ಹರಳುಗಳ ಮೋಹಕ ಜಗತ್ತು, ಅದರಿಂದಾಗುವ ವಿಪತ್ತು…


Team Udayavani, Oct 7, 2017, 6:50 AM IST

bh5.jpg

ಹುಟ್ಟು ಗುಣ ಘಟ್ಟ ಹತ್ತಿದರೂ ಹೋಗದು ಎಂಬ ಮಾತಿದೆ. ನಮ್ಮ ವ್ಯಕ್ತಿತ್ವದ ಆಳ, ಅಗಲ, ಸೂಕ್ಷ್ಮತೆ ಹಾಗೂ ಸಾರ್ಥಕತೆಗಳನ್ನು ನಿಯಂತ್ರಿಸುವ ಆಧಾರದ ಮೇಲೆ ಯಾವ ಹರಳು ಸೂಕ್ತ ಎಂಬುದನ್ನು ನಿರ್ಧರಿಸಬೇಕು. ನಿರಂತರವಾದ ಧ್ಯಾನ, ತಪಸ್ಸು, ಯೋಗ, ಸ್ತುತಿ, ಆರಾಧನೆಗಳ ಮೂಲಕ ಪರಿವ್ರಾಜಕರೋ, ಈ ಅವಧೂತರುಗಳ್ಳೋ, ಮಠಾಧಿಪತಿಗಳ್ಳೋ ನವರತ್ನ ಹರಳುಗಳನ್ನೆಲ್ಲ ಧರಿಸಬಹುದು. 

ಭಾರತೀಯ ಜೋತಿಷ್ಯಶಾಸ್ತ್ರ ನವರತ್ನಗಳ ಧಾರಣೆಯ ಬಗೆಗೆ ವಿಶೇಷವಾದ ವಿವರಗಳನ್ನು,  ಅಗತ್ಯಗಳ ಬಗೆಗಿನ ವಿಶ್ಲೇಷಣೆಗಳನ್ನು ಮಾಡಿದೆ. ಯಾವುದೇ ರೀತಿಯಾಗಲಿ, ಮನ ಬಂದಂತೆ ಹರಳು ಧರಿಸುವುದನ್ನು  ಜೋತಿಷ್ಯಶಾಸ್ತ್ರ ಪುರಸ್ಕರಿಸುವುದಿಲ್ಲ. ಕೆಲವರು ಅದು ಯಾವ ಪ್ರೇರಣೆಯಿಂದಲೋ ಅವರವರಿಗೆ ಅನಿಸಿದ ರೀತಿಯಲ್ಲಿ ಹರಳು ಧರಿಸುತ್ತಾರೆ. ಇದು ಗ್ರಹಗಳ ವಿಚಾರದಲ್ಲಿ, ಗ್ರಹಚಾರಗಳ ವಿಷಯದಲ್ಲಿ ಸೂಕ್ತವಾಗಿರುವುದಿಲ್ಲ. ಯಾವ ರೋಗಕ್ಕೆ ಮದ್ದು, ಯಾವುದಕ್ಕೆ ಯಾವ ಮದ್ದು ಸೂಕ್ತವೋ ಅದನ್ನು ಸೇವಿಸಬೇಕು.

ಅದು ಬಿಟ್ಟು ರಕ್ತದೊತ್ತಡಕ್ಕೆ ಜ್ವರದ ಮದ್ದು ಸೇವಿಸಿದರೆ ಏನು ಪ್ರಯೋಜನ? ಪ್ರಯೋಜನ ಒತ್ತಟ್ಟಿಗಿರಲಿ, ಇರುವ ತೊಂದರೆ ಬಿಟ್ಟು ಮಗದೊಂದು ತೊಂದರೆಗೂ ಇದರಿಂದ ಆಹ್ವಾನ. ನವರತ್ನಗಳು ಎಂದರೆ ವಜ್ರ, ನೀಲ, ಮಾಣಿಕ್ಯ, ಪುಷ್ಯರಾಗ, ಪಚ್ಛೆ, ಹವಳ, ಮುತ್ತು, ವೈಢೂರ್ಯ ಹಾಗೂ ಗೋಮೇಧಿಕ. ಸರಿಯಾಗಿ ಧರಿಸಿದರೆ ಇವು ಹಲವು ರೀತಿಯ ರಕ್ಷೆಯನ್ನು ಯುಕ್ತವಾಗಿ ನೀಡುತ್ತವೆ. ಈ ಹರಳುಗಳನ್ನು ಬಿಟ್ಟು ಬೇರೆಯದು ನವರತ್ನಗಳೊಳಗೆ ಸಮಾವೇಶವಾಗುವುದಿಲ್ಲ.

