ಯಾವ್ಯಾವ ರಾಶಿಗೆ, ಯಾರಾರು ಅಧಿಪತಿ ಗೊತ್ತಾ?
Team Udayavani, Jul 7, 2018, 12:31 PM IST
ಗೋಚಾರ ರಾಶಿಗಳು ಇರುವುದು ಮೇಷದಿಂದ ಮೀನದವರೆಗೂ ಒಟ್ಟು ಹನ್ನೆರಡು. ಈ ಹನ್ನೆರಡು ರಾಶಿಗೂ ಏಳು ಗ್ರಹಗಳು ಅಧಿಪತಿಗಳು. ರಾಹು ಕೇತುಗಳಿಗೆ ಯಾವ ಸ್ವಂತ ರಾಶಿಯೂ ಇಲ್ಲ. ಮೇಷ ಮತ್ತು ವೃಶ್ಚಿಕ ರಾಶಿಗೆ ಕುಜ ಅಧಿಪತಿ. ವೃಷಭ ಮತ್ತು ತುಲಾಗೆ ಶುಕ್ರ ಅಧಿಪತಿ. ಮಿಥುನ ಮತ್ತು ಕನ್ಯಾಗೆ ಬುಧ ಅಧಿಪತಿ. ಕಟಕಕ್ಕೆ ಚಂದ್ರ ಅಧಿಪತಿ. ಸಿಂಹಕ್ಕೆ ಸೂರ್ಯ. ಧನುಸ್ಸು ಹಾಗೂ ಮೀನ ರಾಶಿಗೆ ಗುರು ಅಧಿಪತಿ. ಮಕರ ಹಾಗೂ ಕುಂಭರಾಶಿಗಳಿಗೆ ಶನಿ ಅಧಿಪತಿ. ಅಧಿಪತಿ ಎಂದರೆ ಈ ರಾಶಿಗಳು ಈ ಗ್ರಹಗಳ ಸ್ವಂತ ಮನೆಯಾಗಿರುತ್ತವೆ. ಇದಲ್ಲದೆ ಈ ಗ್ರಹಗಳಿಗೆ ಉತ್ಛಸ್ಥಾನ, ನೀಚ ಸ್ಥಾನ, ಮೂಲ ತ್ರಿಕೋಣ ದಿಕºಲ ಎಂಬ ಶಕ್ತಿಯುತವಾದ ಸ್ಥಾನಗಳು ಇರುತ್ತವೆ.
ಮೇಷ-ವೃಶ್ಚಿಕ ರಾಶಿಯಧಿಪತಿಯಾದ ಕುಜನಿಗೆ ಮೇಷ ರಾಶಿ ಮೂಲ ತ್ರಿಕೋಣ ಸ್ಥಾನವೂ ಹೌದು. ಇಲ್ಲಿ ಮೇಷರಾಶಿಯಲ್ಲಿರುವ ಕುಜನಿಗೆ ಬಲ ಹೆಚ್ಚು. ಕುಜನಿಗೆ ಮಕರ ರಾಶಿ ಉತ್ಛಸ್ಥಾನವಾದರೆ, ಕಟಕರಾಶಿ ನೀಚ ಸ್ಥಾನ. ಕಟಕದಲ್ಲಿ ಕುಜ ಬಲಹೀನ. ಮಕರದಲ್ಲಿ ಕುಜನಿದ್ದರೆ ಶಕ್ತಿವಂತ. ಜಾತಕದಲ್ಲಿ ಕುಜ ಬಲವಾಗಿದ್ದು ಅವನಿಗೆ ಚಂದ್ರ ಅಥವಾ ಗುರುವಿನ ದೃಷ್ಟಿ ಇದ್ದರೆ ಅಂಥವರು ಪ್ರಖ್ಯಾತ ವೈದ್ಯರಾಗುತ್ತಾರೆ. ಶಸ್ರಚಿಕಿತ್ಸಾ ತಜ್ಞರಾಗಿರುತ್ತಾರೆ. ಕುಜನೊಟ್ಟಿಗೆ ಶುಕ್ರನಿದ್ದರೆ ಅಂಥ ಜಾತಕದವರು ವಿಷಯ ಲೋಲುಪರಾಗಿರುತ್ತಾರೆ. ಇವರಿಗೆ ಐಹಿಕ ಸುಖಾಭಿಲಾಷೆ ಹೆಚ್ಚು. ಕುಜ ಭಾತೃಕಾರಕನೂ ಆಗಿರುವುದರಿಂದ ಅಣ್ಣತಮ್ಮರೊಂದಿಗೆ ಒಳ್ಳೆಯ ಅನುಬಂಧ ಇರುತ್ತದೆ. ಕುಜ ಬಲಹೀನನಾಗಿದ್ದರೆ ಅಣ್ಣತಮ್ಮಂದಿರಲ್ಲಿ ಅನ್ಯೋನ್ಯತೆ ಇರುವುದಿಲ್ಲ.
