ಬಿಳಿ ಎದೆಯ ಗುಬ್ಬಿ
Team Udayavani, Jul 21, 2018, 3:12 PM IST
ಈ ಹಕ್ಕಿ ಭಾರತದಲ್ಲಿ ಜೂನ್- ಅಕ್ಟೋಬರ್ ಸಮಯದಲ್ಲಿ ಮರಿಮಾಡುವುದು. ಬೇರು, ನಾರು, ಜೇಡರ ಬಲೆ ಸೇರಿಸಿ ಬಟ್ಟಲಿನಾಕಾರದ ಸುಂದರ ಗೂಡನ್ನು ಗಂಡು ಹೆಣ್ಣು ಸೇರಿ ಕಟ್ಟುವುದು ವಿಶೇಷ. ಈ ಹಕ್ಕಿ 4-7 ಮೊಟ್ಟೆ ಇಟ್ಟ ಉದಾಹರಣೆ ಇದೆ.
ಇದನ್ನು ಬಿಳಿ ಎದೆಯ ಗೀಜಗ ಗುಬ್ಬಿ ಅಂತ ಕರೆಯುತ್ತಾರೆ. ಇದು ಗುಬ್ಬಚ್ಚಿಯನ್ನು ಹೋಲುವ ಹಕ್ಕಿ. ಕಪ್ಪು, ಬಿಳಿ, ಕೇಸರಿ ಚುಕ್ಕೆ ಇರುವ ಗುಬ್ಬಚ್ಚಿಯಷ್ಟು ಚಿಕ್ಕದಾದ ಹಕ್ಕಿ. ಇದು ಗುಲಗುಂಜಿ ಹಕ್ಕಿಯ ಸ್ವಭಾವ ಮತ್ತು ನಿಲುವನ್ನು ಹೋಲುತ್ತದೆ. ಬಣ್ಣ ವ್ಯತ್ಯಾಸಗಳಿಂದಲೇ ಈ ಹಕ್ಕಿಯನ್ನು 13 ಗುಂಪಾಗಿ ಹೆಸರಿಸಲಾಗಿದೆ.
ಗೀಜಗ ಹಕ್ಕಿಗೆ ಸ್ವಲ್ಪ ದಪ್ಪ ಎನಿಸುವ ತಲೆಯಿದೆ. ಇದು ನಿಲುವಿನಲ್ಲಿ ಬಿಳಿ ಎದೆ ಗುಬ್ಬಿಯನ್ನು ತುಂಬಾ ಹೋಲುತ್ತದೆ. ಗುಬ್ಬಚ್ಚಿಯಂತೆ ಸಪುರಾದ ದೇಹ ಹೊಂದಿದೆ. ಬಾಲವು 15-17 ಸೆಂ.ಮೀ. ಉದ್ದವಿದೆ.
ಗಂಡು ಹಕ್ಕಿಗೆ ಚಿಕ್ಕ ಚುಂಚು, ಕಾಲು, ಕುತ್ತಿಗೆ, ರೆಕ್ಕೆಯ ಮೇಲಾºಗದ ಗರಿಗಳು ಎಲ್ಲವೂ ಕಪ್ಪು ಬಣ್ಣವೇ. ಕುತ್ತಿಗೆ ಮುಂಭಾಗ ಎದೆಯಲ್ಲಿ ಮತ್ತು ಬೆನ್ನಿನ ಕೆಳಗೆ ಅಂದರೆ ಎರಡೂ ರೆಕ್ಕೆ ಸೇರುವ ಬೆನ್ನ ಭಾಗದಲ್ಲಿ ಕೇಸರಿ ಬಣ್ಣ ಮತ್ತು ರೆಕ್ಕೆಯ ಮಧ್ಯ ಇರುವ ಬಿಳಿ ಬಣ್ಣ ಇದನ್ನು ಗುರುತಿಸಲು ಸಹಕಾರಿ. ಬಾಲದ ಅಡಿಯ ಗರಿ ಬಿಳಿ ಇದೆ. ಕಪ್ಪು ರೆಕ್ಕೆಯ ಮಧ್ಯದಿಂದ ರೆಕ್ಕೆಯ ತುದಿಯವರೆಗೆ ಇರುವ ಬಿಳಿಬಣ್ಣ ಬುಸ್ ಚಾಟ್ ಹಕ್ಕಿಯನ್ನು ನೆನಪಿಗೆ ತುರುತ್ತದೆ.
ಎದೆಯಲ್ಲಿ ಮತ್ತು ಬೆನ್ನಿನಲ್ಲಿರುವ ಕೇಸರಿ ಬಣ್ಣ ಸ್ವಲ್ಪ ತಿಳಿಯಾಗಿದೆ. ಹಾಗಾಗಿ ಕೇಸರಿ ಗುಲಗುಂಜಿ ಮತ್ತು ಇತರ
ಹಕ್ಕಿಗಳಿಂದ ಇದನ್ನು ಬೇರೆ ಎಂದು ತಿಳಿಯಬಹುದಾಗಿದೆ. ಈ ಹಕ್ಕಿ ಇರುನೆಲೆ ಮಾಡಿಕೊಂಡು ಜೋಡಿಯಾಗಿ ಇಲ್ಲವೇ ಚಿಕ್ಕ ಗುಂಪಿನಲ್ಲಿ ವಾಸಿಸುತ್ತದೆ. ಗಿಡದಿಂದ ಗಿಡಕ್ಕೆ ಹಾರುತ್ತಾ ಸ್ಟಿØà,ಸ್ಟಿØà,ಸ್ಟೀØà ಎಂದು, ಕೆಲವೊಮ್ಮೆ ಸ್ಟಿಪ್, ಸ್ಟಿಪ್, ಸ್ವೀವ್, ಸ್ವೀವ್ ಸ್ವೀವ್ ಎಂದು ಕೂಗುವುದು ವಿಶೇಷ.
