ಹೆಮ್ಮಿಂಚುಳ್ಳಿ-ದೊಡ್ಡ ಮಿಂಚುಳ್ಳಿ


Team Udayavani, May 4, 2019, 6:03 AM IST

1qw

ಆಕಾಶದಲ್ಲಿ ಹಾರುತ್ತಲೇ ಬೇಟೆಯನ್ನು ಗುರುತಿಸಿ ಬೇಟೆಯಾಡಲು ದೊಡ್ಡ ಮಿಂಚುಳ್ಳಿಗೆ ಬರುವುದಿಲ್ಲ. ತೇಲುತ್ತಿರುವ ಮೀನುಗಳನ್ನು ಸಮೀಪದಿಂದ ಗಮನಿಸಿ, ಅವುಗಳನ್ನು ಗಬಕ್ಕನೆ ಹಿಡಿಯುವುದು ಇದರ ಬೇಟೆಯ ವೈಖರಿ.

Stork Billed Kingfisher- -Halcyon capensis- R Pigeon +ಮೀನು ತಿನ್ನುವ ಹಕ್ಕಿಗಳಲ್ಲಿಯೇ ದೊಡ್ಡದಾದ ಹಕ್ಕಿ ಹೆಮ್ಮಿಂಚುಳ್ಳಿ. ಹಳ್ಳದ ದಂಡೆಯಲ್ಲಿರುವ ಮರಗಳ ಮೇಲೆ ಕುಳಿತು ನೀರಿನಲ್ಲಿ ಕಾಣುವ ಮೀನನ್ನು ಬೇಟೆಯಾಡುತ್ತದೆ. ಒಂಥರಾ ನಕ್ಕಂತೆ ಕೂಗುತ್ತದೆ . ಕುಳಿತಾಗ, ಕೂಗುತ್ತಿರುವಾಗ ಕೂಗಿಗೊಮ್ಮೆ ಬಾಲದ ಪುಕ್ಕ ಕುಣಿಸುತ್ತದೆ. ಕೆಂಪು ಕಂದುಬಣ್ಣದ ಹೊಳೆವ ಬಣ್ಣ ಹಾರುವಾಗ ಬಣ್ಣದ ಚುಂಚು ಹೊಳೆದಂತೆ ಕಾಣುತ್ತದೆ. ಹಾಗಾಗಿ ಇದಕ್ಕೆ ಮಿಂಚುಳ್ಳಿ ಎಂಬ ಹೆಸರು ಬಂದಿರಬಹುದು. ಇದು 38 ಸೆಂಮೀ ದೊಡ್ಡದು. ಇತರ ಮಿಂಚುಳ್ಳಿಗಳಂತೆ ಕೆಂಪು ಬಣ್ಣದ ಕಾಲಿನ ಹಿಂದಿನ ಬೆರಳು ದಪ್ಪ ಹಾಗೂ ಸಣ್ಣಗಿದೆ. ಮುಂದಿನ ಮೂರು ಬೆರಳುಗಳಲ್ಲಿ ಮಧ್ಯದ ಬೆರಳು ಉದ್ದವಾಗಿದೆ. ಬೆರಳುಗಳ ತುದಿಯಲ್ಲಿ ಕಂದು ಬಣ್ಣದ ಉಗುರುಗಳಿವೆ. ಇದರ ಕೆಂಪು ಬಣ್ಣದ ದೊಡ್ಡ ಚುಂಚು ಎದ್ದು ಕಾಣುತ್ತದೆ. ಇದನ್ನು ಗುರುತಿಸುವುದು ಸುಲಭ. ದೊಡ್ಡ ತಲೆ ಕೆಂಪು ಮಿಶ್ರಿತ ಕಂದುಬಣ್ಣ. ಎದೆಯ ಭಾಗದ ಬಿಳಿಬಣ್ಣ ಕುತ್ತಿಗೆ ಪಟ್ಟಿಯಂತೆ ಹಿಂದಿನಿಂದ ಕಾಣುತ್ತದೆ. ಕೆಂಪು ಕಂದು ಬಣ್ಣದ ಮಕಮಲ್‌ ಟೋಪಿ ತಲೆಯಲ್ಲಿರುವಂತೆ ಭಾಸವಾಗುವುದು.

ಇದಕ್ಕೆ ಉಳಿದ ಮಿಂಚುಳ್ಳಿಗಳಂತೆ ಆಕಾಶದಲ್ಲೆ ನಿಂತು ಹಾರುತ್ತಾ ಗುರಿ ಇಡಲು ಬರುವುದಿಲ್ಲ. ತೇಲುವ ಮೀನಿನ ಚಲನ ವಲನ ಗಮನಿಸಿ ಗುರಿ ಇಟ್ಟು ಮೀನು ಹಿಡಿಯುವಲ್ಲಿ ನಿಪುಣ ಹಕ್ಕಿ. ಇದೇ ಈ ಮಿಂಚುಳ್ಳಿಯ ಬೇಟೆ ವೈಖರಿ. ನೀಲಿ ವರ್ಣದ ಪುಕ್ಕ ಇದರ ಚೆಲುವನ್ನು ಹೆಚ್ಚಿಸಿದೆ. ಜಲಾವೃತ ಪ್ರದೇಶ, ಗಜನಿ ಪ್ರದೇಶ, ಕಾಡಿನಲ್ಲಿ ನೀರಿರುವ ಜಾಗದಲ್ಲಿ ಇದು ಟೆಲಿಫೋನ್‌ ತಂತಿ ಅಥವಾ ಮರದ ಟೊಂಗೆಗಳಲ್ಲಿ ಕುಳಿತು ಕೂಗುವುದರಿಂದ ಇದರ ಇರುವನ್ನು ಸುಲಭವಾಗಿ ತಿಳಿಯಬಹುದು. ಹಾರುವಾಗ ಬಣ್ಣದ ಬೀಸಣಿಗೆಯಂತೆ ಕಾಣುವುದನ್ನು ಸೆರೆ ಹಿಡಿಯುವುದು ಹಕ್ಕಿ ಪ್ರಿಯರಿಗೆ ಸವಾಲು.

