲ್ಲಿ ಇರುವ ಊರು ಮುರೇಗಾರ. ಅದೇ ಸ್ಥಳದಲ್ಲಿ ಜಲಪಾತ ಇರುವುದರಿಂದ ಈ ಊರಿನ ಹೆಸರನ್ನೇ ಜಲಪಾತಕ್ಕೆ ಇಡಲಾಗಿದೆ.    ಸೆಪ್ಟೆಂಬರ್‌ ನಂತರ ಈ ಜಲಪಾತ ವೀಕ್ಷಣೆಗೆ ಸಕಾಲ. ಪಾಂಡವರು ಅಜಾnತ ವಾಸದ ಕಾಲದ ಸಂದರ್ಭದಲ್ಲಿ ಈ ಪ್ರದೇಶದಲ್ಲೂ ಇದ್ದರು ಎಂಬುದಕ್ಕೆ ಇಲ್ಲಿ ಕುರುಹುಗಳಿವೆ ಎನ್ನಲಾಗುತ್ತದೆ. ಶಿವರಾತ್ರಿಗೆ ಬಹಳ ಭಕ್ತಾದಿಗಳು, ಪ್ರವಾಸಿಗರು ಬರುತ್ತಾರೆ. 


ಮಾರ್ಗ-ಶಿರಸಿಯಿಂದ ಸಾಲಕಣಿಗೆ ತೆರಳುವ ಮಾರ್ಗದಲ್ಲಿ ಮುರೇಗಾರ ಊರಿದೆ. ಅಲ್ಲೇ ಜಲಪಾತ. 
ಊಟ, ತಿಂಡಿ ವಸತಿ- ಊಟ ತಿಂಡಿ ಶಿರಸಿ. 
 ತೊಂದರೆಗಳೇನು? ಸ್ಥಳೀಯ ಮಾರ್ಗದರ್ಶಕರು. ಜೊತೆಗಿದ್ದರೆ ಒಳ್ಳೆಯದು. ಸಾಲಕಣಿಯಿಂದ ಮುರೇಗಾರ ದಾರಿ ಚೆನ್ನಾಗಿಲ್ಲ. 

ಸಾತೊಡ್ಡಿ ಜಲಪಾತ 
ಕರ್ನಾಟಕದ ನಯಾಗಾರ ಅಂದರೆ ಈ ಸಾತೊಡ್ಡಿ ಜಲಪಾತ. ಯಲ್ಲಾಪುರ ತಾಲೂಕಿನಲ್ಲಿದೆ. ಕಾಳಿ ನದಿಯು ಸೃಷ್ಟಿಸಿದ ದಬ್ಬೆಸಾಲ ಜಲಪಾತವೂ ಇದೆ. 32 ಮೀಟರ್‌ ಎತ್ತರದಿಂದ ಅಗಲವಾಗಿ ಬೀಳುವ ಜಲಧಾರೆಯನ್ನು ನೋಡುವುದೇ ಅಂದ. ಶಿರಸಿಯಿಂದ ಯಲ್ಲಾಪುರ ಹಾಗೂ ಸಾತೊಡ್ಡಿಗೆ ತೆರಳಲು ಎರಡು ಗಂಟೆ ಕನಿಷ್ಠ ಬೇಕು. ಶಿರಸಿ-ಯಲ್ಲಾಪುರಕ್ಕೆ 55, ಯಲ್ಲಾಪುರದಿಂದ ಗಣೇಶಗುಡಿ ಸಾತೊಡ್ಡಿಗೆ 30ಕಿ.ಮೀ.
ಮಾರ್ಗ-ಯಲ್ಲಾಪುರದಿಂದ ಗಣೇಶಗುಡಿ ಮೂಲಕ ಸಾತೊಡ್ಡಿಗೆ 30.ಕಿ.ಮೀ. 


 
ಊಟ, ತಿಂಡಿ ವಸತಿ- ಯಲ್ಲಾಪುರ
 ತೊಂದರೆ ಏನು- ಕೆಳಗೆ ಇಳಿಯಬಾರದು. ಹಳ್ಳಗಳಿವೆ. ದಂಡೆ ಇದೆ. ನಡೆಯಬೇಕು. 

ಮಾಗೋಡು
ಜಲಪಾತ ನೋಡಬೇಕು, ಹಾಲೆ°ರೆಯಂಥ ನೀರು ಬೀಳುವುದನ್ನು ನೋಡಿ ಸಂಭ್ರಮಿಸಬೇಕು ಎಂದು ಹೋದವರಿಗೆ ಮಾಗೋಡು ಫಾಲ್ಸ್‌ ನಿರಾಸೆ ಮಾಡುವುದಿಲ್ಲ. ಏಕೆಂದರೆ ನೀವು ವರ್ಷದ ಯಾವುದೇ ತಿಂಗಳು ಬಂದರೂ ಇಲ್ಲಿ ನೀರು ಬತ್ತಿರುವುದಿಲ್ಲ. ಸದಾ ಕಾಲ ಧುಮುಕುತ್ತಿರುತ್ತದೆ. ಸುಮಾರು  650 ಮೀಟರ್‌ ಎತ್ತರದಿಂದ ನೀರು ಬೀಳುತ್ತದೆ.  ಗುಡ್ಡದ ನಡುವೆ ಜಲಪಾತವಿರುವುದರಿಂದ ರಮ್ಯ ನೋಟ. 

