ಕ್ರೀಡಾ ತಾರೆಯರ ಮದುವೆಯ ಅನುಬಂಧ
Team Udayavani, Dec 15, 2018, 5:30 AM IST
ಆಟಕ್ಕೂ ವಿವಾಹ ಬಂಧನಕ್ಕೂ ನೇರಾನೇರ ಸಂಬಂಧವಿದೆ. ಮದುವೆ ಎಂಬುದು ವಿ ಧಿಯಾಟ ಎನ್ನುತ್ತಾರೆ. ಇಲ್ಲೂ ಆಟದ ಪ್ರಸ್ತಾಪ ಬಂತು ನೋಡಿದಿರಾ? ಡಾಕ್ಟರ್ ಹುಡುಗ ಡಾಕ್ಟರ್ ಹುಡುಗಿಯನ್ನು, ಸಾಫ್ಟ್‌ವೇರ್ ಹುಡುಗಿ ಸಾಫ್ಟ್‌ವೇರ್ ಇಂಜಿನೀಯರ್ ಅನ್ನು, ಶಿಕ್ಷಕ ಶಿಕ್ಷಕಿಯನ್ನು, ಹೀರೋ ಹೀರೋಯಿನ್‌ನನ್ನು ವಿವಾಹವಾಗುವುದು ಸಾಮಾನ್ಯ. ಆ ಲೆಕ್ಕದಲ್ಲಿ ಒಬ್ಬ ಕ್ರೀಡಾಪಟು ಇನ್ನೊಬ್ಬ ಕ್ರೀಡಾಳುವನ್ನೇ ಜೀವನ ಸಂಗಾತಿಯಾಗಿ ಸ್ವೀಕರಿಸುತ್ತಿರುವುದು ಕೂಡ ಇತ್ತೀಚಿನ ದಿನಗಳಲ್ಲಿ ತುಸು ಹೆಚ್ಚಾಗುತ್ತಿದೆ.
ಇತ್ತೀಚೆಗೆ ಒಲಿಂಪಿಕ್ಸ್ ಬಿಲ್ಗಾರ್ತಿ ದೀಪಿಕಾ ಕುಮಾರಿ ಗೆಳೆಯ ಒಲಿಂಪಿಯನ್ ಬಿಲ್ಗಾರ ಅತಾನು ದಾಸ್ ಜತೆ ನಿಶ್ಚಿತಾರ್ಥ ಮಾಡಿಕೊಂಡರು. ಒಂದೇ ವೃತ್ತಿಯವರು ವಿವಾಹವಾಗುವುದರಿಂದಲೇ ಸಂಬಂಧಗಳು ದೀರ್ಘ ಕಾಲ ಬಾಳುತ್ತವೆ ಎಂಬ ತೀರ್ಮಾನಕ್ಕೆ ಏಕಾಏಕಿ ಬರಬೇಕಿಲ್ಲ. ಸ್ವರ್ಗದಲ್ಲೇ ಮದುವೆಗಳು ನಿಗದಿಯಾಗುತ್ತದೆ. ಆದರೆ ವಿಚ್ಛೇದನಗಳು ಕೋರ್ಟ್‌ನಲ್ಲಿ ತೀರ್ಮಾನವಾಗುತ್ತದೆ ಎಂಬ ಹಳೆ ಜೋಕ್‌ಗೂ ಇಲ್ಲಿ ಅವಕಾಶವಿಲ್ಲ, ಒಟ್ಟಿಗೆ ಬಾಳಲು ನೂರು ಕಾರಣವಿದ್ದರೆ ಈ ಒಂದೇ ವೃತ್ತಿ ಹಿನ್ನೆಲೆ ನೂರ ಒಂದನೇ ಕಾರಣ ಒದಗಿಸುತ್ತದೆ.
ಪ್ರತಿಫಲ ನೀಡುವ ದಾಂಪತ್ಯ!
ಕ್ರೀಡಾ ವೃತ್ತಿಯಲ್ಲಿದ್ದವರ ವಿಶ್ವಪರ್ಯಟನೆ ಮಾಮೂಲು. ಅವರು ನಾಲಿಗೆ ಕಟ್ಟಬೇಕು, ದೇಹವನ್ನು ಹುರಿಗೊಳಿಸಿಕೊಳ್ಳಲು ಫಿಟ್‌ನೆಸ್ ಮಾದರಿಗಳನ್ನು ಅನುಸರಿಸಬೇಕು. ಇಲ್ಲಿ ಯಾವುದೇ ರಾಜಿಗೆ ತ್ಯಾಗಕ್ಕೆ ಅವಕಾಶವಿಲ್ಲ. ಜೀವನ ಒಪ್ಪಂದದಲ್ಲಿ ವೃತ್ತಿ ಒತ್ತಡಗಳು, ದೈಹಿಕ ಫಿಟ್‌ನೆಸ್ ವ್ಯವಹಾರ, ಹಣಕಾಸು, ತಿನ್ನುವ ಊಟ ಕೂಡ ಆಟದ ಪಾಲ್ಗೊಳ್ಳುವಿಕೆಯನ್ನು ಪ್ರಭಾವಿಸುವುದರಿಂದ ಜೀವನ ಸಂಗಾತಿ ಮತ್ತೂಬ್ಬ ಕ್ರೀಡಾಪಟುವೇ ಅಗಿದ್ದರೆ ಲೇಸು. ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿಜಾì, ಪಾಕಿಸ್ತಾನದ ಶೋಯಿಬ್ ಮಲ್ಲಿಕ್ ಅವರನ್ನು ವಿವಾಹವಾದಾಗ, ಆಕೆ ಭಾರತೀಯ ಕ್ರೀಡಾಪುಟುವನ್ನೇ ಮದುವೆಯಾಗಬಹುದಿತ್ತಲ್ಲ ಎಂಬ ಪ್ರತಿಕ್ರಿಯೆ ಬಂತೇ ವಿನಃ ಕ್ರೀಡಾಳುವನ್ನು ಆರಿಸಿಕೊಂಡಿದ್ದಕ್ಕೆ ಆಕ್ಷೇಪಗಳಿರಲಿಲ್ಲ.
ವೈಯಕ್ತಿಕ ಟೆನಿಸ್‌ನಲ್ಲಿ 27ನೇ ರ್‍ಯಾಂಕ್‌ವರೆಗೆ ಮುನ್ನಡೆದ, ಡಬಲ್ಸ್‌ನಲ್ಲಿ ಟಾಪ್ ಒನ್ ಕೂಡ ಆದ, ಡಬಲ್ಸ್ ಗ್ರಾನ್‌ಸ್ಲಾಂನ್ನೂ ಗೆದ್ದ ಸಾನಿಯಾ ಬೌಲಿಂಗ್, ಬ್ಯಾಟಿಂಗ್‌ಗಳ ಸಾಮರ್ಥ್ಯದ ಹೊರತಾಗಿಯೂ ರಾಷ್ಟ್ರೀಯ ತಂಡದಿಂದ ಹೊರಬಂದಿದ್ದ ಶೋಯೆಬ್ ಮಲಿಕ್‌ರಲ್ಲಿ ಆತ್ಮವಿಶ್ವಾಸ ತುಂಬಿ ಈಗ ಅವರು ಮತ್ತೂಮ್ಮೆ ರಾಷ್ಟ್ರೀಯ ತಂಡದಲ್ಲಿ ಪ್ರಕಾಶಿಸಲು ಕಾರಣರಾಗಿದ್ದಾರೆ. ಈ ಸಂಗತಿಯನ್ನು ಖುದ್ದು ಶೋಯೆಬ್ ಹೇಳಿಕೊಂಡಿದ್ದಾರೆ.
