ಸಾಧಕನ ಶಕ್ತಿ ಏಕಾಂತದಲ್ಲಿದೆ…


Team Udayavani, Apr 27, 2019, 6:10 AM IST

Bahu-V-Bhat

ಮಿತಭಾಷಿ ಯಾವತ್ತೂ ಸುಖವಾಗಿಯೇ ಇರುತ್ತಾನೆ. ಹಿತಮಿತವಾದ ಮಾತಿನಿಂದ ಕಲಹವೂ ಉಂಟಾಗುವುದಿಲ್ಲ; ಅನವಶ್ಯಕವಾಗಿ ಸಮಯವೂ ಹಾಳಾಗುವುದಿಲ್ಲ. ಮಾತು ನಮ್ಮ ವ್ಯಕ್ತಿಣ್ತೀದ ಕನ್ನಡಿ ಇದ್ದಹಾಗೆ. ಅದು ನಮ್ಮ ಜ್ಞಾನವನ್ನಷ್ಟೇ ಅಲ್ಲದೆ, ನಮ್ಮೊಳಗಿನ ಸಂಸ್ಕಾರವನ್ನೂ ಪ್ರತಿಬಿಂಬಿಸುತ್ತದೆ. ಹಾಗಾಗಿ, ಮಾತು ನಮ್ಮತನವನ್ನು ಹಾಳುಗೆಡವದಂತೆ ಜಾಗರೂಕರಾಗಿರಬೇಕು.

ಮುನಿಯಾದವನು ಮೊದಲು ಒಬ್ಬಂಟಿಯಾಗಿರಬೇಕು. ಇರುವ ಜಾಗದಲ್ಲಿ ಮಮತೆ ಇರಬಾರದು. ಎಚ್ಚರಿಕೆಯಿಂದ ಇರಬೇಕು. ಏಕಾಂತದಲ್ಲಿ ಅಥವಾ ಗುಹೆಯಲ್ಲಿ ವಾಸಿಸಬೇಕು. ತನ್ನ ಆಚಾರ-ವ್ಯವಹಾರದಿಂದ ತನ್ನನ್ನು ಯಾರ ಮುಂದೆಯೂ ಪ್ರಕಟಿಸಬಾರದು. ಮಿತಭಾಷಿಯಾಗಿರಬೇಕು.
ಯಾವೊಬ್ಬನೂ ಏಕಾಂತವಿಲ್ಲದೆ ಮುನಿಯಾಗಲಾರ. ಯಾವುದೇ ಮೋಹಕ್ಕೊಳಗಾಗದೆ, ಸ್ವಂತ ಬಿಡಾರವನ್ನು ಕಟ್ಟಿಕೊಳ್ಳದೆ, ಗುಂಪು ಅಥವಾ ಮಂಡಳಿಯನ್ನು ಕಟ್ಟಿಕೊಳ್ಳದೆ, ಎಲ್ಲಿ ಆಗುತ್ತದೆಯೋ ಅಲ್ಲಿ ವಾಸಮಾಡಬೇಕು.

ಹೇಗೆ ಹಾವು, ಇಲಿ ಕೊರೆದ ಬಿಲದಲ್ಲಿ ವಾಸಮಾಡುವುದೋ ಹಾಗೆ ಬದುಕಿಬಿಡಬೇಕು. ಒಂದು ಪ್ರದೇಶ ಅಥವಾ ಸ್ಥಳದ ಮೇಲೆ ಮಮಕಾರ ಇಟ್ಟು ಕೊಳ್ಳದೆ ಅದನ್ನು ತೊರೆಯಲು ಸಿದ್ಧನಿರಬೇಕು. ಮಾತು ಮನಸ್ಸನ್ನು ಕೆಡಿಸುತ್ತದೆ, ಹಾಗಾಗಿ ಮುನಿಯಾದವ ಮಿತಭಾಷಿಯಾಗಿರಬೇಕು. ಇದು ಮುನಿಗೆ ಸಂಬಂಧಪಟ್ಟು ಹೇಳಿದ ಪಾಠವಾದರೂ ಸಾಮಾನ್ಯ ಮಾನವನಿಗೂ ಅನ್ವಯಿಸುತ್ತದೆ.

ಮಮತೆ ಬಂಧನದಿಂದ ದೂರವಿರಿ
ಮೊದಲನೆಯ­ದಾಗಿ ಮಿತಭಾಷಿ ಯಾವತ್ತೂ ಸುಖವಾಗಿಯೇ ಇರುತ್ತಾನೆ. ಹಿತಮಿತವಾದ ಮಾತಿನಿಂದ ಕಲಹವೂ ಉಂಟಾಗುವುದಿಲ್ಲ; ಅನವಶ್ಯಕವಾಗಿ ಸಮಯವೂ ಹಾಳಾಗುವುದಿಲ್ಲ. ಮಾತು ನಮ್ಮ ವ್ಯಕ್ತಿಣ್ತೀದ ಕನ್ನಡಿ ಇದ್ದಹಾಗೆ. ಅದು ನಮ್ಮ ಜ್ಞಾನವನ್ನಷ್ಟೇ ಅಲ್ಲದೆ, ನಮ್ಮೊಳಗಿನ ಸಂಸ್ಕಾರವನ್ನೂ ಪ್ರತಿಬಿಂಬಿಸುತ್ತದೆ. ಹಾಗಾಗಿ, ಮಾತು ನಮ್ಮತನವನ್ನು ಹಾಳುಗೆಡವದಂತೆ ಜಾಗರೂಕರಾಗಿರಬೇಕು. ಇನ್ನೊಂದು ಜಾಗದ ಮೇಲಿನ ಮಮತೆಯೂ ನಮ್ಮ ಬದುಕನ್ನು ಸಂಕೀರ್ಣಗೊಳಿಸಿಬಿಡುತ್ತದೆ.

