ಕೈಟಭೇಶ್ವರನ “ಕೋಟಿ’ ಪುರಾಣ
ಪ್ರದಕ್ಷಿಣೆ- ಕೈಟಭೇಶ್ವರ ದೇಗುಲ, ಕೋಟಿಪುರ
Team Udayavani, Aug 17, 2019, 5:08 AM IST
ಒಂದು ದೇಗುಲದಿಂದ ಮತ್ತೂಂದು ದೇಗುಲಕ್ಕೆ ಪೌರಾಣಿಕ ನಂಟೂ ಇರುತ್ತೆ. ಬನವಾಸಿಗೆ ಹೋದವರಿಗೆ ಗೈಡ್‌ಗಳು, ಮಧುಕೇಶ್ವರನ ಕಥೆ ಹೇಳುತ್ತಲೇ, ಅವರ ಬಾಯಿಂದ “ಕೈಟಭೇಶ್ವರ’ ಎಂಬ ಹೆಸರಿನ ಉಲ್ಲೇಖವೂ ಜತೆಜತೆಗೇ ಬರುತ್ತೆ. ಮಧು- ಕೈಟಭ ರಾಕ್ಷಸರು ಶಿವನ ಭಕ್ತರು. ವಿಷ್ಣುವು ಇವರನ್ನು ಸಂಹರಿಸಿದ ನಂತರ, ಶಿವಭಕ್ತರಾದ ಇವರ ಹೆಸರಿನಲ್ಲಿ ಶಿವಲಿಂಗಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಕಾರಣ, ಇವೆರಡೂ ದೇಗುಲಗಳು ಪರಸ್ಪರ ಪುರಾಣದ ನಂಟನ್ನು ಹೊಂದಿವೆ.
ಮಧುಕೇಶ್ವರನ ವಿಳಾಸವೇನೋ ಬನವಾಸಿ ಆಯಿತು. ಕೈಟಭೇಶ್ವರನಿಗೆ ಎಲ್ಲಿ ನೆಲೆ ಆಯಿತು? ಅದನ್ನು ಹುಡುಕುತ್ತಾ ಹೋದರೆ ಸಿಗುವುದು, ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ “ಕೋಟಿಪುರ’ ಎಂಬ ಪುಟ್ಟ ಊರು. ಈ ಊರಿನ ರಸ್ತೆಯ ಪಕ್ಕ, ಪ್ರಧಾನ ಆಕರ್ಷಣೆಯಾಗಿ ನಿಂತ ದೇಗುಲವೇ ಕೈಟಭೇಶ್ವರ ದೇಗುಲ! ಇದು ಆನವಟ್ಟಿಯ ಸಮೀಪವೇ ಇದೆ.
ಕ್ರಿ.ಶ. 1100ರಲ್ಲಿ ಹೊಯ್ಸಳ ದೊರೆ ವಿನಯಾದಿತ್ಯನ ಕಾಲದಲ್ಲಿ ನಿರ್ಮಾಣವಾದ ಈ ದೇಗುಲದ ಗರ್ಭಗುಡಿಯೇ ಒಂದು ಚೆಂದ. ಸುಖನಾಸಿ ಮತ್ತು ತೆರೆದ ಮುಖಮಂಟಪವೂ ಅಷ್ಟೇ ವಿಶಿಷ್ಟ ಆಕರ್ಷಣೆಯನ್ನು ಹೊಂದಿದೆ. ಗರ್ಭಗುಡಿಯಲ್ಲಿ ಕೋಟಿನಾಥನ ಲಿಂಗವಿದೆ. ಲಲಾಟದಲ್ಲಿ ಗಜಲಕ್ಷ್ಮೀಯ ಕೆತ್ತನೆಯ ಸೌಂದರ್ಯವೂ ಗುಣಗಾನಕ್ಕೆ ಅರ್ಹ.