ಸಾನಿಯಾ ದಾಂಪತ್ಯದ ವಿರುದ್ಧ ಕಥೆ ಇನ್ನೊಂದು. ಅಥ್ಲೆàಟ್ ಅಂಜು ಬಾಬಿ ಜಾರ್ಜ್ ಹಾಗೂ ಟ್ರಪಲ್ ಜಂಪ್ ಪಟು ರಾಬರ್ಟ್ ಬಾಬಿ ಜಾರ್ಜ್ ಹೊಸ ಹೊಸ ವ್ಯಾಖ್ಯಾನಗಳಿಗೆ ಸಿಗಬಹುದಾದ ಜೋಡಿ. ಕೇರಳದ ಈ ಜೋಡಿ ವಿವಾಹವಾದಾಗ ಅಂಜುಗೆ ಅಡುಗೆ ಮಾಡಲೇ ಬರುತ್ತಿರಲಿಲ್ಲ. ಬಡಪಾಯಿ ಬಾಬಿ ಜಾರ್ಜ್ ಆ ಕೆಲಸ ಮಾಡುತ್ತಿದ್ದರು. ಇಂತಿಪ್ಪ ವ್ಯಕ್ತಿಗೆ ದೇಶದ ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿ ಬರುವುದಕ್ಕೆ ಅವರು ತಮ್ಮ ಹೆಂಡತಿಗೆ ಮಾಡಿದ ಸಹಾಯಕವೇ ಕಾರಣವಾಗಿತ್ತು. ಜಾರ್ಜ್ ತಮ್ಮ ಪತ್ನಿಯ ಕೋಚ್ ಆಗಿ ಕೂಡ ಕೆಲಸ ಮಾಡಿದ್ದರು! 2003ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅಂಜು ಮಿಂಚುತ್ತಿದ್ದಾಗ ಭಾರತದ ಪದಕದ ಬರಕ್ಕೆ ಒಂದು ದೊಡ್ಡ ಉತ್ತರವಾಗಿ ಕಾಣಿಸಿದ್ದರು, ಥ್ಯಾಂಕ್ಸ್ ಟು ರಾಬರ್ಟ್ ಜಾರ್ಜ್!
ಆಟ ವಿರೋಧ, ಆಗಿದ್ದು ಸಂಬಂಧ!
ಕ್ರಿಕೆಟಿಗ ದಿನೇಶ್ ಕಾರ್ತಿಕ್ ಹಾಗು ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ದಂಪತಿ ನಿಜವಾದ ಕ್ರೀಡಾ ಮನೋಭಾವ. ದೀಪಿಕಾಗೆ ಕ್ರಿಕೆಟ್ ಆಗಿಬರುವುದಿಲ್ಲ. ಈ ಕ್ರಿಕೆಟ್‌ನಿಂದಾಗಿಯೇ ದೇಶದ ಉಳಿದ ಕ್ರೀಡೆಗಳು ಬಸವಳಿದಿವೆ ಎಂದು ನಿರ್ಭಯವಾಗಿ ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟಾಕೆ. ಕೊನೆಗೂ 2015ರಲ್ಲಿ ದಿನೇಶ್‌ಗೆ ವಿಕೆಟ್ ಒಪ್ಪಿಸಿದ ದೀಪಿಕಾ ದಿನೇಶ್ ಕಾರ್ತಿಕ್‌ರಲ್ಲಿ ಹೊಸ ಉತ್ಸಾಹ ತಂದಿದ್ದಾರೆ. 33 ವರ್ಷದ ನಿವೃತ್ತಿ ಅಂಚಿನಲ್ಲಿಯೂ ದಿನೇಶ್ ಅವರು ಭಾರತದ ತಂಡದಲ್ಲಿ ಮರಳಿ ಸ್ಥಾನ ಪಡೆದು ಮಿಂಚುತ್ತಿದ್ದಾರೆ. ದಿನೇಶ್ ಕಾರ್ತಿಕ್ 2007ರಲ್ಲಿ ನಿಕಿತಾ ಎಂಬುವವರನ್ನು ವಿವಾಹವಾಗಿದ್ದರು ಮತ್ತು 2012ರಲ್ಲಿ ವಿಚ್ಛೇದನ ಪಡೆದಿದ್ದರು. ಇಂದು ಭಾರತದ ಆರಂಭಿಕ ಟೆಸ್ಟ್ ಬ್ಯಾಟ್ಸ್‌ಮನ್ ಆಗಿರುವ ಮುರುಳಿ ವಿಜಯ್ ನಿಕಿತಾ ಅವರನ್ನು 2012ರಲ್ಲಿ ವಿವಾಹವಾಗಿದ್ದಾರೆ.
1960ರ ಒಲಂಪಿಕ್ಸ್‌ನಲ್ಲಿ ಕೂದಲೆಳೆಯ ಅಂತರದಲ್ಲಿ ಪದಕ ತಪ್ಪಿಸಿಕೊಂಡ ಮಿಲಾVಸಿಂಗ್‌ವರಿಸಿದ್ದು ನಿರ್ಮಲಾ ಕೌರ್ ಎಂಬ ವಾಲಿಬಾಲ್ ಪಟು. ಭಾರತದ ಹಾಕಿ ತಂಡದ ನಾಯಕರಾಗಿದ್ದ ಸರ್ದಾರ್ ಸಿಂಗ್ ವಿವಾಹವಾಗಿದ್ದು ಕೂಡ ಇನ್ನೊಬ್ಬ ಹಾಕಿ ಆಟಗಾರ್ತಿಅಸ್ಪಲ್ ಕೌರ್‌ರನ್ನು. ಅಸ್ಪಲ್ ಇಂಗ್ಲೆಂಡ್ ರಾಷ್ಟ್ರೀಯ ಹಾಕಿ ತಂಡದ ಆಟಗಾರ್ತಿ!
