ಶಿಲೆಯಲ್ಲ ಈ ಗುಡಿಯು…
Team Udayavani, Oct 19, 2019, 4:06 AM IST
ಹೊಸನಗರದ ಉಮಾ ಮಹೇಶ್ವರ ದೇಗುಲದ ಶಿಲ್ಪಲೋಕದಲ್ಲಿ ಜೀವಂತರೂಪಗಳೇ ಇವೆಯೇನೋ! ಕೆತ್ತನೆಗಳಲ್ಲಿಯೇ ಕಥೆ ಹೇಳುತ್ತಾ, ಮೋಡಿಗೊಳಿಸುತ್ತವೆ…
ಕೊಡಚಾದ್ರಿಯ ಚಾಚಿಕೊಂಡ ಹಸಿರು. ನಡುವೆ ಪುಟ್ಟ ದೇಗುಲ. ಅದರ ಕಂಬಗಳಲ್ಲಿ, ಗೋಡೆಗಳಲ್ಲಿ ಶಿಲ್ಪಗಳದ್ದೇ ಕಥಾವೈಭವ. ಗಣಪತಿ, ಪಾರ್ವತಿ, ಸುಂದರ ದ್ವಾರಪಾಲಕರು, ಕಲ್ಲಿನ ಮೇಲೆ ಚಿತ್ರಿತಗೊಂಡು, ಏನನ್ನೋ ಹೇಳುತ್ತಿದ್ದಾರೆ. ಹೊಸನಗರದ ಉಮಾ ಮಹೇಶ್ವರಿ ದೇಗುಲದ ಆ ಶಿಲ್ಪಲೋಕದಲ್ಲಿ ಜೀವಂತರೂಪಗಳೇ ಇವೆಯೇನೋ!
ವಿಜಯನಗರ- ಕೆಳದಿ ವಾಸ್ತುಶಿಲ್ಪದ ಕೊಡುಗೆ ಈ ದೇಗುಲ. 3 ಆಡಿ ಎತ್ತರದ ಜಗತಿಯ ಮೇಲೆ 18 ಆಡಿ ಉದ್ದದಷ್ಟು ವಿಸ್ತಾರ. ಗರ್ಭಗುಡಿ, ಅಂತರಾಳ ಹಾಗೂ ಮುಖಮಂಟಪದ ಚೆಲುವು ಹೃದಯಸ್ಪರ್ಶಿಯಾಗಿದೆ. ಗರ್ಭಗುಡಿಯಲ್ಲಿ ಸುಂದರ ಶಿವಲಿಂಗವಿದ್ದು, ದ್ವಾರದಲ್ಲಿ ಗಣಪತಿ ತನ್ನ ರೂಪವೈಭವದಿಂದಲೇ ಸೆಳೆಯುತ್ತಾನೆ. ಎಡಭಾಗದಲ್ಲಿ ಪಾರ್ವತಿಯ ಶಿಲಾಕೃತಿ. ವಿತಾನದಲ್ಲಿ ಕಮಲದ ಕೆತ್ತನೆ ಇದೆ. ಪ್ರವೇಶ ದ್ವಾರದಲ್ಲಿ ಮೂರೂವರೆ ಅಡಿ ಎತ್ತರದ ಸುಂದರ ಶೈವ ದ್ವಾರಪಾಲಕರು ರಾಜಭಕ್ತಿ ಮೆರೆಯುತ್ತಿರುವಂತೆ ತೋರುತ್ತಾರೆ.
