ಕಾಲಕ್ಕೆ ತಕ್ಕಂತೆ ಬದಲಾದ ಜೆರ್ಸಿ

ಟೀಂ ಇಂಡಿಯಾದ ಬಣ್ಣ...ಬಣ್ಣದ ಜೆರ್ಸಿ ಕಥೆ, ಬದಲಾದ ಸಮಯದಲ್ಲಿ ಭಾರತ ಕ್ರಿಕೆಟ್‌ ಚಿತ್ರಣ

Team Udayavani, Jun 22, 2019, 10:36 AM IST

2003-jersy

ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಕಾಲ ಎಲ್ಲವನ್ನೂ ನಿರ್ಧರಿಸುತ್ತದೆ. ಯಾವುದೇ ಕ್ಷೇತ್ರವಾದರೂ ಸರಿ, ಬದಲಾವಣೆ ಅನಿವಾರ್ಯ. ಕ್ರಿಕೆಟ್‌ ಕ್ಷೇತ್ರವೂ ಅದಕ್ಕೆ ಹೊರತಾಗಿಲ್ಲ.

ಹೌದು, ಕ್ರಿಕೆಟ್‌ ಒಂದು ಆಟವಾಗಿ ಆರಂಭವಾಗಿತ್ತು. ಮನೋರಂಜನೆ ಬಿಟ್ಟರೆ ಬೇರೆ ಯಾವ ವಿಷಯವೂ ಅಲ್ಲಿರಲಿಲ್ಲ. ಕಾಲ ಕಳೆಯಿತು, ನಿಧಾನವಾಗಿ ಕ್ರಿಕೆಟ್‌ ತನ್ನ ವ್ಯಾಪ್ತಿ ಹೆಚ್ಚಿಸಿಕೊಂಡಿತು. ಒಂದು ವೃತ್ತಿಯಾಗಿ ಬೆಳೆಯಲು ಆರಂಭಿಸಿತು. ವೃತ್ತಿ ಪರ ಲೀಗ್‌ ಆರಂಭಕ್ಕೆ ನಾಂದಿ ಹಾಡಿತು. ನೂರಾರು ಕ್ರಿಕೆಟಿಗರಿಗೆ ಭವಿಷ್ಯ ಕಟ್ಟಿಕೊಟ್ಟಿತ್ತು. ನೇರ ಪ್ರಸಾರ, ತಾಂತ್ರಿಕ ಸಿಬ್ಬಂದಿ, ಕೋಟ್ಯಂತರ ಅಭಿಮಾನಿಗಳು ಹೀಗೆ ಒಂದು ಕ್ರಿಕೆಟ್‌ ಬೆಳೆಯುವ ಹಿಂದೆ ಅದೆಷ್ಟೋ ಜನರಿದ್ದಾರೆ. ನೋಡುವ ಕಣ್ಣುಗಳಿಂದಲೇ ಕ್ರಿಕೆಟ್‌ ಇಂದು ವಿಶ್ವದ ಅದ್ಭುತ ಕ್ರೀಡಾ ಶಕ್ತಿಯಾಗಿ ಹೊರಹೊಮ್ಮಿದೆ.

