ಕಂದು ಬಿಳಿ ಬಣ್ಣದ ಮಾರ್ಬಲ್‌ ಬಾತು


Team Udayavani, Jun 22, 2019, 11:16 AM IST

bird-teal-(4)-copy-copy

ಚಳಿಗಾಲ ಕಳೆಯಲು ಭಾರತಕ್ಕೆ ಬರುವ ಹಕ್ಕಿಯೇ ಮಾರ್ಬಲ್‌ ಬಾತು.
ಇದರ ಮೈಮೇಲಿನ ಚಿತ್ತಾರ, ಮಾರ್ಬಲ್‌ ಕಲ್ಲಿನಂತೆ ವಿಭಿನ್ನ ಶೇಡ್‌ಗಳಲ್ಲಿ ಇದೆ. ಆ ಕಾರಣದಿಂದಲೇ ಇದನ್ನು ಮಾರ್ಬಲ್‌ ಬಾತು ಎಂದು ಕರೆಯಲಾಗುತ್ತದೆ.

ಮಾರ್ಬಲ್‌ ಬಾತು- ಇದು ಭಾರತಕ್ಕೆ ಚಳಿಗಾಲ ಕಳೆಯಲು ಬರುವ ಬಾತು. ಮಾರ್ಬಲ್‌ ಕಲ್ಲಿನಂತೆ ಮೈಮೇಲಿನ ಚಿತ್ತಾರ- ಕಂದು, ತಿಳಿ ಕಂದು, ಬಿಳಿ, ಹೀಗೆ ವಿಭಿನ್ನ ಶೇಡ್‌ ಇರುವ ಹಕ್ಕಿ. ಇದರ “ಮರ¾ರೋನೆಟ್ಟಾ’ ಎಂಬ ಹೆಸರು, ಗ್ರೀಕ್‌ ಪದ “ಮರ್‌ ಮರ್‌’ ಮತ್ತು “ನೆಟಾ’ ದಿಂದ ಬಂದಿದೆ. ಈ ಹಕ್ಕಿಗೆ, ಸಪೂರವಾದ ಮತ್ತು ಚಿಕ್ಕ ಚುಂಚಿದೆ. ಇವು ಮೆಡಿಟರೇನಿಯನ್‌ ಸಮುದ್ರ ಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿದ್ದವು. ಇದು ಇರಾಕ್‌, ಸ್ಪೇನ್‌, ಆಫ್ರಿಕಾ, ಇರಾಕ್‌, ಟರ್ಕಿ, ಅರೆ¾àನಿಯಾ ದೇಶದಲ್ಲಿ ಸಹ ಇರುವುದು ದಾಖಲಾಗಿದೆ.

ಪಶ್ಚಿಮ ಭಾರತ, ಚೈನಾದ ಪಶ್ಚಿಮ ಭಾಗದಲ್ಲೂ ಕಂಡು ಬರುತ್ತದೆ. ಈ ಪಕ್ಷಿ 48 ಸೆಂ.ಮೀ ಎತ್ತರವಿದ್ದು, ಬೂದು ಮಿಶ್ರಿತ ಕಂದು ಬಣ್ಣದ ಗೆರೆ ಮತ್ತು
ಚುಕ್ಕೆ ಇದರ ಮೈಮೇಲೆ ಇರುವುದು. ಕಣ್ಣಿನಿಂದ ನೆತ್ತಿಯವರೆಗೆ ಇರುವ
ಕಂದುಗಪ್ಪು ಬಣ್ಣದ ಮಚ್ಚೆಯಿಂದ ಇದನ್ನು ಗುರುತಿಸುವುದು ಸುಲಭ.
ಇವಕ್ಕೆ ಜೌಗು ಪ್ರದೇಶ ತುಂಬಾ ಪ್ರಿಯ. ಸಾಮಾನ್ಯವಾಗಿ ಜಗತ್ತಿನ ತುಂಬೆಲ್ಲಾ ಈ ಪ್ರದೇಶಗಳಲ್ಲೇ ಕಾಣಸಿಗುವುದು.

ಚಳಿಗಾಲದಲ್ಲಿ ಭಾರತಕ್ಕೆ ಬಂದು- ಹೆಚ್ಚು ಸಮಯ ಭಾರತದಲ್ಲೇ
ಕಳೆಯುವುದರಿಂದ ಇದನ್ನು ಭಾರತದ ಪ್ರದೇಶದಲ್ಲೇ ತಳ ಊರಿದ ಬಾತುಕೋಳಿ ಎಂದು ಹೇಳುತ್ತಾರೆ.

