ಒಂದು ಚೆಂಡಿನ ಕಥೆ


Team Udayavani, Nov 30, 2019, 6:05 AM IST

ondu-chendi

ಕ್ರಿಕೆಟ್‌ನಲ್ಲಿ ಬಳಸುವ ಚೆಂಡು ವಿವಿಧ ಬಣ್ಣಗಳದ್ದಾಗಿದೆ, ಒಂದೊಂದು ಬಣ್ಣದ ಹಿಂದೆ ಒಂದೊಂದು ಕಥೆಯಿದೆ. ಎಲ್ಲ ಚೆಂಡನ್ನು ಎಲ್ಲ ಮಾದರಿಯ ಕ್ರಿಕೆಟ್‌ಗೆ ಬಳಸಲಾಗುವುದಿಲ್ಲ. ಎಲ್ಲದಕ್ಕೂ ಒಂದು ಲೆಕ್ಕಾಚಾರವಿದೆ. ಟೆಸ್ಟ್‌ಗೊಂದು, ಏಕದಿನ ಹಾಗೂ ಟಿ20ಗೆ ಮತ್ತೊಂದು ಎಂದು ಇಲ್ಲಿ ಪ್ರತ್ಯೇಕವಾಗಿ ಚೆಂಡುಗಳನ್ನು ವಿಭಾಗಿಸಲಾಗಿದೆ. ಇದೀಗ ಟೆಸ್ಟ್‌ ಜನಪ್ರಿಯಗೊಳಿಸಲು ಹಗಲುರಾತ್ರಿ ಟೆಸ್ಟ್‌ ಆರಂಭಿಸಲಾಗಿದೆ. ಇದಕ್ಕೆಂದೇ ಗುಲಾಬಿ ಬಣ್ಣದಿಂದ ವಿಶೇಷವಾಗಿ ವಿನ್ಯಾಸಗೊಳಿಸಿದ ಚೆಂಡನ್ನು ಬಳಸಲಾಗಿದೆ. ಈ ಹಿನ್ನೆಲೆಯಲ್ಲಿ, ಒಟ್ಟಾರೆ ಎಲ್ಲ ಚೆಂಡಿನ ಹಿಂದಿರುವ ವಿಶೇಷತೆಯನ್ನು ಇಲ್ಲಿ ವಿವರಿಸಲಾಗಿದೆ…

ಕ್ರಿಕೆಟ್‌ ಚೆಂಡಿನ ವಿಧ, ವೈಶಿಷ್ಟ್ಯ?
ಕೆಂಪು: ಕೆಂಪು ಚೆಂಡಿನ ಬಳಕೆ ಟೆಸ್ಟ್‌ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಾತ್ರ. ಇಲ್ಲಿ ಒಂದು ಚೆಂಡಿನಲ್ಲಿ 80 ಓವರ್‌ ತನಕ ಆಡಬಹುದು. ಅಂದರೆ ಒಂದು ದಿನದ ಸಂಪೂರ್ಣ ಆಟ ಎಂದು ಪರಿಗಣಿಸಬಹುದು. ಕೆಂಪು ಚೆಂಡು ಏಕದಿನ, ಟಿ20ಯಲ್ಲಿ ಬಳಸುವ ಬಿಳಿ ಚೆಂಡಿಗಿಂತ ಹೆಚ್ಚು ಗಟ್ಟಿಯಾಗಿದೆ. ಕೆಂಪು ಚೆಂಡಿನಲ್ಲಿ ಸ್ವಿಂಗ್‌ ಮಾಡುವುದು ಕಷ್ಟ ಎನ್ನುವುದು ಹಿಂದೆ ಸಂಶೋಧನೆಗಳಿಂದ ಬಹಿರಂಗಗೊಂಡಿದೆ. ಗಾಳಿಯ ಒತ್ತಡವು ಚೆಂಡಿನ ಪ್ರತಿ ಬದಿಯ ಮೇಲಿರುವ ಗಾಳಿಯ ಹರಿವನ್ನು ಆಧರಿಸುತ್ತದೆ. ಚೆಂಡಿನ ಒಂದು ಬದಿಯ ಮೇಲೆ ಗಾಳಿಯ ಹರಿವು ತಡೆದಾಗ ಚೆಂಡು ಸ್ವಿಂಗ್‌ ಆಗುತ್ತದೆ.

ಬಿಳಿ: ಬಿಳಿ ಚೆಂಡನ್ನು ಏಕದಿನ ಹಾಗೂ ಟಿ20ನಲ್ಲಿ ಮಾತ್ರ ಉಪಯೋಗಿಸಲಾಗುತ್ತದೆ. ಕೆಂಪು ಚೆಂಡಿಗೆ ಹೋಲಿಸಿದರೆ ಈ ಚೆಂಡು ಸ್ವಲ್ಪ ಮೆದು, ಹೊನಲು ಬೆಳಕಿನಲ್ಲಿ ಹೆಚ್ಚು ಕಣ್ಣಿಗೆ ಕಾಣುತ್ತದೆ. ಬಿಳಿ ಚೆಂಡಿನಲ್ಲಿ ವೇಗದ ಬೌಲರ್‌ಗಳು ಸ್ವಿಂಗ್‌ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಕ್ಕಾಬಿಕ್ಕಿಯಾಗಿಸುತ್ತಾರೆ. ಬಿಳಿ ಚೆಂಡಿನಲ್ಲಿ ಸುಲಭವಾಗಿ ಸ್ವಿಂಗ್‌ ಮಾಡಬಹುದು.