ಕೆಲವೊಮ್ಮೆ ಟೆಲಿಫೋನ್ ಅಥವಾ ಕರೆಂಟ್ ತಂತಿ ಇಲ್ಲವೇ ಇಳಿಬಿದ್ದ ಬಳ್ಳಿಗಳ ಮೇಲೆ ಕುಳಿತು ಜೋಕಾಲಿಯಾಡಿದಂತೆ ಜೀಕುತ್ತಾ ತಟ್ಟನೆ ಹಾರಿ, ರೆಕ್ಕೆಹುಳ ಹಿಡಿದು ತಾನು ಕುಳಿತ ಜಾಗಕ್ಕೆ ತಿರುಗಿ ತಿನ್ನುತ್ತದೆ. ಗಿಡದಿಂದ ಗಿಡಕ್ಕೆ ಹಾರುವಾಗ ಇದರ ಗದ್ದಲಕ್ಕೆ ಕಂಬಳಿ, ಮಿಡತೆ, ರೆಕ್ಕೆಹುಳ ಗಾಬರಿಯಾಗಿ ಹೊರಕ್ಕೆ ಓಡುತ್ತವೆ.
ಈ ಹಕ್ಕಿ ಬರುತ್ತಿದೆ ಎಂದರೆ ಸಾಕು, ಇದರ ಸಹವರ್ತಿಗಳಾದ ಅಯೋರಾ, ಬೂದು ಬಣ್ಣದ ಕೋಗಿಲೆ, ಮತ್ತು ಪತಾಕೆ ರೆಕ್ಕೆ ಡ್ರಾಂಗೂ, ಕತ್ತರಿ ಬಾಲದಡ್ರಾಂಗೂಸ ಎಲ್ಲಾ ಹುಳಗಳನ್ನು ತಿನ್ನುತೊಡಗುತ್ತವೆ. ಹೀಗಾಗಿ ಬೆಳೆಗಳಿಗೆ ಹಾನಿಕಾರಕ ಅನೇಕ ಹುಳಗಳನ್ನು ಇದು ನಿಯಂತ್ರಿಸುವುದರಿಂದ ರೈತರ ಗೆಳೆಯನೂ ಆಗಿದೆ.
ಹೆಣ್ಣು ಹಕ್ಕಿ ಕಪ್ಪು ಬಿಳಿ ಬಣ್ಣ ಮತ್ತು ತಲೆ ಬೂದು ಬಣ್ಣದಿಂದ ಕೂಡಿದೆ. ಇದರ ಉದ್ದ ಸ್ವಲ್ಪ ಚಿಕ್ಕದು. ಈ ಗುರುತಿನಿಂದಲೇ ಹೆಣ್ಣು ಹಕ್ಕಿಯನ್ನು ಗಂಡಿನಿಂದ ಪ್ರತ್ಯೇಕವಾಗಿಸಬಹುದು.
ಈ ಹಕ್ಕಿ ಮಿಲನದ ವೇಳೆಯಲ್ಲಿ ವಿಶಿಷ್ಟವಾಗಿ ಕೂಗುತ್ತದೆ. ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ , ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ ಮುಂತಾದ ಕಡೆ ಈ ಹಕ್ಕಿಯನ್ನು ಕಾಣಬಹುದು. ಈ ಹಕ್ಕಿ ಭಾರತದಲ್ಲಿ ಜೂನ್- ಅಕ್ಟೋಬರ್ ಸಮಯದಲ್ಲಿ ಮರಿಮಾಡುವುದು. ಬೇರು, ನಾರು, ಜೇಡರ ಬಲೆ ಸೇರಿಸಿ ಬಟ್ಟಲಿನಾಕಾರದ ಸುಂದರ ಗೂಡನ್ನು ಗಂಡು ಹೆಣ್ಣು ಸೇರಿ ಕಟ್ಟುವುದು ವಿಶೇಷ. ಈ ಹಕ್ಕಿ 4-7 ಮೊಟ್ಟೆ ಇಟ್ಟ ಉದಾಹರಣೆ ಇದೆ. ಇದು ಭೂಮಿಗೆ ಸಮಾನಾಂತರವಾಗಿರುವ ಟೊಂಗೆಗಳ ಮೇಲೆ ಗೂಡು ಕಟ್ಟುತ್ತದೆ. 17 ರಿಂದ 18 ದಿನ ಕಾವುಕೊಟ್ಟು ಮರಿಮಾಡುತ್ತದೆ.
ಪಿ. ವಿ. ಭಟ್ ಮೂರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.