ಯಾರಿಗೆ ಯು “ಗಾದಿ’?
ರಾಜಕೀಯ ಭವಿಷ್ಯ
Team Udayavani, Apr 6, 2019, 6:00 AM IST
ಮತ್ತೆ ಹೊಸ ಸಂವತ್ಸರ. ಕಣ್ಣೆದುರೇನೇ ಹೊಸತು ಘಟಿಸುತ್ತದೆಂಬ ಕಾತರಿಕೆಗೆ ಸಾಕ್ಷಿಯಾಗಿ, ಚುನಾವಣೆಯೂ ಹಬ್ಬದಂತೆ ಯುಗಾದಿಯೊಟ್ಟಿಗೇ ನಿಂತುಬಿಟ್ಟಿದೆ. ಎಲ್ಲರ ಮನಸ್ಸೋಳಗೂ ಒಬ್ಬೊಬ್ಬ ಅಭ್ಯರ್ಥಿ ಬಾವುಟ ಹಾರಿಸುತ್ತಿದ್ದಾನೆ. ನಮ್ಮ ಆಸೆ, ಆಕಾಂಕ್ಷೆ, ಕನಸುಗಳನ್ನೆಲ್ಲ ಹೊತ್ತ ಸರದಾರ ಈ ಚುನಾವಣಾ ಯುದ್ಧದಲ್ಲಿ ಗೆದ್ದು ಬರುತ್ತಾನಾ? ನಾಳೆಯ ನಮ್ಮ ನಾಡು, ನೆಲದ ಭವಿಷ್ಯವೇನು? ಯಾವ ಯಾವ ಹೊಸತುಗಳು ನಮ್ಮ ಮುಂದೆ ಘಟಿಸಬಹುದು?- ಇವೆಲ್ಲದರ ಕುತೂಲಹಕ್ಕೆ ಉತ್ತರವಾಗಿ ಜ್ಯೋತಿಷ್ಯ ತಜ್ಞರ ಬರಹ ನಿಮ್ಮ ಮುಂದಿದೆ…
ಯುಗದ ಆದಿ ಯುಗಾದಿ. ಪ್ರತಿ ದಿನವೂ ಹೊಸ ಯುಗದ ಆದಿಯೇ. ಆದರೆ, ಭಾರತೀಯ ಪರಂಪರೆ ವಿಶೇಷವಾಗಿ ಚೈತ್ರ ಶುದ್ಧ ಪ್ರತಿಪದೆಯಂದು, ಮಂಗಲಮಯವಾದ ಯುಗದ ಆದಿ ಯುಗಾದಿಯನ್ನಾಗಿ, ಸಂಭ್ರಮ ಸಂತೋಷ, ಸಂವತ್ಸರದ ಫಲಾವಳಿ ಕೇಳಿ ತಿಳಿಯುವ ಮೂಲಕ ಆಚರಿಸುತ್ತದೆ. ವಿಘ್ನ ವಿನಾಶಕ ವಿನಾಯಕನನ್ನು, ಮನೆಯಲ್ಲಿನ ದೇವರನ್ನು ಸ್ನಾನಾನಂತರ ಫಲಪುಷ್ಪ, ಮಂತ್ರ, ಮಂಗಳಾರತಿಗಳ ಮೂಲಕ ಪೂಜಿಸಿ ನಮಸ್ಕರಿಸಿ ಹೊಸಬಟ್ಟೆ ತೊಟ್ಟು, ಹಿರಿಯರು ಮಕ್ಕಳಿಗೆ, ಕಿರಿಯರು ತಮ್ಮ ಶ್ರೇಯೋಭಿಲಾಷಿಗಳಾದ ತಂದೆ -ತಾಯಿ, ಗುರುಹಿರಿಯರಿಗೆ ಹೊಸ ಬಟ್ಟೆ ನೀಡಿ, ಪಾದಕ್ಕೆರಗಿ ಗೌರವ ಪ್ರದರ್ಶಿಸುತ್ತಾರೆ. ಕಿರಿಯರಿಗೆ ಶುಭಾಶೀರ್ವಾದ ಹಿರಿಯರಿಂದ ಲಭಿಸಲ್ಪಡುವುದು, ಅನಾದಿ ಕಾಲದಿಂದ ಬಂದ ನಿಯಮ. ಹಸುವಿನ ಘೃತದಲ್ಲಿ ಹುರಿದ, ಅಮೃತದಿಂದ ಹುಟ್ಟಲ್ಪಟ್ಟಿದ್ದು ಎಂದು ಪ್ರಖ್ಯಾತರಾದ ಎಳೆಯ ಬೇವಿನ ಎಲೆಗಳನ್ನು, ಬೆಲ್ಲದ ಜೊತೆ (ಇತರ ಮಸಾಲೆಯ ಇಂಗು, ಲವಣ, ಮೆಣಸುಗಳನ್ನು ಸೇರಿಸುವುದೊಂದು ರೂಢಿ) ಸೇವಿಸುತ್ತಾರೆ. ರಕ್ತದ ಶುದ್ಧಿಗೆ ಬೇವು ದಿವೌÂಷಧ ಎಂಬುದನ್ನು ಆಯುರ್ವೇದ ಪ್ರತಿಪಾದಿಸುತ್ತದೆ. ಜಾಗತಿಕವಾಗಿಯೂ ಇದನ್ನು ಸತ್ಯ ಎಂದು ಅನೇಕ ತಜ್ಞರು ಒಪ್ಪಿದ್ದಾರೆ.
ಹಾಗಾದರೆ, ಆಗಮಿಸಿರುವ ಶ್ರೀ ವಿಕಾರಿ ನಾಮ ಸಂವತ್ಸರ ಹೆಸರಿಗೆ ತಕ್ಕಂತೆ ವಿಕಾರಿಯಾಗಿ, ಕ್ರೂರವೇ ಅಥವಾ ದೈವ ಬಲದಿಂದಾಗಿ ಆಕೃತಿ ಪಡೆದು ಸಂಸ್ಕೃತಿಯ ಮೂಲಕ ಸುಸಂಕೃತಗೊಳಿಸಿ ನಮ್ಮ ಪಾಲಿಗೆ ಶಾಂತಿ ಸಮಾಧಾನ ನೀಡುವುದೇ ಎಂಬ ಪ್ರಶ್ನೆ ನಮ್ಮೆಲ್ಲರಿಗೂ ಈಗ ಸಹಜ. ಈ ವರ್ಷ ರಾಜನೇ ಶನಿಯಾಗಿರುತ್ತಾನೆ. ಭಾರತದಲ್ಲಂತೂ ಹೊಸದೇ ಕೇಂದ್ರ ಸರ್ಕಾರ, ಹೊಸದೇ ಲೋಕಶಭೆಯ ಪ್ರತಿಷ್ಠಾಪನೆಯ ವಿಚಾರಗಳನ್ನು, ಪ್ರಥಮ ಆದ್ಯತೆಯೊಂದಿಗೆ ಹೊಂದಿಕೊಂಡಂತೆ ಹೆಜ್ಜೆ ಇಡುತ್ತಿರುವ ಈ ವಿಕಾರಿ- ಜಾತಿ, ಧರ್ಮ, ಭಾಷೆಯೊಂದಿಗೆ ಎದ್ದಿರುವ ಕದನ ಕೋಲಾಹಲ ಸದ್ದಿನೊಂದಿಗೆ ಕಣ್ತೆರೆದಿದೆ.
