ಸೌತೆಪ್ರಿಯನ ಸಂತರ್ಪಣೆ

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ, ಬೆಳ್ತಂಗಡಿ ತಾ.

Team Udayavani, Oct 12, 2019, 4:07 AM IST

soute-priya

ಇಲ್ಲಿನ ಗಣಪನಿಗೆ ಗರ್ಭಗುಡಿ ಇಲ್ಲ; ಗೋಡೆ- ಗೋಪುರಗಳೂ ಇಲ್ಲ. ಬಯಲು ಗಣಪತಿ ಈತ. ಬೆಳ್ತಂಗಡಿ ತಾಲೂಕಿನ ಸೌತಡ್ಕದ ಸುಂದರ ಪರಿಸರದಲ್ಲಿ ನೆಲೆನಿಂತ ಮಹಾ ಗಣಪತಿಯ ಸನ್ನಿಧಾನದಲ್ಲಿ ಅನ್ನ ಸಂತರ್ಪಣೆಯೂ ಒಂದು ಸಂಭ್ರಮ. ಪ್ರತಿದಿನ ಮಧ್ಯಾಹ್ನದ ಅನ್ನಸಂತರ್ಪಣೆಗೆ ದೈವಿಕ ವಿಶೇಷವಿದೆ. ಮಕ್ಕಳಅನ್ನಪ್ರಾಶನಕ್ಕೆ ಸದ್ಭಕ್ತರು ಮುಗಿಬೀಳುತ್ತಾರೆ.

ಸೌತೆಯಿಂದ ಸಂತರ್ಪಣೆಯ ತನಕ…: ದಟ್ಟಾರಣ್ಯದ ಕಾಡಿನಲ್ಲಿ ಗೋಪಾಲಕರಿಗೆ ಗಣಪತಿಯ ಶಿಲಾವಿಗ್ರಹ ಸಿಗುತ್ತದೆ. ಗೋಪಾಲಕರು ಅದನ್ನು ಒಂದು ಸ್ಥಳದಲ್ಲಿ ಕಟ್ಟೆಯ ಮೇಲೆ ಪ್ರತಿಷ್ಠಾಪಿಸುತ್ತಾರೆ. ಆ ಸ್ಥಳವೇ ಸೌತಡ್ಕ ಕ್ಷೇತ್ರ ಆಯಿತು. ಗೋಪಾಲಕರು ಗಣಪತಿಗೆ ಸೌತೆಕಾಯಿಯನ್ನು ಸಮರ್ಪಿಸಿದ್ದರಂತೆ. ಅದಕ್ಕಾಗಿ ಇಲ್ಲಿಗೆ “ಸೌತಡ್ಕ’ ಎಂಬ ಹೆಸರು ಬಂತು. ಸೌತೆಕಾಯಿ ನೈವೇದ್ಯದ ಸಂಪ್ರದಾಯ ಇಂದಿಗೂ ಇದೆ.

ನಿತ್ಯ ಸಾವಿರ ಭಕ್ತರಿಗೆ ಭೋಜನ: ನಿತ್ಯವೂ ಇಲ್ಲಿ 1000ಕ್ಕೂ ಅಧಿಕ ಭಕ್ತರು, ಭೋಜನ ಸವಿಯುತ್ತಾರೆ. ಸಂಕಷ್ಟಿ, ಭಾನುವಾರ ಹಾಗೂ ರಜಾದಿನಗಳು ಭಕ್ತರ ಸಂಖ್ಯೆ ಹೆಚ್ಚುತ್ತದೆ. ಚೌತಿ, ಮೂಡಪ್ಪ ಸೇವೆಯ ದಿನಗಳಲ್ಲಿ 5- 6 ಸಾವಿರದ ಗಡಿ ದಾಟುತ್ತದೆ.

ಆಧುನಿಕ ಅಡುಗೆಮನೆ: ಸೋಲಾರ್‌ ಚಾಲಿತ ಆಧುನಿಕ ಶೈಲಿಯ, ದೊಡ್ಡ ಹಾಗೂ ಮಧ್ಯಮ ಗಾತ್ರದ 5 ಬಾಯ್ಲರ್‌ಗಳಿವೆ. ಅನ್ನ, ಪಾಯಸ, ಸಾಂಬಾರ್‌ ಸಿದ್ಧಗೊಳ್ಳುವುದು ಇವುಗಳಲ್ಲಿಯೇ. ಅಡುಗೆ ತಯಾರಿಕೆಗೆ ಗ್ಯಾಸ್‌ ಸಿಲಿಂಡರ್‌ ಜತೆಗೆ ಕಟ್ಟಿಗೆ ಒಲೆಯ ವ್ಯವಸ್ಥೆಯೂ ಇದೆ.

