ವೆಂಕಟಾಪುರದ ಉದ್ಭವ ವೆಂಕಟೇಶ


Team Udayavani, Nov 10, 2018, 11:53 AM IST

55.jpg

ಗದಗ ತಾಲೂಕಿನಲ್ಲಿರುವ ವೆಂಕಟಾಪುರ, ಮಿನಿ ತಿರುಪತಿ ಎಂದೇ ಹೆಸರು ಪಡೆದಿದೆ. ಲಕ್ಷ್ಮೀ ವೆಂಕಟೇಶ್ವರ, ಪದ್ಮಾವತಿ ದೇವರು ಉದ್ಭವ ಮೂರ್ತಿ ಇರುವ ಏಕೈಕ ದೇವಾಲಯ ಎಂಬ ಹೆಗ್ಗಳಿಕೆ ಈ ಊರಿನ ವೆಂಕಟೇಶ್ವರ ದೇವಾಲಯಕ್ಕಿದೆ. 

ಭಗವಂತನು ನೆಲೆಸಿದ ನೆಲವೇ ಸುಕ್ಷೇತ್ರ. ಶ್ರೀ ವೆಂಕಟೇಶ ದೇವರು ಕಲ್ಲಿನಲ್ಲಿ ಉದ್ಭವಿಸಿದ ಕ್ಷೇತ್ರವೇ ವೆಂಕಟಾಪುರ. ವಿಶೇಷವೆಂದರೆ, ಇಡೀ ರಾಜ್ಯದಲ್ಲಿಯೇ ಲಕ್ಷ್ಮೀ-ವೆಂಕಟೇಶ್ವರ, ಪದ್ಮಾವತಿ ದೇವಿಯ ಉದ್ಭವಮೂರ್ತಿ ಇರುವ ಏಕೈಕ ದೇವಾಲಯ ಇದು. ನಂತರ 2ನೇ ತಿರುಪತಿ ಎಂದೂ ಈ ಕ್ಷೇತ್ರ ಪ್ರಸಿದ್ಧಿ ಪಡೆದಿದೆ.

ಗದಗ ತಾಲೂಕು ಸೊರಟೂರ ಗ್ರಾಮದ ಸಮೀಪ ಈ ವೆಂಕಟಾಪುರವಿದೆ. ಇಲ್ಲಿನ ದೇವಾಲಯ ಸುಮಾರು 250 ವರ್ಷಗಳ ಇತಿಹಾಸ ಹೊಂದಿದೆ.  ಕಪ್ಪತ್ತಗುಡ್ಡ ಮಡಿಲಲ್ಲಿರುವ ಸಣ್ಣ ಗುಡ್ಡದಲ್ಲಿ ಉದ್ಭವಿಸಿರುವ ವೆಂಕಟೇಶ್ವರ,  ಸಾವಿರಾರು ಭಕ್ತರ ಪಾಲಿಗೆ ಆರಾಧ್ಯ ದೈವನಾಗಿದ್ದಾನೆ.