ಅನ್ಯ ಹರಳುಗಳು ನಮ್ಮ ಜೋತಿಷ್ಯಶಾಸ್ತ್ರ ಹೇಳುವಂತೆ ಪರಿಣಾಮಕಾರಿಯಾಗಿರಲಾರವು. ಜನರು ಯಾವ ಯಾವುದೋ ನಿರ್ಣಯಗಳಿಂದ, ಸಲಹೆಗಳನ್ನು ಪಡೆದ ಕಾರಣವಾಗಿ ಧರಿಸುತ್ತಾರೆ. ಇದು ಸರಿಯಲ್ಲ. ಸಕಲ ಗ್ರಹಗಳು ಭಾವ ಮಧ್ಯದಲ್ಲಿ ಪೂರ್ಣ ಬಲಿಷ್ಠರಾಗಿರುತ್ತಾರೆ. ಆದರೆ ಅವರು ಭಾವಸಂಧಿಯಲ್ಲಿ ಸಾಫ‌ಲ್ಯತೆ ಕೊಡಲಾರರು. ನಮ್ಮ ಸೂಕ್ತವಾದ ವಿಶ್ಲೇಷಣೆಗಳು ಲಗ್ನಭಾವದ ಅಧಿಪತಿಯ ಬಲವನ್ನು ಪರಿಗ್ರಹಿಸಿ ಸುಖ, ಭಾಗ್ಯ, ಲಾಭ, ಆಪತ್ತು, ಸಂಧಿ ಹಾಗೂ ಇತರ ಒಳಿತಿಗೆ ಸಂಬಂಧವಾಗಿ, ಅವು ಒದಗುವ ರೀತಿಯನ್ನು ಗ್ರಹಿಸಬೇಕು.  

ಯಾವ ಹರಳು ಎಷ್ಟು ಕ್ಯಾರೆಟ್‌ ಎಂಬುದನ್ನು ತಿಳಿದು ಅನಿವಾರ್ಯತೆ ಇರುವಲ್ಲಿ, ಸೂಕ್ತ ಲೋಹವನ್ನು, ಸೂಕ್ತ ಸಮಯದಲ್ಲಿ ಧಾರಣ ಮಾಡಬೇಕು. ಇನ್ನು ಪ್ರತಿ ದಿನವೂ ಮಾಡಬೇಕಾದ ಕಿಂಚತ್‌ ಅನುಷ್ಠಾನಗಳನ್ನು ಮುಖ್ಯವಾಗಿಸಿಕೊಳ್ಳಬೇಕು. ಇವನ್ನೆಲ್ಲ ಬಿಟ್ಟು ರತ್ನಗಳನ್ನು ಧರಿಸುವುದು ನಿರೀಕ್ಷಿತ ಪರಿಣಾಮ ಒದಗಿಸದು. ಒಳ್ಳೆಯ ಪರಿಣಾಮ ಕೊಡುವ ಹರಳಾದರೂ ಚಂದ್ರ ಹಾಗೂ ಬುಧರ ವಿಷಮ ಸ್ಥಿತಿ ಕಾರಣದಿಂದಾಗಿ ಉದ್ರೇಕ, ಚಡಪಡಿಕೆ­ಗೊಳಗಾಗುವ ಶಿಷ್ಟ ಸಾಲಿನ ಜನರು ಈ ರತ್ನಗಳನ್ನು ತೋಯಿಸಿ ತೆಗೆದ ನೀರಲ್ಲಿ, ತಮ್ಮ ಸ್ನಾನ ಪೂರೈಸಿ ದೈನಂದಿನ ದೈವಾರಾಧನೆಗಳನ್ನು ಪೂರೈಸುವುದು ಸೂಕ್ತ.