32 ವರ್ಷಗಳಲ್ಲಿ ಬದಲಾದ ಜೆರ್ಸಿ
ಕ್ರಿಕೆಟ್‌ ವಿಶ್ವದ 10 ರಾಷ್ಟ್ರಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ನಮ್ಮವರಿಗೆ ಕ್ರಿಕೆಟ್‌ ಎಂದರೆ ದೇವರು. ದೇಶದಲ್ಲಿ ಕ್ರಿಕೆಟ್‌ ಹೊರತುಪಡಿಸಿ ಮತ್ತೂಂದು ಕ್ರೀಡೆ ಅಷ್ಟೊಂದು ಬೆಳೆದಿಲ್ಲ. ಕಪಿಲ್‌ದೇವ್‌, ಸುನಿಲ್‌ ಗಾವಸ್ಕರ್‌, ಸಚಿನ್‌ ತೆಂಡುಲ್ಕರ್‌, ಸೌರವ್‌ ಗಂಗೂಲಿ, ವಿವಿಎಸ್‌ ಲಕ್ಷ್ಮಣ್‌, ರಾಹುಲ್‌ ದ್ರಾವಿಡ್‌ ಸೇರಿದಂತೆ ಹಲವಾರು ಕ್ರಿಕೆಟಿಗರನ್ನು ಈಗಾಗಲೇ ವಿಶ್ವಕ್ಕೆ ಪರಿಚಯಿಸಿದ್ದೇವೆ. ಈಗಿನ ಜಮಾನದಲ್ಲಿ ವಿರಾಟ್‌ ಕೊಹ್ಲಿ, ಎಂ.ಎಸ್‌.ಧೋನಿ, ರೋಹಿತ್‌ ಶರ್ಮರಂತಹ ಪ್ರಚಂಡ ಪ್ರತಿಭಾವಂತರು ಟೀಂ ಇಂಡಿಯಾ ಪ್ರತಿನಿಧಿಸುತ್ತಿದ್ದಾರೆ. ಹಿಂದಿನ ಆಟಗಾರರ ಬ್ಯಾಟಿಂಗ್‌ ಶೈಲಿಗೆ ಹೋಲಿಸಿದರೆ ಸಾಕಷ್ಟು ತಾಂತ್ರಿಕ ಬದಲಾವಣೆಯನ್ನು ಈಗಿನ ಆಟಗಾರರಲ್ಲಿ ಕಾಣಬಹುದು. ಯೋ ಯೋ ಟೆಸ್ಟ್‌ ಸೇರಿದಂತೆ ಹಲವಾರು ತಾಂತ್ರಿಕ ಗುಣಮಟ್ಟವನ್ನು ಬದಲಾದ ಕಾಲದಲ್ಲಿ ನೋಡಬಹುದು. ಎಲ್ಲದರಲ್ಲೂ ಪರಿಷ್ಕೃತ ಬದಲಾವಣೆ ಮಾಡಿಕೊಳ್ಳಲಾಗಿದೆ. ಹಾಗೆಯೆ ಆಟಗಾರರ ಜೆರ್ಸಿಯಲ್ಲೂ ಕಾಲಕಾಲಕ್ಕೆ ಬದಲಾಗಿದೆ. ವಿಶ್ವಕಪ್‌ ಸೇರಿದಂತೆ ಪ್ರಮುಖ ಕೂಟದಲ್ಲಿ ಒಂದೊಂದು ಜೆರ್ಸಿಯನ್ನು ಕಾಣಬಹುದು. ಟೀಂ ಇಂಡಿಯಾ ಕೂಡ ತನ್ನ ಜೆರ್ಸಿಯನ್ನು ಹಲವು ಸಲ ಬದಲಾಯಿಸಿಕೊಂಡಿದೆ. ಎಲ್ಲವೂ ಬಣ್ಣ ಬಣ್ಣದ್ದಾಗಿದೆ. ಈ ನಿಟ್ಟಿನಲ್ಲಿ ಟೀಂ ಇಂಡಿಯಾ ಬದಲಾಯಿಸಿದ ಬಣ್ಣದ ಜೆರ್ಸಿಯ ಕಥೆ ಇಲ್ಲಿದೆ. ಯಾವ ವರ್ಷ, ಯಾವ ಬಣ್ಣದಲ್ಲಿ ಟೀಂ ಇಂಡಿಯಾ ಆಟಗಾರರು ಭಾರತ ತಂಡ ಪ್ರತಿನಿಧಿಸಿದ್ದರು ಎನ್ನುವ ಕಲರ್‌ ಫ‌ುಲ್‌ ಚಿತ್ರಣ ಇಲ್ಲಿದೆ ನೋಡಿ..