ಮೂರನೆಯವರಿಗೆ ಲಾಭ?
ಕರ್ನಾಟಕದ ಸ್ಟುವರ್ಟ್ ಬಿನ್ನಿಯವರದ್ದು ತುಸು ಭಿನ್ನ ಕಥೆ. ಅವರು ಪ್ರೇಮಿಸಿ ವಿವಾಹವಾದ ಮಾಯಾಂತಿ ಲ್ಯಾಂಗರ್ ಕ್ರೀಡಾಪಟುವಲ್ಲ. ಫುಟ್ಬಾಲ್‌ನಿಂದ ಆರಂಭಿಸಿ ಐಪಿಎಲ್ ಕ್ರಿಕೆಟ್‌ವರೆಗೆ ಕ್ರೀಡಾ ನೇರ ಪ್ರಸಾರಗಳ ಉದ್ಘೋಷಕಿಯಾಗಿದ್ದ ಲ್ಯಾಂಗರ್, ಲಂಗರು ಚಾಚಿದರು. ಮದುವೆಯಾದ ನಂತರವೇ ಬಿನ್ನಿ ಕೆಲವು ಕನ್ಸಿಸ್ಟೆಂಟ್ ಪ್ರದರ್ಶನಗಳಿಂದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದದ್ದು.
ಈ ಪಟ್ಟಿಯಲ್ಲಿ ಹಾಕಿಯ ರಾಜ್‌ಪಾಲ್‌ಸಿಂಗ್ ಹಾಗೂ ಶೂಟರ್ ಅವನೀತ್ ಕೌರ್ ಜೋಡಿಯನ್ನು, ಹಾಕಿಪಟು ಗುರುವಿಂದರ್ ಸಿಂಗ್ ಚಾಂಟಿ ಹಾಗೂ ಓಟಗಾರ್ತಿ ಮಂಜೀತ್ ಕೌರ್ ದಾಂಪತ್ಯವನ್ನು, ಪರಸ್ಪರ ಬುಲ್ಸ್ ಐ ಗುರಿ ಕಂಡುಕೊಂಡ ಹೀನಾ ಸಿಧು ಹಾಗೂ ರೋನಕ್ ಪಂಡಿತ್‌ರನ್ನು ಸೇರಿಸಬಹುದು. ಇನ್‌ಫ್ಯಾಕ್ಟ್ ಈ ಪಟ್ಟಿಗೆ ಚೆಸ್ ಆಟಗಾರರು, ವಿದೇಶಗಳಲ್ಲಿ ಆಗಿರುವ ಕ್ರೀಡಾ ವಿವಾಹಗಳನ್ನು ಸೇರಿಸುತ್ತ ಹೋದರೆ ಅದು ಹನುಮಂತನ ಬಾಲ. ಒಂದು ಸ್ವಾರಸ್ಯದೊಂದಿಗೆ, 2001ರ ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ಗೆದ್ದ ಪುಲ್ಲೇಲ ಗೋಪಿಚಂದ್ ವಿವಾಹವಾಗಿದ್ದು ಭಾರತದ ಮಾಜಿ ಮಹಿಳಾ ಚಾಂಪಿಯನ್ ಪಿವಿವಿ ಲಕ್ಷಿ¾ ಅವರನ್ನು. ಈ ಜೋಡಿ ಆರಂಭಿಸಿದ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿಗೆ ಬಂದ ಸೈನಾ ನೆಹ್ವಾಲ್‌ಗೆ ಇವರಿಬ್ಬರ ಕೋಚಿಂಗ್ ಸಿಕ್ಕು ಆಕೆ ವಿಶ್ವದ ಅಗ್ರಗಣ್ಯ ಆಟಗಾರ್ತಿಯಾದರು!
ಗುರು ಸಾಗರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.