ಇಲ್ಲಿ ಜಾಗ ಅಂದರೆ ಒಂದು ವಿಶಾಲವಾದ ಪ್ರದೇಶ, ಅಲ್ಲಿನ ಜನ, ಆಚಾರ-ವಿಚಾರ, ಬಂಧು-ಬಾಂಧವರು ಎಲ್ಲವೂ ಸೇರುತ್ತದೆ. ಯಾವುದೇ ಕ್ಷಣದಲ್ಲಿ ಇವೆಲ್ಲವನ್ನು ಬಿಟ್ಟು ಹೊರಡಬೇಕಾಗಿ ಬರಬಹುದು. ಇಂದಿನ ಬದುಕಿನ ರೂಪವೇ ಹಾಗಿದೆ. ಜಾಗದ ಮೇಲಿನ ಮಮತೆಯಿಂದ ಬಂಧಿಸಲ್ಪಟ್ಟರೆ ಜೀವನದ ಸಾಧನೆ ಅಲ್ಲಿಯ ಕರಗಿ ಹೋಗಬಹುದು. ಏಕಾಂಗಿಯಾಗಿ ಬದುಕಲು ಮುನಿಗಳಿಗೆ ಮಾತ್ರ ಸಾಧ್ಯ. ಆದರೆ ಕೆಲವೊಂದು ಸಾಧನೆಗೆ ಹುಲುಮಾನವನೂ ಏಕಾಂಗಿಯಾಗಬೇಕಾಗುತ್ತದೆ.

ಕೆಲವು ಸಾಧನೆಯ ಮಾರ್ಗಗಳು ಏಕಾಂತವನ್ನು ಸಿದ್ಧಿಸಿಕೊಂಡಾಗ ಮಾತ್ರ ಕಾಣಿಸುತ್ತವೆ. ಏಕಾಂತ ಎಂಬುದು ಏಕಾಗ್ರತೆ. ಒಂದು ನಿರ್ದಿಷ್ಟತೆ. ಇದನ್ನು ಮುರಿಯಲು ಚಂಚಲಗೊಳಿಸುವ ಅಂಶಗಳು ಬೇಗನೆ ನಮ್ಮನ್ನು ತಗಲಾಕಿಕೊಂಡು ಬಿಡುತ್ತವೆ. ಎಚ್ಚರಿಕೆ ಅತ್ಯಗತ್ಯ. ಮಮತೆ ಮನಸ್ಸನ್ನು ವಿಶಾಲಗೊಳಿಸಲು ಅಡ್ಡಿಯಾದರೆ, ಮಾತು ಮನಸ್ಸನ್ನು ಕೆಡಿಸುವ ಸಂಭವವೇ ಹೆಚ್ಚು. ಹಾಗಾಗಿ, ಈ ಎಲ್ಲ ಪಾಠಗಳು ಇಂದಿನ ಬದುಕಿಗೆ ಮಾರ್ಗದರ್ಶಕ.

ಬದುಕಿಗೆ ಜ್ಞಾನ ಅಗತ್ಯ
ಪ್ರಪಂಚದ ಎಲ್ಲಾ ಕಡೆಯೂ ಸುತ್ತಬೇಕು, ಎಲ್ಲ ಜ್ಞಾನವನ್ನು ಹೊಂದಬೇಕು. ಆದರೆ, ಎಷ್ಟೇ ಜ್ಞಾನವಿದ್ದರೂ ಅದು ಅರಿವಿಗೆ ಬಾರದೇ ಇದ್ದರೆ ಏನೂ ಪ್ರಯೋಜವಿಲ್ಲ. ಈ ಅರಿವಿಗೆ ಏಕಾಂತ ಅನುಕೂಲ. ಒಳ್ಳೆಯ ನಿರ್ಧಾರಕ್ಕೆ ಹಲವರ ಸಲಹೆ, ಅನುಭವಗಳು ಅನುಕೂಲವಾದರೂ ನಮ್ಮ ನಿರ್ಧಾರ ಏನು? ಎಂಬುದು ನಾವೇ ಖುದ್ದಾಗಿ, ಏಕಾಂತದಲ್ಲಿ ಯೋಚಿಸಿಯೇ ಆಗಬೇಕು.

ಅರ್ಥ ಇಷ್ಟೇ: ಅಪರಿಮಿತವಾದ ಜ್ಞಾನ ಬದುಕಿಗೆ ಅಗತ್ಯ, ಅದಕ್ಕೆ ಬದುಕು ನಿಂತ ನೀರಿನಂತಾಗದೆ, ಹರಿವ ನೀರಾಗಬೇಕು. ಮುಂದೆ ನಡೆದವರ ಹೆಜ್ಜೆ ಗುರುತು ಗುರಿಗೊಂದು ತೋರು ಬೆರಳು. ನಮ್ಮದೇ ಆದ ಗುರಿಯೂ ಇರಬೇಕು; ದಾರಿಯೂ ಹೊಸತಾಗಿರಬೇಕು. ಪ್ರತಿಕ್ಷಣವೂ ಮುಕ್ತಿಯ ಅನುಭವವನ್ನೇ ನೀಡಬೇಕು.

— ವಿಷ್ಣು ಭಟ್‌ ಹೊಸ್ಮನೆ

ಟಾಪ್ ನ್ಯೂಸ್

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ

Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ

lorry-bike

Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.