1980 ಬಳಿಕ ಭಾರತಕ್ಕೆ ಮೊದಲ ಬಣ್ಣದ ಜೆರ್ಸಿ: ಕ್ರಿಕೆಟ್‌ನಲ್ಲಿ ಮೊದಲ ಸಲ ಬಣ್ಣದ ಜೆರ್ಸಿ ಆರಂಭವಾಗಿದ್ದು 1985 ರ ನಂತರ. ಆಗ ಭಾರತ ತಂಡದ ಜೆರ್ಸಿ ಮೇಲೆ ಪ್ರಾಯೋಜಕರ ಹೆಸರು ಕೂಡ ಇರಲಿಲ್ಲ. ಇದಕ್ಕೂ ಮೊದಲು ಎಲ್ಲ ತಂಡದ ಆಟಗಾರರಿಗೆ ಇದ್ದದ್ದು ಬಿಳಿ ಬಣ್ಣದ ಶರ್ಟ್‌, ಪ್ಯಾಂಟ್‌. ಬಣ್ಣದ ಬಟ್ಟೆ. ಕ್ರೀಡಾಂಗಣದಲ್ಲಿ ಯಾವ ದೇಶದ ಆಟಗಾರ ಎನ್ನುವುದನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುವ ಕಾರಣಕ್ಕೆ ಬಣ್ಣದ ಬಟ್ಟೆ ಪರಿಚಯಿಸಲಾಯಿತು.

1992ರಲ್ಲಿ ಕಡು ನೀಲಿ ಜೆರ್ಸಿ: 1992ರಲ್ಲಿ ಭಾರತ ಮೊದಲ ಸಲ ಬಣ್ಣದ ಜೆರ್ಸಿಯನ್ನು ವಿಶ್ವಕಪ್‌ನಲ್ಲಿ ಹಾಕಿ ಕಣಕ್ಕೆ ಇಳಿಯಿತು. ಮೊಹಮ್ಮದ್‌ ಅಜರುದ್ದಿನ್‌ ಕಡು ನೀಲಿ ಬಣ್ಣದ ಜೆರ್ಸಿ ತೊಟ್ಟ ಭಾರತ ತಂಡದ ನಾಯಕರಾಗಿದ್ದರು. ಹಸಿರು, ಕೆಂಪು ಹಾಗೂ ಬಿಳಿ ಬಣ್ಣದ ಸ್ಟಿಚ್‌ ಅನ್ನು ಭುಜದ ಸಮೀಪ ಕಾಣಬಹುದಾಗಿತ್ತು. ಜೆರ್ಸಿ ಮುಂಭಾಗದಲ್ಲಿ ದೇಶದ ಹೆಸರು. ಹಿಂಬದಿಯಲ್ಲಿ ಆಟಗಾರ ಹೆಸರು ಇತ್ತು.

1993 ನೀಲಿ ಶರ್ಟ್‌ಗೆ ಕೊಕ್‌: ವಿಶ್ವಕಪ್‌ ಕ್ರಿಕೆಟ್‌ ಕೂಟದಲ್ಲಿ ಕಡು ನೀಲಿ ಬಣ್ಣದ ಜೆರ್ಸಿ ತೊಟ್ಟಿದ್ದ ಭಾರತ 1993ರಷ್ಟರಲ್ಲಿ ಹಠಾತ್‌ ಆಗಿ ಹಳದಿ ಬಣ್ಣದ ಶರ್ಟ್‌ ಧರಿಸಲು ಆರಂಭಿಸಿತು. ನೀಲಿ ಬಣ್ಣದ ಪ್ಯಾಂಟ್‌ನಲ್ಲೂ ಸ್ವಲ್ಪ ಬದಲಾವಣೆ ಮಾಡಿಕೊಂಡಿತ್ತು.

1996 ಬಣ್ಣ ಬದಲು, ಪಟ್ಟಿ ಒಂದೇ: 1996ರ ವಿಶ್ವಕಪ್‌ ಸಮಯದಲ್ಲಿ ಎಲ್ಲ ತಂಡಗಳ ಜೆರ್ಸಿ ಬಣ್ಣ ವಿವಿಧತೆಯಿಂದ ಕೂಡಿತ್ತು. ಆದರೆ ಮುಂಭಾಗ ಹಾಗೂ ಹಿಂಭಾಗದಲ್ಲಿ ಎಲ್ಲರಿಗೂ ಒಂದೇ ರೀತಿಯ ಪಟ್ಟಿಯನ್ನು ವಿನ್ಯಾಸಗೊಳಿಸಲಾಗಿತ್ತು. ನೋಡಲು ಅತ್ಯಾಕರ್ಷಕವಾಗಿತ್ತು. ಭಾರತ ಈ ಕೂಟದಲ್ಲಿ ತಿಳಿ ನೀಲಿ ಮತ್ತು ಹಳದಿ ಬಣ್ಣದ ಮಿಶ್ರಣ ಹೊಂದಿತ್ತು.

