ಆರನೇ ಇಂದ್ರಿಯ ಇದೆಯೇ?
Team Udayavani, Mar 11, 2017, 10:37 AM IST
ನಮ್ಮ ಅನುಭವಕ್ಕೆ ದೊರಕಬಲ್ಲ ವಿಚಾರ ಅದು ಮತ್ತು ಅವನು. ಅದರಾಚೆಗೆ ನಮ್ಮ ಅನುಭವ, ವಿವೇಕ, ಮನಸ್ಸು ಕೂಡಾ ಕೇವಲ ಶೂನ್ಯ. ಶೂನ್ಯಕ್ಕೂ ಚಲನೆ ಸಾಧ್ಯ. ಅದಕ್ಕೀಗ ನಮ್ಮ ವಿಶ್ವಸಾಕ್ಷಿ$. ಇಲ್ಲ ಸಾಧ್ಯವಿಲ್ಲ ಅಥವಾ ಇದೆ ಎಂಬುದಾಗಿ ಖಚಿತವಾಗಿ ತಿಳಿಸಲಾಗದು. ಇಂಥದೊಂದು ದೌರ್ಬಲ್ಯವನ್ನು ತಿಳಿಯಬಹುದೇ ವಿನಾ ಶಬ್ದಗಳಲ್ಲಿ ಹೇಳಿ ತಿಳಿಸಲಾಗದು.
ಕರ್ನಾಟಕದ ಪ್ರಮುಖ ಮಠವೊಂದರ ಸ್ವಾಮೀಜಿ ಸುಮಾರು 50 ವರ್ಷಗಳ ಹಿಂದಿನ ಮಾತಿದು. ಮಠದ ಅನುಯಾಯಿಗಳಿಂದ ಸುತ್ತುವರೆದಿದ್ದರು. ಅವರ ಭೇಟಿಗಾಗಿ ಬೆಂಗಳೂರಿನಿಂದ ಪ್ರಮುಖ ವಾಣಿಜ್ಯೋದ್ಯಮಿಯೊಬ್ಬರು ಬಂದು ತಮ್ಮ ಪರಿಚಯವನ್ನು ಸ್ವಾಮೀಜಿಯವರ ಆಪ್ತ ವಲಯದವರಿಗೆ ತಿಳಿಸದೆ ಸರತಿ ಸಾಲಿನಲ್ಲಿ ಸ್ವಾಮೀಜಿಯವರಿಗಾಗಿ ಕಾದಿದ್ದರು.ಅಷ್ಟು ದೊಡ್ಡ ವಾಣಿಜ್ಯೋದ್ಯಮಿಗಳ ವಿನಯ ಪ್ರಶಂಸನೀಯವೇ ಸರಿ. ಆದರೆ ಇವರು ಬಂದಿದ್ದನ್ನು ತಿಳಿದಿರದ ಸ್ವಾಮೀಜಿ ಮತ್ತೂಂದು ಕೊಠಡಿಯಲ್ಲಿದ್ದರು. ತನ್ನನ್ನು ಕಂಡು ಭಕ್ತಿ ಗೌರವ ಅರ್ಪಿಸುತ್ತಿದ್ದ ಭಕ್ತರ ಬಳಿ ಮಾತನಾಡುತ್ತಿದ್ದಾಗಲೇ ಅವರು ಸರ್ರನೆ ಸೆಕೆಂಡುಗಳ ಕಾಲ ಕಣ್ಣು ಮುಚ್ಚಿದರು. ಕಣ್ಣು ತೆರೆದಾಗ ಸ್ವಾಮೀಜಿ ತಮ್ಮ ಆಪ್ತರ ಬಳಿ ಹೊರಗೆ ಬೆಂಗಳೂರಿನ ಇಂಥವರು (ಹೆಸರು ಬೇಡ) ನಮಗಾಗಿ ಕಾಯುತ್ತಿದ್ದಾರೆ. ಅವರನ್ನು ಒಳಗೆ ಕರೆತನ್ನಿ ಎಂದು ಆದೇಶಿಸಿದರು.
