ಆರಗದ ದೊಡ್ಡ  ವೀರಾಂಜನೇಯಸ್ವಾಮಿ


Team Udayavani, Jan 20, 2018, 12:25 PM IST

368.jpg

ಪೂರ್ವಾಭಿಮುಖವಾಗಿರುವ ಈ ದೇವಾಲಯದಲ್ಲಿ ಶ್ರೀಆಂಜನೇಯ ದೇವರ ಮುಖ ಉತ್ತರಾಭಿಮುಖವಾಗಿದೆ. ದೇವರ ಮೂರ್ತಿ ಪಾಣಿಪೀಠದಿಂದ ಕೆಳಭಾಗದಲ್ಲಿ 6 ಅಡಿ ಆಳವಿದೆ. ಮೇಲ್ಭಾಗದಲ್ಲಿ 8 ಅಡಿ ಎತ್ತರದ ಮೂರ್ತಿ ಇದಾಗಿದೆ. ಇಲ್ಲಿನ ಪರಿವಾರದೇವತೆಗಳಾಗಿ ಶ್ರೀಗರುಡ ಮತ್ತು ಶ್ರೀನಾಗ ದೇವರ ವಿಗ್ರಹವಿದ್ದು ನಿತ್ಯ ಪೂಜೆ ನಡೆಯುತ್ತದೆ. ಶ್ರಾವಣ ಮಾಸದಲ್ಲಿ ನಿತ್ಯ ಪಂಚಾಮೃತಾಭಿಷೇಕ ಮತ್ತು ವಿಶೇಷಾಲಂಕಾರ ಪೂಜೆ, ನವರಾತ್ರಿಯಲ್ಲಿ ದಸರಾ ಉತ್ಸವ, ಕಾರ್ತಿಕದಲ್ಲಿ ದೀಪೋತ್ಸವ, ಶಿವರಾತ್ರಿಯಂದು ಜಾಗರಣೆ, ರಾಮನವಮಿಯ ಸಂದರ್ಭದಲ್ಲಿ 9 ದಿನಗಳ ಕಾಲ ರಾಮೋತ್ಸವ ,ದಶಮಿಯಂದು ಹನುಮೋತ್ಸವ ನಡೆಸಲಾಗುತ್ತದೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಿಂದ 10.ಕಿಮೀ ದೂರದಲ್ಲಿರುವ ಆರಗ, ಅತ್ಯಂತ ಪ್ರಾಚೀನ ಮತ್ತು ಐತಿಹಾಸಿಕ ಹಿನ್ನೆಲೆ ಹೊಂದಿರುವ ಗ್ರಾಮ. ಇಲ್ಲಿ ಪ್ರಾಚೀನ ಕಾಲದ ಶಿಲಾ ದೇಗುಲಗಳು, ಅಗ್ರಹಾರ, ಶಿಥಿಲ ಕೋಟೆ ಇತ್ಯಾದಿಗಳಿವೆ. ಆರಗ-ಹೊಸನಗರ ಸಂಪರ್ಕ ರಸ್ತೆಯಲ್ಲಿ ಸುಮಾರು ಒಂದು ಕಿ.ಮೀ.ದೂರದಲ್ಲಿರುವ ದೊಡ್ಡ ವೀರಾಂಜನೇಯ ದೇವಾಲಯ ಅತ್ಯಂತ ಆಕರ್ಷಕವಾಗಿದೆ. ಸ್ಥಳೀಯ ಗ್ರಾಮಸ್ಥರಷ್ಟೆ, ಅಲ್ಲ, ಬಹು ದೂರದ ಊರುಗಳಿಂದ ಸಹ ಭಕ್ತರು ಇಲ್ಲಿಗೆ ಆಗಮಿಸಿ ಪೂಜೆ ,ಹರಕೆ, ಸಮರ್ಪಿಸುತ್ತಾರೆ. 

ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹಾಗೂ ಧಾರ್ಮಿಕವಾಗಿ ಅತಿ ವಿಶಿಷ್ಟ ವೆನಿಸುವ ಊರು ಆರಗ.  ವಿಜಯನಗರ, ಕೆಳದಿ ಅರಸರ ಆಳ್ವಿಕೆಯ ಕಾಲದಲ್ಲಿ  ಮಲೆರಾಜ್ಯ, ಆರಗವೇರಿ, ಆರಗ ಮಹಾನಾಡು ಎಂಬ ಹೆಸರುಗಳಿಂದ ಕರೆಯಲ್ಪಡುತ್ತಿತ್ತು. ಮಹಾಭಾರತ ಕಾಲದಲ್ಲಿ ಪಾಂಡವರ ವಾಸಕ್ಕಾಗಿ ನಿರ್ಮಿಸಿದ್ದ ಅರಗಿನ ಮನೆ ಇಲ್ಲಿತ್ತು. ಅರಗಿನ ಮನೆಯ ಕಾರಣದಿಂದ ಈ ಊರಿಗೆಆರಗ ಎಂಬ ಹೆಸರು ಉಳಿದುಕೊಂಡಿತು ಎಂಬ ಪ್ರತೀತಿ ಇದೆ. 

