ಸಂಧಿಕಾಲದ ಸಂಕಷ್ಟದಲ್ಲಿ ದ.ಆಫ್ರಿಕಾ ಕ್ರಿಕೆಟ್‌


Team Udayavani, Aug 17, 2019, 5:00 AM IST

p-6

-ದಿಗ್ಗಜ ಕ್ರಿಕೆಟಿಗರ ನಿವೃತ್ತಿಯಿಂದ ಪರದಾಡುತ್ತಿದೆ ತಂಡ, ಶುರುವಾಗಿದೆ ಗೆಲುವಿಗಾಗಿ ಚಡಪಡಿಕೆ

ಸಂಧಿಕಾಲ ಅಂತ ಒಂದಿರುತ್ತದೆ. ಅದನ್ನು ನಿರ್ಣಾಯಕ ಹಂತ ಅಂತಲೂ ಕರೆಯಬಹುದು. ಭಾರತೀಯರು ಸಂಧ್ಯಾವಂದನೆ ಮಾಡುವಾಗ ಬೆಳಗ್ಗೆ ಸೂರ್ಯೋದಯ, ನಡು ಮಧ್ಯಾಹ್ನ, ಸಂಜೆ ಸೂರ್ಯಾಸ್ತದ ವೇಳೆಯ ನಿಖರ ಸಮಯವನ್ನು ಗಮನಿಸುತ್ತಾರೆ. ಕಾರಣ ಇದು ಪರಿಸರದಲ್ಲಿ ಬೆಳಕು ವ್ಯತ್ಯಾಸವಾಗುವ ಪರ್ವಕಾಲ. ಹಾಗೆಯೇ ಒಂದು ಜಗತ್ತಿಗೆ, ಒಂದು ದೇಶಕ್ಕೆ, ಒಬ್ಬ ವ್ಯಕ್ತಿಗೂ ಸಂಧಿಕಾಲವಿರುತ್ತದೆ. ಇವರೆಲ್ಲರಿಗೂ ನಿರ್ಣಾಯಕ ಕಾಲಘಟ್ಟವಿರುವಾಗ ಅದು ಒಂದು ಕ್ರಿಕೆಟ್‌ ತಂಡಕ್ಕೂ ಇರುವುದು ಸಹಜ ತಾನೇ? ದ.ಆಫ್ರಿಕಾ ಕ್ರಿಕೆಟ್‌ ತಂಡ ಇಂತಹ ನಿರ್ಣಾಯಕ ಕಾಲಘಟ್ಟಕ್ಕೆ ಸಿಲುಕಿಕೊಂಡು ಒದ್ದಾಡುತ್ತಿದೆ. ಇದಕ್ಕೆ ಕಾರಣ ದ.ಆಫ್ರಿಕಾ ಕಂಡ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಎಬಿ ಡಿವಿಲಿಯರ್ಸ್‌, ಹಾಶಿಮ್‌ ಆಮ್ಲ ಅವರ ನಿವೃತ್ತಿ ಹಾಗೂ ಇನ್ನೊಬ್ಬ ಶ್ರೇಷ್ಠ ಆಟಗಾರ, ವೇಗಿ ಡೇಲ್‌ಸ್ಟೇನ್‌ ನಿವೃತ್ತಿಯ ಅಂಚಿಗೆ ತಲುಪಿರುವುದು (ಟೆಸ್ಟ್‌ಗೆ ಈಗಾಗಲೇ ನಿವೃತ್ತಿ ಹೇಳಿದ್ದಾರೆ).

ಎಬಿಡಿ ನಿವೃತ್ತಿ ಘೋಷಿಸುವ ಹಂತದಲ್ಲೇ ದ.ಆಫ್ರಿಕಾ ತಂಡ ದುರ್ಬಲವಾಗಿತ್ತು. ಅವರ ನಿವೃತ್ತಿಯ ಪರಿಣಾಮ ಆ ತಂಡ ಸತತವಾಗಿ ಸೋಲತೊಡಗಿತು. ಈ ಬಾರಿ ಇಂಗ್ಲೆಂಡ್‌ನ‌ಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲೂ ಅತ್ಯಂತ ಹೀನಾಯ ಪ್ರದರ್ಶನ ನೀಡಿದ ದ.ಆಫ್ರಿಕಾ ತಂಡ ಲೀಗ್‌ ಹಂತದಲ್ಲೇ ಕೂಟದಿಂದ ಹೊರಬಿತ್ತು.

