ಕಲ್ಲು ಗೊರವ  


Team Udayavani, Jul 1, 2017, 3:47 PM IST

6566.jpg

ಇದಕ್ಕೆ ಕನ್ನಡಕದಂತಹ  ಕಣ್ಣಿನ ಹಕ್ಕಿ. ಗಾತ್ರದಲ್ಲಿ ಪಾರಿವಾಳವನ್ನು ಹೋಲುತ್ತದೆ.  ದಪ್ಪ ದೇಹದ ಈ ಹಕ್ಕಿ ಬರ್ಹನಡೀ ಕುಟುಂಬಕ್ಕೆ ಸೇರಿದೆ.Stone Curlew- (Burhinus oedicnemus ) R  ಕಲ್ಲು ಕ್ರೌಂಚ , ಓರೆ ನೋಟದ ಟಿಟಿಭ ಎಂದೂ ಸಹ ಕರೆಯುತ್ತಾರೆ. ಈ ಹಕ್ಕಿ ತನ್ನ ಆಹಾರದ ಜೊತೆ ಚಿಕ್ಕ ಕಲ್ಲುಗಳನ್ನು ಸಹ ತಿಂದು ಬಿಡುತ್ತದೆ. ಇದು ಯಾವ ರೀತಿ ಕಲ್ಲನ್ನು ತಿನ್ನುತ್ತದೆ? ಚಿಕ್ಕ ಸುಣ್ಣದ ಕಲ್ಲನ್ನು ತಂದು ತನಗೆ ಬೇಕಾದ ಕ್ಯಾಲ್ಸಿಯಂ ಅಂಶವನ್ನು ಇದರಿಂದ ಪಡೆಯುವುದೋ ಅಥವಾ ಇಂತಹ ಕಲ್ಲುಗಳೂ ಇದರ ಆಹಾರ ಜೀರ್ಣ ಕ್ರಿಯೆಗೆ ಸಹಕರಿಸುವುದೋ? ಎಲ್ಲವೂ ಕೌತುಕದ ವಿಚಾರವಾಗಿಯೇ ಉಳಿದಿದೆ. 

 ಆಹಾರದ ಜೊತೆ ಕಲ್ಲು ಹರಳು ಮೇಯುವುದರಿಂದ ಇದಕ್ಕೆ ಅನ್ವರ್ಥವಾಗಿ ಕಲ್ಲ ಗೊರವ ಎಂಬ ಅನ್ವರ್ಥಕ ಹೆಸರು ಬಂದಿರ ಬಹುದು. ಚಿಕ್ಕದಾದ ಸ್ವಲ್ಪ ಮೆಲ್ಮುಖ ವಾಗಿರುವ, ದಪ್ಪ ದೃಢವಾದ ಚುಂಚು. ದೊಡ್ಡ ತಲೆ, ಸಪುರಾದ ಕಾಲು ಇದಕ್ಕಿದೆ.  ಚುಂಚಿನ ಮುಕ್ಕಾಲು ಭಾಗ ಕಪ್ಪು ಬಣ್ಣದಿಂದಕೂಡಿದೆ.  ಹಳದಿ ಬಣ್ಣದ ಕ್ರೂರ ನೋಟ ಬೀರುವ ದೊಡ್ಡ ಕಣ್ಣು ಆದರ ಮಧ್ಯ ಕಪ್ಪು ಚುಕ್ಕೆ ಇದರ ನೋಟದ ತೀವ್ರತೆ ಹೆಚ್ಚಿಸಿದೆ. ಈ ಕಣ್ಣಿನ ನೋಟದಿಂದಾಗಿಯೇ ಇದಕ್ಕೆ ಕನ್ನಡಕದ ಕಣ್ಣಿನ  ಹಕ್ಕಿ ಎಂದೂ ಕರೆಯುವುದು. 

ಕಣ್ಣಿನ ಮೇಲೆ ಹುಬ್ಬಿನಂತೆ ಭಾಸವಾಗುವ ಬಿಳಿ ಗೆರೆಯ ಹುಬ್ಬು ಇದೆ. ಕಂದು ಬಣ್ಣದ ಗೆರೆಗಳಿರುವ ರೆಕ್ಕೆಯ ಹಕ್ಕಿ ಎನ್ನಲು ಅಡ್ಡಿ ಇಲ್ಲ. ಇದು ಹಾರುವುದಕ್ಕಿಂತ -ನೆಲದಮೇಲೆ ಓಡಾಡುವುದೇ ಹೆಚ್ಚು. 

ನೆಲದ ಮೇಲೆ ಓಡಿ ತನ್ನ ಆಹಾರ ಪಡೆಯುವುದು. ಹೀಗೆ ಹಾರುವಾಗ ರೆಕ್ಕೆಯ ಅಡಿಯಲ್ಲಿ ಬಿಳಿ ಬಣ್ಣದ ಎರಡು ರೇಖೆ ಸ್ಪಸ್ಟವಾಗಿ ಕಾಣುತ್ತದೆ.  ಇದನ್ನು ಇತರ ಹಕ್ಕಿಗಳಿಂದ ಪ್ರತ್ಯೇಕವಾಗಿ ಗುರುತಿಸಲು ಸಹಾಯಕ.  ಗಂಡು ಹೆಣ್ಣು ನೋಡಲು ಒಂದೇ ರೀತಿ ಕಾಣುತ್ತದೆ.  ಆಕಾರದಲ್ಲಿ ವ್ಯತ್ಯಾಸ ಇಲ್ಲ. ಇದು ಜೋಡಿಯಾಗಿ ಇಲ್ಲವೇ 4-6ರ ಗುಂಪಿನಲ್ಲಿ ತನ್ನ ಇರುನೆಲೆಗಳಲ್ಲಿ ಕಾಣಸಿಗುತ್ತದೆ. 
ಇದೊಂದು ಪ್ರಾದೇಶಿಕ ಹಕ್ಕಿ. ಸಮುದ್ರ ತೀರ, ಗಜನೀ ಪ್ರದೇಶ, ಕುರುಚಲು ಕಾಡು, ಬಯಲು ಪ್ರದೇಶ, ಕಲ್ಲು ಪಾರೆ ಇರುವ ಜಾಗ, ಉತ್ತ ಬಯಲು ಪ್ರದೇಶದಲ್ಲಿ ಸಾಮಾನ್ಯವಾಗಿ ಕಾಣುತ್ತದೆ. 

ಬಂಜರು ಭೂಮಿ ಇದಕ್ಕೆ ಪ್ರಿಯ. ಭಾರತ, ಬಾಂಗ್ಲಾ ದೇಶ, ಆಗ್ನೇಯ ಏಷಿಯಾದೇಶಗಳಲ್ಲಿ ಈ ಹಕ್ಕಿ ಇದೆ. ವಿದೇಶಗಳಲ್ಲಿನ ಪಕ್ಷಿಗಳ ಲಕ್ಷಣ ಸ್ವಲ್ಪ ಬೇರೆ ರೀತಿ ಇರುತ್ತದೆ.   ಹಾಗಾಗಿ ಇದನ್ನು ಇದರ ಉಪಜಾತಿ ಎಂದು ವಿಂಗಡಿಸಬಹುದು. ಇದು ನೆರಳಲ್ಲಿ ಇಲ್ಲವೇ ಗಿಡ ಮರಗಳ ತೋಪಿನಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತದೆ.  ಮುಸ್ಸಂಜೆ ಮತ್ತು ಬೆಳಗಿನ ಸಮಯದಲ್ಲಿ ಇದರ ಚಟುವಟಿಕೆ ಹೆಚ್ಚು. ಏಕೆಂದರೆ ಈ ಸಮಯದಲ್ಲಿ ಓತಿಕ್ಯಾತದಂಥ ಪ್ರಾಣಿಗಳ ಚಟುವಟಿಕೆ ಇರುವುದಿಲ್ಲ.  ಈ ಸಮಯವನ್ನೇ ಕಲ್ಲು ಗೊರ ತನ್ನ ಬೇಟೆಗೆ ಆರಿಸಿಕೊಳ್ಳುತ್ತದೆ.  ಇಂಥ  ಕತ್ತಲೆ ಗಪ್ಪಿನಲ್ಲಿ ಓಡಾಡಿ-ಕೀಟಗಳು, ಕಪ್ಪೆ, ಏಡಿ, ಓತಿಕ್ಯಾತ, ಹರಣೆ, ಹಲ್ಲಿ, ಚಿಕ್ಕ ಹಾವುಗಳನ್ನು ಹಿಡಿದು ತಿಂದು ಬಿಡುತ್ತದೆ.  ತುಂಬಾ ಗಾಬರಿಯಾದಾಗ ಕಾಲುಗಳನ್ನು ಮಡಚಿ,  ಎದೆಯನ್ನು ನೆಲಕ್ಕೆ ಒತ್ತಿ ಮುದುಡಿ ಕುಳಿತುಕೊಳ್ಳುತ್ತದೆ.  ದೂರದಿಂದಲೇ ತನಗೆ ಬರುವ ಅಪಾಯ, ಆಕ್ರಮಣ ಅರಿತು ತಪ್ಪಿಸಿಕೊಳ್ಳುತ್ತದೆ. 

 ಮೈ ಬಣ್ಣ ಹಳದಿ ಮತ್ತು ಗೆರೆಗಳಿಂದ ಕೂಡಿರುವ್ಯದರಿಂದ ಅದು ಪರಿಸರಕ್ಕೆ ಹೊಂದಿಕೊಂಡು ಎದುರಾಳಿಗಳಿಗೆ ಇದರ ಇರುವಿಕೆಯೇ ಅನುಮಾನ ಬಂರುವಂತೆ ಮಾಡಿ, ಕಕ್ಕಾಬಿಕ್ಕಿ ಮಾಡಿಬಿಡುವ ಚಾತಿಯೂ ಇದಕ್ಕಿದೆ.

