ಹೊಸಾಕುಳಿಯ ಮಹಿಮೇಶ್ವರ ಈ ಉಮಾ ಮಹೇಶ್ವರ 

Team Udayavani, Apr 8, 2017, 10:49 AM IST

28.jpg

ನಗರ ಪ್ರದೇಶ, ಹೆದ್ದಾರಿಯ ಸಮೀಪ ಇರುವ ಅದೆಷ್ಟೋ ದೇಗುಲಗಳು ನಿತ್ಯ ಸಾವಿರಾರು ಭಕ್ತನ್ನು ಆರ್ಕಸುತ್ತಾ ಅಭಿವೃದ್ಧಿ ಹೊಂದುತ್ತವೆ. ಆದರೆ ಗ್ರಾಮೀಣ ಪ್ರದೇಶದಲ್ಲಿನ ಕೆಲವು ದೇಗುಲಗಳು ಪರಂಪರಾಗತ ಭಕ್ತ ಸಮೂಹವನ್ನು ಹೊಂದಿ ತನ್ನದೇ ಆದ ಖ್ಯಾತಿಯನ್ನು ಗಳಿಸಿರುತ್ತವೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದಲ್ಲಿರುವ ಮಕ್ಕಿ ಶ್ರೀಉಮಾಮಹೇಶ್ವರ ದೇವಾಲಯ ಸುಂದರ ಪರಿಸರದಲ್ಲಿರುವ ಪ್ರಾಚೀನ 
ದೇವಾಲಯ.

 ಈ ದೇವಾಲಯಕ್ಕೆ ಪುರಾಣ ಪ್ರಸಿದ್ಧಿ ಇದೆ. ದೇವಾಲಯದ ಸುತ್ತಮುತ್ತಲೂ ಮಂದೆ ಮಕ್ಕಿಗದ್ದೆ(ಖುಷ್ಕಿ ಭತ್ತದ ಜಮೀನು) ಪ್ರದೇಶವಿತ್ತು. ಇದಕ್ಕಾಗಿ ಈ ದೇವಾಲಯ ಮಕ್ಕಿ ದೇವಸ್ಥಾನ ಎಂದು ಪ್ರಸಿದ್ಧವಾಗಿದೆ. 

  ನಾರದರ ಪ್ರಾರ್ಥನೆಯಂತೆ ಲೋಕೋದ್ದಾರಕ್ಕಾಗಿ ಮಹಾಗಣಪತಿಯನ್ನು ದೇವತೆಗಳು ಶರಾವತಿ ತಟದ ಕುಂಜವನದಲ್ಲಿ ನೆಲೆಯಾಗಲು ಕಳುಹಿಸಿದರಂತೆ. ಸೂತಪುರಾಣಿಕರು ವರ್ಣಿಸಿದ ಇಡಗುಂಜಿ ಕ್ಷೇತ್ರದ ಮಹಿಮೆಯಲ್ಲಿ ಹೊನ್ನಾವರ ಸುತ್ತಲಿನ ಹಲವು ಸುಕ್ಷೇತ್ರಗಳ ಪ್ರಸ್ತಾವನೆ ಇದೆ. ಮಹಾಗಣಪತಿ ನೆಲೆಯೂರಲು ಪೂರಕವಾಗಿ ಇಲ್ಲಿನ ಸುತ್ತಮುತ್ತಲಿನ 