ಉತ್ತರ ಭಾರತ, ಆಸ್ಸಾಂನ ದಕ್ಷಿಣ ಭಾಗ ಮತ್ತು ಪುಣೆವರೆಗೂ ಇದು ನೆಲೆಯೂರಿದೆ. ಯಾವಾಗ ನೋಡಿದರೂ ಒಂದೋ ಆಹಾರ ಹೊಂದಿಸುತ್ತಲೋ ಇಲ್ಲವೇ ನೀರಿನಲ್ಲಿ ಆಟವಾಡುತ್ತಿರುವಂತೆಯೋ ಕಾಣಬಹುದು. ಸಾಮಾನ್ಯ ಬಾತುಕೋಳಿ, ಚುಕ್ಕೆ ಚುಂಚಿನ ಬಾತುಕೋಳಿ, ಪಿನ್‌ ಟೇಲ್‌ ಬಾತು ಇವುಗಳ ಸಹವರ್ತಿಯಾಗಿವೆ. ಈ ಎಲ್ಲಾ ಬಾತುಗಳು ಮಳೆಗಾಲದಲ್ಲಿ ನೀರು ತುಂಬಿದ ಜೌಗು ಪ್ರದೇಶ, ಚಿಕ್ಕ ನೀರಿನ ಹೊಂಡ, ಆಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಮತ್ತು ದೊಡ್ಡ ಹುಲ್ಲು ಬೆಳೆದ
ಸ್ಥಳಗಳಲ್ಲಿ ಇರುತ್ತವೆ.

ಜಲಸಸ್ಯ ,ಚಿಕ್ಕ ಕ್ರಿಮಿ, ಜಲಸಸ್ಯಗಳ ಚಿಗುರು, ದಂಟಿನ ಒಳಗಿನ ತಿರುಳು
ಸಾಮಾನ್ಯವಾಗಿ ಇದರ ಆಹಾರ. ಒಂದೇ ಸಲಕ್ಕೆ ಇವು 9-12 ಮೊಟ್ಟೆ
ಇಡುತ್ತವೆ. ಇವನ್ನು ಮಾಂಸಕ್ಕಾಗಿ ಬೇಟೆಯಾಡುವುದು ಹೆಚ್ಚು.
ಇದರಿಂದಾಗಿ ಅವುಗಳ ಸಂತತಿ ಕ್ಷೀಣವಾಗುತ್ತಿದೆ. ಅಧಿಕ ಮಳೆ, ನೆರೆ ಹಾವಳಿ ಸಹ -ಇವುಗಳ ನೆಲೆಗಳು ನಾಶವಾಗುವುದಕ್ಕೆ ಕಾರಣವಾಗಿದೆ. ಕ್ರಿಮಿಕೀಟಗಳು, ತೇಲು ಸಸ್ಯ, ಅದರ ಬೀಜ ಈ ಪಕ್ಷಿಯ ಆಹಾರವಾಗಿದೆ. ಸಾಮಾನ್ಯವಾಗಿ ಇದು ಮೊಟ್ಟೆ ಕಾವು ಕೊಟ್ಟ 25 ದಿನಗಳಲ್ಲಿ ಮರಿಯಾಗುವುದು. ಚಿಕ್ಕ ಮರಿಯಾಗಿದ್ದಾಗಲೆ ತಂದೆ ತಾಯಿಯ ಜೊತೆ ಈಜುತ್ತಾ ಅವುಗಳ ಮಾರ್ಗದರ್ಶನದಲ್ಲಿ ಆಹಾರ ಹುಡುಕುವುದನ್ನು
ಕಲಿತುಬಿಡುತ್ತದೆ.

ತನ್ನ ತಂದೆ ತಾಯಿಯ ನಿರ್ದೇಶನದಂತೆ ತೇಲುವುದು, ನೀರಿನಡಿ ಮುಳುಗು ಹಾಕುವುದು, ಮೀನು ಹಿಡಿಯುವುದು ಎಲ್ಲವನ್ನೂ ಕಲಿಯುತ್ತದೆ. ನೀರಿನಲ್ಲಿ ಈಜಲು ಅನುಕೂಲಕರವಾದ ಚಿಕ್ಕ ಕಾಲು ಮತ್ತು ಜಾಲಪಾದ ಇದಕ್ಕಿದೆ. 
( ನಮ್ಮ ಪರಿಸರದಲ್ಲಿರುವ ಪಕ್ಷಿ ಪ್ರಪಂಚದ ಪರಿಚಯ ಮಾಡಿಕೊಟ್ಟ “ಹಕ್ಕಿ ಸಾಲು’ ಅಂಕಣ ಈ ವಾರಕ್ಕೆ ಮುಕ್ತಾಯವಾಗುತ್ತಿದೆ. ಪಕ್ಷಿಲೋಕದ ವಿವರ ಮಾಹಿತಿ ನೀಡಿದ ಲೇಖಕರಿಗೆ ಕೃತಜ್ಞತೆಗಳು- ಸಂ)

ಪಿ. ವಿ. ಭಟ್‌ ಮೂರೂರು

ಟಾಪ್ ನ್ಯೂಸ್

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Kundapura: ಬಟ್ಟೆ ವ್ಯಾಪಾರಿ ನಾಪತ್ತೆ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-y-1-2-c

Yakshagana; 500 ವಿದ್ಯಾರ್ಥಿಗಳಿಂದ ಯಕ್ಷ ರಂಗಪ್ರವೇಶ

1-y-1-2

Yakshagana; ಕಲಾಸ್ಪಂದನದ ವಿಶಿಷ್ಟ ಪ್ರಯೋಗ ಯಕ್ಷವೀಣಾ

1-y-1

Yakshagana; ರಂಜಿಸಿದ ಯಕ್ಷಗಾನಾರ್ಚನೆ, ಭಕ್ತಿ ಸಂಗೀತ, ದಾಶರಥಿ ದರ್ಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.