ವಾಣಿಜ್ಯೋದ್ಯಮಿಗಳು ಒಳಬರುತ್ತಿದ್ದಂತೆ ಸೌಜನ್ಯದಿಂದ ದೇಹ ಬಗ್ಗಿಸಿ ಸ್ವಾಮೀಜಿ ನಾನು ಅಲ್ಪ, ಎಷ್ಟೋ ಜನ ಕಾದಿದ್ದಾರೆ ಅವಸರವೇನೂ ಇರಲಿಲ್ಲ ಎಂದರು. ಆದರೆ ಸ್ವಾಮೀಜಿ ವಿಶ್ವಧಾರೆ ಮಹಾಮಾಯೆ ಕಾಮೇರ್ಶವರಿಯಾದ ರಾಜರಾಜೇಶ್ವರಿ ನಿಮ್ಮನ್ನು ಬರಹೇಳಲು ಪ್ರೇರಣೆ ಕೊಟ್ಟ ಮೇಲೆ ನಾನು ಅವಳ ಆದೇಶ ಪಾಲಿಸಲೇ ಬೇಕಲ್ಲವೇ ಎಂದರು. ನಮಸ್ತೇ ಜಯೇ ಗಂಗೇ ಶಾರದೇ ಕಟಾನನೇ ಪೃಥ್ವಿರೂಪೇ ದಯಾರೂಪೇ ತೇಜೋ ರೂಪೇ ನಮೋ ನಮಃ ಎಂದು ಅವಳನ್ನು ಭಜಿಸಿ ಮನೋಭಿಷ್ಟ ಪೂರೈಸು ಎಂದು ವಿನಂತಿಸಿದೆ ಎಂದು ಉದ್ಯಮಿಗಳು ಹೇಳಿದರು. ಮನೋಭಿಲಾಷೆ ಈಡೇರಿತು. ಸ್ವಾಮೀಜಿ ಗಣ್ಯರನ್ನು ಬರಮಾಡಿಕೊಂಡಿದ್ದರು.
ಇದು ಮೇಲ್ನೋಟಕ್ಕೆ ಒಂದು ಕಥೆಯಂತಿದೆ. ಆದರೆ ನೂರಕ್ಕೆ ನೂರು ವಾಸ್ತವ. ಅತೀಂದ್ರಿಯ ಜಾnನವನ್ನು ಕೊಡುವ ಭಗವದ್ ಕೃಪೆ ಎಲ್ಲರಿಗೂ ಲಭ್ಯವಿಲ್ಲ. ದೇವಿ ತನ್ನ ಭಕ್ತರಿಗೆ ದಿವ್ಯಜಾnನವನ್ನು ಒದಗಿಸುತ್ತಾಳೆ. ಇಂದು ಪಂಚೇದ್ರಿಯಗಳ ನಾವು ತಿಳಿಸಿ ಹೇಳುವ ಜರೂರಿಲ್ಲ. ಕಣ್ಣು, ಕಿವಿ,ಮೂಗು, ನಾಲಿಗೆ, ಚರ್ಮ, ಇವೇ ನಮ್ಮ ಪಂಚೇಂದ್ರಿಯಗಳು. ಇವು ತಿಳಿದಷ್ಟು ಸುಲಭದಲ್ಲಿ ನಮ್ಮ ನಿಯಂತ್ರಣಕ್ಕೆ ಸಿಗುವಂಥದ್ದಲ್ಲ. ಆದರೂ ಇವುಗಳನ್ನು ಮೀರಿದ ವಿವೇಕ ಒಂದನ್ನು ಪ್ರಕೃತಿ ಒದಗಿಸಿದೆ. ಪ್ರಾಣಿಗಳ ಪಾಲಿಗೂ ಕಣ್ಣು ,ಕಿವಿ, ಮೂಗು, ನಾಲಿಗೆಗಳ ಪಂಚೇಂದ್ರಿಯಗಳುಂಟು. ಆದರೆ ಆನೆ ತನ್ನ ಮನಸ್ಸನ್ನು ಮಾನವನಂತೆ ವಿವೇಕದಿಂದ ನಿಯಂತ್ರಿಸಿಕೊಳ್ಳದು, ಹುಲಿಯಾದರೂ ಅಷ್ಟೇ. ಆದರೆ ಮನುಷ್ಯನ ವಿವೇಕ ಪ್ರಾಣಿಗಳನ್ನು ಮೀರಿ ನಿಂತಿರುವ ಸಂಪನ್ನತೆಗೆ ನಮ್ಮನ್ನು ಹಿಡಿದು