ಸ್ವಿಟ್‌ ಸ್ವಿಟ್‌ ಎಂದು ಹಾಡುವ ಹಕ್ಕಿ:ಗುಬ್ಬಿ ಮರಕುಟುಕ


Team Udayavani, Jan 13, 2018, 3:22 PM IST

3699.jpg

ಗುಬ್ಬಿಯಷ್ಟು ಚಿಕ್ಕದಾದ, ಗುಬ್ಬಿಯ ಕೊಕ್ಕನ್ನು ಹೋಲುವ ಚಿಕ್ಕ ಚುಂಚು ಇರುವುದರಿಂದ ಇದನ್ನು ಗುಬ್ಬಿ ಮರಕುಟುಕ ಎಂದು ಕರೆಯುತ್ತಾರೆ.Speckled piculet(Picummusinnominatus ) R Sparrow ಮರಕುಟಕಗಳಲ್ಲಿಯೇ ಇದು ಚಿಕ್ಕದು ಎಂದರೆ ತಪ್ಪಾಗಲಾರದು. ಮೃದುವಾದ ಕಪ್ಪು ಬಿಳುಪಿನ  ವರ್ತುಲಾಕಾರದ ಪುಟ್ಟ ಬಾಲದಿಂದ ಇದನ್ನು ಗುರುತಿಸಬಹುದು. ಕಣ್ಣಿನ ಬುಡದಿಂದ ಕುತ್ತಿಗೆಯವರೆಗೆ ಬಿಳಿ ಗೆರೆ ಇದೆ. ಹಸಿರು ಮಿಶ್ರಿತ ಹಳದಿ ಬಣ್ಣದ ಬೆನ್ನು ,ತಲೆ, ರೆಕ್ಕೆ ಇದಕ್ಕಿದೆ. 2000ಮೀಟರ್‌ ಎತ್ತರದ ಹಿಮಾಲಯ ಪರ್ವತಭಾಗ, ಹಸಿರಿನಿಂದ ಕೂಡಿದ ಮರಗಳಿರುವ ಮಧ್ಯಮ ಅರಣ್ಯ ಪ್ರದೇಶದಲ್ಲಿ ಇವು ವಾಸಿಸುತ್ತವೆ. ಪಾಕಿಸ್ತಾನದ ಹಜಾÅ, ಹಿಮಾಚಲ ಪ್ರದೇಶ, ಅಸ್ಸಾಮ್‌, ನೀಲಗಿರಿ ಬೆಟ್ಟ, ಪೂರ್ವ ಮತ್ತು ಪಶ್ಚಿಮ ಘಟ್ಟದ ಹಸಿರೆಲೆ ಕಾಡುಗಳು ಇದಕ್ಕೆ ಪ್ರಿಯ. ಮರದ ಕಾಂಡದಿಂದ ಕಾಂಡಕ್ಕೆ ಹಾರುತ್ತಾ, ಅಲ್ಲಿರುವ ಗೆದ್ದಲು, ಇರುವೆ, ಇರುವೆಯ ಮೊಟ್ಟೆ, ವಲೇ ಹುಳ, ಅವುಗಳ ಮೊಟ್ಟೆ , ಮರಕೊರೆಯುವ ಚಿಕ್ಕಗಾತ್ರದ ಹುಳುಗಳನ್ನು ಅರಸುತ್ತಾ, ಅವು ಹೊರ ಬರಲು ಮರದಟೊಂಗೆಗೆ ಆಗಾಗ ಕುಟ್ಟುತ್ತಾ ವಿಶಿಷ್ಟ ದನಿ ಹುಟ್ಟಿಸುವ ಪರಿ ವಿಭಿನ್ನ. 