ಚಂದ್ರ, ಬುಧರ ವಿಷಮ ಸ್ಥಿತಿ ಕಾರಣ: ಹೀಗಂದರೆ ಏನು ಎಂಬ ಪ್ರಶ್ನೆ ಜನರಲ್ಲಿ ಬರುವುದು ಸಹಜ. ಚಂದ್ರನು ಮಾನಸಿಕ  ಸ್ತರದಲ್ಲಿ ಡೋಲಾಯಮಾನ ಸ್ಥಿತಿಯನ್ನು ಒದಗಿಸುವ ಸಂಧಾನ ಪಡೆದಿದ್ದರೆ, ಪ್ರತಿಯೊಂದಕ್ಕೂ ಆ ವ್ಯಕ್ತಿಯನ್ನು ಸೂಕ್ಷ್ಮವಾಗಿಸಿ ಅತಂತ್ರವಾಗಿಸಿರುತ್ತಾನೆ. ಇಂಥ ಚಂದ್ರನು, ಬುಧನೂ ತೀವ್ರತಮವಾಗಿ ಬೌದ್ಧಿಕ ಅಸ್ಥಿರತೆ ತರುವ ರೀತಿಯಲ್ಲಿದ್ದರೆ, ಧರಿಸಿದ ಹರಳಿನ ಬಗ್ಗೆ ವ್ಯಕ್ತಿ ಸದಾ ಯೋಚಿಸುವ ಆತಂಕಗೊಳ್ಳುವ, ಉದ್ರೇಕತೆಗಳಿಗೆ ತಳ್ಳಿ ಇದರಿಂದಲೇ ಕಿರಿಕಿರಿಯಾಗುತ್ತಿದೆ ಎಂಬ ಅಸ್ಥಿರ ಸ್ಥಿತಿಗೆ ತಲುಪಿ ಬಿಡುತ್ತಾರೆ.

ಇಂಥ ಸೂಕ್ಷ್ಮ ಮನಸ್ಥಿತಿಯವರು ತುಂಬಾ ಇರುತ್ತಾರೆ. ಅವರಿಗೆ ಏನೋ ಒಂದು ಚಡಪಡಿಕೆ ಸಾಮಾನ್ಯವಾಗಿ ಬಿಡುತ್ತದೆ. ಇಂಥ ಸಂದರ್ಭದಲ್ಲಿ ಈ ರತ್ನವನ್ನು ತೋಯಿಸಿ ತೆಗೆದ ನೀರಲ್ಲಿ ಸ್ನಾನ ಪೂರೈಸುವುದು ಒಂದು ರೀತಿಯ ಪರಿಣಾಮವನ್ನು, ಸಕಾರಾತ್ಮಕವಾಗಿ ಒದಗಿಸಲು ಕಾರಣವಾಗುತ್ತದೆ. ಏಕಾಏಕಿ ನವರತ್ನಗಳನ್ನು ಧರಿಸುವುದು ಕಾರಣವಿರದೆ, ಚೆನ್ನಾಗಿದೆ ಅಂತಲೋ, ಹಿತವೆನಿಸಿದ ಕಾರಣದಿಂದಲೋ ಧರಿಸಲೇ ಬಾರದ ಹರಳುಗಳನ್ನು ಧರಿಸುವುದು ಸೂಕ್ತವಲ್ಲ.

ಉದಾಹರಣೆಗೆ ಶನೈಶ್ಚರನ ಉತ್ತಮ ಪ್ರಭಾವಗಳಿಂದ ಸಂಭ್ರಮಿಸಲ್ಪಡಬೇಕಾದ ವ್ಯಕ್ತಿ ಹವಳ ಧರಿಸಿದರೆ, ಪರಿಣಾಮ ಏರು ಪೇರಾಗಿ ಲಾಭಗಳ ಬಗೆಗಿನ ದಾರಿ ಸ್ಥಗಿತಗೊಳ್ಳುತ್ತದೆ. ಶುಭಕ್ಕೆ ಧಕ್ಕೆ ಬರುತ್ತದೆ. ನವರತ್ನ ಧರಿಸಿ ಒದ್ದಾಡುವ ಮಂದಿ ಇದ್ದಾರೆ. ಜನಪ್ರಿಯ ನಟಿ ಒಬ್ಬಳು ಕಾರಣವಿರದೆ ನವರತ್ನದ ಉಂಗುರ ಧರಿಸಿ ಯಶಸ್ಸನಿನ ಹಂತದಲ್ಲಿ ಹಿನ್ನೆಡೆ ಅನುಭವಿಸಬೇಕಾಗಿ ಬಂತು. ಇತ್ತೀಚೆಗೆ ತನ್ನ ವೈಫ‌ಲ್ಯದ ಕುರಿತಾಗಿ ಸೂಕ್ತವಾದ ತಿಳುವಳಿಕೆ ದೊರೆತ ಮೇಲೆ ಅಭೂತಪೂರ್ವ ಹಿಟ್‌ಗಳನ್ನು ಕೊಡಲು ಸಾಧ್ಯವಾಯಿತು.