ವಿನೂತನ ಪ್ರಯೋಗಕ್ಕೆ 1999 ವಿಶ್ವಕಪ್‌ ಸಾಕ್ಷಿ: ತಿಳಿ ನೀಲಿ ಮತ್ತು ಹಳದಿ ಜೆರ್ಸಿಯಲ್ಲಿ ಭಾರತೀಯ ಆಟಗಾರರು ವಿಶ್ವಕಪ್‌ ಕೂಟದಲ್ಲಿ ಕಂಗೊಳಿಸಿದರು. ಜೆರ್ಸಿಯ ಮುಂಭಾಗದಲ್ಲಿ ಓರೆಯಾಗಿ “ಆರ್‌’ ಆಕೃತಿಯಲ್ಲಿ ಹಳದಿ ಬಣ್ಣ ಕಾಣಬಹುದಾಗಿದೆ. ಇದು ಅಷ್ಟೂ ಜೆರ್ಸಿಗಳ ಪೈಕಿ ವಿನೂತನ ಪ್ರಯೋಗ ಎಂದರೆ ತಪ್ಪಾಗಲಾರದು.

ಪೇಯಿಂಟ್‌ ಜೆರ್ಸಿ!: ಆಗ ನಾಟ್‌ ವೆಸ್ಟ್‌ ಸರಣಿ ಸಮಯ 2002, ಭಾರತ ತಂಡ ಇಂಗ್ಲೆಂಡ್‌ ಸೋಲಿಸಿ ಇತಿಹಾಸ ನಿರ್ಮಿಸಿತ್ತು. ಆ ಸಮಯದಲ್ಲಿ ಭಾರತ ಜೆರ್ಸಿಯ ಮುಂಭಾಗದಲ್ಲಿ ಬ್ರಶ್‌ನಲ್ಲಿ ಬಣ್ಣದ ರಾಷ್ಟ್ರಧ್ವಜವನ್ನು ಚಿತ್ರಿಸಿದ ರೀತಿಯಲ್ಲಿ ಕಲರ್‌ಫ‌ುಲ್‌ ಆಗಿ ನೀಡಲಾಗಿತ್ತು. ಹೊಸ ಟ್ರೆಂಡ್‌ ಅನ್ನು ಈ ಜೆರ್ಸಿ ಸೃಷ್ಟಿಸಿತ್ತು.

2003ರ ವಿಶ್ವಕಪ್‌ಗೆ ಕಡು ನೀಲಿ ಟೆಚ್‌: 2003 ವಿಶ್ವಕಪ್‌ ವೇಳೆ ಜೆರ್ಸಿಯಲ್ಲಿ ಕೆಲವು ಬದಲಾವಣೆ ಮಾಡಲಾಗಿತ್ತು. ತಿಳಿ ನೀಲಿ ಬದಲಾಗಿ ಸ್ವಲ್ಪ ನೀಲಿ ಬಣ್ಣ ಹೆಚ್ಚಿಸಲಾಗಿತ್ತು. ಜತೆಗೆ ಜೆರ್ಸಿ ಅಂದವಾಗಿ ಕಾಣಸಲು ಕಪ್ಪು ಬಣ್ಣದ ಪ್ಯಾಚ್‌ ಅಪ್‌ ಮಾಡಲಾಗಿತ್ತು. ಅದರ ಜತೆಗೆ ಮುಂಭಾಗದಲ್ಲಿ ಭಾರತದ ರಾಷ್ಟ್ರ ಧ್ವಜದ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣವನ್ನು ಚೆಂದವಾಗಿ ವಿನ್ಯಾಸ ಮಾಡಲಾಗಿತ್ತು. ಮುಂಭಾಗದಲ್ಲಿ ಭಾರತ ಎಂದು ಬರೆಯಲಾಗಿತ್ತು.

