ಸೋಮನಾಥೇಶ್ವರ ಗುಹಾಲಯ
Team Udayavani, Feb 2, 2019, 12:55 AM IST
ಈ ದೇವಾಲಯದಲ್ಲಿ ನಿಸರ್ಗ ನಿರ್ಮಿತ ಗುಹೆ ಇದೆ. ಒಳಭಾಗ ನೆಲ್ಲಿಕಾಯಿಯ ಆಕಾರದಲ್ಲಿ ಇದ್ದು, ಸದಾ ನೀರು ಚಿಮ್ಮುತ್ತಿರುತ್ತದೆ. ಹೀಗಾಗಿ ನೆಲ್ಲಿತೀರ್ಥ ಅನ್ನೋ ಹೆಸರು ಕೂಡ ಬಂದಿದೆ. ದ್ವಾರದಿಂದ ನೂರು ಮೀಟರ್‌ನಷ್ಟು ದೂರ ತೆವಳಿಕೊಂಡು ಹೋಗಿ ದೇವರ ದರ್ಶನ ಮಾಡಬೇಕು.
ಶಿವನಿಗೆ ಮುಡಿಪಾದ ಸಾಕಷ್ಟು ದೇವಾಲಯಗಳು ಕರ್ನಾಟಕದಲ್ಲಿವೆ. ಕೆಲವೊಂದು ದೇವಾಲಯಗಳಲ್ಲಿ ಶಿವ ಮೂರ್ತಿ ಸ್ವರೂಪಿಯಾಗಿದ್ದರೆ ಇನ್ನು ಕೆಲವು ದೇವಾಲಯಗಳಲ್ಲಿ ಲಿಂಗರೂಪಿಯಾಗಿ ನೆಲೆಸಿದ್ದಾನೆ. ಮಂಗಳೂರಿನಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಪುಣ್ಯ ಕ್ಷೇತ್ರವೇ ನೆಲ್ಲಿತೀರ್ಥ ಸೋಮನಾಥೇಶ್ವರ ದೇವಾಲಯ. ಇದು ಗುಹಾಂತರ ದೇವಾಲಯವಾಗಿದೆ. ಶಿವನ ಜಾಗ್ರತ ಸ್ಥಾನ ಎಂಬ ನಂಬಿಕೆ ಚಾಲ್ತಿಯಲ್ಲಿದೆ. ಅತ್ಯಂತ ಪ್ರಾಚೀನವಾದ ದೇವಾಲಯ ಇದಾಗಿದ್ದು ಸುಮಾರು 1497 ರಲ್ಲಿ ನಿರ್ಮಾಣವಾಗಿದೆ ಎಂಬ ಉಲ್ಲೇಖವಿದೆ.
ಇದು ನೈಸರ್ಗಿಕವಾದ ಗುಹೆ. ಒಳಭಾಗದಲ್ಲಿ ಸದಾ ನೆಲ್ಲಿಕಾಯಿ ಆಕಾರದಲ್ಲಿ ನೀರು ಚಿಮ್ಮತ್ತಿರುತ್ತದೆ. ಹಾಗಾಗಿಯೇ, ಈ ದೇವಾಲಯಕ್ಕೆ ನೆಲ್ಲಿತೀರ್ಥ ಎಂಬ ಹೆಸರು ಬಂದಿದೆ. ಪ್ರವೇಶ ದ್ವಾರದಿಂದ ಸುಮಾರು ನೂರು ಮೀಟರುಗಳಷ್ಟು ದೂರವನ್ನು ತೆವಳಿಕೊಂಡು ಕೈದೀಪದೊಂದಿಗೆ ದೇವಸ್ಥಾನದ ಸಿಬ್ಬಂದಿಯ ಮಾರ್ಗದರ್ಶನದಲ್ಲಿ ಹೋದರೆ ಮಾತ್ರ ಗುಹೆಯೊಳಗೆ ಪ್ರವೇಶಿಸಲು ಸಾಧ್ಯ. ಇನ್ನು ದೇವಾಲಯದ ಬಲಕ್ಕೆ ಒಂದು ಪುಟ್ಟದಾದ ಗುಹೆ ಇದ್ದು, ಇದನ್ನು ಜಾಬಾಲಿ ಮಹರ್ಷಿಗಳು ತಪಸ್ಸು ಮಾಡಿದ ತಾಣ ಎನ್ನಲಾಗುತ್ತಿದೆ. ದೀಪದ ಬೆಳಕಿನಲ್ಲಿ ಗುಹಾಲಯದ ಒಳ ಮೇಲ್ಭಾಗವನ್ನು ಗಮನಿಸಿದರೆ ನೈಸರ್ಗಿಕ ಚಿತ್ತಾರಗಳು ಕಾಣುತ್ತವೆ. ಗುಹೆಯ ಒಳಗೆ ಹೋಗುವ ದಾರಿಯು ಸ್ವಲ್ಪ ಇಕ್ಕಟ್ಟಾಗಿದ್ದರೂ, ತೀರ್ಥ ಸರೋವರ ಹಾಗೂ ಶಿವಲಿಂಗ ಇರುವ ಜಾಗದಲ್ಲಿ ನೂರಾರು ಜನರು ಒಟ್ಟಿಗೆ ನಿಲ್ಲುವಷ್ಟು ವಿಶಾಲ ಆವರಣವಿದೆ. ಗುಹೆಯ ಒಳಗೆ ಇರುವ ಶಿವಲಿಂಗವನ್ನು