ಜನಪ್ರಿಯ ರಾಜಕಾರಣಿ ಒಬ್ಬರು ಅವಶ್ಯಕತೆಗೂ ಮುನ್ನವೇ ವೈಢೂರ್ಯ ಧರಿಸಿ, ಕಾರಣವೇ ಇರದ ಸಮಸ್ಯೆಗೆ ಸಿಲುಕಿ ರಾಜೀನಾಮೆ ನೀಡಿದರು. ಅನಿವಾರ್ಯತೆಯು ರಾಹುಕೇತುಗಳ ವಿಚಾರದಲ್ಲಿ ಯಾವಾಗ ಹೇಗೆ, ಎಷ್ಟು ಕಾಲ ಎಂಬುದನ್ನು ಗ್ರಹಿಸಿ ಕೊಂಡಾದ ಮೇಲೆಯೇ ಅವುಗಳಿಗೆ ಸೂಕ್ತವಾದ ಗೋಮೇಧಿಕವನ್ನೋ, ವೈಢೂರ್ಯವನ್ನೋ ಧರಿಸಬೇಕು. ಇಲ್ಲದಿದ್ದರೆ ಅನಾವಶ್ಯಕವಾದ  ಕಿರಿಕಿರಿ ತಂದು ತೊಂದರೆಗೆ ಗುರಿ ಮಾಡುತ್ತದೆ. 

ವ್ಯಕ್ತಿತ್ವದ ಆಧಾರದ ಮೇಲೆ ನಿಗಾ ವಹಿಸಿ ಹರಳಿನ ಆಯ್ಕೆ: ಹುಟ್ಟು ಗುಣ ಘಟ್ಟ ಹತ್ತಿದರೂ ಹೋಗದು ಎಂಬ ಮಾತಿದೆ. ನಮ್ಮ ವ್ಯಕ್ತಿತ್ವದ ಆಳ, ಅಗಲ, ಸೂಕ್ಷ್ಮತೆ ಹಾಗೂ ಸಾರ್ಥಕತೆಗಳನ್ನು ನಿಯಂತ್ರಿಸುವ ಆಧಾರದ ಮೇಲೆ ಯಾವ ಹರಳು ಸೂಕ್ತ ಎಂಬುದನ್ನು ನಿರ್ಧರಿಸಬೇಕು. ನಿರಂತರವಾದ ಧ್ಯಾನ, ತಪಸ್ಸು, ಯೋಗ, ಸ್ತುತಿ, ಆರಾಧನೆಗಳ ಮೂಲಕ ಪರಿವ್ರಾಜಕರೋ, ಅವಧೂತರುಗಳ್ಳೋ, ಮಠಾಧಿಪತಿಗಳ್ಳೋ ನಮರತ್ನಗಳಾದ (ವಜ್ರ, ವೈಢೂರ್ಯಾದಿ ಎಲ್ಲ ರತ್ನಗಳನ್ನು) ಹರಳುಗಳನ್ನೆಲ್ಲ ಧರಿಸಬಹುದು. ಸಾಮಾನ್ಯರಿಗೆ ನಿರಂತರವಾದ ಅನುಷ್ಠಾನಗಳನ್ನು ರೂಢಿಸಿಕೊಳ್ಳುವುದು ವಸ್ತುಶಃ ದುಸ್ಸಾಧ್ಯ.