ತಂದಿದೆ. ಇದು ಆಕಸ್ಮಿಕವಲ್ಲ. ದೈವ ಸಾûಾತ್ಕಾರ. ಕಣ್ಣು ಮುಚ್ಚಿಕೊಂಡಾಗ ಸಾಮಾನ್ಯವಾಗಿ ಕತ್ತಲೆ ಕಾಣಿಸುವುದು. ಆದರೆ ಕತ್ತಲೆ ಬೆಳಕು, ಬಣ್ಣ, ಆಕೃತಿ ಅಲೆಗಳೂ ಸುಳಿಗಳ್ಳೋ ಇತ್ಯಾದಿ ರಾಶಿಯಾಗಿ ಏನೋ ಸಾವಿರಾರು ರೂಪ ವಿಶೇಷಗಳು ಕಣ್ಣುಮುಚ್ಚಿಕೊಂಡಾಗ ಸ್ಪಷ್ಟ. ಇಂಥ ಅವ್ಯಕ್ತವೇ ನಮ್ಮೊಳಗಿನ ಬ್ರಹ್ಮ.. ಹೀಗಾಗಿ ಅಹಂ ಬ್ರಹ್ಮಾಸ್ಮಿ ಎಂದು ಶಂಕರರು ವಾದಿಸಿದರು. ಕಣ್ಣು ಮುಚ್ಚಿಕೊಂಡರೆ ಸಾಲದು. ಕಣ್ಣುಗಳನ್ನು ತೆರೆಯದೆ ಜೀವನ ಸಾಗದು. ಆಗ ನಾವೇ ಬೇರೆ ಎದುರಿನ ಬ್ರಹ್ಮ ಸೃಷ್ಟಿ ಬೇರೆ ಸೂತ್ರಧಾರ ಬೇರೆ ಎಂದಂದು ದ್ವೆ„ತವನ್ನು ಸಂಭ್ರಮಿಸಿದರು.
ದೇವರು ಎಂಬುದು ಏನೇ ಇರಲಿ. ಆದರೆ ಈ ಭೂಮಿ, ಈ ಬಾನು ಈ ತಾರೆ, ಈ ವಿಶ್ವ ಎಂದುದೆಲ್ಲ ಎಲ್ಲಿಂದ ಶುರುವಾಯ್ತು? ಯಾರು ಶೂರು ಮಾಡಿದರು? ಹೇಗೆ ಶುರು ಮಾಡಿದರು? ಏಕೆ ಶುರು ಮಾಡಿದರು? ಈ ಪ್ರಶ್ನೆಗಳಿಗೆ ಈವರೆಗೆ ಯಾರೂ ಸರಿಯಾಗಿ ಉತ್ತರಿಸಿಲ್ಲ. ಅದು ಶುರುವಾಯ್ತು. ಆತ ಶುರು ಮಾಡಿದ್ದಾನೆ. ಅದು ಎಂದರೆ ಯಾರು? ಆತ ಯಾರು? ಉತ್ತರವೇ ಇಲ್ಲ. ನಮ್ಮ ಅನುಭವಕ್ಕೆ ದೊರಕಬಲ್ಲ ವಿಚಾರ ಅದು ಮತ್ತು ಅವನು. ಅದರಾಚೆಗೆ ನಮ್ಮ ಅನುಭವ, ವಿವೇಕ, ಮನಸ್ಸು ಕೂಡಾ ಕೇವಲ ಶೂನ್ಯ. ಶೂನ್ಯಕ್ಕೂ ಚಲನೆ ಸಾಧ್ಯ. ಅದಕ್ಕೀಗ ನಮ್ಮ ವಿಶ್ವಸಾಕ್ಷಿ$. ಇಲ್ಲ ಸಾಧ್ಯವಿಲ್ಲ ಅಥವಾ ಇದೆ ಎಂಬುದಾಗಿ ಖಚಿತವಾಗಿ ತಿಳಿಸಲಾಗದು. ಇಂಥದೊಂದು ದೌರ್ಬಲ್ಯವನ್ನು ತಿಳಿಯಬಹುದೇ ವಿನಾ ಶಬ್ದಗಳಲ್ಲಿ ಹೇಳಿ ತಿಳಿಸಲಾಗದು. ಅತೀಂದ್ರಿಯ ಶಕ್ತಿ ಕೂಡಾ. ಕರ್ನಾಟಕದ ಪ್ರಮುಖ ಮಠವೊಂದರ ಸ್ವಾಮೀಜಿ ಹಾಗೂ ಅವರನ್ನು ಕಾಣಲು ಬಂದ ವಾಣೀಜ್ಯೋದ್ಯಮಿ ಹೀಗೆ ಇಬ್ಬರೂ ಅತೀಂದ್ರಿಯ ಶಕ್ತಿ ಪಡೆದವರು. ಪರಸ್ಪರರನ್ನು ನೋಡಿರದಿದ್ದರೂ ಅವರಿಬ್ಬರಲ್ಲಿ ಅನ್ಯ ಶಕ್ತಿಯೊಂದು ಅತೀಂದ್ರಿಯ ಆವರಣದೊಂದಿಗೆ “ನಾನು ಬಂದಿದ್ದೇನೆ’ ಎಂದು ಸ್ವಾಮೀಜಿಗಳಿಗೆ ಬಿನ್ನವಿಸಿಕೊಳ್ಳಲು ವಾಣೀಜ್ಯೋದ್ಯಮಿಗೆ ಸಹಕರಿಸಿತ್ತು. ಅವರನ್ನು ಕರೆದು ತನ್ನಿ ಎಂದು ಸ್ವಾಮಿಗಳು ಆದೇಶಿಸಲು ಇದೇ ಅತೀಂದ್ರಿಯ ಶಕ್ತಿಯ ಆವರಣ ಸ್ವಾಮಿಯವರಿಗೆ ಪ್ರೇರಣೆ ನೀಡಿತು. ಈ ಇಂದ್ರಿಯ ಯಾವುದು ಹಾಗಾದರೆ? ಈ ಅತೀಂದ್ರಿಯ ಶಕ್ತಿ ಸುಲಭವಾಗಿ ಒಲಿಯದು. ಕೆಲವರಿಗೇ ಏಕೆ ಒಲಿಯುತ್ತದೆ. ಅದು ವಿಶೇಷವಾದ ವರವೇ? ಕೆಲವೊಮ್ಮೆ ಅತೀಂದ್ರಿಯ ಶಕ್ತಿಯೇ ಒಬ್ಬ ವ್ಯಕ್ತಿಯ ಮಿತಿಯೂ ಆಗಿಬಿಡಬಹುದು. ಜಾnನದ ಕೊನೆಯ ಬಿಂದು ಮತ್ತೆ ಕತ್ತಲಿಗೇ ತಳ್ಳುತ್ತದೆ.
ನಮ್ಮ ದೇಹದ ವಿಚಾರಗಳನ್ನೇ ತೆಗೆದುಕೊಳ್ಳಿ, ರಕ್ತ, ಮಜ್ಜನ, ಮಾಂಸ, ಮೂಳೆ, ಸ್ನಾಯು, ಕರುಳು, ಪಿತ್ಥಕೋಶ ಮಿದುಳು, ಮೂಗು ಕಿವಿ, ಬಾಯಿ, ನಾಲಿಗೆ ಇತ್ಯಾದಿ ಎಲ್ಲವೂ ಹೇಗೆ ಎಷ್ಟು ಏಕೆ ಯಾವಾಗ ಹಾಳಾಗಬಲ್ಲವು ಎಂಬುದನ್ನು ನಿವೀಗ ತಿಳಿದು ಬಿಟ್ಟಿದ್ದೇವೆ. ಹೀಗಾಗಿ ನಮಗೆ ಬೇಕಾದಷ್ಟು ಮೃಷ್ಟಾನ್ನ ಊಟವನ್ನು ಮಾಡಲು ನಾವು ಹೆದರುತ್ತೇವೆ. ನಮ್ಮ ಪಚನ ಕ್ರಿಯೆ ತಗ್ಗಿದೆ. ಶ್ರಮಕ್ಕೆ ಅವಕಾಶವಿಲ್ಲ. ಶ್ರಮಕ್ಕೆ ಅವಕಾಶ ಬೇಕು ಎಂದರೆ ನಾವು ಆಧುನಿಕತೆಯನ್ನು ತಬ್ಬಿಕೊಳ್ಳಬಾರದು. ಆಧುನಿಕತೆಯು ವಿನಯವನ್ನು ಸಂಪಾದಿಸಿಕೊಡಲು ಶಕ್ತಿ ಹೊಂದಿದೆಯೇ? ಒಂದೂ ಮಾತ್ರೆಯನ್ನು ನುಂಗದೆ ಜೀವನವನ್ನು ಮುಂದುವರೆಸಲು ಸಾಧ್ಯವಿಲ್ಲವೇ? ಡಯಾಲಿಸೀಸ್ ತನಕ ಮುಂದುವರೆಯದ ಹಾಗೆ ಹೇಗೆ ಆರೋಗ್ಯವನ್ನು ಸಂಭಾಳಿಸಿಕೊಳ್ಳು ಸಾಧ್ಯ. ಸೊಂಟ, ಬೆನ್ನು, ಪಾದ, ಮಂಡಿ ಹಾಗೂ ಸಂಧಿಗಳ ನೋವಿರದೆ ಅಸ್ಥಿಮಂಡಲವನ್ನು ಸಂಭಾಳಿಸಿಕೊಂಡು ವೃದ್ಧಾಪ್ಯವನ್ನು ಶಿಕ್ಷೆಯಾಗದಂತೆ ನೋಡಿ ಕೊಳ್ಳಲು ಸಾಧ್ಯವೇ? ಇದು ಸಾಧುವಲ್ಲ ಎಂಬುದು ಹಲವರ ಉತ್ತರ. ಆದರೆ ಸಾಧ್ಯ ಎಂದು ಕೆಲವರು ಹೇಳುತ್ತಾರೆ. ಶಾಕ್ತರಿಗೆ ದೇವಿ ಶಕ್ತಿಯನ್ನು ಕೊಡುತ್ತಾಳೆ. ವೈಷ್ಣವರಿಗೆ ಹರಿ ಸರ್ವೋತ್ತಮ. ಸ್ಮಾರ್ಥರಿಗೆ ಶಿವ ವಿಷನಿವಾರಕ. ನಮ್ಮ ಭಾರತೀಯ ಪರಂಪರೆಯು ಯೋಗವನ್ನು ಧ್ಯಾನ, ಜಪ ತಪಗಳನ್ನು ಮಂತ್ರ ತಂತ್ರಾದಿ ವಿಷಯಗಳ ಕುರಿತಾಗಿ ಸುದೀರ್ಘವಾಗಿ ವ್ಯಾಖ್ಯಾನಗಳನ್ನು ಕಟ್ಟಿಕೊಟ್ಟಿದೆ. ಕುಂಡಲಿನಿಯ ಜಾಗ್ರತ ಸಿದ್ಧಿಯು ನಮ್ಮ ಅನುಭವವನ್ನು ಲೌಕಿಕದಿಂದ ಅಲೌಕಿಕಕ್ಕೆ ಸಂಯೋಜಿಸಿ ಮನುಷ್ಯರಿಗೆ ಮೀರಿದ ಅತಿಮಾನುಷ ಶಕ್ತಿ ಘಟಕಗಳನ್ನು ಒದಗಿಸುತ್ತದೆ. ಸಾಧಕರು ಯೋಗದ ಮೂಲಕ ಶಕ್ತಿ ಪೂಜೆಯ ಮೂಲಕ, ಅನುಷ್ಠಾನಗಳ ಮೂಲಕ ಲೌಕಿಕಗಳ ಕಗ್ಗಂಟುಗಳನ್ನು ನಿವಾರಿಸುತ್ತಾರೆ. ಅದರಲ್ಲೂ ಅನುಷ್ಠಾನಾದಿ ಜಪಗಳಿಂದ ಭೂತ ಭವಿಷ್ಯತ್ತು ಮತ್ತು ವರ್ತಮಾನಗಳನ್ನು ಭಿನ್ನ ರೀತಿಯಲ್ಲಿ ಅರಿಯಲು ಶಕ್ತಿ ಹೊಂದಿರುತ್ತಾರೆ. ಮಾನಸಿಕ ವಲಯದ ಆಳ ಹಾಗೂ ವಿಸ್ತಾರಗಳು ಪರರು ನೋಡದ್ದನ್ನು ಅವರು ಊಹಿಸುತ್ತಾರೆ. ಅತಿಮಾನುಷ ಅತೀಂದ್ರಿಯ ಅನುಭವಗಳನ್ನು ಹೇಳುವ ಜನ ಒಂದೇ ಏಟಿಗೆ ಅರೆ ಹುಚ್ಚರಂತೆ ಕಾಣಿಸಿಕೊಂಡರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಧಾರ್ಮಿಕವಾದ ಭ್ರಮೆ ಮತ್ತು ವಾಸ್ತವಗಳ ಮಿಶ್ರಣದಲ್ಲಿ ತೇಲಾಡುವ ಜನರ ಅಪಲಾಪ ಎಂದು ಕೆಲವರು ಗುರುತಿಸುತ್ತಾರೆ.