ರಾಜಸ್ಥಾನ ಒಂದನ್ನು ಬಿಟ್ಟು ಭಾರತದ ತುಂಬೆಲ್ಲಾ ಇದೆ. ಬಾಂಗ್ಲಾದೇಶ. ಸಿಲೋನ್‌ ಬರ್ಮಾ ದೇಶದಲ್ಲೂ ಕಾಣಸಿಗುತ್ತದೆ. ಕುಮಟಾ, ಮೂರೂರು, ಹೊನ್ನಾವರ, ಸಿದ್ದಾಪುರ, ಯಲ್ಲಾಪುರ, ಮಾಸೂರು, ತದಡಿ, ಬಾಡ, ಹೆಗಡೆ, ಬಡಾಳ ಈ ಭಾಗದಲ್ಲಿ ಅಘನಾಶಿನಿ ನದಿಯ ಗುಂಟ ಕಾಣುತ್ತಲೇ ಇರುತ್ತದೆ. ಮೀನು, ಏಡಿ, ಕಪ್ಪೆ ಹಾವು, ಕೆಲವೊಮ್ಮೆ ಹಕ್ಕಿಗಳ ಮೊಟ್ಟೆ ಮರಿಗಳನ್ನೂ ಕಬಳಿಸಿಬಿಡುತ್ತದೆ. ಬೆಳ್ಳಕ್ಕಿ, ಐಬೀಸ್‌, ಬಕ, ಕೊಕ್ಕರೆಗಳಿರುವ ಭತ್ತದ ಗದ್ದೆಗಳ ಸಮೀಪದ ನೀರಿನ ಹರಿವಿನ ಹತ್ತಿರ ಇದು ಇದ್ದೇ ಇರುವುದು.

ಜನವರಿಯಿಂದ ಜುಲೈ ಇದು ಮರಿಮಾಡುವ ಸಮಯ. ನದಿಗಳ ಅಂಚಿನ ಗೋಡೆಗಳಲ್ಲಿ ಭೂಮಿಗೆ ಸಮಾನಾಂತರದಲ್ಲಿ ಬಿಲ ಕೊರೆದು ಗೂಡು ಮಾಡುತ್ತದೆ. ಹೆಣ್ಣು-ಮರಿಗಳಿಗೆ ಹೆಚ್ಚು ಸಮಯ ಆಹಾರ ಪೂರೈಸುತ್ತದೆ. ಗಂಡು ಮರಿಗಳ ರಕ್ಷಣೆಗೆ ದೂರದಲ್ಲಿ ಕುಳಿತು ಕಾವಲು ಕಾಯುವುದು. ಯಾರಾದರೂ ಗೂಡಿನ ಸಮೀಪ ಬಂದರೆ ಅಥವಾ ಇತರ ಪಕ್ಷಿಗಳು ಬಂದರೆ ತನ್ನ ಕೂಗಿನಿಂದ ಹೆಣ್ಣಿಗೆ ಸೂಚನೆ ನೀಡುತ್ತದೆ. ಹೀಗೆ, ಮರಿಗಳ ರಕ್ಷಣೆ ಜವಾಬ್ದಾರಿ ಗಂಡಿನದು. ಗಂಡು ಹೆಣ್ಣು ಎರಡೂ ಮರಿಗಳ ಪೋಷಣೆ ಪಾಲನೆಯಲ್ಲಿ ಭಾಗಿಯಾದರೂ ಮರಿಗಳಿಗೆ ಆಹಾರ, ಗುಟುಕು ನೀಡುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವುದು ಹೆಣ್ಣು ಹಕ್ಕಿ. ಬಣ್ಣ , ಆಕಾರಗಳು ಹಾಗೂ ಆಹಾರ ವೈವಿಧ್ಯತೆಯಿಂದ ಈ ಹಕ್ಕಿಗಳನ್ನು ಬೇರೆ ಬೇರೆ ಗುಂಪಾಗಿ ವಿಂಗಡಿಸಲಾಗಿದೆ. ಆದರೆ ಸ್ವಭಾವದಲ್ಲಿ ಏಕಸೂತ್ರಇದೆ. ಈ ಹಕ್ಕಿಗೆ ವಯಸ್ಸಾದಂತೆ ಚುಂಚು ರೆಕ್ಕೆಗಳ ಬಣ್ಣ ಮಾಸುವುದು. ಇದಕ್ಕೆ ಕಾರಣ ತಿಳಿದಿಲ್ಲ.

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.