ಇನ್ನು ಜನನದ ಕಾಲ ಹಾಗೂ ಜನ್ಮಕುಂಡಲಿಯನ್ನು ಅನ್ವಯಿಸಿ ಶುಭಪ್ರದವಾದ ರತ್ನವೊಂದನ್ನು ಧರಿಸುವುದರಿಂದ ವ್ಯಕ್ತಿತ್ವ ವಿಕಸನ, ಆರೋಗ್ಯದಲ್ಲಿನ ದಾಡ್ಯತೆ, ವರ್ಚಸ್ಸಿಗೊಂದು ಶೋಭೆ ಇತ್ಯಾದಿ, ಇತ್ಯಾದಿ ಒದಗಿ ಬರಲು ಸಾಧ್ಯ. ಇದರಿಂದಾಗಿ ಕೆಲವು ದೌರ್ಬಲ್ಯಗಳನ್ನು ನಿವಾರಿಸಿಕೊಳ್ಳುವ ವಿಚಾರದಲ್ಲಿ ಹರಳು ಸಹಕರಿಸುತ್ತದೆ. ಕೀಳರಿಮೆಯಿಂದ ಬಳಲುವವರಿಗೆ ಇದು ಸಹಾಯಕ. ಹರಳುಗಳು ರಾಸಾಯನಿಕ ಗುಣಧರ್ಮ, ವಿಶಿಷ್ಟವಾದ ಧಾತು ಸಂಯುಕ್ತಗಳ ಫ‌ಲವಾದ ಸಾಂದ್ರತೆಯಿಂದಾಗಿ ಪಂಚಭೂತಾತ್ಮಕವಾದ ಶರೀರಕ್ಕೆ, ಶರೀರದ ನಿಯಂತ್ರಕ ಗ್ರಹದ ಕಾರಣ ಒಗ್ಗೂಡಿಸಿಕೊಂಡು ಪರಿಣಾಮ ನೀಡುತ್ತದೆ. 

ಹರಳುಗಳನ್ನು ಯಾವ ಧಾತುವಿನಿಂದ ಪುಷ್ಟೀಕರಿಸಬೇಕು: ಯಾವುದೋ ಹರಳನ್ನು ಯಾವುದೋ ಲೋಹದಲ್ಲಿ ಕಟ್ಟಿಸಿ ಉಂಗುರ, ಪದಕ ಮಾಡಿ ಧರಿಸಬಾರದು. ಬಂಗಾರ, ಬೆಳ್ಳಿ, ಪ್ಲ್ರಾಟಿನಂ, ತಾಮ್ರ, ಕಬ್ಬಿಣ ಯಾ ಕಂಚು ಲೋಹದ ಮಿಶ್ರಣಗಳಲ್ಲೇ ಯಾವ ಹರಳಿಗೆ ಯಾವುದು ಎಂಬುದನ್ನು ತಿಳಿದು ಉಪಯೋಗಿಸಬೇಕು. ನೀಲವನ್ನು ಬೆಳ್ಳಿಯಲ್ಲಿ ಹಾಕುವುದೋ, ವೈಢೂರ್ಯವನ್ನು ಬಂಗಾರದಲ್ಲಿ ಕಟ್ಟಿಸುವುದೋ ಇತ್ಯಾದಿ ತಪ್ಪು ಸಂಯೋಜನೆಗಳಾಗುತ್ತವೆ. ಹಾಕಬೇಕಾದ ಹರಳು, ಯಾವ ಗ್ರಹಗಳಿಗೆ ಸಂಬಂಧಿಸಿವೆ ಎಂಬುದನ್ನು ತಿಳಿದೇ ಲೋಹದ ಆಯ್ಕೆ ಆಗಬೇಕು. ಅಂತೂ ಒಂದನ್ನು ಆಯ್ಕೆ ಮಾಡಬಾರದು.