ಗುಲಾಬಿ: ಇತ್ತೀಚೆಗೆ ಕ್ರಿಕೆಟ್‌ಗೆ ಬಂದ ಗುಲಾಬಿ ಚೆಂಡು, ಬಳಕೆ ಹಗಲುರಾತ್ರಿ ಟೆಸ್ಟ್‌ಗೆ ಮಾತ್ರ. ಕತ್ತಲೆಯಲ್ಲಿ ಈ ಚೆಂಡು ಹೆಚ್ಚು ಹೊಳಪಿನಿಂದ ಕಾಣುತ್ತದೆ. ಬ್ಯಾಟ್ಸ್‌ಮನ್‌, ಬೌಲರ್‌ ಅಥವಾ ಫೀಲ್ಡರ್‌ ಯಾರೇ ಆದರೂ ಅವರಿಗೆ ಚೆಂಡನ್ನು ಗುರುತಿಸುವುದು ಕಷ್ಟವಾಗಲಾರದು. ಕೆಂಪು ಬಣ್ಣದ ಚೆಂಡು ಬಿಳಿ ಚೆಂಡಿಗಿಂತಲೂ ಹೆಚ್ಚು ಗಟ್ಟಿ. ಫೀಲ್ಡರ್‌ಗಳಿಗೆ ಹೆಚ್ಚು ಅಪಾಯವಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕಾಗಿಯೇ ಕೆಲವು ಕ್ರಿಕೆಟಿಗರು ಈ ಚೆಂಡನ್ನು ಬಳಸಲು ವಿರೋಧ ವ್ಯಕ್ತಪಡಿಸಿದ್ದಾರೆ.

ಚೆಂಡಿನ ತಯಾರಿಕೆ ಹೇಗೆ?: ವಿಶೇಷ ಮರವೊಂದರ ತಿರುಳಿನಿಂದ ಚೆಂಡನ್ನು ತಯಾರಿಸಲಾಗುತ್ತದೆ. ಇದಕ್ಕೆ ಹೊಲಿದ ಚರ್ಮದ ಹೊದಿಕೆಯ ತಿರುಳನ್ನು ಸುತ್ತಲಾಗುತ್ತದೆ. ನಂತರ ಬಿಗಿಯಾದ ದಾರದಿಂದ ಕಟ್ಟಲಾಗುತ್ತದೆ. ಹೊದಿಕೆಯ ಕಾಲು ಭಾಗ ಕಿತ್ತಳೆ ಹಣ್ಣಿನ ಸಿಪ್ಪೆಯ ಆಕಾರದಲ್ಲಿರುವ ಚರ್ಮದ ನಾಲ್ಕು ತುಂಡುಗಳಿಂದ, 90 ಡಿಗ್ರಿಯಿಂದ ಸುತ್ತುವ ಒಂದು ಅರೆಗೋಲದಂತೆ ನಿರ್ಮಿಸಲಾಗುತ್ತದೆ. ಪ್ರಧಾನ ಮಧ್ಯಗೆರೆ ರಚನೆಗೆ ಆರು ಸಾಲುಗಳನ್ನು ದಾರದಿಂದ ಹೊಲಿಯಲಾಗುತ್ತದೆ. ಪುರುಷರ ಕ್ರಿಕೆಟ್‌ಗೆ 5.5ರಿಂದ ಚೆಂಡು 5.75 ಔನ್ಸ್‌ (155.9 ಮತ್ತು 163.0 ಜಿ) ತೂಕವಿರಬೇಕು. ಸುತ್ತಳತೆ 8 13/16ರಿಂದ 9 (224 ಮತ್ತು 229 ಎಂಎಂ) ಒಳಗಿರಬೇಕು.