ಮಂಟಪದಲ್ಲಿ ಹೊಯ್ಸಳ ಶೈಲಿಯ 46 ಕಂಬಗಳಿವೆ. ಅವುಗಳ ಮೇಲಿನ ಎಲೆ- ಬಳ್ಳಿಗಳ ಕೆತ್ತನೆಯ ಕುಸುರಿ ಬೆರಗು ಹುಟ್ಟಿಸುವಂಥದ್ದು. ಸುಕನಾಸಿಯ ಬಳಿ 10 ಕಂಬಗಳಿದ್ದು, ಉಳಿದಂತೆ ಮಂಟಪದಲ್ಲಿ 36 ಕಂಬಗಳಿವೆ. ಪದ್ಮಕ ಶೈಲಿಯಲ್ಲಿನ ಈ ಮಂಟಪವನ್ನು ನೃತ್ಯಗಳಿಗೆ ಮೀಸಲಿಟ್ಟಿದ್ದಿರಬಹುದು. 25 ಅಂಕಣಗಳ ಸುಂದರ ಮಂಟಪದ ಮಧ್ಯದ ಭುವನೇಶ್ವರಿಯಲ್ಲಿ ಕಮಲದ ಕೆತ್ತನೆ ಬಹಳ ನಾಜೂಕಾಗಿದೆ. ಮಂಟಪಕ್ಕೆ 3 ಪ್ರತ್ಯೇಕ ಪ್ರವೇಶ ದ್ವಾರಗಳಿವೆ. ಇಲ್ಲಿನ ದೇವಕೋಷ್ಟಕಗಳಲ್ಲಿ ಸಪ್ತಮಾತೃಕ, ಗಣಪತಿ, ವಿಷ್ಣುವಿನ ಮೂರ್ತಿಗಳಿವೆ.
ಗರ್ಭಗುಡಿಯ ಮೇಲಿನ ಶಿಖರವು ದ್ರಾವಿಡ ಶೈಲಿಯ ಕುಸುರಿ ಹೊಂದಿದೆ. ಶಿಖರವು ನಾಲ್ಕು ಹಂತಗಳಲ್ಲಿದ್ದು, ಅಲ್ಲಲ್ಲಿ ಸಣ್ಣ ಶಿಲ್ಪಗಳಿವೆ. ಮೊದಲ ಹಂತವು ಇಡೀ ದೇಗುಲವನ್ನು ಆವರಿಸಿಕೊಂಡಿದ್ದು, ಇದರಲ್ಲಿ ತಾಂಡವೇಶ್ವರ, ಗಣಪತಿ, ಅಷ್ಟ ದಿಕಾ³ಲಕರ ಕೆತ್ತ¤ನೆ ಇದೆ. ದೇವಾಲಯವು ಕೇಂದ್ರ ಪುರಾತತ್ವ ಇಲಾಖೆಯ ಅಧೀನದಲ್ಲಿದ್ದು, ವಿಶಾಲವಾದ ಆವರಣದಲ್ಲಿ ಸಣ್ಣ ಸಣ್ಣ ಗುಡಿಗಳಿವೆ.
ದರುಶನಕ್ಕೆ ದಾರಿ…
ಸೊರಬದಿಂದ ಆನವಟ್ಟಿಯನ್ನು ತಲುಪಿದರೆ, ಅಲ್ಲಿಂದ ಹಾನಗಲ್ ಮಾರ್ಗದಲ್ಲಿ ಕೋಟಿಪುರ ಸಿಗುತ್ತದೆ. ರಸ್ತೆಯ ಪಕ್ಕದಲ್ಲೇ ಕೈಟಭೇಶ್ವರ ದೇಗುಲವಿದೆ. ಇಲ್ಲಿಂದ 15 ಕಿ.ಮೀ. ದೂರದಲ್ಲಿ ಮಧುಕೇಶ್ವರನ ಸನ್ನಿಧಾನವನ್ನು ತಲುಪಬಹುದು.
– ಶ್ರೀನಿವಾಸ ಮೂರ್ತಿ ಎನ್.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.