ವಿಷಮ ಆಯ್ಕೆಗಿಂತ ಹರಳು ಧರಿಸದಿರುವುದೇ ಉತ್ತಮ. ಹಾಗೆಯೇ ರಾಶಿಯ ಮೇಲಿಂದ ಹರಳು ಧರಿಸುವ ವಿಧಾನ ಕೂಡ ವಿಧ್ಯುಕ್ತವಾದುದಲ್ಲಿ ರಾಶ್ಯಾಧಿಪತಿಯ ಜನನದ ಸಂದರ್ಭದ ಕಾಲಗಣನೆಗೆ ಹೊಂದಿ, ಹುಟ್ಟಿದ ವ್ಯಕ್ತಿಗೆ ಯಾವ ದಶಾ ಎಂದು ಅರಿಯಲು ನಮ್ಮ ರಾಶಿಯ ಚಂದ್ರನ ಉಪಸ್ಥಿತಿ ಉಪಯೋಗಕ್ಕೆ ಬರುತ್ತದೆ. ಚಂದ್ರನು ಇರುವ ರಾಶಿ ನಮ್ಮ ಜನ್ಮ ರಾಶಿ. ಆದರೆ ಜನ್ಮರಾಶಿಯ ಅಧಿಪತಿಯನ್ನು ಲಕ್ಷಿಸಿಕೊಂಡು ಹರಳಿನ ನಿರ್ಧಾರ ಆಗಬಾರದು. ಜನ್ಮರಾಶಿಯ ಅಧಿಪತಿ ಒಬ್ಬ ವ್ಯಕ್ತಿಯ ಜಾತಕದಲ್ಲಿ ದುಷ್ಟನಾಗಿರುವ ಸಾಧ್ಯತೆ ಇರುತ್ತದೆ. ಜಾಗ್ರತೆ ಬೇಕು. 

ಹರಳುಗಳ ಧಾರಣೆ ಮತ್ತು ಅನುಷ್ಠಾನ: ಯುಕ್ತವಾದ ಮರಗಳ ಅಡಿಯಲ್ಲಿ ಧ್ಯಾನಾಸಕ್ತರಾಗುವುದು, ದೇವಾಲಯದಲ್ಲಿ ಧ್ಯಾನಾಸಕ್ತರಾಗುವುದು, ಇಲ್ಲವೇ ಮನೆಯ ದೈವ ಪೀಠದ ಎದುರೇ ಧ್ಯಾನ ಮಾಡುವುದು ಸೂಕ್ತ. ನಮ್ಮ ಸಂಸ್ಕೃತಿಯಲ್ಲಿ ಅರಳೀಮರ, ಬೇವಿನ ಮರಗಳು, ವಟವೃಕ್ಷ ಇತ್ಯಾದಿಗಳು ಸರ್ವಶ್ರೇಷ್ಠ. ಯೋಗಾಭ್ಯಾಸಗಳಿಂದ ಅನಿಷ್ಟಗಳನ್ನು ತರುವ ಆಹಾರದ ಕಾರಣವಾದ ತಾಪತ್ರಯಗಳು ಹರಳಿನ ಕಾರಣದಿಂದ ನಡೆಸುವ ಅನುಷ್ಠಾನಗಳಿಂದಾಗಿ ಮಾಯವಾಗುತ್ತವೆ.

ದೇವಸ್ಥಾನದಲ್ಲಿ ಧ್ಯಾನ, ಅನುಷ್ಠಾನಾದಿಗಳನ್ನು ಮಾಡುವುದಾದರೆ ಮೂಲಸ್ಥಾನದಲ್ಲಿ ಪರಿಶೋಭಿತವಾದ, ಆಗಮ ಶಾಸ್ತ್ರ ಆಧಾರಗಳಿಂದ ಆಶ್ರಿತವಾದ ಅಷ್ಟಬಂಧ ಸಂಸ್ಥಾಪಿತ ದೇವಳಗಳಲ್ಲಿ ನಡೆಸಬೇಕು. ಮನೆಯಲ್ಲಿ ತುಳಸೀಗಿಡದ ಎದುರಿಗೂ ಅನುಷ್ಠಾನಯುಕ್ತವೇ ಆಗಿದೆ. ತುಳಸೀದಳದ (ಸೋಕಿದ ನೀರು) ತೀರ್ಥ ಸೇವನೆಯಿಂದ ಹರಳುಗಳ ಸ್ವಭಾವದಲ್ಲಿ ಸಂವರ್ಧನೆ ಅಧಿಕವಾಗಿದೆ. ಅನುಷ್ಠಾನಗಳನ್ನು ನಿರ್ದಿಷ್ಟ ಲಯ ಹಾಗೂ ಏರಿಳಿತಗಳೊಂದಿಗೆ ಪಠಿಸುವುದರಿಂದಲೂ ಹರಳುಗಳ ಪ್ರಭಾವ ನಮ್ಮ ಪ್ರತಿ ಜೀವಕೋಶದ ಮೇಲೆ ಸೂಕ್ತವಾಗಿ, ಚಿಕಿತ್ಸಕವಾದ ಪ್ರಭಾವ ಹೊಮ್ಮಿಸಲು ಸರಳವಾಗುತ್ತದೆ.