ಇತಿಹಾಸ
 ಪೇಶ್ವೆಯರ ಕಾಲದಿಂದ ವತನಿ ಹಕ್ಕುಗಳನ್ನು ಪಡೆದು, ಪರಂಪರಾನುಗತವಾಗಿ ಕಾಯ್ದುಕೊಂಡು ಬಂದ ಮನೆತನಗಳಲ್ಲಿ ವೆಂಕಪ್ಪಯ್ಯ ದೇಸಾಯಿಯವರ ಮನೆತನವೊ ಒಂದು. ಅದು, ಸೊರಟೂರ ಗ್ರಾಮದಲ್ಲಿತ್ತು. ತಿರುಪತಿಯ ವೆಂಕಟೇಶ್ವರನೇ ಈ ದೇಸಾಯರ ಕುಲದೇವರು. ದೇಸಾಯರು, ಪ್ರತಿವರ್ಷ ನವರಾತ್ರಿ ಉತ್ಸವಕ್ಕೆ ತಿರುಪತಿಗೆ ತಪ್ಪದೇ ಹೋಗಿ ಬರುವ ಪರಿಪಾಠ ಇಟ್ಟುಕೊಂಡಿದ್ದರು. ವೃದ್ಧಾಪ್ಯದಿಂದಅಸ್ವಸ್ಥಗೊಂಡ ದೇಸಾಯಿ ಅವರಿಗೆ ತಿರುಪತಿಗೆ ಹೋಗಲು ಅಸಾಧ್ಯವಾಯಿತು. ಆಗ ಶ್ರೀನಿವಾಸನ ದರ್ಶನವಿಲ್ಲದೇ ಊಟ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿ ಉಪವಾಸ ಕೈಗೊಂಡರು. ಅವರ ಕನಸಲ್ಲಿ ಬಂದ “ಶ್ರೀನಿವಾಸ’  - “ಭಕ್ತ ಶ್ರೇಷ್ಠನೇ ಚಿಂತೆ ಬಿಡು. ನಿನ್ನ ಈ ಗ್ರಾಮದ (ಸೊರಟೂರು) ಉತ್ತರ ದಿಕ್ಕಿಗೆ ಇರುವ ಗುಡ್ಡದ ಓರೆಯಲ್ಲಿ ಬಂದು ನಿಂತಿರುವೆ. ನನ್ನ ಮೇಲೆ ಹುತ್ತ ಬೆಳೆದಿದ್ದು, ದನಕಾಯುವರು ಅದನ್ನು ಕೊಟ್ಟಿಗೆ ಮಾಡಿದ್ದಾರೆ.  ಆದರೂ ದಿನನಿತ್ಯ ನನ್ನ ಮೇಲೆ ಗೋಕ್ಷೀರಾಭಿಷೇಕ ಆಗುತ್ತಿದೆ. ಇದೇ ಸ್ಥಳದಲ್ಲಿ ನನಗೆ ಸೇವೆ ಸಲ್ಲಿಸು’ ಎಂದು  ಸಂದೇಶವಿತ್ತನಂತೆ. 

ಅದರಂತೆ, ತಿಪ್ಪೆಯ ಮೇಲಿನ ಹುತ್ತವನ್ನು ತೆಗೆಯುತ್ತಿದ್ದಂತೆ ಅದರ ಬುಡದಲ್ಲಿ ಚಿಕ್ಕದೊಂದು ಕರೀ ಬಂಡೆಗಲ್ಲಿನ ಮೇಲೆ ರೇಖಾ ರೂಪದಲ್ಲಿದ್ದ ಶ್ರೀ ವೆಂಕಟೇಶ್ವರನ ವಿಗ್ರಹ ಕಂಡು ದೇಸಾಯಿ ಹರ್ಷಗೊಂಡರು. ಆ ವರ್ಷ ನವರಾತ್ರಿ ಉತ್ಸವವನ್ನು ಅಲ್ಲಿಯೇ ಆಚರಿಸಿ, ಚಿಕ್ಕ ಗುಡಿಯನ್ನು ಕಟ್ಟಿಸಿ ಪೂಜೆ ಮಾಡಲು ಆರಂಭಿಸಿದರು. ನಿತ್ಯ ಪೂಜೆ, ಪುನಸ್ಕಾರಗಳು ನಡೆಯಲು,  ದೇಸಾಯವರು ಕೂಡಲಿ ಶೃಂಗೇರಿ ಮಠಕ್ಕೆ ಇಡೀ ಗ್ರಾಮವನ್ನು ದಾನ ಮಾಡಿದರು. ಅದರಂತೆ ಶ್ರೀಮಠದವರು ಪೂಜೆಗೆ ಅರ್ಚಕರನ್ನು ನೇಮಿಸಿ, 1913ರಲ್ಲಿ ಶ್ರೀ ಲಕ್ಷ್ಮೀ-ವೆಂಕಟೇಶ ಟ್ರಸ್ಟ್‌ ರಚಿಸಿದರು. ವೆಂಕಪ್ಪಯ್ಯ ಶ್ರೀನಿವಾಸ ದೇಸಾಯಿ ಅವರನ್ನು ಟ್ರಸ್ಟ್‌ನ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು.