ಇದಕ್ಕೆ ಹಸಿರು ಮಿಶ್ರಿತ ಮಾಸಲು ಹಳದಿಬಣ್ಣ, ಸ್ವಲ್ಪಕಂದು ಬಣ್ಣದ ತಲೆ ಇದೆ. ಚಿಕ್ಕದಾದರೂ ಬಲವಾದ ಚುಂಚು, ಕಾಲು. ಬೆರಳುಗಳಲ್ಲಿ ಉಗುರುಗಳಿದ್ದು, ಇವು ಮರ ಏರಲು ಸಹಕಾರಿಯಾಗಿವೆ. ಇತರ ಮರಕುಟುಗಳಿಗಿರುವಂತೆ ಬೂದು ಬಣ್ಣದ ಕಾಲಲ್ಲಿ ಸುತ್ತಕಪ್ಪು ಗೆರೆ ಇದೆ. ಎದೆ, ಹೊಟ್ಟ, ಕುತ್ತಿಗೆಯ ಭಾಗದಲ್ಲಿ ಬಿಳಿ ಬಣ್ಣದ ಮೇಲೆ ಕಪ್ಪು ಚುಕ್ಕೆಗಳಿವೆ. ಇದು ಗಾತ್ರದಲ್ಲಿ 10 ಸೆಂ.ಮೀ. ಇದೆ.   ಹಣೆಯಲ್ಲಿ ಕಿತ್ತಳೆ ಮಿಶ್ರಿತ ಕೆಂಪು ನಾಮ ಇದೆ. ಭಾರತ ಮತ್ತು ಪಾಕಿಸ್ತಾನಗಳಲ್ಲಿರುವ ಈ ಪುಟ್ಟ ಮರಕುಟುಕವನ್ನು ಬಣ್ಣ ವೈವಿಧ್ಯದಿಂದ ಎರಡು ಉಪತಳಿಗಳಾಗಿ ವಿಂಗಡಿಸಲಾಗಿದೆ. 
ಭಾರತದ ತಳಿಗಳಲ್ಲಿ ಹಣೆಯಲ್ಲಿ ಕಿತ್ತಳೆ ಮಿಶ್ರಿತ ಕೆಂಪು ನಾಮ ಇಲ್ಲ. ಜೋಡಿಯಾಗಿ ಇಲ್ಲವೇ 4-6 ಗುಂಪಿನಲ್ಲಿ ಹಸಿರೆಲೆಯಿಂದ ಕೂಡಿದ ಮತ್ತಿ ಬೂರಲ, ಜಂಬೆ, ಮಾವು ಹಾಲವಾಣ ಮೊದಲಾದ ಮರಗಳಿರುವಲ್ಲಿ ಇವು ಹೆಚ್ಚಾಗಿ ಕಾಣುತ್ತವೆ. ಇರುವೆ, ಗೆದ್ದಲು, ಇಲ್ಲವೆ ವರ್ಲೆಹುಳಗಳ ಮೊಟ್ಟೆ ,ಅರಸುತ್ತಾ, ಅವುಗಳನ್ನು ಬೇಟೆಯಾಡುತ್ತಾ ಸ್ಪಿಟ್‌, ಸ್ಪಿಟ್‌ ಎಂದು ಕೂಗಿನ ಮೂಲಕ ಇದರ ಇರುವನ್ನು ತಿಳಿಯಬಹುದು. ಹಸಿ,ಇಲ್ಲವೇ ಒಣಗಿದ ಮರಗಳ ಮೇಲೆ ಹಬ್ಬಿರುವ ವರ್ಲೆ-ಎಂದರೆ ಗೆದ್ದಲು ಇಲ್ಲವೆ ಬವರ್ಲೆ ಎಂದು ಹಳ್ಳಿಗರು ಕರೆಯುತ್ತಾರೆ. 