ಸುತ್ತುವರಿದ ಎರಡು ಜಲಧಾರೆಗಳು ಧುಮುಕುವ ತೀರ್ಥ ಸರೋವರವಿದೆ. ತೀರ್ಥಸ್ನಾನ ಮಾಡಿ ನಿಮ್ಮ ಕೈಯ್ನಾರೆ ಶಿವಲಿಂಗಕ್ಕೆ ಅಭಿಷೇಕ, ಪೂಜೆ ಮಾಡಬಹುದು. ಸರೋವರದ ಸುತ್ತಮುತ್ತಲೆÇÉಾ ಕೆಂಪಗಿನ ಮಣ್ಣಿನ ರಾಶಿ ಇದೆ. ಇಲ್ಲಿ ಬರುವವರಿಗೆಲ್ಲ ಇದೇ ಪ್ರಸಾದ. ಚರ್ಮ ವ್ಯಾಧಿಗಳಿಂದ ಬಳಲುತ್ತಿರುವವರಿಗೆ ಈ ಮಣ್ಣು ದಿವ್ಯ ಔಷಧವಂತೆ. ದೇವಸ್ಥಾನದಲ್ಲಿ ತಮ್ಮ ಚರ್ಮವ್ಯಾಧಿ ತೊಂದರೆಗಳ ಬಗ್ಗೆ ತಿಳಿಸಿ, ಮಣ್ಣಿನ ಪ್ರಸಾದ ಪಡೆಯಬಹುದಾಗಿದೆ. ಈ ಮಣ್ಣನ್ನು ಹಚ್ಚಿಕೊಂಡರೆ ಚರ್ಮವ್ಯಾದಿ ಕಡಿಮೆಯಾಗುತ್ತದೆ ಎಂಬ ನಂಬಿಕೆ ಭಕ್ತರದು.
ಈ ದೇವಾಲಯದ ಪ್ರಮುಖ ಆರಾಧ್ಯ ದೈವವೆಂದರೆ ಸೋಮನಾಥೇಶ್ವರ. ಇಲ್ಲಿ ಮಹಾಗಣಪತಿಯನ್ನೂ ಪೂಜಿಸಲಾಗುತ್ತಿದೆ. ಈ ಕ್ಷೇತ್ರದ ಸ್ಥಾಪನೆಗೆ ಕಾರಣಕರ್ತರಾದ ಮಹರ್ಷಿ ಜಾಬಾಲಿಯ ಬೃಂದಾವನವನ್ನು ಪ್ರತಿಷ್ಠಾಪಿಸಲಾಗಿದೆ. ಸೋಮನಾಥೇಶ್ವರನ ಲಿಂಗವು ಸಂಪೂರ್ಣವಾಗಿ ಸಾಲಿಗ್ರಾಮ ಶಿಲೆಯಿಂದಲೇ ನಿರ್ಮಾಣವಾಗಿದೆ. ಆವರಣದಲ್ಲಿ ಚಾಮುಂಡಿ ಹಾಗೂ ಪರಿವಾರ ದೇವರುಗಳ ಗುಡಿಗಳನ್ನೂ ನಿರ್ಮಿಸಲಾಗಿದೆ.
ದೇವಾಲಯದ ಹೊರಭಾಗದಲ್ಲಿರುವ ನಾಗಪ್ಪ ಕೊಳದಲ್ಲಿ ಸ್ನಾನ ಮಾಡಿಕೊಂಡು ಒ¨ªೆ ಬಟ್ಟೆಯಲ್ಲಿ ದೇಗುಲ ಪ್ರವೇಶಿಸುವ ವಾಡಿಕೆ ಭಕ್ತರಲ್ಲಿ ಇದೆ. ವರ್ಷದ ಆರು ತಿಂಗಳು ಮಾತ್ರ ಈ ಗುಹಾಲಯ ಪ್ರವೇಶಿಸಲು ಅವಕಾಶವಿದೆ. ಡಿಸೆಂಬರ್ ತಿಂಗಳಲ್ಲಿ ವಾರ್ಷಿಕ ಉತ್ಸವವನ್ನು ನಡೆಸಲಾಗುತ್ತಿದೆ. ದೇವಸ್ಥಾನದಲ್ಲಿ ಶಿವರಾತ್ರಿ, ನವರಾತ್ರಿ, ಕಾರ್ತಿಕ ಮಾಸದಲ್ಲಿ ದೀಪಾರಾಧನೆ ಹೀಗೆ ಸಾಕಷ್ಟು ವಿಶೇಷ ದಿನಗಳಲ್ಲಿ ಪೂಜೆಗಳು ನಡೆಯುತ್ತವೆ.
ತಲುಪುವ ಮಾರ್ಗ
ಮಂಗಳೂರಿನಿಂದ ಸುಮಾರು 30 ಕಿ.ಮೀ ಅಂತರದಲ್ಲಿರುವ ಈ ಕ್ಷೇತ್ರಕ್ಕೆ ಸಾಕಷ್ಟು ಬಸ್‌ಗಳ ಸೌಕರ್ಯವಿದೆ. ವಿಮಾನದಲ್ಲಿ ಬರುವವರಿಗೆ ಹತ್ತಿರದ ವಿಮಾನ ನಿಲ್ದಾಣ ಬಜ್ಪೆ. ಇಲ್ಲಿಂದ ಕೇವಲ 10 ಕಿ.ಮೀ ಹಾಗೂ ಕಟೀಲಿನಿಂದ ಸುಮಾರು 6 ಕಿ.ುà ಅಂತರದಲ್ಲಿದೆ.
ಆಶಾ ಎಸ್. ಕುಲಕರ್ಣಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.