ಕುಜ ಕೆಲಸ ಏನು?
ದೇಹಬಲ, ಶಕ್ತಿ, ಧೈರ್ಯ, ಸಾಹಸ ಪ್ರವೃತ್ತಿಗಳನ್ನು ಕೊಡುವವನು ಕುಜ. ಜಾತಕದಲ್ಲಿ ಹತ್ತನೇ ಮನೆ ಕರ್ಮಸ್ಥಾನ. ಹತ್ತನೇ ಮನೆಯಲ್ಲಿ ಕುಜನಿದ್ದರೆ ಅಂಥವರು ಒಂದು ದೊಡ್ಡ ಸಂಸ್ಥೆಗೆ ಒಡೆಯರಾಗುತ್ತಾರೆ. ಹಲವಾರು ಸಂಸ್ಥೆಗಳನ್ನೂ ಹುಟ್ಟುಹಾಕುವ ಸಾಮರ್ಥ್ಯ ಇರುತ್ತದೆ. ಕುಜನಿಗೆ ಹತ್ತನೇ ಮನೆ ದಿಕºಲವೂ ಆಗಿರುವುದರಿಂದ ಹತ್ತನೇ ಮನೆಯ ಕುಜನು ದೊಡ್ಡ ಅಧಿಕಾರ, ಹೆಸರು, ಪ್ರಸಿದ್ಧಿ, ಹಣ, ಅಂತಸ್ತು ಎಲ್ಲವನ್ನೂ ಕೊಡುತ್ತಾನೆ. ಕುಜನ ಜೊತೆಯಲ್ಲಿ ರಾಹು ಅಥವಾ ಶನಿ ಇರಬಾರದು. ಶನಿ ಇದ್ದರೆ ಅಪಘಾತ, ಮೂಳೆ ಮುರಿಯುವುದು, ಪ್ರಾಣಾಂತಿಕವಾದ ಗಾಯಗಳು ಇಂಥವು ತಪ್ಪಿದ್ದಲ್ಲ. ಕುಜನ ಜೊತೆ ರಾಹು ಇದ್ದರೆ ಇವರಿಗೆ ರಕ್ತದಲ್ಲಿ ಆಗಿಂದಾಗ್ಗೆ ಏನಾದರೂ ಸಮಸ್ಯೆಯಾಗಿ ಬಹಳಕಾಲ ಕಾಡಿಸುತ್ತದೆ. ಸಂತಾನವಾಗಲು ಅಡ್ಡಿ ಮಾಡುತ್ತದೆ. ಸಂಗಾತಿಯ ಸ್ಥಾನಕ್ಕೆ ಕುಜನ ಸಂಬಂಧದ್ದು ಕುಜನಿಗೆ ಶನಿ ಅಥವಾ ರಾಹುವಿನ ದೃಷ್ಟಿ ಬಿದ್ದರೆ ಅಂಥವರ ವೈವಾಹಿಕ ಜೀವನ ಅಪೂರ್ಣವಾಗಿರುತ್ತದೆ. ಏನಾದರೂ ಸಮಸ್ಯೆಗಳು ತಲೆದೋರುತ್ತವೆ. ಸೂರ್ಯ, ಚಂದ್ರ ಹಾಗೂ ಗುರು, ಕುಜನಿಗೆ ಮಿತ್ರರು. ಸೂರ್ಯನು ಕುಜನೊಟ್ಟಿಗೆ ಇದ್ದರೆ ಅಂಥ ಜಾತಕದವರು ತುಂಬಾ ಶಕ್ತಿವಂತರಾಗಿರುತ್ತಾರೆ. ರಾಜರಾಗಿರುತ್ತಾರೆ. ಕುಜನು ಸೈನ್ಯಾಧಿಪತಿಯಾಗಿರುವುದರಿಂದ ಜಾತಕದಲ್ಲಿ ಕುಜ ಬಲವಾಗಿದ್ದರೆ ಅಂಥವರು ಮಿಲಿಟರಿಯಲ್ಲಿ ಅಥವಾ ಪೊಲೀಸ್ ಹುದ್ದೆಯಲ್ಲಿ ಇರುತ್ತಾರೆ. ಇವರ ದೇಹದಾಡ್ಯì ಬಲವಾಗಿರುತ್ತದೆ.
