ವಿದುರಾಶ್ವತ್ಥದ ನಾಗಲೋಕ

ಸರ್ಪದೋಷ ನಿವಾರಣಾ ಧಾಮ

Team Udayavani, Feb 29, 2020, 6:06 AM IST

vidurashwatda

ನಾಗದೋಷ ಪರಿಹಾರಕ್ಕೆ ಮಹತ್ವ ಪಡೆದ ಕ್ಷೇತ್ರ, ವಿದುರಾಶ್ವತ್ಥ ನಾರಾಯಣ ಸ್ವಾಮಿ ದೇಗುಲ. ದ್ವಾಪರ ಯುಗದಲ್ಲಿ ವಿದುರನು ಅಶ್ವತ್ಥ ಸಸಿಯನ್ನು ನೆಟ್ಟು, ದೇಗುಲವನ್ನು ನಿರ್ಮಿಸಿದ ಕಾರಣಕ್ಕೆ ಇಲ್ಲಿಗೆ “ವಿದುರಾಶ್ವತ್ಥ’ ಎಂಬ ಹೆಸರು ಬಂತು ಎನ್ನಲಾಗಿದೆ. ಗೌರಿಬಿದನೂರು ಸನಿಹವಿರುವ ಈ ಕ್ಷೇತ್ರದಲ್ಲಿ ಭಕ್ತಾದಿಗಳು ನಾಗದೋಷ ನಿವಾರಣೆಗಾಗಿ ಹರಕೆಗಳನ್ನು ಒಪ್ಪಿಸುತ್ತಾರೆ. ನಾಗರ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದು ಇಲ್ಲಿನ ವಿಶೇಷತೆ. ಇಲ್ಲಿ ಲಕ್ಷಕ್ಕೂ ಅಧಿಕ ಸಂಖ್ಯೆಯ ನಾಗದೇವರ ಕಲ್ಲುಗಳನ್ನು ಕಾಣಬಹುದು.

ವಿದುರನ ಯಾತ್ರೆ: ಮಹಾಭಾರತ ಯುದ್ಧದಲ್ಲಿನ ಸಾವು- ನೋವುಗಳನ್ನು ನೋಡಿದ ವಿದುರನು ಮೋಕ್ಷವನ್ನು ಬಯಸಿದ್ದನು. ಆಗ ಶ್ರೀಕೃಷ್ಣನ ಸಲಹೆಯ ಮೇರೆಗೆ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ, ಇಲ್ಲಿದ್ದ ಮೈತ್ರೀಯ ಎಂಬ ಮಹರ್ಷಿಗಳ ಆಶ್ರಮಕ್ಕೆ ಬಂದನು. ನಂತರ ಋಷಿಗಳ ಸಲಹೆಯಂತೆ ಅಶ್ವತ್ಥ ಗಿಡವನ್ನು ನೆಟ್ಟು ಅನೇಕ ವರ್ಷಗಳ ಕಾಲ ಇಲ್ಲಿ ಪೂಜೆ ಸಲ್ಲಿಸಿದನು. ಇದರ ಫ‌ಲವಾಗಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಪ್ರತ್ಯಕ್ಷರಾಗಿ, ವಿದುರನ ಆತ್ಮೋದ್ಧಾರವನ್ನು ಮಾಡಿದರಂತೆ. ಇಲ್ಲಿ ಬೃಹದಾಕಾರವಾಗಿ ಬೆಳೆದಿದ್ದ ವೃಕ್ಷವು ಕಳೆದ ಕೆಲವು ವರ್ಷಗಳ ಹಿಂದೆ ಧರಾಶಾಹಿಯಾಗಿದೆ.

ದೇವಳದ ಆವರಣದಲ್ಲಿ ಈಗ ಅಲ್ಲಲ್ಲಿ ಅಶ್ವತ್ಥ ವೃಕ್ಷಗಳಿವೆ. ಹಿಂದೆ ದೇವಳದ ಪಕ್ಕದಲ್ಲಿ ಉತ್ತರ ಪಿನಾಕಿನಿ ಎಂಬ ನದಿ ಹರಿಯುತ್ತಿತ್ತು. ಈಗ ಇದು ಬರಡಾಗಿದೆ. ದೇವಳದ ಆವರಣದಲ್ಲಿ ಯಾಗ ಶಾಲೆಯಿದೆ. ಪ್ರಾಮ ಗಣದಲ್ಲಿರುವ ಅಸಂಖ್ಯ ನಾಗನ ಕಲ್ಲುಗಳು ಶ್ರದ್ಧೆ, ಭಯ, ಭಕ್ತಿಯನ್ನು ಉದ್ದೀಪನ­ಗೊಳಿಸುತ್ತವೆ. ಸಂತಾನ ನಾಗೇಂದ್ರ ಸ್ವಾಮಿ ಪೂಜೆ, ನಾಗದೋಷ ನಿವಾರಣಾ ಪೂಜೆ, ರಾಹುಕೇತು ಪೂಜೆ, ಕಾಳಸರ್ಪ ದೋಷ ನಿವಾರಣೆ ಪೂಜೆಗಳು ಇಲ್ಲಿ ಜರುಗುತ್ತವೆ.

ಸಂತಾನ ನಾಗೇಂದ್ರ: ದಂಪತಿಗಳು ಸಂತಾನ ಪ್ರಾಪ್ತಿಗಾಗಿ ಇಲ್ಲಿ ಪ್ರಾರ್ಥಿಸಿಕೊಂಡರೆ, ಸಂತಾನ ಪ್ರಾಪ್ತಿಯಾಗುತ್ತದಂತೆ. ಈ ಮಾತಿಗೆ ಸಾಕ್ಷಿ ಎಂಬಂತೆ ಪ್ರತಿನಿತ್ಯ ಹತ್ತಾರು ದಂಪತಿಗಳು, ಮಕ್ಕಳೊಂದಿಗೆ ಬಂದು ಹರಕೆಯನ್ನು ಈಡೇರಿಸುತ್ತಾರೆ. ಭಕ್ತರು ಬೇರೆ ನಾಗ ಕ್ಷೇತ್ರಗಳಲ್ಲಿ ಸರ್ಪ ಸಂಸ್ಕಾರ ಸೇವೆಗಳನ್ನು ನೆರೆವೇರಿಸಿ, ಈ ಸನ್ನಿಧಿಗೆ ಬಂದು ನಾಗ ಪ್ರತಿಷ್ಠೆಯನ್ನು ಮಾಡುತ್ತಾರೆ. ನಾಗನ ಕಲ್ಲು ಪ್ರತಿಷ್ಠೆಗೆ ಅವಕಾಶವಿರುವ ರಾಜ್ಯದ ಏಕೈಕ ಪ್ರಸಿದ್ಧ ದೇವಾಲಯ ಎಂಬ ಹೆಗ್ಗಳಿಕೆ ಇಲ್ಲಿಯದು.

* ಲಕ್ಷ್ಮೀ ಅರ್ಜುನ ಮೊರಬ

ಟಾಪ್ ನ್ಯೂಸ್

cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

Cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

siddanna-2

Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ

ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

Tennis: ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

Cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

siddanna-2

Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ

ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

Tennis: ಏಷ್ಯಾಡ್‌ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್‌ ನಿವೃತ್ತಿ

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.