ರಾಮನು ಉಂಟು,ಶಿವನೂ ಉಂಟು! ಇದು ದಕ್ಷಿಣ ಕಾಶಿ 


Team Udayavani, Jul 22, 2017, 12:11 PM IST

13.jpg

  ಸುತ್ತಲೂ ಬೆಟ್ಟ ಗುಡ್ಡ. ಅದರ ನಡುವೆಯೇ ಲೆಕ್ಕಕ್ಕೆ ಸಿಗದಷ್ಟು ಪ್ರಮಾಣದ ಜಲಧಾರೆಯನ್ನು ತನ್ನ ಒಡಲಲ್ಲಿ ಹೊಂದಿರುವ, ಬ್ರಹ್ಮ-ವಿಷ್ಣು-ಮಹೇಶ್ವರನ ಸಂಗಮದ ಅಪರೂಪದ ಶಿಷ್ಟ ಪರಂಪರೆ ಹೊಂದಿರುವ ದೇಗುಲವನ್ನು ಕಣ್ತುಂಬಿಕೊಳ್ಳಬೇಕಾದರೆ ನೀವು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬೆಳಗುತ್ತಿ ಗ್ರಾಮದ ಹತ್ತಿರವಿರುವ ತೀರ್ಥರಾಮೇಶ್ವರ ದೇವಸ್ಥಾನಕ್ಕೆ ಬರಬೇಕು.

 ಹೊನ್ನಾಳಿ ತಾಲೂಕಿನ ನ್ಯಾಮತಿಯ ಮೂಲಕ ಸಾಗಿ ಬೆಳಗುತ್ತಿಯಿಂದ 3 ಕಿ.ಮೀ. ಸಾಗಿದ ಬಳಿಕ, ಗುಡ್ಡದ ಮೇಲಿರುವ ದೇವಸ್ಥಾನ ಕಾಣುತ್ತದೆ. ಸೌಳಂಗದಿಂದ ಶಿಕಾರಿಪುರ ತಾಲೂಕಿನ ಖಳೂರುವರೆಗೆ ಹಬ್ಬಿರುವ ಬೆಟ್ಟದಲ್ಲಿ ರಾಮೇಶ್ವರ ನೆಲೆಸಿದ್ದಾನೆ. ಈ ಸ್ಥಳಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ. ರಾಮಾಯಣದಲ್ಲಿ ಈ ಸ್ಥಳದ ಪ್ರಸ್ತಾಪವಿದೆಯಂತೆ.   ವನವಾಸದ ಸಂದರ್ಭದಲ್ಲಿ ಶ್ರೀರಾಮಚಂದ್ರ ಈ ಬೆಟ್ಟದ ಮೇಲೆ ತಂಗಿದ್ದನಂತೆ. ಸೀತಾಮಾತೆ ಬಾಯಾರಿಕೆಯಿಂದ ಬಳಲಿದಾಗ ನೀರು ಸಿಗುವುದಿಲ್ಲ. ಆಗ ಶ್ರೀರಾಮಚಂದ್ರ ಬತ್ತಳಿಕೆಯಿಂದ ಬಾಣ ಬಿಟ್ಟಾಗ ಬಂಡೆಯಿಂದ ನೀರು ಚಿಮುತ್ತದೆ. ಅದೇ ನೀರನ್ನು ರಾಮ- ಸೀತೆ- ಲಕ್ಷ್ಮಣರು ಕುಡಿದು ತಮ್ಮ ದಾಹ ನೀಗಿಸಿಕೊಳ್ಳುತ್ತಾರೆ. ನಂತರ ಮುಂದೆ ಸ್ವಲ್ಪ ದೂರ ಸಾಗಿದ ಬಳಿಕ ಅವರಿಗೆ ಶಿವಲಿಂಗ ಗೋಚರಿಸಿತು. ಅದನ್ನು ಪೂಜೆ ಮಾಡಿ ಲಿಂಗಾನುಗ್ರಹ ಪಡೆದರು.
 

ರಾಮ ಬಿಟ್ಟ ಬಾಣದಿಂದ ಬಂದ ನೀರು ಕಾಶಿಯಿಂದ ಬಂದಿದ್ದಂತೆ ! ಮುಂದೆ ಅದು ‘ಕಾಶಿತೀರ್ಥ’ ಎಂದಾಯಿತು. ಹಾಗೆಯೇ, ರಾಮ ನೆಲೆಸಿದ್ದರಿಂದ ಅಲ್ಲಿ ಲಿಂಗ ಪ್ರತ್ಯಕ್ಷವಾದ್ದರಿಂದ ಕ್ಷೇತ್ರಕ್ಕೆ ತೀರ್ಥರಾಮೇಶ್ವರ ಎಂಬ ಹೆಸರೂ ಬಂತು. ಈ  ಕೊಳದಲ್ಲಿ ಮಿಂದರೆ ಪಾಪಗಳು ಪರಿಹಾರವಾಗುತ್ತವೆ ಎಂಬ ಪ್ರತೀತಿ ಇದೆ. 

