ವಿಜಯ್ ಹಜಾರೆ ಟ್ರೋಫಿ; ಕರ್ನಾಟಕ ಎಡವಿದ್ದೆಲ್ಲಿ?
Team Udayavani, Oct 13, 2018, 10:34 AM IST
ರಾಜ್ಯ ಕ್ರಿಕೆಟ್ ಅಭಿಮಾನಿಗಳು ಅಕ್ಷರಶಃ ಭಾರೀ ಆಘಾತದಿಂದ ಚೇತರಿಸಿಕೊಳ್ಳುತ್ತಿದ್ದಾರೆ!, ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಕೂಟದಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ನೀರಸ ಪ್ರದರ್ಶನ ನೀಡಿಕೂಟದಿಂದ ಹೊರಬಿದ್ದಿದ್ದು ಇದಕ್ಕೆಲ್ಲ ಕಾರಣ. ವಿನಯ್ ಕುಮಾರ್, ಆರ್.ಸಮರ್ಥ್ರಂತಹ ಶ್ರೇಷ್ಠ ಆಟಗಾರರಿದ್ದರೂ ರಾಜ್ಯ ತಂಡ ವೈಫಲ್ಯ ಅನುಭವಿಸಿದ್ದು ಹೇಗೆ? ಹಾಗಾದರೆ ರಾಜ್ಯ ತಂಡ ಎಡವಿದ್ದೆಲ್ಲಿ ?, ಮಾಡಿದ ತಪ್ಪುಗಳೇನು? ಇಂತಹ ಹತ್ತು ಹಲವಾರು ಪ್ರಶ್ನೆ ಈಗ ಅಭಿಮಾನಿಗಳನ್ನು ಕಾಡುತ್ತಿವೆ. ಈ ಪ್ರಶ್ನೆಗೆ ಉತ್ತರ ಹುಡುಕುವಂತಹ ಲೇಖನ ಇಲ್ಲಿದೆ.
ಫಾರ್ಮ್ ವೈಫಲ್ಯವೇ
ಕಾರಣವಾಯಿತೆ?, ರಾಜ್ಯ ತಂಡ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಬಲಿಷ್ಠ. ಹೀಗಿದ್ದರೂ ಎರಡರಲ್ಲೂ ರಾಜ್ಯ ವಿಫಲವಾಯಿತು ಎನ್ನಬಹುದು. ಬ್ಯಾಟಿಂಗ್ ನಲ್ಲಿ ನಿರೀಕ್ಷೆ ಹುಟ್ಟಿಸಿದ್ದ ತಂಡದ ಆಟಗಾರರು ಬ್ಯಾಟ್ ಬೀಸಲಿಲ್ಲ. ಬೌಲಿಂಗ್‌ನಲ್ಲಿ ವಿಕೆಟ್ ಕೀಳಬೇಕಾದವರು ವಿಕೆಟ್ ಕಿತ್ತು ಎದುರಾಳಿಗೆ ರನ್ ವೇಗಕ್ಕೆ ನಿಯಂತ್ರಣ ಹಾಕಲಿಲ್ಲ. ರಣಜಿ ಟ್ರೋಫಿ ಹಾಗೂ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗಳಲ್ಲಿ ಪ್ರಶಸ್ತಿ ಗೆಲ್ಲಲು ವಿಫಲವಾಗಿದ್ದ ಕರ್ನಾಟಕ , ವಿಜಯ್ ಹಜಾರೆ ಏಕದಿನ ಟೂರ್ನಿಯಲ್ಲಾದರೂ ಯಶಸ್ಸು ಗಳಿಸುವ ನಿರೀಕ್ಷೆ ಸಹ ಈ ಬಾರಿ ಹುಸಿಯಾಗಿದೆ.
