ಒಳ್ಳೇ ತಾಣಕ್ಕೆ,ಚಾರಣ:ತೊಟ್ಟಿಕಲ್ಲು ಜಲಪಾತ


Team Udayavani, Mar 24, 2018, 3:02 PM IST

2589.jpg

 ವಾರಾಂತ್ಯದಲ್ಲಿ ಒಂದು ದಿನದ ಪ್ರವಾಸಕ್ಕೆ ತೊಟ್ಟಿಕಲ್ಲು ಜಲಪಾತ ಸೂಕ್ತ. ಅಲ್ಲಿ ಯಾವುದೇ ಫ‌ಲಾಹಾರ ಮಂದಿರವಾಗಲಿ, ಖಾನಾವಳಿಯಾಗಲಿ ಇಲ್ಲ. ಕುಡಿಯುವ ನೀರು ಸಮೇತ ಅಗತ್ಯ ಪ್ರಮಾಣದಷ್ಟು ಬುತ್ತಿ ಒಯ್ದರೆ ಸರಿ. ಭದ್ರತೆಯ ಕೊರತೆಯೂ ಇದೆ ಅನ್ನೋ ಎಚ್ಚರಿಕೆ ಚಾರಣ ಹೋಗುವವರಿಗೆ ಇರಲಿ.  

   ಅರೆ! ಇಷ್ಟು ಚೆಂದದ ತಾಣ ಇಲ್ಲೇ ಇತ್ತಲ್ಲ? ನೋಡದೆ ಹೋದೆನಲ್ಲ ಅಂತ ಅನ್ನಿಸೀತು ಆ ತಾಣ ತಲಪಿದಾಗ. ಅದುವೇ ಬೆಂಳೂರಿನ ಕೆಂಪೇಗೌಡ ಬಸ್‌ ನಿಲ್ದಾಣದಿಂದ ಕೇವಲ 28 ಕಿ.ಮೀ. ದೂರದಲ್ಲಿರುವ “ತೊಟ್ಟಿಕಲ್ಲು ಜಲಪಾತ’. ರಾಷ್ಟ್ರೀಯ ಹೆದ್ದಾರಿ 209 ಆದ ಬೆಂಗಳೂರು-ಕನಕಪುರ ರಸ್ತೆ ಹಿಡಿದು 23 ಕಿ. ಮೀ. ದೂರದಲ್ಲಿರುವ ಕಗ್ಗಲಿಪುರ ತಲಪಲು ರಾಜ್ಯ ಸಾರಿಗೆ/ಸಿಟಿ ಬಸ್‌ ಸೌಕರ್ಯಕ್ಕೆ ಕೊರತೆ ಇಲ್ಲ. ಅಲ್ಲಿ ಎಡಕ್ಕೆ ಹರಿಯುವ ರಸ್ತೆಯಲ್ಲಿ ಒಂದೂವರೆ ಕಿ.ಮೀ. ಸಾಗಿದರೆ ಗುಳಕಮಲೆ ಗ್ರಾಮ. ತುಸು ಮುಂದೆ ಕ್ಯಾಡ್‌ ಬಾಮ್‌ ಆಸ್ಪತ್ರೆ ಬಳಿ ಎಡಕ್ಕೆ ಸಾಗುತ್ತಲೇ ಜಲ್ಲಿ ರಸ್ತೆಯೊಂದು ನಿಮ್ಮ ಗಮನ ಸೆಳೆಯುತ್ತದೆ.  ಇಲ್ಲಿಂದ ಮುಂದಕ್ಕೆ ನೀವು ಎರಡು ಕಿ.ಮೀ. ಸಹಿಸಿಕೊಂಡರಾಯಿತು. ನಿಮ್ಮನ್ನು ಜಲಪಾತಕ್ಕೆ ಮುಟ್ಟಿಸುವ ಹೊಣೆ ನನ್ನದು ಎಂದಿರುತ್ತದೆ ಅದು. ಬೈಕ್‌ಗೆ ಸಲೀಸು. ಆದರೆ ನಡಿಗೆಯೆ ಆಪ್ಯಾಯಮಾನ. ಕಾರು, ವ್ಯಾನಿಗೆ ಸುತ್ತುದಾರಿಯೂ ಇದೆಯೆನ್ನಿ. 