ಈ ವಿಕಾರಿ ನಾಮ ಸಂವತ್ಸರದಲ್ಲಿ ಮಂತ್ರಿ ಪಟ್ಟ ಸೂರ್ಯನದು. ಕೋಶಾಧಿಪತಿ ಬುಧನಾಗಿದ್ದಾನೆ. ಮಳೆಯನ್ನು ಸುರಿಸಬೇಕಾದ ಮೋಡಗಳ ಖಾತೆಯನ್ನೂ ಶನೈಶ್ಚರ ಹೊಂದಿದ್ದಾನೆ. ಮಳೆ ಸುರಿದಾಗ ಎದ್ದೇಳುವ ಸಸ್ಯ ಸಂಪತ್ತಿನ ಒಡೆತನ ಅಂಗಾರಕನದ್ದು. ಮಿಲಿಟರಿಯು ಶನೈಶ್ಚರನ ಜವಾಬ್ದಾರಿಯೇ ಆಗಿದೆ. ಆನಂದಮಯ ಅಲೆಗಳ ನಿರ್ಮಾಣದ ಭಾಗ ಗುರು ಗ್ರಹದ್ದಾಗಿದೆ. ವ್ಯಾಪಾರ, ವಹಿವಾಟ, ವಾಣಿಜ್ಯ ವಿಚಾರಗಳ ಖಾತೆಯೂ ಗುರುವಿನದೇ ಆಗಿದೆ. ಒಟ್ಟಿನಲ್ಲಿ ಮಳೆ ಕಡಿಮೆ ಎಂದೇ ಅನ್ನಬಹುದು.
ಭೂಕಂಪನ, ಅಗ್ನಿ ಆಕಸ್ಮಿಕ, ಈಶಾನ್ಯ ಭಾಗದಲ್ಲಿ ಕಂಡರಿಯದ ಅತಿವೃಷ್ಟಿ, ಹಿಮಾಲಯ ಪರ್ವತವೇ ತತ್ತರಿಸುವ ಸ್ಥಿತಿಗತಿ 2020ರ ಪ್ರಾರಂಭಕ್ಕೂ ಮುನ್ನ ನಿರೀಕ್ಷಿತ ಉತ್ತರ ಭಾರತದ ಭಾಗವೆಲ್ಲ ಕಂಪನದ ಭಯ ಎದುರಿಸಬೇಕಾದೀತು. ಕರ್ನಾಟಕದಲ್ಲಿ ವರ್ಚಸ್ವೀ ನಾಯಕರಿಗೆ ಮರಣದ ಭಯವನ್ನು ಅಗ್ನಿರಾಶಿಯಲ್ಲಿ ಸ್ಥಿತನಾದ, ಅದೂ ಶನೈಶ್ಚರನೊಂದಿಗೆ ಉಸಿರುಕಟ್ಟಿಕೊಂಡಿರುವ ಕೇತು (ಸರ್ಪದ ಬಾಲ) ಹರಳುಗಟ್ಟಿಸುತ್ತಾನೆ.
ಮೋದಿ ಮತ್ತೂಂದು ಅವಧಿಗೆ ಪ್ರಧಾನಿ?
ಇದೊಂದು ಅದ್ಭುತ ವಿಜಯ ಎಂದು ನಿಖರವಾಗಿ ದಾಖಲಿಸುವಂಥ ಪ್ರಚಂಡ ಗೆಲುವು ಮೋದಿಯವರಿಗೆ ಸಿಗಲಾರದು. ಪೂರ್ವ ದಿಕ್ಕಿನ ಸಾಪೇಕ್ಷತೆಯು ಭದ್ರವಾಗಿ ಸಿಗುವಂತಾದರೆ ಶನೈಶ್ಚರ ಇಚ್ಛೆ ಮಾಯಾವತಿಯವರತ್ತ ವಾಲುತ್ತದೆ. ಶನಿಕಲೋತ್ರ ಮಹಾ ಅನುಷ್ಠಾನ, ಶಕ್ತಿ ಶಾಂಭವಿಯ ದಿವ್ಯ ಆರಾಧನಾ ಫಲವಾಗಿ ಮಾಯಾವತಿ ರಾಹುವಿನಿಂದ, ಮಾಂದಿ ದೋಷದಿಂದ ಆಚ್ಛಾದಿತವಾದ ಅಡತಡೆಗಳನ್ನು ನಿವಾರಿಸಿಕೊಂಡರೆ ಭಾರತದ ಮುಂದಿನ ಮೂರು ವರ್ಷಗಳ ಕೆಂಪು ಕೋಟೆಯ ಮೇಲಿನ ಸ್ವಾತಂತ್ರ್ಯ ದಿನಾಚರಣೆಯು ಮಾಯವತಿಯವರಿಂದಲೇ ನಡೆಯುತ್ತದೆ ಎನ್ನುವುದರಲ್ಲಿ ಅನುಮಾನ ಬೇಡ. ಇಲ್ಲಿ ಆಷೇಯ ವಿಚಾರಗಳ ಸಂಬಂಧವಾಗಿ ಮಾಯಾವತಿಯವರ ಶ್ರದ್ಧೆ, ಅನುಸಂಧಾನ ಸಕಾರಾತ್ಮಕವಾಗಿ ಬೇಕು. ಮಮತಾ ಬ್ಯಾನರ್ಜಿಯವರಿಗೆ ವಿಶೇಷವಾಗಿ ತೊಡಕುಗಳು ಶನೈಶ್ಚರನಿಂದಲೇ ಸುತ್ತಿಕೊಂಡಿರುವುದರಿಂದ ನಿರೀಕ್ಷಿತ ಯಶಸ್ಸು. ಹಾಗೆಯೇ, ಪ್ರಧಾನ ಮಂತ್ರಿ ಪಟ್ಟ ಕಷ್ಟದ ವಿಚಾರ. ಹಗಲುಗನಸಿನ ವಿಚಾರವಾಗಿ ಪ್ರಧಾನಿ ಪಟ್ಟ ಚೌಕಟ್ಟು ಪಡೆದಿದೆ.
ಮೋದಿಯವರಿಗೆ ಶನೈಶ್ಚರ ಅಡತಡೆಗಳಿಂದಾಗಿ ದಿವ್ಯವಾದ ಅವರ ವಾಕ್ ಶಕ್ತಿಯನ್ನೂ ಕುಗ್ಗಿಸುವ ಕೇತು ಬಾಧೆಗಳು ಅಪಾರವಾಗಿವೆ. ಅವರ ಅದೃಷ್ಟದ ವಿಚಾರವೆಂದರೆ, ಸಾಡೇಸಾತಿ ಶನಿಕಾಟ ಇದ್ದರೂ ನೀಚ ಭಂಗ ರಾಜಯೋಗದಿಂದಾಗಿ ಚಂದ್ರನು (ಪ್ರತಿ ದಿನವೂ ಚಂದ್ರನು ವೇಗವನ್ನು ಪಡೆದಿರುವುವನಾದುದರಿಂದ) ಇನ್ನೊಂದು ಅವಧಿಯನ್ನು ದಯಪಾಲಿಸುವ ವಿಚಾರದಲ್ಲಿ ಶಕ್ತಿ ಮೀರಿ ಬಲವನ್ನು ಅನುಗ್ರಹಿಸುತ್ತಾನೆ. ರಾಹುಲ್ ಗಾಂಧಿಯವರ ರಾಹು ದೋಷ, ಛಿದ್ರಸ್ಥಾನ ಬಲದಿಂದ ಬಿಜೆಪಿ ವಿರೋಧಿಗಳನ್ನು ಒಗ್ಗೂಡಿಸಿಕೊಳ್ಳುವಲ್ಲಿ ನೆರವಿಗೆ ಬರುತ್ತಿಲ್ಲ. ಸಾಡೇಸಾತಿ ಶನೈಶ್ಚರ ಕಾಟವೂ ಬಲವಾಗಿದೆ. ಅತ್ಯತಿ ರುದ್ರ ಹಾಗೂ ವಿಜಯ ಭೈರವಿ ಸಿದ್ಧಿಯ ಮೂಲಕ ಕೆಲವು ಬಲವನ್ನು ಒಗ್ಗೂಡಿಸಿಕೊಂಡರೆ ಶನೈಶ್ಚರನ ಮೂಲಕವೇ ಪರಿಣಾಮಕಾರಿಯಾದ ಗೆಲುವಿನೊಂದಿಗೆ ಪ್ರತಿಷ್ಠಿತ ಪಟ್ಟವನ್ನು ಸಂಪಾದಿಸಿಕೊಳ್ಳಬೇಕು. ಆದರಿದು ತುಂಬಾ ದುಸ್ತರವಾದ ವಿಷಯ.