ಮಿಂಚದ ಬೌಲಿಂಗ್ ಪಡೆ
ದಾವಣಗೆರೆ ಎಕ್ಸ್‌ಪ್ರೆಸ್ ಎಂದೇ ಪ್ರಖ್ಯಾತಿಯಾಗಿರುವ ಆರ್. ವಿನಯ್ ಕುಮಾರ್, ಆರ್‌ರೌಂಡರ್ ಸ್ಟುವರ್ಟ್ ಬಿನ್ನಿ, ಅಭಿಮನ್ಯು ಮಿಥುನ್, ಶರತ್ ರಂತಹ ವೇಗಿಗಳಿದ್ದರೂ ಎದುರಾಳಿ ತಂಡದ ವಿಕೆಟ್ ಪಡೆಯುವಲ್ಲಿ ಬೌಲರ್‌ಗಳು ವಿಫಲತಾಗಿತ್ತಿದ್ದರು ಎದ್ದು ಕಾಣುತ್ತಿತ್ತು. ಸರಣಿ ಯುದ್ದಕ್ಕೂ ಅನುಭವಿ ಬೌಲರ್‌ಗಳು ಬಿಗಿ ದಾಳಿ ನಡೆಸಿ ಎದುರಾಳಿ ತಂಡದ ವಿಕೆಟ್ ಪಡೆಯಲು ಪರದಾಟ ನಡೆಸುತ್ತಿದ್ದರು ಈ ವೈಫಲ್ಯವೇ ಸೋಲಿಗೆ ಪ್ರಮುಖ ಕಾರಣ.
ಸರಣಿಯಿಂದ ಇಬ್ಬರೂ ಔಟ್
ಅನುಭವಿ ಹಿರಿಯ ಆಟಗಾರರಾದ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ಹಾಗೂ ವಿಕೆಟ್ ಕೀಪರ್ ಗೌತಮ್ ಅವರ ಮೇಲೆ ಈ ಬಾರಿ ಹೆಚ್ಚು ನೀರಿಕ್ಷೆ ಇಡಲಾಗಿತ್ತಾದರೂ ಇಬ್ಬರೂ ತಮ್ಮ ಕಳಪೆ ಫಾರ್ಮ್ನಿಂದ ಒಂದೇ ಒಂದು ಪಂದ್ಯದಲ್ಲೂ ಉತ್ತಮ ಪ್ರದರ್ಶನ ತೋರಲಿಲ್ಲ ಹಾಗೂ ತಂಡ ಆಪತ್ಕಾಲದಲ್ಲಿದಾಗಲೂ ಜವಾಬ್ದಾರಿಯುತ ಆಟವಾಡದ ಕಾರಣ ಇಬ್ಬರನ್ನೂ ತಂಡದಿಂದ ಕೈ ಬಿಡಲಾಯಿತು.
ದಿಢೀರ್ ನಾಯಕತ್ವ ಬದಲಾವಣೆ
ವೇಗಿ ವಿನಯ್ ಕುಮಾರ್ ಸಾರಥ್ಯದಲ್ಲಿ ವಿಜಯ್ ಹಜಾರೆ ಟ್ರೋಫಿ ಅಭಿಯಾನ ಆರಂಭಿಸಿದ್ದ ಕರ್ನಾಟಕ, 4 ಪಂದ್ಯಗಳಲ್ಲಿ 3 ಸೋಲು ಅನುಭವಿಸಿತ್ತು. ಅಷ್ಟೇ ಅಲ್ಲದೇ ಒಂದು ಪಂದ್ಯ ಮಳೆಯಿಂದ ರ¨ªಾದ ಪರಿಣಾಮ ಹಾಲಿ ಚಾಂಪಿಯನ್ಸ್ ಖಾತೆಯಲ್ಲಿ ಕೇವಲ 2 ಅಂಕಗಳು ಮಾತ್ರ ಇದ್ದವು. ಹೀಗಾಗಿ ಆಡಳಿತ ಮಂಡಳಿ ವಿನಯ್ ಕುಮಾರ್‌ರನ್ನು ನಾಯಕತ್ವದಿಂದ ಕೆಳಗಿಳಿಸಿ ಆ ಜಾಗಕ್ಕೆ ಆರಂಭಿಕ ಆಟಗಾರ ಮನೀಶ್ ಪಾಂಡೆಯನ್ನು ಕೂರಿಸಿದರು.