 ಮಾರ್ಗ- ಶಿರಸಿ ಯಲ್ಲಾಪುರ ಮಾರ್ಗದಲ್ಲಿ ಮಾಗೋಡು ಕ್ರಾಸ್‌ ಇದೆ. ಅಲ್ಲಿಂದ ಎಡಕ್ಕೆ ತಿರುಗಿದರೆ ಜಲಪಾತ ಸಿಗುತ್ತದೆ. ಜಲಪಾತದ ತನಕ ವಾಹನದಲ್ಲಿಯೇ ಹೋಗಬಹುದು.  
 ಊಟ, ತಿಂಡಿ ವಸತಿ- ಯಲ್ಲಾಪುರ
 ತೊಂದರೆ ಏನು- ಕೆಳಗೆ ಇಳೆಯಬಾರದು. ಹಳ್ಳಗಳಿವೆ. ದಂಡೆ ಇದೆ. ನಡೆಯಬೇಕು. 

ಶಿರ್ಲೆ ಜಲಪಾತ 
ಶಿರ್ಲೆ ಜಲಪಾತ ಕೂಡ ಯಲ್ಲಾಪುರ ತಾಲೂಕಿನ ಕೊಡುಗೆ. ಈ ಜಲಪಾತದಲ್ಲಿ 70 ಅಡಿ ಎತ್ತರದಿಂದ ನೀರು ಬೀಳುತ್ತದೆ. ದಿನದ ಹೆಚ್ಚಿನ ಸಂದರ್ಭ ಮಳೆ ಸುರಿಯುತ್ತಿರುತ್ತದೆ. ಹೀಗಾಗಿ ಮಳೆಗಾಲ ಈ ಜಲಪಾತ ನೋಡಲು ಸೂಕ್ತವಲ್ಲ.  ನಂತರ ರಮ್ಯ ದೃಶ್ಯವನ್ನು ನೋಡಬಹುದು. 
ಮಾರ್ಗ- ಯಲ್ಲಾಪುರದಿಂದ ಅಂಕೋಲ ಮಾರ್ಗದಲ್ಲಿ 12.ಕಿಮೀ ಸವೆಸಿದರೆ ಶಿರ್ಲೆ ಕ್ಸಾಸ್‌ ಸಿಗುತ್ತದೆ. ಅಲ್ಲಿಂದ ಒಂದು ಕಿ.ಮೀ ನಡೆದರೆ ಜಲಪಾತ. 
ಊಟ, ತಿಂಡಿ, ವಸತಿ- ಯಲ್ಲಾಪುರ
ತೊಂದರೆ ಏನು- ಮಳೆಗಾಲದಲ್ಲಿ ನೋಡಲಿಲ್ಲ ಆಗಲ್ಲ. 

ಪ್ರವಾಸಿಗರು ಏನು ಮಾಡಬೇಕು?
 
* ಜಲಪಾತಗಳ ಬಳಿ ಊಟಕ್ಕೆ ತಿಂಡಿಗೆ ವ್ಯವಸ್ಥೆ ಮಾಡಿಕೊಳ್ಳಿ, ತ್ಯಾಜ್ಯ ಬಿಸಾಕಬೇಡಿ
* ಮದ್ಯ, ಮೋಜು ಮಸ್ತಿ ಮಾಡದೇ ಪರಿಸರ ರಕ್ಷಿ$ಸಿ
* ಸುತ್ತಲೂ ಅಪರೂಪದ ವನಸ್ಪತಿಗಳಿವೆ, ಪ್ರಾಣಿ ಪಕ್ಷಿ$ ಸಂಕುಲಗಳಿವೆ, ಕಿರುಚಾಡಬೇಡಿ
* ಅನೈತಿಕ ಚಟುವಟಿಕೆ ಕಂಡರೆ ಪೊಲೀಸರಿಗೆ ತಿಳಿಸಿ
* ಜಲಪಾತಗಳು ಮಳೆಗಾಲದಲ್ಲಿ ಅಪಾಯಕಾರಿಯೂ ಹೌದು. ಹಾಗಾಗಿ ಪ್ರತಿ ಕ್ಷಣ ಎಚ್ಚರದಿಂದಿರಿ. 
* ಜಲಪಾತಗಳು ದಾರಿಯಲ್ಲಿ ಹೆಜ್ಜೆ ಹೆಜ್ಜೆಗೂ ಜಾರುತ್ತದೆ. ಹುಷಾರಾಗಿ ಹೆಜ್ಜೆ ಇಡಿ. 
* ಕೆಲವು ಜಲಪಾತಗಳಿಗೆ ಸೆಪ್ಟೆಂಬರ್‌ ನಂತರವೇ ಬನ್ನಿ
* ಉಂಬಳು ಕಾಟ, ಕೆಲವೆಡೆ ಹಾವುಗಳ ಕಾಟವೂ ಇದೆ.  

ರಾಘವೇಂದ್ರ ಬೆಟ್ಟಕೊಪ್ಪ

ಫೋಟೊಗಳು: ಗೋಪಾಲ ಬಾರಕೂರ, ಶ್ರೀಧರ ಹೆಬ್ಟಾರಕಂಠ

ಟಾಪ್ ನ್ಯೂಸ್

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

IND VS PAK

Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

1-aaa

PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!

ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.