ದೇವಾಲಯದ ಸೌಂದರ್ಯ ಅಡಗಿರುವುದೇ ಮುಖಮಂಟಪ ಹಾಗೂ ಹೊರಭಿತ್ತಿಯಲ್ಲಿನ ಕೆತ್ತನೆಗಳಲ್ಲಿ. ಪ್ರವೇಶ ದ್ವಾರದ ಎರಡೂ ಬದಿಯ ಮೂಲೆಯಲ್ಲಿ, ವಿಜಯನಗರ ಶೈಲಿಯ ಹಿಂಗಾಲಿನ ಮೇಲೆ ನಿಂತಿರುವ ಸಿಂಹದ ಕೆತ್ತನೆ ಇದ್ದರೆ, ಇದಕ್ಕೆ ಹೊಂದಿಕೊಂಡಂತೆ ಇರುವ ಪ್ರತ್ಯೇಕ ಎರಡು ಕಂಬಗಳ ನಾಲ್ಕು ದಿಕ್ಕಿನಲ್ಲಿ ಸಿಂಹದ ಕೆತ್ತನೆ, ಚೆಲುವು ತುಂಬಿಕೊಂಡಿದೆ. ಮುಖಮಂಟಪದಲ್ಲಿ ಭುವನೇಶ್ವರಿ, ಭವ್ಯರೂಪಿ. ಅಷ್ಟ ದಿಕ್ಬಾಲಕರ ಉಬ್ಬು ಶಿಲ್ಪದ ಕೆತ್ತನೆಗೆ, ಕಣ್ಮನ ಸೋಲದೇ ಇರದು. ಕೆಳದಿ ಅರಸರ ಕಾಲದ ವಾಸ್ತುಶೈಲಿಗೆ ಇವೆಲ್ಲ ಸಾಕ್ಷಿಯಂತಿವೆ.
ದೇಗುಲದ ಸುತ್ತಲಿನ 9 ಕಂಬಗಳಲ್ಲಿ, ಪ್ರತಿ ಕಂಬದ ಮೇಲೂ ಹಿಂಗಾಲಿನ ಮೇಲೆ ನಿಂತ ಭಂಗಿಯ ಸುಂದರ ಸಿಂಹದ ಕೆತ್ತನೆಗಳಿವೆ. ವಿಷ್ಣುವಿನ ದಶಾವತಾರದ ಬೃಹತ್ ಕೆತ್ತನೆಗಳ ವೈಭವವಂತೂ ಅಪಾರ ಚೆಲುವಿನಿಂದ ಕೂಡಿದೆ. ಇಲ್ಲಿನ ವರಾಹ ಮೂರ್ತಿಯ ಪ್ರಭಾವಳಿ ಕಲಾತ್ಮಕವಾಗಿದ್ದು, ಮತ್ಸಾéವತಾರದ ಮೇಲೆ ಸುಂದರ ತೋರಣವನ್ನು ಗುರುತಿಸಬಹುದು. ಶಿವಲಿಂಗದ ರಚನೆಯೂ ಇಲ್ಲಿದ್ದು, ಪರಶುರಾಮನ ಪಕ್ಕದಲ್ಲಿ ನಾಟ್ಯ ಭಂಗಿಯಲ್ಲಿರುವ ಸುಂದರ ಸ್ತ್ರೀ ನಿಜಕ್ಕೂ ಕಲಾಸುಂದರಿ.
ಶಿಲ್ಪ ರಚನೆಯಿಂದಲೇ ಸೆಳೆಯುವ, ಈ ದೇಗುಲ ನಿರ್ಮಾಣದ ಕಾಲ ಯಾರಿಗೂ ತಿಳಿದಿಲ್ಲ. ಆದರೂ, ಇದರ ವಾಸ್ತುಶಿಲ್ಪದ ಶೈಲಿ, 15 ಅಥವಾ 16ನೇ ಶತಮಾನದ ಕಾಲಘಟ್ಟಕ್ಕೆ ಹೋಲಿಕೆಯಾಗುವಂತಿವೆ.
ದರುಶನಕೆ ದಾರಿ…: ಹೊಸನಗರದಿಂದ ಕುಂದಾಪುರ ರಸ್ತೆಯಲ್ಲಿ ಸಾಗುವಾಗ, 2 ಕಿ.ಮೀ. ದೂರದಲ್ಲಿ ಬಲಕ್ಕೆ ತಿರುಗಿದರೆ ಸಿಗುವುದೇ “ಸುತ್ತ’ ಎಂಬ ಗ್ರಾಮ. ಈ ದೇಗುಲವಿರುವುದು ಇಲ್ಲಿಯೇ. ಸಮೀಪದಲ್ಲಿಯೇ ಕಾರಣಗಿರಿ ಇದ್ದು, ಸಿದ್ಧಿ ವಿನಾಯಕನನ್ನೂ ದರ್ಶಿಸಬಹುದು.
* ಶ್ರೀನಿವಾಸ ಮೂರ್ತಿ ಎನ್.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.