ಜಲಪಾತಕ್ಕೂ ಮಿಗಿಲಾಗಿ ಅದನ್ನು ತಲುಪಿಸುವ  ಹಾದಿ ಸೊಗಸು. ನೀರವತೆ. ಇಕ್ಕೆಲದಲ್ಲೂ ಕಣ್ಣಿಗೆ ತಂಪೆರೆಯುವ ಹೊಲ, ಗದ್ದೆ, ಗಿಡಮರಗಳು. ಅಲ್ಲಲ್ಲಿ ಕೆರೆ, ಕುಂಟೆ. ದೂರದಲ್ಲಿ ಹಸಿರೊದ್ದ ಗಿರಿಸಾಲು. ಗುಡಿಸಲು, ಜಾನುವಾರು ….. ಒಟ್ಟಾರೆ ಸುತ್ತಮುತ್ತಲೂ ಅಪ್ಪಟ ದೇಸಿ ವಾತಾವರಣ. ಈ ಹಿತಕರ ಪರಿಸರ ಕಂಡಾಗಲೇ ನಮ್ಮ ಯಾತ್ರೆ ಫ‌ಲಪ್ರದ  ಎಂಬ ಸಾರ್ಥಕ ಭಾವ ಜೊತೆಯಾಗುತ್ತದೆ.  ಬನ್ನೇರುಘಟ್ಟ ಸೇರಿ ಅಲ್ಲಿನ ಪೊಲೀಸ್‌ ಠಾಣೆ ಎದುರಿನ ಕಿರು ರಸ್ತೆಯಲ್ಲಿ 15 ಕಿ.ಮೀ. ಪ್ರಯಾಣಿಸಿ. ಅಲ್ಲಿಂದ 15 ನಿಮಿಷಗಳ ನಡೆದರೆ ಜಲಪಾತ ಸಿಗುತ್ತದೆ.  ಚಾರಣಕ್ಕೆ ಈ ಹಾದಿ ಚೇತೋಹಾರಿ.

ಜಲಧಾರೆ ವೀಕ್ಷಿಸಲು ಕಡಿದಾದ ಬಂಡೆಗಳನ್ನೇರಬೇಕು. ಮೆಟ್ಟಿಲುಗಳಿಲ್ಲ. ವೃದ್ಧರು ಬಹುತೇಕ ಇನ್ನು ಸಾಕೆಂದು ಬಂದ ಹಾದಿಯತ್ತ ದಿಟ್ಟಿಸುವುದುದಿದೆ. ನೀವು ಯೋಗಪಟುವಾದರೆ ಆರೋಹಣ ಸರಾಗ.  ಅಂದಹಾಗೆ ಜಲಪಾತಕ್ಕೆ ಮಳೆಗಾಲದಲ್ಲಷೆ r ಪೂರ್ಣ ಕಳೆ.  ಆಗಸ್ಟ್‌- ಡಿಸೆಂಬರ್‌ ಅವಧಿಯಲ್ಲಿ ಪ್ರವಾಸ ಚಲೋ. ನೂರು ಅಡಿಗಳ ಎತ್ತರದಿಂದ ದುಮ್ಮಿಕ್ಕುವ ನೀರು ಬಳುಕುತ್ತ  ಬಂಡೆಯಿಂದ ಬಂಡೆಗೆ ಕುಪ್ಪಳಿಸುವಂತೆ ತೋರುತ್ತದೆ. ಪ್ರತಿಯೊಂದು ಬಂಡೆಯೂ ಶಿವ‌ಲಿಂಗದಂತೆ ಕಂಡು ಅದರ ಮೇಲೆ ಬಿಡಿ ಮಲ್ಲಿಗೆ ಅರ್ಚನೆಯಾಗುತ್ತಿರಬಹುದೆಂದೂ ಭಾಸವಾಗುತ್ತದೆ.  ಜಲಧಾರೆಯ ಮೂಲ ಬನ್ನೇರುಘಟ್ಟದ ಸುವರ್ಣಮುಖೀ ನದಿ. ವರ್ಷದ ಉಳಿದ ಅವಧಿಯಲ್ಲಿ ಕೇವಲ ತೊಟ್ಟಿಕ್ಕುವ ಕಲ್ಲಿನಂತೆ ಕಾಣುತ್ತದೆ! ನಿಜಕ್ಕೂ ಅಲ್ಲಿ ಜಲಪಾತವುಂಟೆ ಅನ್ನಿಸುತ್ತದೆ. ಚಾರಣವನ್ನು ಬೇಗ ಮುಗಿಸಿ ಹೊರಟರೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೂ ಭೇಟಿ ನೀಡಬಹುದು.

