ಕ್ರೀಡಾ ತಾರೆಯರ ನಂಬಿಕೆ ಹಿಂದಿನ ಕಥೆ
Team Udayavani, Dec 28, 2019, 6:06 AM IST
ನೀವು ನಂಬುವುದೆಲ್ಲ ಸತ್ಯವೆಂಬುದು ಸತ್ಯ. ಅದು ಸುಳ್ಳಾದರೂ ಸಹ. ಖ್ಯಾತ ಚಿಂತಕ, ಲೇಖಕ ಸಾಜಿ ಜಿಯೇಮಿ ಹೇಳಿದ ಮಾತಿದು. ನಂಬಿಕೆ ಮತ್ತು ಸತ್ಯದ ನಡುವಿನ ತಾಕಲಾಟಕ್ಕೆ ದೊಡ್ಡ ಇತಿಹಾಸವೇ ಇದೆ. ಇತ್ತೀಚಿನ ಉದಾಹರಣೆಯನ್ನೇ ತೊಗೊಳ್ಳಿ ಚಂದ್ರಯಾನದ ಕೊನೆ ಘಳಿಗೆಯಲ್ಲಿ ಎಡವಟ್ಟಾಗಿದ್ದನ್ನ ಅದರ ಉಡಾವಣೆಯ ಸಮಯದೊಡನೆ ತಾಳೆ ಹಾಕಿ ಕೂಡಿ ಕಳೆದು ಕಾರಣಗಳನ್ನು ಹುಡುಕಿ ಕೊಟ್ಟವರಿಗೇನು ಕಮ್ಮಿಯೇ. ಅಂತೆಯೇ ಸಿನಿಮಾ ನಟ-ನಟಿಯರು ಕೂಡ ತಮ್ಮ ಜೀವನದ ಸಂಖ್ಯೆಗಳನ್ನು ಕಳೆದು ತೂಗಿ ಅದರ ಪ್ರಕಾರದಲ್ಲಿ ನಡೆಯುತ್ತಿರುವ ಹಲವು ಉದಾಹರಣೆಗಳಿವೆ. ಅಂತೆಯಢ ಕ್ರೀಡಾ ತಾರೆಯರೂ ಕೂಡ. ಹೆಚ್ಚಿನವರು ವಿವಿಧ ನಂಬಿಕೆಗಳ ಹಿಂದೆ ಬಿದ್ದಿದ್ದಾರೆ. ಈ ಕುರಿತ ವರದಿ ಇಲ್ಲಿದೆ ನೋಡಿ.
ಸಚಿನ್, ಧೋನಿ, ಯುವಿ ನಂಬರ್ ಗೇಮ್: ನಂಬಿಕೆಗಳಿಂದ ಕ್ರೀಡಾತಾರೆಯರೂ ಹೊರತಾಗಿಲ್ಲ. ಧೋನಿ, ಯುವರಾಜ್, ಸಚಿನ್‌ರಂತಹವರು ಕ್ರಮವಾಗಿ 7, 12 ಮತ್ತು 10ರ ಅದೃಷ್ಟಸಂಖ್ಯೆ ಹಿಂದೆ ಬಿದ್ದು ಯಶಸ್ಸು ಸಾಧಿಸಿದ್ದರು. ಕೊನೆಯ ತನಕ ಅದೇ ನಮ್ಮ ಅದೃಷ್ಟಸಂಖ್ಯೆ ಎನ್ನುವುದನ್ನು ಬಲವಾಗಿಯೇ ನಂಬಿದ್ದ ಕ್ರಿಕೆಟಿಗರಾಗಿದ್ದಾರೆ. ಕ್ರಿಕೆಟ್ ಜೀವನದಲ್ಲಿ ಆರಂಭಿಕನಾಗಿ ಭಾರೀ ಯಶಸ್ಸು ಸಾಧಿಸಿದ್ದ ವೀರೇಂದ್ರ ಸೆಹ್ವಾಗ್ ಜೆರ್ಸಿ ಮೇಲಿದ್ದ 44 ಸಂಖ್ಯೆಯನ್ನು ಅಳಿಸಿ ಖಾಲಿ ಜೆರ್ಸಿಯನ್ನು ತೊಡಲಾರಂಭಿಸಿದರು. ಇದಕ್ಕೆ ಕಾರಣ ಸಂಖ್ಯೆಯಲ್ಲಿರುವ ದೋಷವೂ ಇರಬಹುದು.