ಭೂಮಿಯನ್ನು ಪುಣ್ಯ ತಪೋವನವನ್ನಾಗಿಸಲು ದೇವತೆಗಳು ಹಲವು ರೂಪದಲ್ಲಿ ಬಂದು ನೆಲೆಯಾದರು. ಅದರಂತೆ ಮುಗ್ವಾದ ಶ್ರೀಸುಬ್ರಹ್ಮಣ್ಯ, ಗೋಪಾಲಕೃಷ್ಣ, ಶ್ವೇತಾಂಬಿಕಾ ದೇವಿ,  ಸಂತಾನಗೋಪಾಲಕೃಷ್ಣ, ಶರಾವತಿ ನದಿ ನಡುವಿನ ಹಯಗುಂದ ದ್ವೀಪದಲ್ಲಿ ಶ್ರೀಭುವನೇಶ್ವರಿ ದೇವಿ ನೆಲೆಯೂರಿದವು. ಅದೇ ರೀತಿ ಶರಾವತಿಯ ಉಪನದಿಯಾದ ಪಂಚಮುಖೀ ಹೊಳೆ(ಸಾಲಕೋಡು ಹೊಳೆ)ಯ ತೀರ ಪ್ರದೇಶವಾದ ಹೊಸಾಕುಳಿ ಗ್ರಾಮದಲ್ಲಿ 

ಶ್ರೀಉಮಾಮಹೇಶ್ವರ ಮತ್ತು ಸ್ವಲ್ಪ ದೂರದಲ್ಲಿ ಶ್ರೀಲಕ್ಷಿ$¾àನಾರಾಯಣ ದೇವರುಗಳು ನೆಲೆಯಾದರು. ಎಲ್ಲ ದೇವತೆಗಳ ಬಯಕೆಯಂತೆ ಇಡಗುಂಜಿಗೆ ಶ್ರೀಮಹಾಗಣಪತಿ ಆಗಮಿಸಿ ನೆಲೆಯಾದರಂತೆ.

  ಹೊಸಾಕುಳಿಯಲ್ಲಿ ನೆಲೆಯಾದ ಉಮಾಮಹೇಶ್ವರ ದೇವರು ಪಶ್ಚಿಮಾಭಿಮುಖವಾಗಿದೆ. ದೇವಾಲಯದ ಹಿಂಭಾಗದಲ್ಲಿ ಎತ್ತರದ ಗುಡ್ಡ, ಎಡಬಲಗಳಲ್ಲಿ ಭತ್ತದ ಗದ್ದೆ ಮತ್ತು  ಎದುರು ಭಾಗದಲ್ಲಿ  ವಿಶಾಲವಾದ ಅಡಕೆ ತೋಟದ ಸಾಲು ಇದೆ. ಈಗಲೂ ಸಹ ದೇವಾಲಯದ ಬಲಭಾಗದಲ್ಲಿನ ಮಕ್ಕಿಗದ್ದೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಭತ್ತ ಬೆಳೆಯಲಾಗುತ್ತಿದೆ. 

ಸುಮಾರು 500 ವರ್ಷಗಳ ಹಿಂದೆ ಈ ದೇವಾಲಯದಿಂದ ಸುಮಾರು 29 ಕಿ.ಮೀ.ದೂರದ ಅಠಾರ ಎಂಬಲ್ಲಿ ದೊಡ್ಡ ಪ್ರಮಾಣದ ಈಶ್ವರ ದೇವಾಲಯವಿತ್ತಂತೆ. ಮರಾಠರ ಆಳ್ವಿಕೆಯ ಈ ಪ್ರದೇಶದಮೇಲೆ ಬಹುಮನಿ ಸುಲ್ತಾನರ ದಾಳಿ ನಡೆಯಿತು. ಅಠಾರದಲ್ಲಿ ಆಗ ಸಾಮಂತ ರಾಜರೊಬ್ಬರ ಕೋಟೆ ಮತ್ತು ಅರಮನೆಗಳಿದ್ದು ಆಡಳಿತದ ಕೇಂದ್ರವಾಗಿತ್ತು. 