ಲಕ್ಷ್ಮೀದೇವಿ-ಪದ್ಮಾವತಿಯೂ ಉದ್ಭವ
ಬ್ರಹ್ಮಾನಂದ ಗುರುಗಳು ಗರ್ಭಗುಡಿ ಸುತ್ತಲೂ ಪೋಳಿಗಳನ್ನು ಕಟ್ಟಿಸಿದರು. ಗರ್ಭಗುಡಿಯಲ್ಲಿಯ ವೆಂಕಟಪತಿಯ ಎಡಗಡೆ ಮೂಲೆಯ ಕಂಬದ ಕೆಳಗಿದ್ದ ಬಂಡೆಗಲ್ಲಿನ ಮೇಲೆ ನಿತ್ಯವೂ ಭಕ್ತರು ಮತ್ತು ಅರ್ಚಕರು ತೆಂಗಿನಕಾಯಿ ಒಡೆಯುತ್ತಿದ್ದರು. ಒಂದು ದಿನ‌ ಶ್ರೀಗಳಿಗೆ, ಕೇವಲ ಹೊರಗಿನ ವೈಭವ ಬೆಳೆಸುತ್ತಿರಿ. ಆದರೆ ನನ್ನ ತಲೆಯ ಮೇಲೆ ಮೂಲೆಕಂಬ ನಿಂತಿದೆ. ಮೊದಲು ಅದನ್ನು ತೆಗೆಯಿರಿ ಎಂದು ಲಕ್ಷ್ಮೀದೇವಿಯ ಆದೇಶವಾಯಿತಂತೆ. ಅದರಂತೆ ಗರ್ಭಗುಡಿ ವಿಸ್ತರಿಸಲಾಯಿತು. ಗರ್ಭಗುಡಿಯ ಅಡಿಪಾಯ ತೆಗೆಯುವಾಗ ಎರಡು ಮೂರ್ತಿಗಳು ಒಂದೇ ಬಂಡೆಗಲ್ಲಿನಲ್ಲಿರುವುದು ಕಂಡಿತು. ಅಂದಿನಿಂದ, ಅದರ ಮೇಲೆ ಕಾಯಿ ಒಡೆಯುವುದನ್ನು ನಿಲ್ಲಿಸಲಾಯಿತು. ಇಲ್ಲಿರುವ ವೆಂಕಟೇಶ ಶಂಖ, ಚಕ್ರ, ಗದೆ, ಪದ್ಮಗಳೊಂದಿಗೆ ನಿಂತಿದ್ದಾನೆ.  ಎಡಗಡೆ ಮೂಲೆಯ ಭಾಗದಲ್ಲಿ ಪದ್ಮಾವತಿ ಮೂರ್ತಿ ಕಂಗೊಳಿಸುತ್ತವೆ.

ವೆಂಕಟಾಪುರದ ದೇವಸ್ಥಾನದ ಆವರಣದಲ್ಲಿ ದತ್ತಾತ್ರೇಯ, ಹನುಮಂತ, ಗಣೇಶ, ನಾಗ ದೇವತೆ, ಕಾಶಿ ವಿಶ್ವನಾಥ ಮತ್ತು ವರಹದೇವರು ಮೂರ್ತಿಗಳಿವೆ. ದೇವಸ್ಥಾನದ ಎದುರು ದೀಪಸ್ತಂಭವಿದೆ. ಸದ್ಗುರು ಬ್ರಹ್ಮಚೈತನ್ಯ ಮಹಾರಾಜರ ಸಮಾಧಿಯೂ ಇಲ್ಲಿದೆ. ಪ್ರತಿದಿನ ಬೆಳಗ್ಗೆ 6ರಿಂದ ಮಧ್ಯಾಹ್ನ 2ರ ವರೆಗೆ, ಮಧ್ಯಾಹ್ನ 4ರಿಂದ ರಾತ್ರಿ 9ರ ವರೆಗೆ ದೇವರ ದರ್ಶನ ಇರುತ್ತದೆ. ಮಧ್ಯಾಹ್ನ ನಿತ್ಯ ಅನ್ನಸಂತರ್ಪಣೆ ನಡೆಯುತ್ತದೆ. ಪ್ರತಿವರ್ಷ ನವರಾತ್ರಿ ಉತ್ಸವದ ಕೊನೆಯ ದಿನ ವಿಜಯದಶಮಿ ದಿನದಂದು ವೆಂಕಟೇಶ್ವರ ರಥೋತ್ಸವ ಜರಗುತ್ತದೆ.

ಬಸ್‌ ಸೌಲಭ್ಯ
ಹುಬ್ಬಳ್ಳಿ (71 ಕಿ.ಮೀ.), ಗದಗ (23 ಕಿ.ಮೀ.) ಮತ್ತು ಶಿರಹಟ್ಟಿ (8 ಕಿ.ಮೀ.) ಬಸ್‌ ನಿಲ್ದಾಣದಿಂದ ಬಸ್‌ಗಳ ಸೌಲಭ್ಯ ಸೀಮಿತವಾಗಿ ಇರುವುದರಿಂದ ಸ್ವಂತ ವಾಹನದಲ್ಲಿ ವೆಂಕಟಾಪುರಕ್ಕೆ ತೆರಳುವುದು ಸೂಕ್ತ. ಇಲ್ಲಿ ಎಲ್ಲ ಮೂಲ ಸೌಲಭ್ಯ ಇರುವುದರಿಂದ ಕುಟುಂಬ ಸಮೇತ ಪ್ರವಾಸ ಕೈಗೊಳ್ಳಬಹುದು.