ಶುಕ್ರ ಈ ರಾಶಿಗೆ ಅಧಿಪತಿ
ವೃಷಭ-ತುಲಾ ರಾಶಿಗಳಿಗೆ ಶುಕ್ರ ಅಧಿಪತಿ. ಶುಕ್ರನಿಗೆ, ವೃಷಭ-ತುಲಾ ಎರಡೂ ರಾಶಿಗಳೂ ಸ್ವಂತ ಮನೆ. ಮೀನ ರಾಶಿ ಉತ್ಛಸ್ಥಾನ. ಕನ್ಯಾರಾಶಿ ನೀಚ ಸ್ಥಾನ. ತುಲಾ ರಾಶಿ ಮೂಲತ್ರಿಕೋಣ. ಶುಕ್ರನು ತುಲಾ ಹಾಗೂ ಮೀನದಲ್ಲಿ ಬಲವಂತ. ಕನ್ಯಾದಲ್ಲಿ ಬಲಹೀನ. ಶುಕ್ರ ಜಾತಕದಲ್ಲಿ ನಾಲ್ಕನೇ ಮನೆಯಲ್ಲಿದ್ದರೆ ಅದು ಅವನಿಗೆ ದಿಕºಲವನ್ನು ಸೂಚಿಸುತ್ತದೆ. ಜಾತಕದಲ್ಲಿ ಲಗ್ನದಿಂದ ನಾಲ್ಕನೇ ಮನೆಯಲ್ಲಿರುವ ಶುಕ್ರ ಸಕಲ ಸಂಪತ್ತನ್ನೂ, ಭೋಗಭಾಗ್ಯಗಳನ್ನೂ ಕರುಣಿಸುತ್ತಾನೆ. ಶುಕ್ರನೊಟ್ಟಿಗೆ ಬುಧ ನಿದ್ದರೆ ಹಾಲು ಜೇನು ಬೆರೆತಂತೆ. ಬುಧ ಶುಕ್ರನ ಪರಮಾಪ್ತ ಮಿತ್ರ. ಶುಕ್ರನೊಟ್ಟಿಗೆ ಶನಿ ಇದ್ದರೂ ಒಳ್ಳೆಯದೇ. ಶುಕ್ರನಿಗೆ ಶನಿ ಯೋಗಕಾರಕ. ಶುಕ್ರನಿಗೆ ಗುರು ಹಾಗೂ ಸೂರ್ಯ ಶತೃಗಳು. ಶುಕ್ರ ದೈತ್ಯ ಗುರು, ಹೀಗಾಗಿ ರಾಹು ಕೇತುಗಳು ಶುಕ್ರನಿಗೆ ಅಧೀನ. ಶುಕ್ರ ಕುಜ ಸಮಬಲರು. ಶುಕ್ರನೊಟ್ಟಿಗೆ ಕುಜನಿದ್ದರೆ ಆ ಜಾತಕದವರು ಬಹು ಸಂಗಾತಿಗಳನ್ನು ಹೊಂದಿರುವಂಥವರಾಗಿರುತ್ತಾರೆ. ಶುಕ್ರನು ಏಳನೇ ಮನೆಯಲ್ಲಿದ್ದರೆ ಅಂಥವರು ಸಂಗಾತಿಯೊಡನೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ. ರಸಿಕರಾಗಿರುತ್ತಾರೆ.