2007 ವಿಶ್ವಕಪ್‌ನಲ್ಲಿ ಹೊಸತನದ ಪ್ರಯೋಗ: 2007ರ ವಿಶ್ವಕಪ್‌ ಕೂಟದಲ್ಲೂ ಭಾರತ ತಂಡದ ಜೆರ್ಸಿ ಬದಲಾಗಿತ್ತು. ನೀಲಿ ಬಣ್ಣದಲ್ಲಿ ಜೆರ್ಸಿ ಇದ್ದರೂ ಹೊಸದಾಗಿ ಮುಂಭಾಗದಲ್ಲಿ ಪ್ರಾಯೋಜಕರ ಹೆಸರು ಹಾಕಲಾಗಿತ್ತು. ಬದಿಯಲ್ಲೇ ಟೀಂ ಇಂಡಿಯಾದ ಹೆಸರನ್ನು ವಿನ್ಯಾಸಗೊಳಿಸಲಾಗಿತ್ತು.

2011ರ ವಿಶ್ವಕಪ್‌ ಪ್ರಾಯೋಜಕರಿಗೆ ಕೊಕ್‌: 2011ರ ವಿಶ್ವಕಪ್‌ನಲ್ಲಿ ಎಂ.ಎಸ್‌.ಧೋನಿ ನೇತೃತ್ವದ ಭಾರತ ತಂಡ ಚಾಂಪಿಯನ್‌ ಆಗಿತ್ತು. ಈ ವೇಳೆಯೂ ಟೀಂ ಇಂಡಿಯಾ ಆಟಗಾರರು ಬದಲಾದ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದರು. ಜೆರ್ಸಿ ಮುಂಭಾಗದಲ್ಲಿ ಆಕ್ರಮಿಸಿಕೊಂಡಿದ್ದ ಟೀಂ ಇಂಡಿಯಾ ಪ್ರಾಯೋಜಕ ಸಹರಾ ಹೆಸರನ್ನು ತೆಗೆಯಲಾಗಿತ್ತು, ತೆಳುವಾದ ಪಟ್ಟಿ ಮೂಲಕ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣವನ್ನು ಚಿತ್ರಿಸಲಾಗಿತ್ತು.

ವಿಶ್ವಕಪ್‌ ಬಳಿಕ ಮತ್ತೂಮ್ಮೆ ಬದಲು: ವಿಶ್ವಕಪ್‌ ಯಶಸ್ವಿಯಾಗಿ ಗೆದ್ದಿದ್ದ ಭಾರತ ಒಂದೇ ವರ್ಷದಲ್ಲಿ ಜೆರ್ಸಿ ಬದಲಾಯಿಸಿಕೊಂಡಿತು, ಹೊಸ ತನಕ್ಕೆ ಒಗ್ಗಿಕೊಂಡಿತು. ಸಹಾರಾ ಮತ್ತೂಮ್ಮೆ ಫ್ರಾಂಚೈಸಿಯಾಗಿ ಭಾರತ ಕ್ರಿಕೆಟ್‌ ತಂಡದ ಜೆರ್ಸಿಯ ಮುಂಭಾಗದಲ್ಲಿ ರಾರಾಜಿಸಿತು.

2015ರಲ್ಲಿ ಕಾಣಿಸಿಕೊಂಡಿದ್ದ ಜೆರ್ಸಿ: ವಿಶ್ವಕಪ್‌ ಕ್ರಿಕೆಟ್‌ ಕೂಟವನ್ನು ಗಮನದಲ್ಲಿರಿಸಿಕೊಂಡು ಹೊಸ ಪ್ರಯೋಗ ನಡೆಸಲಾಯಿತು. ಸಂಪೂರ್ಣ ಜೆರ್ಸಿಯ ವಿನ್ಯಾಸ ಬದಲಾಯಿಸಲಾಯಿತು. ಪ್ರಾಯೋಜಕರ ಹೆಸರು, ಭಾರತದ ಹೆಸರು, ಬಿಸಿಸಿಐ ಚಿಹ್ನೆ ಜೆರ್ಸಿ ಮುಂಭಾಗದಲ್ಲಿ ಕಾಣಿಸಿಕೊಂಡಿತು.

ಟಾಪ್ ನ್ಯೂಸ್

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

1-sidd-nirmala

NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Shirva: ಮಲಗಿದಲ್ಲೇ ವ್ಯಕ್ತಿ ಸಾವು; ಪ್ರಕರಣ ದಾಖಲು

Shirva: ಮಲಗಿದಲ್ಲೇ ವ್ಯಕ್ತಿ ಸಾ*ವು; ಪ್ರಕರಣ ದಾಖಲು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

1-sidd-nirmala

NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.