ಸುಲ್ತಾನರ ದಾಳಿಯಿಂದ ದೇವಾಲಯ ಮತ್ತು ಗುಡಿಗಳು ಧ್ವಂಸವಾಗಿ ಅಲ್ಲಿನ ಪರಂಪರಾಗತ ಹಲವು ಕುಟುಂಬಗಳು ಆ ಪ್ರದೇಶ ತ್ಯಜಿಸಿ ಹೊಸಾಕುಳಿ, ಸಾಲಕೋಡು, ಮುಗ್ವಾ,ಬಾಳೆಗದ್ದೆ, ಗುಡ್ಡೆಬಾಳು ಇತ್ಯಾದಿ ಪ್ರದೇಶಗಳಿಗೆ ವಲಸೆ ಬಂದರಂತೆ. ಇಲ್ಲಿಗೆ ಬಂದು ನೆಲೆಯೂರಿದ 

ಆ ಕುಟುಂಬಗಳ ಜನರು ಒಂದೆರಡು ವರ್ಷಗಳಲ್ಲಿಯೇ ತಾವು ತ್ಯಜಿಸಿ ಬಂದ ಅಠಾರಕ್ಕೆ ತೆರಳಿ ಅಲ್ಲಿನ ಈಶ್ವರ ದೇವಾಲಯದ ಶಿಲಾಕಲ್ಲುಗಳು, ಮರದ ನಾಟಾ ಮತ್ತು ಕೆತ್ತನೆಯ ಬಾಗಿಲುಗಳನ್ನು ಎತ್ತಿನ ಗಾಡಿಗಳಲ್ಲಿ ಹೇರಿಕೊಂಡು ಉಮಾಮಹೇಶ್ವರ ಮತ್ತು ಲಕ್ಷಿ$¾àನಾರಾಯಣ ಮತ್ತು ಸಾಲಕೋಡಿನ ಬೊಂಡಕಾರೇಶ್ವರ ದೇವಾಲಯಗಳಿಗೆ ತಂದು ಜೋಡಿಸಿದರಂತೆ.

 ದೇವಾಲಯದಲ್ಲಿ ನಿತ್ಯ ತ್ರಿಕಾಲ ಪೂಜೆ ನಡೆಯುತ್ತದೆ. ಪ್ರತಿ ವರ್ಷ ರಥಸಪ್ತಮಿಯಂದು ವೈಭವದ ಮಹಾರಥೋತ್ಸವ ಜರುಗುತ್ತದೆ.  ಶುಕ್ಲ ಪಕ್ಷದ ಏಕಾದಶಿಯಂದು ದೇವರಿಗೆ ವಿಶೇಷ ಅಲಂಕಾರ ಪೂಜೆ ನಡೆಯುತ್ತದೆ. 

ಈ ದೇವಾಲಯಕ್ಕೆ ಸುತ್ತಮುತ್ತಲ ಹಲವು ಗ್ರಾಮಗಳಲ್ಲಿರುವ ಪರಂಪರಾಗತ 
ಭಕ್ತರಿದ್ದಾರೆ. ಸಾವಿರಾರು ಕುಟುಂಬಗಳು ತಮ್ಮ ಕುಲದೇವರೆಂದು ಈ ದೇವರನ್ನು ಆರಾಧಿಸುತ್ತಾರೆ. 

ವಿದ್ಯೆ,ಸಂತಾನಪ್ರಾಪ್ತಿ,ವಾಹಾದಿ ಶುಭ ಕಾರ್ಯ ಪ್ರಾರಂಭಕ್ಕೆ ಮುನ್ನ ಈ ದೇವರಿಗೆ ಪೂಜೆ ಸಲ್ಲಿಸುವುದು ,ಕಾರಣಿಕ ಕೇಳುವುದು(ಪ್ರಸಾದ ಕೇಳುವುದು) ವಾಡಿಕೆಯಲ್ಲಿದೆ.

ಫೋಟೊ ಮತ್ತು ಲೇಖನ-ಎನ್‌.ಡಿ.ಹೆಗಡೆ ಆನಂದಪುರಂ

ಟಾಪ್ ನ್ಯೂಸ್

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

ಮಂಗಳೂರಿಗೆ ವಾಟರ್‌ ವೆುಟ್ರೋ; ಎಂಡಬ್ಲ್ಯುಎಂಪಿ ನಿರ್ಮಾಣಕ್ಕೆ ಮುಂದಾಗಿರುವ ಕೆಎಂಬಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.