ಕಲ್ಲುಗೊರವದ ಕೂಗು ಮುಂಜಾನೆ ಇಲ್ಲವೇ ಸಂಜೆಯಲ್ಲಿ. ಇದರ ಕೂಗನ್ನು ಕೇಳದ ಕಿವಿ ಇಲ್ಲ. ಆದರೆ ನೋಡಿದ ಕಣ್ಣುಗಳ ಬಹಳ ಕಡಿಮೆ.  ಕಲ್ಲು ಗೊರದ ಲಕ್ಷಣಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ವ್ಯತ್ಯಾಸದ ಅರಿವಾಗುತ್ತದೆ. ಇದರ ಚೂಪಾದ ಕಪ್ಪು ಚುಂಚು, ಗಂಟಿರುವ ನಗ್ನ ಕಾಲು, ಹಾರುವಾಗ ಇದರ ಕಂದು ಬಣ್ಣದ ರೆಕ್ಕೆಯ ಅಡಿಯಲ್ಲಿ ಕಾಣುವ ಎರಡು ಬಿಳಿಗೆರೆ. ಇದನ್ನು ಕೊಳದ ಬಕಕ್ಕಿಂತ ಭಿನ್ನ . ಇದು ಬೆಳದಿಂದಳ ರಾತ್ರಿಯಲ್ಲಿಯೂ ಸಹ ಕೂಗುತ್ತದೆ. ಇದರಂತೆ ಕೆಂಪು ಮೂತಿ ಟಿಟಿಭ ಕೂಗು ಹಾಗೂ ಕಲ್ಲು ಗೊರವದ ಕೂಗು ಭಿನ್ನವಾಗಿದೆ.  ತನ್ನ ಸಂಗಾತಿಯನ್ನು ಇಲ್ಲವೇ ತನ್ನ ಬಳಗದವರನ್ನು ಕರೆಯಲು ಕೂಗುವ ಕೂಗು, ವೆÏರಿಗಳ ಆಕ್ರಮಣವಾದಾಗ ಅದರ ರಕ್ಷಣೆಗಾಗಿ ಮಾಡುವ ಕೂಗು ಎಲ್ಲವನ್ನು ವಿಂಗಡಿಸಿ ಅಧ್ಯನ ಮಾಡಿದರೆ ಇದರ ಜೀವನ ಕ್ರಮ, ರಕ್ಷಣೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬಹುದು.  ಜೀವನ ಸರಪಳಿಯ ಸಮತೋಲನ ಕಾಯ್ದುಕೊಳ್ಳುವಲ್ಲಿ ಇದರ ಪಾತ್ರ ತುಂಬಾ ದೊಡ್ಡದು. 

 ನೆಲದಲ್ಲಿ ತಗ್ಗು ಮಾಡಿ  3-4 ಮೊಟ್ಟೆ ಇಡುತ್ತವೆ.  ಮೊಟ್ಟೆಯ ಮೇಲೆ ಕಂದು ಕೆನ್ನೀಲಿ ಮಚ್ಚೆ ಕಾಣತ್ತದೆ. ತಿಳಿ ಹಳದಿ ಮಿಶ್ರಿತ  ತಿಳಿ ಹಸಿರು ಬಣ್ಣ ಮೊಟ್ಟೆಗಿರುವುದರಿಂದ ಇದು ಪರಿಸರಕ್ಕೆ ಹೊಂದಿಕೊಳ್ಳುತ್ತದೆ.  ವೈರಿಗಳಿಗೆ ಇದೇ ಮೊಟ್ಟೆ ಅಂತ ತಿಳಿಯುವುದಿಲ್ಲ.  ಕಾವು ಕೊಡುವುದು, ಮೊಟ್ಟೆಯ ರಕ್ಷಣೆ, ಮರಿಗಳಿಗೆ ಗುಟುಕು ನೀಡುವುದು ಇತ್ಯಾದಿ ಕೆಲಸದಲ್ಲಿ ಗಂಡು ಹೆಣ್ಣು ಎರಡೂ ಭಾಗಿಯಾಗುತ್ತದೆ.  ಹುಳ ಹಿಡಿಯುವುದು ವೈರಿಗಳಿಂದ ಹೇಗೆ ರಕ್ಷಿಸಸಿಕೊಳ್ಳಬೇಕು ಎಂಬ ಜೀವನ ಕಲೆಯನ್ನು ಮರಿಗಳು ತಂದೆ ತಾಯಿ ಕಲಿಯುತ್ತದೆ.  
 

ಟಾಪ್ ನ್ಯೂಸ್

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

1

Lawyer Jagadish: ಮತ್ತೆ ಬಿಗ್‌ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್‌ ಜಗದೀಶ್‌ ಎಂಟ್ರಿ..!

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.