ಇಲ್ಲಿರುವ ಶ್ರೀರಾಮಾಂಜನೇಯ ದೇವಾಲಯದಲ್ಲಿ, 8 ಅಡಿ ಎತ್ತರದ  ಅಭಯ ನೀಡುತ್ತಾ ನಿಂತ ಭಂಗಿಯಲ್ಲಿರುವ ವಿಗ್ರಹವಿದೆ. ಇದು ಏಕಶಿಲಾ ಮೂರ್ತಿಯಾಗಿದ್ದು ವಿಜಯನಗರ ಮತ್ತು ಕೆಳದಿ ಅರಸರುಗಳಿಂದ ಪೂಜೆಗೊಂಡಿದೆ.

ವಿಜಯನಗರದ ಕೊನೆಯ ಅರಸು  ಅರವೀಡು ವಂಶದ 2 ನೇ ರಂಗರಾಯ, ಸುಲ್ತಾನರ ದಬ್ಟಾಳಿಕೆಯಿಂದ ತನ್ನ ರಾಜ್ಯ ಕಳೆದುಕೊಂಡು,  ಕೆಳದಿಯ ಅರಸು ಶಿವಪ್ಪನಾಯಕನ ಬಳಿ ಆಶ್ರಯ ಅರಸಿಕೊಂಡು ಬರುತ್ತಾನೆ.  ಶಿವಪ್ಪನಾಯಕನು ರಂಗರಾಯನನ್ನು ಕವಲೇ ದುರ್ಗದಲ್ಲಿ ಉಳಿಸಿಕೊಂಡು ರಕ್ಷಣೆ ನೀಡುತ್ತಾನೆ.  ರಂಗರಾಯನು ಕವಲೇದುರ್ಗದಲ್ಲಿ ಚಿಕ್ಕ ವೀರಾಂಜನೇಯನ ವಿಗ್ರಹ ಪ್ರತಿಷ್ಠಾಪಿಸಿ ,ಆರಗದಲ್ಲಿ ದೊಡ್ಡ ವೀರಾಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪಿಸಿದನೆಂದು ಶಾಸನಗಳು ಹೇಳುತ್ತವೆ. 

ಆರಗದಲ್ಲಿ ಹತ್ತು ಹಲವು ದೇವಾಲಯಗಳಿವೆ. ಅವುಗಳ ಪೈಕಿ ಶ್ರೀ ಕಲಾನಾಥೇಶ್ವರ. ಶ್ರೀ ಅಖಂಡೇಶ್ವರ, ಶ್ರೀಅಮೃತೇಶ್ವರ, ಶ್ರೀನೀಲಕಂಠೇಶ್ವರ, ಶ್ರೀದುರ್ಗಾಪರಮೇಶ್ವರಿ ಮುಖ್ಯವಾದವು.  ಎಲ್ಲವೂ ಶಿಲಾಮಯ ಆಕರ್ಷಕ ದೇವಾಲಯಗಳು.  ಕೆಲವು ಶಿಥಿಲವಾಗಿವೆ. ಇಡೀ ಊರಿಗೆ ಕಲಶ ಪ್ರಾಯವಾಗಿ ಕಂಗೊಳಿಸುವುದು ಇಲ್ಲಿನ ಶ್ರೀ ದೊಡ್ಡ ವೀರಾಂಜನೇಯ ಶಿಲಾ ಮೂರ್ತಿ.

ರಸ್ತೆಯ ಪಕ್ಕದಲ್ಲಿ ಎತ್ತರದ ದಿಣ್ಣೆಯಲ್ಲಿದ್ದ ಈ ದೇವರ ಗುಡಿ ಶಿಥಿಲವಾಗಿತ್ತು. 2009ರಲ್ಲಿ ಗ್ರಾಮಸ್ಥರೆಲ್ಲ ಚರ್ಚಿಸಿ, ದೇವಾಲಯ ಜೀರ್ಣೋದ್ದಾರಕ್ಕೆ ಮುಂದಾದರು.  ಅಷ್ಟಮಂಗಲ ಪ್ರಶ್ನಾ ಚಿಂತನ ನಡೆಸಿದಾಗ ಮಾರ್ಗದರ್ಶನ ದೊರೆತಿತು 2013ರ ಮೇ ತಿಂಗಳಿನಲ್ಲಿ ಕ್ರೇನ್‌ಗಳನ್ನು ಬಳಸಿ ದೇವರ ಮೂರ್ತಿ ಸ್ಥಳಾಂತರಿಸಿ ಪುನರ್‌ ಪ್ರತಿಷ್ಠಾಪನೆ, ಅಷ್ಟಬಂಧ ಕಲಶಾಭಿಷೇಕ ಮಹೋತ್ಸವ ನಡೆಸಲಾಯಿತು. ಈ ಸಂದರ್ಭದಲ್ಲಿ ಆಗಮೋಕ್ತ ರೀತಿಯಲ್ಲಿ 5 ದಿನಗಳ ಕಾಲ ಪ್ರತಿಷ್ಠಾಪನಾ ಮಹೋತ್ಸವ ನಡೆದಿತ್ತು.

ಎನ್‌.ಡಿ.ಹೆಗಡೆ ಆನಂದಪುರಂ

ಟಾಪ್ ನ್ಯೂಸ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!

Riots against mosque survey: Police fire tear gas at Sambhal

Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

20-uv-fusion

UV Fusion: ಜೀವಂತಿಕೆ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.