ಒಂದೇ ಕಾಲಘಟ್ಟದಲ್ಲಿ ದ.ಆಫ್ರಿಕಾ ತಂಡವನ್ನು ಪ್ರವೇಶ ಮಾಡಿ, ದೀರ್ಘ‌ಕಾಲ ತಂಡವನ್ನು ಆವರಿಸಿಕೊಂಡಿದ್ದ ಎಬಿ ಡಿವಿಲಿಯರ್ಸ್‌, ಹಾಶಿಮ್‌ ಆಮ್ಲ, ಡ್ಲೆಲ್‌ ಸ್ಟೇನ್‌ ಹೆಚ್ಚು ಕಡಿಮೆ ಒಮ್ಮೆಲೆ ನಿವೃತ್ತಿಯಾಗಿದ್ದಾರೆ. 2018ರಲ್ಲಿ ಎಬಿಡಿ ನಿವೃತ್ತಿಯಾದರು. ಈ ವರ್ಷ ಆಮ್ಲ ಹೊರಹೋದರು. ಸ್ಟೇನ್‌ ಟೆಸ್ಟ್‌ಗೆ ನಿವೃತ್ತಿ ಹೇಳಿದ್ದಾರೆ, ಉಳಿದೆರಡು ಮಾದರಿಗೆ ನಿವೃತ್ತಿ ಹೇಳುವುದು ಬಹಳ ದೂರವೇನಿಲ್ಲ. ಈಗ ತಂಡ ಅತ್ಯಂತ ಸಂಕಷ್ಟದಲ್ಲಿದೆ. ಫಾ ಡು ಪ್ಲೆಸಿಸ್‌ ನಾಯಕತ್ವದಲ್ಲಿ ಈ ಸಂಕಷ್ಟದಿಂದ ಹೊರಬರಲು ಒದ್ದಾಡುತ್ತಿದೆ. ಆ ತಂಡ ಸಂಕಷ್ಟದಿಂದ ಹೊರಬರುವುದು ವಿಶ್ವಕ್ರಿಕೆಟ್‌ ಮಟ್ಟಿಗೂ ಮಹತ್ವದ ವಿಷಯವೇ ಹೌದು. ದ.ಆಫ್ರಿಕಾ ತಂಡಕ್ಕೆ ತನ್ನ ಕ್ರಿಕೆಟ್‌ ಜೀವನದಲ್ಲಿ 3 ಬಾರಿ ಅತ್ಯಂತ ಕಠಿಣ ಸಂಧಿಕಾಲ ಎದುರಾಗಿದೆ. ಈಗ ದಿಗ್ಗಜರ ನಿವೃತ್ತಿಯಿಂದ ಉಂಟಾಗಿರುವುದು 3ನೇ ಸಂಧಿಕಾಲ.

ಹಿಂದಿನೆರಡು ಸಂಧಿಕಾಲಗಳು
ವರ್ಣಭೇದ ನಿಷೇಧ-1970
ವಿಶ್ವಕ್ರಿಕೆಟ್‌ನ ಬಲಿಷ್ಠ ತಂಡಗಳಲ್ಲೊಂದೆಂಬ ಹೆಗ್ಗಳಿಕೆ ಹೊಂದಿದ್ದ ದ.ಆಫ್ರಿಕಾವನ್ನು 1970ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ ನಿಷೇಧಿಸಿತ್ತು. ಅಲ್ಲಿನ ಕರಿಯರ ವಿರುದ್ಧ ವರ್ಣಭೇದ ತಾರತಮ್ಯವನ್ನು ಗಂಭೀರವಾಗಿ ಪರಿಗಣಿಸಿ ದೀರ್ಘ‌ಕಾಲ ದ.ಆಫ್ರಿಕಾವನ್ನು ಕ್ರಿಕೆಟ್‌ನಿಂದ ಹೊರಹಾಕಲಾಗಿತ್ತು. 1991ರಲ್ಲಿ ಈ ದುರ್ದಮ್ಯ ಪರಿಸ್ಥಿತಿಯಿಂದ ದ.ಆಫ್ರಿಕಾ ತಂಡ ಮುಕ್ತಿ ಪಡೆಯಿತು. ಅನಂತರ ಅಲ್ಲಿ ಅಲನ್‌ ಡೊನಾಲ್ಡ್‌, ಮಖಾಯ ಎನ್‌ಟಿನಿ, ಗ್ಯಾರಿಕರ್ಸ್ಟನ್‌, ಹರ್ಷಲ್‌ ಗಿಬ್ಸ್, ಜಾಕಸ್‌ ಕಾಲಿಸ್‌, ಲ್ಯಾನ್ಸ್‌ ಕ್ಲೂಸ್ನರ್‌ರಂತಹ ವಿಶ್ವಶ್ರೇಷ್ಠರು ಕಾಣಿಸಿಕೊಂಡರು. ಅದು ಮತ್ತೂಮ್ಮೆ ಬಲಿಷ್ಠತಂಡವಾಯಿತು.