ಅಪಾಯಕಾರಿ ಚೆಂಡುಗಳಿವು: ಟೆನಿಸ್‌ ಬಾಲ್‌ ಮೆದುವಾಗಿರುತ್ತದೆ. ಲೆದರ್‌ ಚೆಂಡುಗಳು ಗಡುಸಾಗಿರುತ್ತವೆ. ಹೀಗಾಗಿ ಬ್ಯಾಟ್ಸ್‌ಮನ್‌ಗಳು ತಲೆಗೆ ಹೆಲ್ಮೆಟ್‌, ಕೈಗೆ ಗ್ಲೌಸ್‌, ಪ್ಯಾಡ್‌ ಮತ್ತಿತರ ರಕ್ಷಣಾ ಕವಚಗಳನ್ನು ಧರಿಸಿಯೇ ಆಡಬೇಕು. ಚೆಂಡಿನೇಟಿಗೆ ಆಸೀಸ್‌ ಕ್ರಿಕೆಟಿಗ ಫಿಲಿಪ್‌ ಹ್ಯೂಸ್‌, ಭಾರತದ ಕ್ರಿಕೆಟಿಗ ರಮಣ್‌ ಲಾಂಬಾ ಸೇರಿದಂತೆ ಹಲವಾರು ಕ್ರಿಕೆಟಿಗರು ಸಾವಿಗೀಡಾಗಿದ್ದಾರೆ. ಮತ್ತೆ ಕೆಲವರು ಗಂಭೀರ ಗಾಯಗೊಂಡಿರುವ ಘಟನೆ ಕಣ್ಣೆದುರಿದೆ. ತಲೆ, ಮುಖದ ಭಾಗಕ್ಕೆ ಈ ಚೆಂಡು ಜೋರಾಗಿ ಬಡಿದರೆ ಪ್ರಾಣಾಪಾಯ ಸಂಭವಿಸಬಹುದು. ಹೀಗಾಗಿ ಐಸಿಸಿ ಮಾನ್ಯತೆ ಪಡೆದ ಕಂಪೆನಿಗಳು ಮಾತ್ರ ವೃತ್ತಿಪರ ಕ್ರಿಕೆಟಿಗರ ಕ್ರಿಕೆಟ್‌ ಕಿಟ್‌ ತಯಾರಿಸುತ್ತವೆ.

ಹೊಸ ಚೆಂಡು ಬಳಕೆಗೆ ಒಂದೇ ಸಲ ಅವಕಾಶ: ಅಂತಾರಾಷ್ಟ್ರೀಯ ಪಂದ್ಯವೊಂದು ಆರಂಭವಾದ ಶುರುವಾತಿನಲ್ಲಿ ತಂಡವೊಂದಕ್ಕೆ ಎಸೆಯಲು ಹೊಸ ಚೆಂಡು ನೀಡಲಾಗುತ್ತದೆ. ಮತ್ತೊಂದು ಇನಿಂಗ್ಸ್‌ ಆರಂಭವಾದಾಗಲೂ ಇದೇ ನಿಯಮ ಅನ್ವಯವಾಗುತ್ತದೆ. ಇದಾದ ಬಳಿಕ ಪಂದ್ಯದ ನಡುವಿನಲ್ಲಿ ಎಲ್ಲಿಯೂ ಹೊಸ ಚೆಂಡು ಬಳಕೆಗೆ ಅವಕಾಶವಿಲ್ಲ. ಒಂದು ವೇಳೆ ಚೆಂಡು ಕಾಣೆಯಾದರೆ ಅಥವಾ ಚೆಂಡು ವಿರೂಪಗೊಂಡರೆ ಮಾತ್ರ ಹೊಸ ಚೆಂಡು ಕೊಡಲಾಗುತ್ತದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 80 ಓವರ್‌ ಮುಗಿದ ಬಳಿಕ ಹೊಸ ಚೆಂಡನ್ನು ಪಡೆಯಲು ಅವಕಾಶವಿರುತ್ತದೆ. ಕ್ರೀಡಾಂಗಣಕ್ಕೆ ಚೆಂಡನ್ನು ಉಜ್ಜುವುದು, ಚೆಂಡನ್ನು ಸ್ಯಾಂಡ್‌ಪೇಪರ್‌ ಬಳಸಿ ತಿಕ್ಕುವುದು, ಚೆಂಡಿನ ಮೂಲ ಸ್ವರೂಪಕ್ಕೆ ಹಾನಿ ಮಾಡುವುದು ಕ್ರಿಕೆಟ್‌ ನಿಯಮಗಳಿಗೆ ವಿರುದ್ಧವಾಗಿದೆ.

ಪ್ರಮುಖ ಚೆಂಡು ಉತ್ಪಾದಕ ಸಂಸ್ಥೆಗಳು
-ಗನ್‌ ಅಂಡ್‌ ಮೋರ್‌ ಕ್ರಿಕೆಟ್‌ ಬಾಲ್ಸ್‌
-ಕೊಕಬುರ್ರಾ ಕ್ರಿಕೆಟ್‌ ಬಾಲ್ಸ್‌
-ಸ್ಲಂಜರ್‌ ಕ್ರಿಕೆಟ್‌ ಬಾಲ್ಸ್‌
-ಸಿಎ ಕ್ರಿಕೆಟ್‌ ಬಾಲ್ಸ್‌
-ಎಸ್‌ಜಿ ಕ್ರಿಕೆಟ್‌ ಬಾಲ್ಸ್‌

ಟಾಪ್ ನ್ಯೂಸ್

Travis Head made a controversial statement about BCCI

INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್‌ ಹೆಡ್? Video

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

1-qwqwewq

Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Ravishankar

Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ

YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Travis Head made a controversial statement about BCCI

INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್‌ ಹೆಡ್? Video

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

1-qwqwewq

Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.