ಚಂದ್ರಬಾಬು ನಾಯ್ಡು, ಪಟ್ನಾಯಕ್, ಮಾಯಾವತಿ, ಅಖೀಲೇಶ್, ಶರದ್ ಪವಾರ್, ಅರವಿಂದ ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ಸ್ಟಾಲಿನ್, ದೇವೇಗೌಡ, ತೆಲಂಗಾಣದ ರಾವ್ ಮುಂತಾದವರೆಲ್ಲ ಒಂದಿಲ್ಲೊಂದು ರೀತಿಯಲ್ಲಿ ರಾಹು, ಕೇತು, ಶನೈಶ್ಚರರ ಬಾಧೆಯಿಂದ ಬಳಲುತ್ತಿರುವವರಾಗಿ ಒಗ್ಗೂಡಲು ಕಷ್ಟವಾಗುವ ದಿನಗಳೇ ಪ್ರಧಾನವಾಗಿವೆ. ಸೂರ್ಯನ ಬಲಾಡ್ಯತೆಗಾಗಿ ಗಾಯತ್ರಿ ಪುನಶ್ಚರಣೆ ಹಾಗೂ ಸರ್ವಸಿದ್ಧಿ ಅಶ್ವಾರೂಢ ಪಾರ್ವತಿ ಹವನ, ದತ್ತಾತ್ರೇಯ ಚೈತನ್ಯ ಸಂವರ್ಧನಾನುಗ್ರಹ ಸಿದ್ಧಿ ಸಂಪಾದಿಸಿಕೊಳ್ಳಲು ಮುಂದಾಗಬೇಕು. ವಜ್ರದಂಷ್ಟ್ರ ಎಂಬ ನಾಗನ ಸಿದ್ಧಿ, ಪ್ರತಿ ಪಕ್ಷದ ಮೈತ್ರಿಯ ಹಲವು ರಾಜಕೀಯ ಮುಖಂಡರು, ಮುಖ್ಯವಾಗಿ ರಾಹುಲ್ ಗಾಂಧಿ ಪಡೆದು ಹೋರಾಡುವುದರಿಂದ ಪರಿಣಾಮಕಾರಿ ಆಗಬಹುದು.
ದೇವೇಗೌಡರಿಗೆ ಈ ಸಂವತ್ಸರ ಹೇಗೆ?
ದೇವರನ್ನು ನಿಯಂತ್ರಿಸುವ ಶಕ್ತಿಯನ್ನು ನಾನು ನಂಬುತ್ತೇನೆ ಎಂದು ಬರೀ ದೇವೇಗೌಡರಲ್ಲ, ಸಂಪೂರ್ಣ ದೇವೇಗೌಡರ ಸಕುಟುಂಬವೇ ನಂಬಿದೆ. ಈ ನಂಬುವ ಶಕ್ತಿ ಅವರ ಬೆಂಬಲಕ್ಕೆ ಬಂದಿದೆ. ಬರುವ ಶಕ್ತಿಯನ್ನು ಇನ್ನೂ ಹೊಂದಿದೆ. ಮೇ.15ರಂದು ವೃಷಭಕ್ಕೆ ಬರುವ ರವಿಯು ದೇವೇಗೌಡರ ಮಟ್ಟಿಗೆ ಅಮೃತಮಯಿ ಎನ್ನುವ ಒಂದೇ ಲೆಕ್ಕಾಚಾರ ಅವರ ಯಶಸ್ಸಿನ ವಿಚಾರದಲ್ಲಿ ಎಲ್ಲವನ್ನೂ ಸರಳೀತಗೊಳಿಸಲಾರದು. ಉಚ್ಚ ಸ್ಥಾನವಾದರೂ (ಹಾಗೆಂದು ಸಾರಾವಳಿಯಲ್ಲಿ ಭಾರತೀಯ ಜ್ಯೋತಿಷ್ಯದ ಒಂದು ಕವಲು ನಂಬುತ್ತದೆ) ಮಿಥುನದಲ್ಲಿರುವ ರಾಹುವು, ಕೇತುವೂ, ಸಂರಕ್ಷಿತ ಗ್ರಹಗಳಾಗಲಾರದು. ದೇವೇಗೌಡರಿಗೂ ಇದು ಅನ್ವಯಿಸುತ್ತದೆ. ವಿಶೇಷವಾಗಿ ಶೃಂಗೇರಿ ಶಾರದೆಯನ್ನು ನಂಬಿರುವ ದೇವೇಗೌಡರಿಗೆ ಶಕ್ತಿ ಮಾತೃಕೆಗಳು ಯಾವಾಗಲೂ ಅನುಗ್ರಹಕಾರಕವೇ. ಆದರೆ, ಕೇತು ಅವರ ಮೂಲ ಜಾತಕದಲ್ಲಿ ಕಷ್ಟ ನೀಡುವ ದುಷ್ಟನಾಗಿ ಧರ್ಮಕರ್ಮಾಧಿಪತಿ ಯೋಗಕ್ಕೆ ತಡೆತಂದವನಾದುದರಿಂದ ಅಧಿಕಾರದ ಅವಧಿಯನ್ನು ಪೂರ್ತಿಯಾಗಿ ಮುಗಿಸಲಾಗದ ಕಂದಕಗಳನ್ನು ನಿರ್ಮಿಸಿ ಅದರಲ್ಲಿ ಅವರನ್ನು ಕೆಡವುತ್ತಲೇ ಇರುತ್ತಾನೆ.
ಏನಿದು ಕಳತ್ರ ಪೀಡೆ?
ವಾಸ್ತವವಾಗಿ ಕಳತ್ರ ಪೀಡೆ ಬಹು ವಿಸ್ತಾರವಾಗಿ ವಿಶ್ಲೇಷಿಸುವ ಸಂಗತಿಯಾಗಿದೆ. ಸ್ತ್ರೀಶಾಪ, ಪುರುಷ ವ್ಯಾಕುಲತೆ (ಇದು ಸ್ತ್ರೀಯರ ಮಟ್ಟಿಗೆ ಅನ್ವಯಿಸುವುದು), ದೈವದೋಷ, ನಾಗಕ್ಷತ ಇತ್ಯಾದಿ ಹಲವು ಪ್ರಭೇದಗಳ ದುರ್ಬರತೆಗಳು ಮಹತ್ವದ ಸಂದರ್ಭದ ರಾಜಯೋಗವನ್ನು ಹಾಳು ಮಾಡುತ್ತವೆ.
ಪ್ರಸ್ತುತ ವರ್ಷ ವಿಕಾರಿ ಸಂವತ್ಸರದಲ್ಲಿ ಕರ್ನಾಟಕದ ಪ್ರಭಾವಿ ನಾಯಕರು (ಇಲ್ಲಿ ಹೆಸರಿಸುವುದು ಅನಗತ್ಯ) ಒಂದಿಲ್ಲೊಂದು ರೀತಿಯ ಗ್ರಹ ಬಾಧೆ ಅನುಭವಿಸುತ್ತಿರುವುದರಿಂದ ಪರಿಣಾಮಕಾರಿಯಾದ ಬಲವನ್ನು ಶುಭಶಕ್ತಿಯ ಆರಾಧನೆಯಿಂದಲೇ ಸಂಯೋಜಿಸಿಕೊಳ್ಳಬೇಕಾಗುತ್ತದೆ. ಅನೇಕ ದೋಷಗಳು ಪ್ರಕ್ಷುಬ್ದತೆಯನ್ನು ಹಲವರು ಜಾತಕದಲ್ಲಿ ಎತ್ತಿ ತೋರಿಸುತ್ತಿವೆ. ವಿಕಾರಿ ನಾಮ ಸಂವತ್ಸರ ದೋಷಗಳ ಸ್ನಿಗ್ಧ ಸಾಂದ್ರತೆ ಗರಿಷ್ಠ ಪ್ರಮಾಣದಲ್ಲಿ ಹಲವರ ಜಾತಕಗಳಲ್ಲಿ ಮುಡುಗಟ್ಟಿರುವುದರಿಂದ ಆರೋಗ್ಯದ ವಿಚಾರದಲ್ಲಿ ಎಚ್ಚರವಹಿಸಬೇಕು.