ಸುಸಜ್ಜಿತ ಭೋಜನಶಾಲೆ: ಇಲ್ಲಿನ ಭೋಜನ ಶಾಲೆಯು ಸುಸಜ್ಜಿತ. ಏಕಕಾಲದಲ್ಲಿ ಸಾವಿರ ಮಂದಿ ಕುಳಿತು ಭೋಜನ ಸವಿಯಬಹುದು. ವಿಶೇಷಚೇತನರಿಗೆ ಟೇಬಲ್‌ ಊಟದ ವ್ಯವಸ್ಥೆ ಇರುತ್ತದೆ.

ಭಕ್ಷ್ಯ ವಿಶೇಷ: ನಿತ್ಯವೂ ಅನ್ನ, ತಿಳಿಸಾರು, ಸಾಂಬಾರು, ಗಟ್ಟಿ ಪಲ್ಯ, ಪಾಯಸ, ಮಜ್ಜಿಗೆ. ಬಾಳೆಎಲೆ ಮತ್ತು ಊಟದ ತಟ್ಟೆಯಲ್ಲಿ ಭೋಜನ ವ್ಯವಸ್ಥೆ.

ಊಟದ ಸಮಯ: ಮಧ್ಯಾಹ್ನ 12.30- 2.30

ಏಕಾದಶಿಗೆ ಉಪಹಾರ: ಏಕಾದಶಿ ದಿನಗಳಲ್ಲಿ ಊಟವಿರುವುದಿಲ್ಲ. ಈ ದಿನಗಳಲ್ಲಿ ಉಪಾಹಾರ ವ್ಯವಸ್ಥೆ ಇರುತ್ತದೆ ಉಪ್ಪಿಟ್ಟು, ಅವಲಕ್ಕಿ, ಸಾಂಬಾರು, ಮೊಸರು, ಮಜ್ಜಿಗೆ ವಿತರಿಸಲಾಗುತ್ತದೆ.

ಹೆಚ್ಚು ಬಳಕೆಯಾಗುವ ತರಕಾರಿ: ಕುಂಬಳಕಾಯಿ, ಸಿಹಿ ಕುಂಬಳಕಾಯಿ, ಟೊಮೇಟೊ, ಬದನೆ, ಬೀನ್ಸ್‌, ಸೌತೆಕಾಯಿ, ಆಲೂಗಡ್ಡೆ, ಕೊತ್ತಂಬರಿ ಸೊಪ್ಪು, ಹಸಿಮೆಣಸು.

ಸಂಖ್ಯಾ ಸೋಜಿಗ
2- ಕ್ವಿಂಟಲ್‌ ಅಕ್ಕಿ ನಿತ್ಯ ಬಳಕೆ
3- ತಾಸಿನಲ್ಲಿ ಅಡುಗೆ ಸಿದ್ಧ
5- ಬಾಣಸಿಗರಿಂದ ಅಡುಗೆ
70- ಕಿಲೋ ತರಕಾರಿ ಬಳಕೆ
200- ಲೀಟರ್‌ ಸಾಂಬಾರು
1000- ಸದ್ಭಕ್ತರಿಗೆ ನಿತ್ಯ ಅನ್ನಸಂತರ್ಪಣೆ
5,00,000- ಭಕ್ತರಿಂದ ಕಳೆದವರ್ಷ ಭೋಜನ ಸ್ವೀಕಾರ

ಅನ್ನದಾನ ಎನ್ನುವುದು ಬಹಳ ಶ್ರೇಷ್ಠ ಕಾರ್ಯ. ಭಕ್ತರ ಹಸಿವು ನೀಗಿಸುವ ಕೆಲಸವನ್ನು ದೇವಸ್ಥಾನ ಸಮಿತಿ ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಿದೆ.
-ಹರಿಶ್ಚಂದ್ರ, ದೇವಸ್ಥಾನದ ಉಸ್ತುವಾರಿ

* ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.