   ಈ ಪ್ರದೇಶವನ್ನು ಆಳುತ್ತಿದ್ದ ಚಲುವರಂಗಪ್ಪರಾಯ ವಿಜಯನಗರ, ಆನೆಗೊಂದಿ ಅರಸರ ಸವಿನೆನಪಿಗಾಗಿ. ಊರಿನವರ ಸಹಕಾರದಿಂದ ದೇಗುಲವನ್ನು ಶಿಲೆಯಿಂದ ನಿರ್ಮಿಸಿದರಂತೆ.   ಕಂಬಗಳ ಮೇಲ್ಚಾವಣಿಯಲ್ಲಿ ವಿಜಯನಗರ ಅರಸರ ಸಂಕೇತವಾಗಿ ಎರಡು ಆನೆಗಳಿವೆ. ಕಂಬ ಮತ್ತು ಗೋಡೆಯ ಮೇಲೆ ಮೃದಂಗ ಬಾರಿಸುವ ನಾಟ್ಯ ಸ್ತ್ರೀಯರು.  ಮುಂದಿನ ದ್ವಾರದ ಬಾಗಿಲಿನಲ್ಲಿ ಗಜಲಕ್ಷಿ$¾ಯ ಚಿತ್ರವಿದೆ. ಒಳಾಂಗಣದಲ್ಲಿ ಬೃಹತ್‌ ಗಾತ್ರದ ನಾಲ್ಕು ಕಲ್ಲಿನ ಕಂಬಗಳಿವೆ. ಜಲಕನ್ಯೆಯರ ವಸ್ತ್ರಾಪಹರಣ ಮಾಡುತ್ತಿರುವ ಕೃಷ್ಣ, ಋಷಿ ಕನ್ಯೆ, ಕೆರಳಿದ ಹುಲಿ, ಆನೆಮುಖದ ಹಂಸ, ಸರ್ಪರಂಗೋಲಿ ಈ ದೇವಾಲಯದ ಅಂದ ಹೆಚ್ಚಿಸುತ್ತಿವೆ. ಹೊರಭಾಗದಲ್ಲಿ ಲಿಂಗಕ್ಕೆ ಹಸು ಹಾಲುಣಿಸುತ್ತಿರುವುದು ಜೋಡಿ ಆನೆ ಕಾಳಗ ಮತ್ತಿತರ ಚಿತ್ರಗಳು ನೋಡುಗರನ್ನು ಆಕರ್ಷಿಸುತ್ತವೆ. 

 ದೇವಸ್ಥಾನದ ಎಡಗಡೆ ಬೆಟ್ಟದ ಮೇಲಿಂದ ಬರುವ ಜಲಧಾರೆ ನಿರಂತರವಾಗಿ ಹರಿಯುತ್ತಿರುತ್ತದೆ. ಇದು ಕಾಶಿಯಿಂದ ಹರಿದು ಬರುತ್ತಿದೆ ಎನ್ನುವುದು ಬಹು ಕಾಲದ ನಂಬಿಕೆ. ಈ ನೀರು ಹರಿದು ಬರುವ ಸ್ಥಳದಲ್ಲಿ ಒಂದು ಚಿಕ್ಕ ಕೊಳ ಕಟ್ಟಿಸಲಾಗಿದೆ. ನೀರು ಕೊಳಕ್ಕೆ ಬೀಳುತ್ತದೆ. ಅಲ್ಲಿನ ಸಿಬ್ಬಂದಿಗಷ್ಟೇ ಕೊಳದಲ್ಲಿ ಇಳಿಯಲು ಅವಕಾಶ. ಬೇರೆಯವರಿಗೆ ಕೊಳದಲ್ಲಿ ಇಳಿಯಲು ಬಿಡುವುದಿಲ್ಲ. 

   ಈ ಕೊಳಕ್ಕೆ ಎಂಥ ಬೇಸಿಗೆ ಇದ್ದರೂ ಸಹ ನೀರು ಮಾತ್ರ ಬರುವುದು ನಿಲ್ಲುವುದಿಲ್ಲ. ಕೊಳದ ಮೇಲಾºಗದಲ್ಲಿ ಮೊಸಳೆ ಮೇಲೆ ಕುಳಿತ ಗಂಗಾಮಾತೆಯ ವಿಗ್ರಹ ನಿರ್ಮಾಣ ಮಾಡಲಾಗಿದೆ. ದೀಪಾವಳಿ ಸಂದರ್ಭದಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ.ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ತೀರ್ಥರಾಮೇಶ್ವರ ಪುಣ್ಯಕ್ಷೇತ್ರವಾಗಿಯೂ ಹೆಸರಾಗಿದೆ.  

ಟಿ.ಶಿವಕುಮಾರ್‌

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.