ಮ್ಯಾಚ್‌ಫಿಕ್ಸಿಂಗ್‌, ಕ್ರೋನ್ಯೆಗೆ ನಿಷೇಧ-2000
ದ.ಆಫ್ರಿಕಾ ಕ್ರಿಕೆಟ್‌ ಕಂಡ ಸರ್ವಶ್ರೇಷ್ಠ ನಾಯಕ ಹ್ಯಾನ್ಸಿ ಕ್ರೋನ್ಯೆ ಅವರದ್ದು ಒಂದು ದುರಂತ ಬದುಕು. ನಾಯಕನಾಗಿ ಅದ್ಭುತ ಯಶಸ್ಸು ಕಂಡ ಅವರು, ದ.ಆಫ್ರಿಕಾವನ್ನು ಯಾವುದೇ ತಂಡದೆದುರು ಗೆಲ್ಲಬಲ್ಲ ರೀತಿಯಲ್ಲಿ ರೂಪಿಸಿದ್ದರು. ನಾಯಕನಾಗಿದ್ದ 53 ಟೆಸ್ಟ್‌ಗಳಲ್ಲಿ 27 ಬಾರಿ ತಂಡವನ್ನು ಗೆಲ್ಲಿಸಿದ್ದರು, ಸೋತಿದ್ದು 11 ಬಾರಿ ಮಾತ್ರ. 138 ಏಕದಿನ ಪಂದ್ಯಗಳಲ್ಲಿ 99 ಬಾರಿ ಗೆಲುವು ಸಾಧಿಸಿದ್ದರು. ಆ ಕಾಲದಲ್ಲಿ ನಾಯಕನೆಂದರೆ ಹ್ಯಾನ್ಸಿ ಕ್ರೋನ್ಯೆ ಅನ್ನುವ ಮಟ್ಟಕ್ಕೆ ಜನಜನಿತವಾಗಿತ್ತು. ಅಂತಹ ಸುಂದರವೇಳೆಯಲ್ಲಿ ಮ್ಯಾಚ್‌ಫಿಕ್ಸಿಂಗ್‌ ನಡೆಸಿದ ಆರೋಪ ಸಾಬೀತಾಯಿತು. 2000ನೇ ವರ್ಷದಲ್ಲಿ ಕ್ರೋನ್ಯೆ ಆಜೀವ ನಿಷೇಧಕ್ಕೊಳಗಾದರು. ಮುಂದಿನವರ್ಷ ವಿಮಾನಾಪಘಾತದಲ್ಲಿ ತೀರಿಕೊಂಡರು. ಇಲ್ಲಿಗೆ ದ.ಆಫ್ರಿಕಾ ತಂಡದ ಸುಂದರ ಅಧ್ಯಾಯವೊಂದು ಮುಕ್ತಾಯವಾಯಿತು. ಕ್ರೋನ್ಯೆಯೊಂದಿಗೆ ಇನ್ನೊಬ್ಬ ಖ್ಯಾತ ಬ್ಯಾಟ್ಸ್‌ಮನ್‌ ಹರ್ಷಲ್‌ ಗಿಬ್ಸ್, ಸ್ಪಿನ್ನರ್‌ ನಿಕಿ ಬೋಯೆ, ಪೀಟರ್‌ ಸ್ಟ್ರೈಡಮ್‌ ಕೂಡ ಫಿಕ್ಸಿಂಗ್‌ ಆರೋಪಕ್ಕೆ ಸಿಲುಕಿದ್ದರು. ತಂಡ ದಿಢೀರ್‌ ಒತ್ತಡಕ್ಕೆ ಸಿಲುಕಿತು. ಇಂತಹ ಇಕ್ಕಟ್ಟಿನ ಹೊತ್ತಿನಲ್ಲಿ ತಂಡದ ನೊಗವನ್ನು ಹೊರಬೇಕಾದ ಅನಿವಾರ್ಯತೆ ವೇಗ್‌ ಶಾನ್‌ ಪೊಲಾಕ್‌ ಹೆಗಲಿಗೇರಿತು.