 ಶರಣು ಹುಬ್ಬಳ್ಳಿ 

ಟಾಪ್ ನ್ಯೂಸ್

Karnataka: ಹೊಸ ವರ್ಷದ ಆಚರಣೆ ಮದ್ಯ ಮಾರಾಟ ನೀರಸ

Karnataka: ಹೊಸ ವರ್ಷದ ಆಚರಣೆ ಮದ್ಯ ಮಾರಾಟ ನೀರಸ

Karnataka ಪ್ರತ್ಯೇಕ ಪ್ರಕರಣ: ಅಪಘಾತಗಳಲ್ಲಿ 11 ಮಂದಿ ಸಾವು

Karnataka ಪ್ರತ್ಯೇಕ ಪ್ರಕರಣ: ಅಪಘಾತಗಳಲ್ಲಿ 11 ಮಂದಿ ಸಾವು

ಕೆಎಸ್ಸಾರ್ಟಿಸಿ ಮುಡಿಗೆ 9 ರಾಷ್ಟ್ರಮಟ್ಟದ ಪ್ರಶಸ್ತಿ

Bengaluru: ಕೆಎಸ್ಸಾರ್ಟಿಸಿ ಮುಡಿಗೆ 9 ರಾಷ್ಟ್ರಮಟ್ಟದ ಪ್ರಶಸ್ತಿ

Rave Party: ನಟಿ ಹೇಮಾ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

Rave Party: ನಟಿ ಹೇಮಾ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

ಹೊಸ ವರ್ಷಾಚರಣೆ ಹಿನ್ನೆಲೆ: ದೇಗುಲಗಳಲ್ಲಿ ಭಕ್ತಸಾಗರ

ಹೊಸ ವರ್ಷಾಚರಣೆ ಹಿನ್ನೆಲೆ: ದೇಗುಲಗಳಲ್ಲಿ ಭಕ್ತಸಾಗರ

Congress: ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಮುಂದುವರಿದ ಒತ್ತಡ

Congress: ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಮುಂದುವರಿದ ಒತ್ತಡ

Priyank Kharge ರಾಜೀನಾಮೆ ಕೇಳುವುದಕ್ಕೆ ಸಿಎಂಗೆ ಧೈರ್ಯವಿಲ್ಲ: ಛಲವಾದಿ ವ್ಯಂಗ್ಯ

Priyank Kharge ರಾಜೀನಾಮೆ ಕೇಳುವುದಕ್ಕೆ ಸಿಎಂಗೆ ಧೈರ್ಯವಿಲ್ಲ: ಛಲವಾದಿ ವ್ಯಂಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

13

Surathkal: ಅನಾರೋಗ್ಯದಿಂದ ಸಿ.ಎ. ವಿದ್ಯಾರ್ಥಿನಿ ಸಾವು

Karnataka: ಹೊಸ ವರ್ಷದ ಆಚರಣೆ ಮದ್ಯ ಮಾರಾಟ ನೀರಸ

Karnataka: ಹೊಸ ವರ್ಷದ ಆಚರಣೆ ಮದ್ಯ ಮಾರಾಟ ನೀರಸ

Karnataka ಪ್ರತ್ಯೇಕ ಪ್ರಕರಣ: ಅಪಘಾತಗಳಲ್ಲಿ 11 ಮಂದಿ ಸಾವು

Karnataka ಪ್ರತ್ಯೇಕ ಪ್ರಕರಣ: ಅಪಘಾತಗಳಲ್ಲಿ 11 ಮಂದಿ ಸಾವು

ಕೆಎಸ್ಸಾರ್ಟಿಸಿ ಮುಡಿಗೆ 9 ರಾಷ್ಟ್ರಮಟ್ಟದ ಪ್ರಶಸ್ತಿ

Bengaluru: ಕೆಎಸ್ಸಾರ್ಟಿಸಿ ಮುಡಿಗೆ 9 ರಾಷ್ಟ್ರಮಟ್ಟದ ಪ್ರಶಸ್ತಿ

Rave Party: ನಟಿ ಹೇಮಾ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

Rave Party: ನಟಿ ಹೇಮಾ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.