ರಾಷ್ಟ್ರೀಯ ತಂಡಕ್ಕೆ ಸೆಡ್ಡು ಹೊಡೆಯೋ ತಂಡದಂತಿತ್ತು!
ಪ್ರಸ್ತುತ ರಾಜ್ಯ ತಂಡ ಅಂತಾರಾಷ್ಟ್ರೀಯ ತಂಡದ ಆಟಗಾರರ ಸಾಮರ್ಥ್ಯ ಹೊಂದಿದೆ. ರಾಷ್ಟ್ರೀಯ ತಂಡದಲ್ಲಿ ಆಡಲು ಸಮರ್ಥರಿರುವ ಹಲವು ಆಟಗಾರರು ತಂಡದಲ್ಲಿದ್ದಾರೆ. ತಂಡದಲ್ಲಿ ಬ್ಯಾಂಟಿಂಗ್ ಹಾಗೂ ಆಲ್‌ರೌಂಡರ್‌ಗಳಿಗೇನು ಕಮ್ಮಿ ಇಲ್ಲ. ಉತ್ತಮ ಬ್ಯಾಟಿಂಗ್ ಲೈನಪ್ ಹಾಗೂ ಮಧ್ಯಮ ಕ್ರಮಾಕದಲ್ಲಿ ಲೀಲಾ ಜಾಲವಾಗಿ ಬ್ಯಾಟ್ ಬೀಸುವ ಆಟಗಾರರೆ ತಂಡದಲ್ಲಿದ್ದಾರೆ. ಬೌಲಿಂಗ್‌ನಲ್ಲೂ ಸಹ ಭಾರತ ತಂಡದಲ್ಲಿ ಆಡಿದ ಅನುಭವಿ ಹಿರಿಯ ಆಟಗಾರರ ದಂಡೆ ಇದೆ. ಆದರೆ ಆಟಗಾರರು ಉತ್ತಮ ಫಾರ್ಮ್ನಲ್ಲಿಲ್ಲದೆ ಇರುವುದೇ ಆಡಳಿತ ಮಂಡಳಿಯ ತಲೆ ನೋವಿಗೆ ಕಾರಣವಾಯಿತು.
ಸತತ ಬ್ಯಾಟಿಂಗ್ ವೈಫಲ್ಯ
ಸರಣಿಯ ಮೊದಲ ಪಂದ್ಯದಿಂದಲೂ ತಂಡದಲ್ಲಿ ಬ್ಯಾಟಿಂಗ್ ವೈಫಲ್ಯ ಎದ್ದು ಕಾಣುತ್ತಿತ್ತು. ಮೊದಲ ಮೂರು ಪಂದ್ಯಗಳಲ್ಲೂ ಸೋಲು ಅನುಭವಿಸಿದ್ದ ಹಾಲಿ ಚಾಂಪಿಯನ್ನರು, ನಂತರದ ಪಂದ್ಯಗಳಲ್ಲಿ ಪ್ರಮುಖ ಬ್ಯಾಟ್ಸ್‌ಮನ್‌ಗಳು ಬ್ಯಾಟಿಂಗ್ ಆಡಲು ಪರದಾಟ ನಡೆಸಿದರು. ಸರಣಿಯಲ್ಲಿ ದೊಡ್ಡ ಮೊತ್ತ ಬೆನ್ನತ್ತಿದ ಪ್ರತಿ ಪಂದ್ಯದಲ್ಲೂ ಸಹ ತಂಡ ಗುರಿ ತಲುಪಲು ವಿಫಲವಾಯಿತು. ಕಳೆಯ ವರ್ಷ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆರಂಭಿಕ ಆಟಗಾರ ಮಯಾಂಕ್ ಅಗರ್‌ವಾಲ್ ಈ ಬಾರಿ ಬ್ಯಾಟಿಂಗ್ ಮರೆತಂತೆ ಬ್ಯಾಟ್ ಬೀಸಿದರು. ಕೆ.ಎಲ್. ರಾಹುಲ್ ಜತೆ ಉಪನಾಯಕ ಕರುಣ್ ನಾಯರ್, ಆರ್.ಸಮರ್ಥ್, ಪವನ್ ದೇಶಪಾಂಡೆ ಬ್ಯಾಟಿಂಗ್‌ಗೆ ಶಕ್ತಿ ತುಂಬಲಿ¨ªಾರೆ ಎಂದು ಅಂದುಕೊಳ್ಳಲಾಗಿತ್ತು, ಆದರೆ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಈ ಆಟಗಾರರು ಬ್ಯಾಟ್ ಬೀಸದೆ ಇರುವುದು ಅಭಿಮಾನಿಗಳಿಗೆ ಭಾರಿ ನಿರಾಸೆಯುಂಟು ಮಾಡಿದೆ.