ಲಂಕಾ, ಆಸ್ಟ್ರೇಲಿಯದ ಮಹಾಕುಸಿತ
ವಿಶ್ವಕ್ರಿಕೆಟ್‌ನಲ್ಲಿ ದ.ಆಫ್ರಿಕಾದ ಮಾದರಿಯಲ್ಲೇ ಕುಸಿತ ಅನುಭವಿಸಿದ ಇನ್ನೆರಡು ತಂಡ ಶ್ರೀಲಂಕಾ ಹಾಗೂ ಆಸ್ಟ್ರೇಲಿಯ. 1996ರಲ್ಲಿ ವಿಶ್ವಕಪ್‌ ಗೆದ್ದು ಮತ್ತೆ ಮೂರು ಬಾರಿ ಫೈನಲ್‌ಗೇರಿದ್ದ ಶ್ರೀಲಂಕಾ 2011ರ ವಿಶ್ವಕಪ್‌ವರೆಗೆ ಬಲಿಷ್ಠವಾಗಿಯೇ ಇತ್ತು. 2015ರ ವಿಶ್ವಕಪ್‌ ನಂತರ ಕುಮಾರ ಸಂಗಕ್ಕರ, ಮಹೇಲ ಜಯವರ್ಧನೆ ಇನ್ನಿತರ ತಾರೆಯರು ನಿವೃತ್ತಿಯಾದರು. ಈ ಖ್ಯಾತನಾಮರ ನಿವೃತ್ತಿಯಿಂದ ಉಂಟಾದ ಖಾಲಿತನವನ್ನು ತುಂಬಲು ಸಾಧ್ಯವೇ ಆಗಲಿಲ್ಲ. ಪರಿಣಾಮ ಆ ತಂಡ ಸಂಪೂರ್ಣ ಕುಸಿದುಹೋಗಿದೆ.

2007ರ ವಿಶ್ವಕಪ್‌ ನಂತರ ಆಸ್ಟ್ರೇಲಿಯ ತಂಡದ ದಿಗ್ಗಜರು ಒಬ್ಬೊಬ್ಬರೇ ನಿವೃತ್ತಿಯಾಗಲು ಆರಂಭವಾಯಿತು. ಗ್ಲೆನ್‌ ಮೆಕ್‌ಗ್ರಾತ್‌, ಮ್ಯಾಥ್ಯೂ ಹೇಡನ್‌, 2011ರ ಅನಂತರ ರಿಕಿ ಪಾಂಟಿಂಗ್‌ ಹೀಗೆ ಒಬ್ಬೊಬ್ಬರೇ ಹೊರನಡೆದರು. ಕಳೆದ ವರ್ಷ ಸ್ಟೀವ್‌ ಸ್ಮಿತ್‌, ಡೇವಿಡ್‌ ವಾರ್ನರ್‌ ನಿಷೇಧದ ನಂತರ ಪೂರ್ಣಪ್ರಮಾಣದಲ್ಲಿ ಬಿದ್ದುಹೋಗಿತ್ತು.

ಟಾಪ್ ನ್ಯೂಸ್

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ

Shimoga; Congress – Statement against Muslims: Sumoto case against KS Eshwarappa

Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Daali dhananjay starrer Zebra movie

Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್‌ ಸಾಥ್‌

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.