ಮಿಥುನ, ಕನ್ಯಾ ರಾಶ್ಯಾಧಿಪತಿ ಬುಧ. ಬುಧನಿಗೆ ಮಿಥುನ ಕನ್ಯಾ ಸ್ವಂತ ಮನೆಯಾದರೆ ಕನ್ಯಾ ರಾಶಿ ಉತ್ಛಸ್ಥಾನ ಮೀನ ರಾಶಿ ನೀಚ ಸ್ಥಾನ. ಬುಧನಿಗೆ ಮೂಲ ತ್ರಿಕೋನ ಸ್ಥಾನವೂ ಕನ್ಯಾರಾಶಿಯೇ ಆಗಿರುತ್ತದೆ. ಲಗ್ನದಲ್ಲಿ ಬುಧ ದಿಕºಲವನ್ನು ಕೊಡುತ್ತಾನೆ. ಬುಧನಿಗೆ ಶುಕ್ರ ರಾಹು ಸೂರ್ಯ ಹಾಗೂ ಶನಿ ಮಿತ್ರರು. ಗುರು, ಕುಜ ಹಾಗೂ ಕೇತು ಶತ್ರು. ಚಂದ್ರ ಸಮಬಲ. ಸೂರ್ಯ ಅತಿ ಸಮೀಪದ ಗ್ರಹ ಬುಧ. ಸೂರ್ಯ ಹಾಗೂ ಬುಧ ಜಾತಕದಲ್ಲಿ ಒಟ್ಟಿಗೆ ಇದ್ದರೆ ಅದನ್ನು
ಬುಧಾದಿತ್ಯಯೋಗ ಎನ್ನುತ್ತಾರೆ. ಈ ಯೋಗ ಇರುವ ಜಾತಕದವರು ವಾಕ್ ಪ್ರವೀಣರು. ಇವರ ಮಾತುಗಳು ಕೇಳಲು ಸೊಗಸಾಗಿರುತ್ತದೆ. ಒಳ್ಳೆಯ ವಾಗ್ಮಿಗಳು ಉತ್ತಮ ಭಾಷಣಕಾರರರೂ ಆಗಿರುತ್ತಾರೆ. ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಬಲ್ಲ ಸಾಮರ್ಥ್ಯ ಇವರಿಗಿರುತ್ತದೆ. ಇಂಥವರು ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಅದ್ವಿತೀಯರಾಗಿರುತ್ತಾರೆ. ರಾಜಕಾರಣಿಗಳು ಆಗಬಹುದು. ಪೊ›ಫೆಸರ್ ಆಗಿರಬಹುದು.
ಇವರು ಅಕೌಂಟ್ಸ್‌ನಲ್ಲಿ ಪರಿಣಿತರು
ಬುಧನು ಜಾತಕದಲ್ಲಿ ಬಲವಾಗಿದ್ದರೆ ಅಂಥವರು ಗಣಿತ ಹಾಗೂ ಅಕೌಂಟ್ಸ್ ನಲ್ಲಿ ಪರಿಣಿತರಾಗಿರುತ್ತಾರೆ. ಹೊಸ ಹೊಸ ತಂತ್ರಜಾnನಗಳಲ್ಲಿ ಆಸಕ್ತಿ ಉಳ್ಳವರಾಗಿರುತ್ತಾರೆ. ವಿಜಾnನಿಗಳು ಆಗಬಹುದು. ಜ್ಯೋತಿಷ್ಯ ಗಣಿತ ತಂತ್ರಜಾnನ, ಸಾಫ್ಟ್ವೇರ್ ಉದ್ಯಮ ಇವೆಲ್ಲ ಇವರಿಗೆ ಹೇಳಿ ಮಾಡಿಸಿದ್ದಾಗಿರುತ್ತದೆ. ಬುಧ ಬಲವಾಗಿರುವ ಜಾತಕದವರು ಲೆಕ್ಕಪರಿಶೋಧಕರೂ ಆಗಿರುತ್ತಾರೆ. ಇವರಿಗೆ ನೆನಪಿನ ಶಕ್ತಿ ಚೆನ್ನಾಗಿರುತ್ತದೆ. ಬುಧನು ಸಂಗಾತಿಯ ಸ್ಥಾನಕ್ಕೆ ಸಂಬಂಧಿಸಿದ್ದು ಅವನೊಟ್ಟಿಗೆ ಜಾತಕದಲ್ಲಿ ಕುಜ ಅಥವಾ ಕೇತು ಅಥವಾ ಗುರು ಇದ್ದರೆ ಇವರ ವೈವಾಹಿಕ ಜೀವನ ಅಪೂರ್ಣವಾಗಿರುತ್ತದೆ. ಬುಧನು ಬಂಧುಕಾರಕನೂ ಆಗಿರುವುದರಿಂದ ಬುಧ ಜಾತಕದಲ್ಲಿ ಬಲವಾಗಿದ್ದರೆ ಬಂಧು ಬಾಂಧವರೊಡನೆ ಒಡನಾಟ ಚೆನ್ನಾಗಿರುತ್ತದೆ. ಜಾತಕದಲ್ಲಿ ಆರೋಗ್ಯಸ್ಥಾನಕ್ಕೆ ಬುಧನ ಸಂಬಂಧವಿದ್ದರೆ ಅಂಥವರಿಗೆ ಹೃದಯ ಸಂಬಂಧಿ ತೊಂದರೆಗಳು ತಲೆದೋರಬಹುದು. ಜಾತಕದಲ್ಲಿ ಲಗ್ನದಿಂದ ಎರಡನೇ ಮನೆಯಲ್ಲಿ ಬುಧನಿದ್ದರೆ ಇವರು ಬಹಳ ಮಾತುಗಾರರಾಗಿರುತ್ತಾರೆ. ಲಗ್ನದಲ್ಲಿ ಬುಧನಿದ್ದರೆ ಇಂಥ ಜಾತಕದವರು ಎಂಥ ಅಪಾಯದ ಪರಿಸ್ಥಿತಿಯನ್ನೂ ಎದುರಿಸಿ ಗೆದ್ದು ಬರುತ್ತಾರೆ.