ಆದರೆ ಅತೀಂದ್ರಿಯ ಶಕ್ತಿಗಳು ಪಂಚೇಂದ್ರಿಯಗಳು ಗಟ್ಟಿಯಾಗಿಯೇ ಬೆಸೆದುಕೊಂಡು ಇದು ಬೇರೆಯದೇ ಆದ ಲಿಂಗ ಇಂದ್ರಿಯ ಎಂದು ಗುರುತಿಸಲಾಗದ ಭವಿಷ್ಯವನ್ನು ಬಗೆದು ಇಣುಕುವ ಶಕ್ತಿ ಮನದಲ್ಲಿ ಜಾಗ್ರತವಾಗಿರುತ್ತದೆ. ಇದು ಎಲ್ಲಿ ಅಡಕವಾಗಿದೆ ಎಂದು ಗುರುತಿಸಿ ಹೇಳುವುದು ಮನದಲ್ಲಿ ಜಾಗ್ರತವಾಗಿರುತ್ತದೆ. ಇದು ಎಲ್ಲಿ ಅಡಕವಾಗಿದೆ ಎಂದು ಗುರುತಿಸಿ ಹೇಳುವುದು ಕಷ್ಟ. ಸ್ಕಿ$›ಜೋಫೋನಿಯಾ ಇರುವ ಜನರನ್ನು ಅವಸರ ಅವಸರವಾಗಿ ನಾವು ಮನೋರೋಗಿಗಳನ್ನಾಗಿ ಗುರುತಿಸುತ್ತೇವೆ. ಒಂದು ಉದಾಹರಣೆ ಗಮನಿಸಿ. ಒಬ್ಬ ಅಗೃಹಸ್ಥನ ಮಗಳು ಅಪರೂಪಕ್ಕೆ ಸೀರೆ ಉಟ್ಟುಕೊಂಡು ಒಂದು ಸಮಾರಂಭಕ್ಕೆ ಹೊರಟಿದ್ದಳು. ಅವಳ ಜೊತೆ ಅವಳ ಗೆಳತಿ ಅದೇ ವಯಸ್ಸಿನವಳು ಒಬ್ಬಳು ಸೇರಿಕೊಂಡಳು. ಈ ಗೃಹಸ್ಥರಿಗೆ ಏನನಿಸಿತೋ ತನ್ನ ಮಗಳನ್ನು ಜೊತೆಯಾದ ಹುಡಿಗಿಯ ಬಳಿ ನಿನ್ನ ಸೀರೆ ಸೆರಗಿನ ಬಗ್ಗೆ ಜಾಗ್ರತೆ ಇರಲಮ್ಮಾ ಎಂದು ಒಮ್ಮೆಗೇ ಎಚ್ಚರಿಕೆ ನೀಡಿದರು. ಗೃಹಸ್ಥರ ಹೆಂಡತಿ ಇದನ್ನು ಕೇಳಿಸಿಕೊಂಂಡು ಒಳಗಿನಿಂದ ಓಡಿ ಬಂದು ರೀ ಸುಮ್ಮನಿರ್ರೀ ನಿಮ್ಮದೊಂದು ಅನಿಷ್ಠ ಎಂದು ಸಿಡಿಸಿಡಿಯಿಂದ ನುಡಿದಳು. ಆ ರಾತ್ರಿ ದುರ್ದೈವ ಎಂದರೆ ಸಮಾರಂಭದಲ್ಲಿ ಆರತಿ ಬೆಳಗುವಾಗ ಗೃಹಸ್ಥರ ಮಗಳ ಸೆರಗಿಗೆ ಆರತಿ ಸಿಡಿದು ಎತ್ತುವಾಗ ಬೆಂಕಿ ಹತ್ತಿತು.
ಅನಂತಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Astrology 2024: 2024ರಲ್ಲಿ ಮಿಶ್ರ ಫಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?
ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?
ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…
ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?
ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.