ಹಿಂದುಳಿದ ವರ್ಗ, ಜಾತಿ, ಸಮುದಾಯದ ಅನೇಕ ನಾಯಕರುಗಳು ಭೈರವ, ಕೌಸ್ತುಭ, ಪಿನಾಕಧಾತು, ಎಳೆಗಳ ಪ್ರಚಂಡ ಶಕ್ತಿ ಹೊಂದಿದವರಾದರೂ ಸೂಕ್ತವಾದ ಕೆಲವು ಆಷೇìಯ ಹೆಜ್ಜೆಗಳ ಪರಿಣಾಮಕಾರಿ ಬಲವನ್ನು ಕಲೊ³àಕ್ತ ಸೂಕ್ತ ಅವಧೂತ ಪರಿಧಿಯಿಂದ ಪಡೆದುದಾದರೆ ವಿಕಾರಿ ನಾಮ ಸಂವತ್ಸರದ ಕರ್ನಾಟಕದಲ್ಲಿ ಹೊಸ ಶಕೆಗೆ ನಾಂದಿ ಹಾಡುತ್ತದೆ.
1. ಆಡಳಿತದ ಸೂತ್ರ ಹಿಡಿದವರು ಅನ್ಯಮನಸ್ಕರಾಗಿರುತ್ತಾರೆ. ಮುಂಗಾರು ಮಳೆ ಕ್ಷೀಣ. ಹಿಂಗಾರು ಮಳೆ ಆನಂದ ಉಂಟು ಮಾಡುವ ಶಕ್ತಿ ಪಡೆದಿರುತ್ತದೆ.
2. ಇದೊಂದು ಅದ್ಭುತ ವಿಜಯ ಎಂದು ನಿಖರವಾಗಿ ದಾಖಲಿಸುವಂಥ ಪ್ರಚಂಡ ಗೆಲುವು ಮೋದಿಯವರಿಗೆ ಸಿಗಲಾರದು. ಪೂರ್ವ ದಿಕ್ಕಿನ ಸಾಪೇಕ್ಷತೆಯು ಭದ್ರವಾಗಿ ಸಿಗುವಂತಾದರೆ ಶನೈಶ್ಚರ ಇಚ್ಚೆ ಮಾಯಾವತಿಯವರತ್ತ ವಾಲುವ ಸಂಭವ ಉಂಟು.
3. ಮೋದಿಯವರಿಗೆ ಶನೈಶ್ಚರ ಅಡತಡೆಗಳಿಂದಾಗಿ ದಿವ್ಯವಾದ ಅವರ ವಾಕ್ ಶಕ್ತಿಯನ್ನೂ ಕುಗ್ಗಿಸುವ ಕೇತು ಬಾಧೆಗಳು ಅಪಾರವಾಗಿವೆ. ಅವರ ಅದೃಷ್ಟದ ವಿಚಾರವೆಂದರೆ, ಸಾಡೇಸಾತಿ ಶನಿಕಾಟ ಇದ್ದರೂ ನೀಚ ಭಂಗ ರಾಜಯೋಗದಿಂದಾಗಿ ಚಂದ್ರನು ಇನ್ನೊಂದು ಅವಧಿಯನ್ನು ಶಕ್ತಿ ಮೀರಿ ಅನುಗ್ರಹಿಸುತ್ತಾನೆ.
ಅನಂತಶಾಸ್ತ್ರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.