ಜಾತಕದಲ್ಲಿ ಶುಕ್ರನಿದ್ದರೆ ಸುಖವುಂಟು
ಶುಕ್ರ ಕಲೆಗಳಿಗೆ ಅಧಿದೇವತೆ. ಶುಕ್ರ ಬಲವಾಗಿರುವ ಜಾತಕದವರು ಕಲಾವಿದರಾಗಿರುತ್ತಾರೆ. ಯಾವುದೋ ಒಂದು ಕಲೆಯಲ್ಲಿ ನೈಪುಣ್ಯ ಹೊಂದಿರುತ್ತಾರೆ. ವೃತ್ತಿಪರ ಸಂಗೀತಗಾರರು, ನೃತ್ಯಗಾರರು, ನಾಟಕ ಅಥವಾ ಸಿನಿಮಾ ಕಲಾವಿದರೂ ಆಗಿರಬಹುದು. ಸಂಗೀತವಾದ್ಯಗಳ ಅಪ್ರತಿಮ ವಾದಕರಾಗಿರಬಹುದು. ಜಾತಕದಲ್ಲಿ ಶುಕ್ರನನ್ನು ಹೊಂದಿರುವವರು ಅಲಂಕಾರ ಪ್ರಿಯರೂ ಆಗಿರುತ್ತಾರೆ. ಹೂವು ಸುಗಂಧ ದ್ರವ್ಯ ಕಾರುಗಳು ಬಂಗಾರ, ಬೆಳ್ಳಿ, ವಜ್ರ ಮುಂತಾದ ಐಷಾರಾಮಿ ವಸ್ತುಗಳ ವ್ಯಾಪಾರಸ್ಥರು ಆಗಿರುತ್ತಾರೆ. ಶಾಂತಿ ಪ್ರಿಯರಾಗಿರುತ್ತಾರೆ. ಸಂಗಾತಿಯ ಸ್ಥಾನದಲ್ಲಿ ಶುಕ್ರನ ಪಾತ್ರ ಬಲವಾಗಿದ್ದರೆ ಅಂಥವರು ಪ್ರೇಮ ವಿವಾಹವನ್ನೂ ಮಾಡಿಕೊಳ್ಳುತ್ತಾರೆ. ಹಲವಾರು ಪ್ರೇಮಿಗಳನ್ನೂ ಹೊಂದಿರುತ್ತಾರೆ. ಜಾತಕದಲ್ಲಿ ಶುಕ್ರ ಬಲವಾಗಿದ್ದರೆ ಶುಕ್ರನು, ಸುಖಕಾರಕನೂ ಆಗಿರುವುದರಿಂದ ಐಷಾರಾಮಿ ಜೀವನ ಕೊಡುತ್ತಾನೆ. ವೈಭವವನ್ನು ಕೊಡುತ್ತಾನೆ. ಜೀವನಕ್ಕೆ ಒಂದು ಕಲಾತ್ಮಕತೆಯನ್ನು ಕೊಡುತ್ತಾನೆ. ಇವರು ಒಳ್ಳೆಯ ಬರಹಗಾರರು ಪತ್ರಕರ್ತರೂ ಆಗಿರುತ್ತಾರೆ. ಪ್ರಕೃತಿಯ ಉಪಾಸಕರಾಗಿರುತ್ತಾರೆ. ಶುಕ್ರನು ಸುಖಕಾರಕನಾಗಿರುವುದರಿಂದ ಆ ಜಾತಕ ಹೊಂದಿದವರು ಕೊಂಚ ಸ್ಥೂಲ ದೇಹಿಗಳು ಆಗಿರುತ್ತಾರೆ.
ವೀಣಾ ಚಿಂತಾಮಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Astrology 2024: 2024ರಲ್ಲಿ ಮಿಶ್ರ ಫಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?
ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?
ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…
ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?
ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.