ಮಣ್ಣಿನಟ್ಯೂಬಿನಂತೆ ಮರಗಳಲ್ಲಿ ಹಬ್ಬಿರುವ ಗೆದ್ದಲುಗಳು ಮನೆಯನ್ನು ತನ °ಚುಂಚಿನಿಂದ ಕೆದರಿರುವ ಗುತ್ಛ ಮರಕುಟುಕ, ಅಲ್ಲಿರುವ ಅವುಗಳ ಮೊಟ್ಟೆಗಳನ್ನು ಕಬಳಿಸುವುದು. ಇದರಿಂದ ಮರಗಳ ಕಾಂಡ , ಮೇಲ್ಮೆ„ ಹಾಳಾಗಿ ಮರಗಳ ಬೆಳವಣಿಗೆ ಕುಂಠಿತವಾಗುವುದನ್ನು  ಇವು ಕಡಿಮೆ ಮಾಡುತ್ತವೆ. ಪರೋಕ್ಷವಾಗಿ, ಕಾಡಿನಗಿಡ ಮರಗಳ ರಕ್ಷಣೆಯಲಿ ಇದರ ಪಾತ್ರವೂ ಇವೆ. ಇದು ಪುಟ್ಟ ಹಕ್ಕಿಯ ದೊಡ್ಡ ಕೊಡುಗೆ. ಏಪ್ರಿಲ್‌ ಇಲ್ಲವೇ ಮೇ ಅವಧಿಯಲ್ಲಿ ಬಿದಿರಿನ ಕಾಂಡದಲ್ಲಿ ಕೊರೆದು ಮಾಡಿದ ಗೂಡಿನಲ್ಲಿ ಮೊಟ್ಟೆ ಇಡುತ್ತದೆ. ಇಂತಹ ಗೂಡನ್ನು ಒಂದಕ್ಕಿಂತ ಹೆಚ್ಚು ಸಲ ಮೊಟ್ಟೆ ಇಡಲು ಬಳಸುವುದು. ಇದು ಕೊರೆದ ರಂಧ್ರದ ಸುತ್ತಳತೆ 2.5 ಸೆಂ.ಮೀ. ಇರುತ್ತದೆ. ಕೊರೆದ ಗೂಡಿನರಂಧ್ರದ ಸುತ್ತಳತೆ,  ಆಕಾರ, ಆಧರಿಸಿ ಮರಕುಟುಕದ, ಬಾಬೇìಟ್‌, ಇಲ್ಲವೇ ಸಪ್ಪುಗುಟುರ, ಕೊಪ್ಪರ್‌ ಸ್ಮಿತ್‌ ಬಾರ್ಬೆಟ್‌ಗೂಡೆಂದು ತಿಳಿಯಬಹುದು. ಹಕ್ಕಿಯ ಅಳತೆ ಮತ್ತು ಗೂಡಿನ ಅಳತೆ, ಯಾವ ರೇಶಿಯೋದಲ್ಲಿದೆ ಎಂಬುದು ಸಂಶೋಧನೆಗೆ ತಕ್ಕದಾದ ಸಂಗತಿಯಾಗಿದೆ. ಇಂಥ ರಂಧ್ರದ ಗೂಡಿನಲ್ಲಿ ಬಿಳಿಬಣ್ಣದ 3-4  ಮೊಟ್ಟೆ ಇಡುತ್ತದೆ. ಗಂಡು, ಹೆಣ್ಣು ಒಂದೇ ರೀತಿ ಇರುವುದು. ಮರಿಗಳ ಪಾಲನೆಯಲ್ಲಿ ಎರಡೂ ಪಾಲ್ಗೊಳ್ಳುವುದು. 

ಎಲ್ಲಾ ಹಕ್ಕಿಗಳ ಮೊಟ್ಟೆ ಒಡೆದು ಮರಿಯಾಗಲು ಒಂದೇ ಸಮಯ ಬೇಕೆ? ಮೊಟ್ಟೆಗಳ ಗಾತ್ರ, ಮರಿಯಾಗುವ ಸಮಯಕ್ಕೆ ಹೊಂದಾಣಿಕೆ ಇದೆಯೇ? ಮರಿಯಾಗಿ ಹಾರಲು ಎಲ್ಲಾಗಾತ್ರದ ಹಕ್ಕಿಗಳಿಗೆ ಒಂದೇ ಸಮಯ ಬೇಕಾಗುವುದೋ ಹೇಗೆ? ವೈರಿಗಳಿಂದ ಮರಿ ರಕ್ಷಣೆಗೆಯಾವ ಹಕ್ಕಿ ಯಾವ ತಂತ್ರ ಬಳಸುವುದು? ಈ ಎಲ್ಲಾ ಸಂಗತಿಗಳನ್ನು ಸಂಶೋಧನೆ ಮೂಲಕ ತಿಳಿಯಬೇಕಿದೆ. 
 

ಟಾಪ್ ನ್ಯೂಸ್

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

Henley Passport Index: Singapore tops: How strong is India’s passport?

Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

17-uv-fusion

Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.