ವೈಫಲ್ಯಗಳೇ ಹೆಚ್ಚು
ಸೆ. 20ರಂದು ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಆಡಿದ ಮೊದಲ ಪಂದ್ಯದಲ್ಲಿ ಮಹಾರಾಷ್ಟ್ರಕ್ಕೆ ವಿರುದ್ಧ 57 ರನ್‌ಗಳಿಂದ ಶರಣಾಯಿತು. ಈ ವೇಳೆ ರಾಜ್ಯದ ತಂಡದಲ್ಲಿ ಬ್ಯಾಟಿಂಗ್ ವೈಫಲ್ಯ ಎದ್ದು ಕಾಣುತ್ತದೆ. ಸೆ.21 ರಂದು ಎರಡನೇ ಪಂದ್ಯದಲ್ಲಿ ಮುಂಬೈ ವಿರುದ್ಧದ ಪಂದ್ಯದಲ್ಲಿ 88 ರನ್‌ಗಳಿಂದ ಸೋಲನ್ನಪ್ಪಿತ್ತು. ಇಲ್ಲೂ ಸಹ ತಂಡದ ಸೋಲಿಗೆ ಬ್ಯಾಟಿಂಗ್ ವೈಫಲ್ಯವೇ ಕಾರಣ. ಸೆ.24 ರಂದು ಗೋವಾ ವಿರುದ್ಧ ನಡೆಯ ಬೇಕಿದ್ದ ಪಂದ್ಯ ಒಂದು ಎಸೆತ ಕಾಣದೆ ಮಳೆಗೆ ಆಹುತಿಯಾಯಿತು. ಆಗ ಕರ್ನಾಟಕಕ್ಕೆ ಎರಡು ಅಂಕ ಲಭಿಸಿ ಖಾತೆ ತೆರೆದಂತಾಯಿತು. ಸೆ.30ರಂದು ವಿದರ್ಭ ವಿರುದ್ಧದ ಪಂದ್ಯದಲ್ಲಿ ರಾಜ್ಯ ತಂಡ ಆರು ವಿಕೆಟ್‌ಗಳಿಂದ ಜಯ ಸಾಧಿಸಿ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿತು. ನಾಯಕತ್ವ ಬದಲಾವಣೆ ಮಾಡಿದ್ದಕ್ಕೆ ತಂಡ ಗೆಲುವು ಕಂಡಿದೆ ಎನ್ನುವುದು ಕ್ರಿಕೆಟ್ ಪಂಡಿತರ ಮಾತು. ಅ. 4ರಂದು ರೈಲ್ವೇಸ್ ವಿರುದ್ಧದ ಪಂದ್ಯ ಸಂಪೂರ್ಣ ಮಳೆಗೆ ಆಹುತಿಯಾಗುವ ಮೂಲಕ ರಾಜ್ಯ ತಂಡ ನಾಕೌಟ್ ಪ್ರವೇಶಿಸುವ ಕನಸು ಭಗ್ನ ಗೊಂಡಿದೆ.
ಧನಂಜಯ ಆರ್.ಮಧು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.