ರಕ್ತದೊತ್ತಡ, ಮಧುಮೇಹ, ಚರ್ಮವ್ಯಾಧಿ, ಶ್ವಾಸಕೋಶ ಬಾಧೆ ಇತ್ಯಾದಿಗಳು ದೂರವಾಗಲಿ ನಿಶ್ಚಿತವಾದ ಸೂಕ್ಷ್ಮ ಸಂವೇದನೆ ನೀಡಲು ಕಾರಣವಾಗುತ್ತದೆ. ತ್ರಿಪುಂಡ್ರ, ಭಸ್ಮಧಾರಣ, ಗಂಧ, ಚಂದನ, ಕುಂಕುಮ, ಅರಿಷಿಣ ಲೇಪಗಳು ಕೂಡ ನೆರವಿಗೆ ಬರುತ್ತವೆ. ಇದೆಲ್ಲಾ ಘಟಿಹರಳುಗಳ ಕ್ರಿಯಾಶೀಲತೆಯ ಜತೆಜತೆಗೇ ಎನ್ನುವುದು ಗಮನಾರ್ಹ. ಹರಳು ಇರುವ ಉಂಗುರವನ್ನು ಊಟದ ಸಂದರ್ಭದಲ್ಲಿ ಬಲಗೈಯಿಂದ ಎಡಗೈಗೆ ಹಸ್ತಾಂತರಿಸಿಕೊಳ್ಳುವುದು ಹೆಚ್ಚು ಸೂಕ್ತ. ಅನುಷ್ಠಾನದ ಸಂದರ್ಭದಲ್ಲಿ ದೇವರೆದುರು ಅಥವಾ ಹತ್ತಿರದಲ್ಲಿ ನೀಲಾಂಜನ ಉರಿದರೆ ಉತ್ತಮ.

* ಅನಂತಶಾಸ್ತ್ರಿ

ಟಾಪ್ ನ್ಯೂಸ್

rape

Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!

Vijayendra did not go to Kalaburagi due to Priyank Kharge’s threat: MLA Yatnal

BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

1-asssam-1

New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ

Vijay Hazare Trophy: Padikkal century; Karnataka entered the semi after winning against Baroda

VijayHazareTrophy: ಪಡಿಕ್ಕಲ್‌ ಶತಕ; ಬರೋಡಾ ವಿರುದ್ದ ಗೆದ್ದು ಸೆಮಿ ಪ್ರವೇಶಿಸಿದ ಕರ್ನಾಟಕ

Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ

Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ

Tulu Film: ʼಮಿಡಲ್‌ ಕ್ಲಾಸ್‌ ಫ್ಯಾಮಿಲಿʼಯಿಂದ ಬಂತು ‘ಬೊಕಾ ಬೊಕಾ’ ಹಾಡು

Tulu Film: ʼಮಿಡಲ್‌ ಕ್ಲಾಸ್‌ ಫ್ಯಾಮಿಲಿʼಯಿಂದ ಬಂತು ‘ಬೊಕಾ ಬೊಕಾ’ ಹಾಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

2

Sullia: ಹೋರಿ ಎರಗಿ ವ್ಯಕ್ತಿಗೆ ಗಾಯ

rape

Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!

Vijayendra did not go to Kalaburagi due to Priyank Kharge’s threat: MLA Yatnal

BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್

NK-MOdi

Podcast: ಗಾಂಧೀಜಿ ಎಂದೂ ಟೋಪಿ ಧರಿಸುತ್ತಿರಲಿಲ್ಲ, ಆದರೆ ದೇಶದಲ್ಲಿ “ಗಾಂಧಿ ಟೋಪಿ’ ಜನಜನಿತ!

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.