ಕೆಂಪು ಕರವಸ್ತ್ರದ ಅಮರನಾಥ್: ಸಂಖ್ಯೆಗಳ ಹೊರತಾಗಿ ಕೆಲವು ವಿಚಿತ್ರ ಪದ್ಧತಿಗಳನ್ನು ಕ್ರಿಕೆಟಿಗರು ಅಳವಡಿಸಿಕೊಂಡಿರುವ ಇತಿಹಾಸವಿದೆ. ಮಾಜಿ ಕ್ರಿಕೆಟಿಗ ಅಮರನಾಥ್‌ಗೆ ಒಂದು ಸ್ವಭಾವವಿತ್ತು. ಮೈದಾನದಲ್ಲಿದ್ದಾಗ ಅವರು ಯಾವತ್ತೂ ತನ್ನ ಜೀಬಿನಿಂದ ಇಣುಕುವಂತೆ ಕೆಂಪು ಕರವಸ್ತ್ರವೊಂದನ್ನಿಟ್ಟುಕೊಳ್ಳುತ್ತಿದ್ದರು. ಇದು ಅಮರನಾಥ್ ಅವರ ವಿಚಿತ್ರ ನಂಬಿಕೆಯಾಗಿತ್ತು. ಮಾಜಿ ವೇಗಿ ಜಹೀರ್ ಖಾನ್ ಕೂಡ ಇಂತಹುದೇ ಪದ್ಧತಿಯನ್ನು ಪಾಲಿಸುತ್ತಿದ್ದರು. ಅವರು ಕರವಸ್ತ್ರದ ಬಣ್ಣ ಮಾತ್ರ ಹಳದಿ. ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ಇದಕ್ಕೆ ಹೊರತಲ್ಲ. ಮೈದಾನದಲ್ಲಿದ್ದಾಗಲೆಲ್ಲ ತನ್ನ ಜೇಬಿನಲ್ಲಿ ತನ್ನ ಕ್ರೀಡಾಗುರುವಿನ ಭಾವಚಿತ್ರವನ್ನಿಟ್ಟುಕೊಳ್ಳುತ್ತಿದ್ದರು. ದಾದಾ ಚಿತ್ರ ಮರೆತು ಬಂದಾಗ ವಾಪಸ್ ಪೆವಿಲಿಯನ್‌ಗೆ ಹೋಗಿ ತಂದಿದ್ದೂ ಉಂಟು. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಬ್ಯಾಟಿಂಗ್‌ಗಾಗಿ ಪ್ಯಾಡ್ ಕಟ್ಟುವಾಗಲೆಲ್ಲ ಎಡಗಾಲಿಗೆ ಮೊದಲು ಕಟ್ಟಿಕೊಳ್ಳುತ್ತಿದ್ದರಂತೆ.
ಸೆರೆನಾ, ಫೆಡರರ್‌ಗೂ ಬಿಟ್ಟಿಲ್ಲ: ನಂಬಿಕೆಗಳು ಕೇವಲ ಭಾರತೀಯರಿಗಷ್ಟೇ ಸೀಮಿತವಾಗಿಲ್ಲ. ಅದು ವಿದೇಶಿಗರಲ್ಲೂ ಇದೆ. ಹೌದು, ಟೆನಿಸ್ ಜಗತ್ತಿನ ಖ್ಯಾತ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ವಿಶ್ವದ ವಿವಿಧ ತಾರಾ ಆಟಗಾರರು ಒಂದಲ್ಲ ಒಂದು ವಿಷಯದಲ್ಲಿ ನಂಬಿಕೆ ಹೊಂದಿದ್ದಾರೆ. ಮೊದಲ ಪಂದ್ಯವನ್ನು ಗೆದ್ದ ನಂತರ ಆ ಕೂಟದ ಎಲ್ಲ ಪಂದ್ಯಗಳಿಗೂ ಅದೇ ಸಾಕ್ಸ್ ಮತ್ತು ಶೂಗಳನ್ನು ಬಳಸುತ್ತಾರೆ. ಮಾತ್ರವಲ್ಲ ಸೆರೆನಾ ಮೊದಲ ಪಂದ್ಯಕ್ಕೆ ಲೇಸ್ ಕಟ್ಟಿಕೊಂಡ ರೀತಿಯನ್ನೇ ಎಲ್ಲ ಪಂದ್ಯಗಳಿಗೂ ಅನುಸರಿಸುವ ಜೊತೆಗೆ ಆ ಪಂದ್ಯಾವಳಿ ಮುಗಿಯುವವರೆಗೂ ತನ್ನ ಸಾಕ್ಸ್‌ಗಳನ್ನು ತೊಳೆಯುವುದಿಲ್ಲ. ಟೆನಿಸ್ ದಿಗ್ಗಜ ಫೆಡರರ್‌ಗೆ ಎಂಟರ ನಂಟು. ಆ ಸಂಖ್ಯೆಯ ಬಗ್ಗೆ ಆತನಿಗೆ ಅದೆಷ್ಟು ಒಲವಿದೆಯೆಂದರೆ ಪಂದ್ಯಕ್ಕೆ ಹೋಗುವಾಗ ಅವರು 8 ರ್ಯಾಕೆಟ್‌ಗಳನ್ನು ಬ್ಯಾಗನಲ್ಲಿಟ್ಟಿರುತ್ತಾರೆ. ಜೊತೆಗೆ 8 ನೀರಿನ ಬಾಟಲಿಗಳನ್ನು ತನ್ನೊಂದಿಗೊಯ್ದು ಅವುಗಳನ್ನು ತಾನೇ ಜೋಡಿಸಿಟ್ಟಿರುತ್ತಾರೆ. ಇಷ್ಟು ಸಾಲದೆಂಬಂತೆ ವಿರಾಮದ ಸಮಯದಲ್ಲಿ ಆತ 8 ಬಾರಿ ಮುಖವನ್ನು ಒರೆಸಿಕೊಳ್ಳುತ್ತಾರಂತೆ.
ಕೊನೆ ಸೀಟಿನಲ್ಲೇ ರೊನಾಲ್ಡೊ ಪ್ರಯಾಣ: ಫುಟ್‌ಬಾಲ್ ಧ್ರುವತಾರೆ ರೊನಾಲ್ಡೊ ಸಹ ಈ ಸಾಲಿಗೆ ಸೇರುವವನೇ. ಪಂದ್ಯಕ್ಕೆ ಪ್ರಯಾಣಿಸುವಾಗ ಬಸ್‌ನಲ್ಲಿ ಅವರು ಕುಳಿತುಕೊಳ್ಳುವುದು ಕೊನೆಯ ಸೀಟಿನಲ್ಲಿ. ಅಲ್ಲಿಂದ ಇಳಿಯುವಾಗಲೂ ಅಷ್ಟೇ ಅವರೇ ಕೊನೆಯವನೆಂಬುದನ್ನು ಧೃಡೀಕರಿಸಿಕೊಳ್ಳುತ್ತಾರೆ. ಪೋರ್ಚುಗೀಸ್ ತಂಡಕ್ಕೆ ಆಡುವ ಆಟಗಾರರಲ್ಲಿ ಇವರೊಬ್ಬರೇ ಉದ್ದ ತೋಳಿನ ಜೆರ್ಸಿ ತೊಡುವ ಹಿಂದೆ ಅವರ ಇಂತಹುದೇ ನಂಬಿಕೆ ಇದೆ ಎನ್ನಲಾಗಿದೆ.
ಅಭಿಮಾನಿಗೆ ಜೆರ್ಸಿ ಕೊಟ್ಟು ಫಾರ್ಮ್ ಕಳದುಕೊಂಡ ಪೀಲೆ: ನಂಬಿಕೆಗಳು ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಎಂಬುದು ನಿಜ. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ಫುಟಬಾಲ್ ದಂತಕಥೆ ಪೀಲೆ. ತನ್ನ ಆಟದ ಉತ್ತುಂಗದಲ್ಲಿದ್ದಾಗ ಆತ ಒಮ್ಮೆ ಇದ್ದಕ್ಕಿದ್ದಂತೆಯೆ ಫಾರ್ಮ್ ಕಳೆದುಕೊಂಡರು. ವಾಪಸಾತಿಗೆ ಹರಸಾಹಸ ಮಾಡುತ್ತಿದ್ದ ಅವರಿಗೆ ಅನಿಸಿದ್ದು ಇದಕ್ಕೆಲ್ಲ ತನ್ನ ನೆಚ್ಚಿನ ಜೆರ್ಸಿಯೊಂದನ್ನು ತನ್ನ ಅಭಿಮಾನಿಯೊಬ್ಬನಿಗೆ ನೀಡಿದ್ದೇ ಕಾರಣವೆಂದು. ಪೀಲೆ ಆ ಅಭಿಮಾನಿಯನ್ನು ಹುಡುಕಿಸಿ ಮತ್ತೆ ಜೆರ್ಸಿಯನ್ನು ವಾಪಸ್ ತರಲು ಯಶಸ್ವಿಯಾದರು. ಆಶ್ಚರ್ಯವೆಂಬಂತೆ ಅದನ್ನು ತೊಟ್ಟು ಆಡಲಾರಂಭಿಸಿದ ನಂತರ ಪೀಲೆ ಮತ್ತೆ ತನ್ನ ಲಯಕ್ಕೆ ಮರಳಿದರು. ಈ ನಡುವೆ ಆ ಅಭಿಮಾನಿ ಪೀಲೆಗೆ ವಾಪಸ್ಸು ಮಾಡಿದ್ದ ಜೆರ್ಸಿ ಅಂಗಡಿಯಿಂದ ಕೊಂಡು ತಂದ ಅಂತಹುದೇ ಮತ್ತೂಂದು ಜೆರ್ಸಿ ಎಂಬುದು ಯಾರಿಗೂ ಗೊತ್ತಾಗಲಿಲ್ಲ.
* ಸುನೀಲ್ ಬಾರ್ಕೂರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.