 ಮೋಜು , ಮನೋರಂಜನೆಯೆ ಮೇಲಾದರೆ ಯಾವುದೇ  ಪ್ರೇಕ್ಷಣೀಯ ನೆಲೆಗೆ ಗರ ಬಡಿಯುತ್ತದೆ. ‘ತೊಟ್ಟಿಕಲ್ಲು ಜಲಪಾತಕ್ಕೂ  ಆ ಪಾಡು ಒದಗಿದೆ. ಅಲ್ಲಲ್ಲಿ ತಿಂದೊಗೆದ ಕಾಗದದ ತಟ್ಟೆಗಳು, ಲೋಟಗಳು, ಪ್ಲಾಸ್ಟಿಕ್‌ ಚೀಲಗಳು.  ನೀರಿನ ಬಾಟಲ್‌ಗ‌ಳು ಬಿದ್ದಿವೆ. ಜಲಪಾತ ವೀಕ್ಷಣೆಗೆ ಬಂದವರು  ಪರಿಸರ ಸ್ವತ್ಛತೆಗೆ ಗಮನ ಹರಿಸದ ಕಾರಣ, ಪಾರದರ್ಶಕವಾಗಿರಬೆಕಾದ ನಾಲೆಯ ನೀರು ಕಡು ಹಸಿರು ಬಣ್ಣಕ್ಕೆ ತಿರುಗಿದೆ. ಪಕ್ಕದಲ್ಲಿ ಮುನೇಶ್ವರಸ್ವಾಮಿ ದೇವಾಲಯವಿದೆ. ವಾರಾಂತ್ಯದಲ್ಲಿ ಒಂದು ದಿನದ ಪ್ರವಾಸಕ್ಕೆ ತೊಟ್ಟಿಕಲ್ಲು ಜಲಪಾತ ಸೂಕ್ತ. ಅಲ್ಲಿ ಯಾವುದೇ ಫ‌ಲಾಹಾರ ಮಂದಿರವಾಗಲಿ, ಖಾನಾವಳಿಯಾಗಲಿ ಇಲ್ಲ. ಕುಡಿಯುವ ನೀರು ಸಮೇತ ಅಗತ್ಯ ಪ್ರಮಾಣದಷ್ಟು ಬುತ್ತಿ ಒಯ್ದರೆ ಸರಿ. ಭದ್ರತೆಯ ಕೊರತೆಯೂ ಇದೆ ಅನ್ನೋ ಎಚ್ಚರಿಕೆ ಚಾರಣ ಹೋಗುವವರಿಗೆ ಇರಲಿ.  

ಬಿಂಡಿಗನವಿಲೆ ಭಗವಾನ್‌

ಟಾಪ್ ನ್ಯೂಸ್

12-sirsi

Sirsi: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

12-sirsi

Sirsi: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.