ಕಲ್ಲು ಗೊರವ: ಕೋಳಿಯಂತಿರುವ ತೀರದ ಹಕ್ಕಿ

Team Udayavani, Jun 3, 2017, 1:33 PM IST

12.jpg

 ಇಂಟ್ರೋ- ಹಳ್ಳಿಗಳಲ್ಲಿ ಸಾಕುವ ಕೋಳಿಯಷ್ಟು ದಪ್ಪಕ್ಕಿರುವ ಕಲ್ಲುಗೊರವ, ಒಂದು ಅಪರೂಪದ ಹಕ್ಕಿ.Eurasian Curlew ( Numeniusarquata) Village Hen+ ನದಿ ತೀರದಲ್ಲಿ ಹುಳ-ಹುಪ್ಪಟೆಯನ್ನು ಬೇಟೆಯಾಡಲು ಹೋಗುವುದರಿಂದ ಇದನ್ನು “ತೀರದ ಹಕ್ಕಿ’ ಎಂದೂ ಕರೆಯುವುದುಂಟು…

 ಇದು ಹೇಗಿರುತ್ತದೆ ಅಂದಿರಾ? ಇದು, 15ಸೆಂ.ಮೀ ಉದ್ದದ, ಕೆಳಮುಖವಾಗಿ ಬಾಗಿರುವ ಸಪೂರಾದ ಕೊಕ್ಕಿನ ಹಕ್ಕಿ. ಈ ವಿಶಿಷ್ಟ ರೂಪವೇ ಅದನ್ನು ಗುರುತಿಸಲು ನೆರವಾಗುತ್ತದೆ. ಊರ ಕೋಳಿಯಷ್ಟು ದೊಡ್ಡದಿದ್ದು ದಪ್ಪನಾಗಿರುತ್ತದೆ. ಇದರ ರೆಕ್ಕೆಯ ಅಗಲ ಬಿಚ್ಚಿದಾಗ 89 ಸೆಂ.ಮೀ ದಿಂದ 106 ಸೆಂ.ಮೀ. ತನಕ ದೊಡ್ಡದಾಗಿರುತ್ತದೆ.  ದೇಹದ ಬಣ್ಣ ಬೂದು, ಕೆಂಪು ಮತ್ತು ಬಿಳಿಯ ಗೆರೆಗಳ ಚಿತ್ತಾರದಿಂದ ಕೂಡಿರುತ್ತದೆ. 

ನೀಲಿಮಿಶ್ರಿತ ಬೂದು ಬಣ್ಣದ ಉದ್ದ ಕಾಲು ಇದೆ. ಗಂಡು, ಹೆಣ್ಣು ಸಾಮಾನ್ಯವಾಗಿ ಒಂದೇ ರೀತಿ ಕಾಣುತ್ತವೆ.  ಇದೊಂದು ನೀರಿನ ಆಶ್ರಯದಲ್ಲೇ ಇರುವ ಹಕ್ಕಿ. ಇದನ್ನು ಜೌಗು ಹಕ್ಕಿ ಎಂದೂ ಕರೆಯುವುದುಂಟು. ಹೆಚ್ಚಾಗಿ ಗಜನೀ, ಜೌಗು ಪ್ರದೇಶದಲ್ಲೇ ಇವುಗಳ ನೆಲೆ. 

ಹಿನ್ನೀರು, ಕೆರೆ ಹೊಂಡ , ಸರೋವರ, ಕಡಲ ತೀರಕ್ಕೆ ನೀರು ಸೇರುವ ಜಾಗದ ಹೂಳಿರುವ  ಪ್ರದೇಶ, ಕಾಲುವೆ, ಅಲ್ಲಿ ದೊರೆಯುವ ಹುಳ ಹುಪ್ಪಟೆ, ಏಡಿ, ಬಸವನ ಹುಳ, ಸಿಂಪು, ಮೀನು , ಹಸಿ ಮಣ್ಣಿನಲ್ಲಿ ಹೂತು ಕೊಂಡಿರುವ ಎರೆಹುಳಗಳನ್ನೂ ತಿಂದು ಬದುಕುತ್ತದೆ. ನೀರಿನ ಅಂಚಿನ ಹತ್ತಿರ ಸಂಚರಿಸಿ, ಬೇಟೆಯಾಡುವುದರಿಂದ ಇವುಗಳನ್ನು “ತೀರದ ಹಕ್ಕಿ’ ಎನ್ನುತ್ತಾರೆ.  ಇವು ವಲಸೆ ಹೋಗುವ ಪಕ್ಷಿಗಳಾಗಿವೆ.  ಯುರೇಶಿಯನ್‌ ಕುಲೂì ಹಕ್ಕಿ ಬೇಸಿಗೆಯಲ್ಲಿ ಬೈಕಳ್‌, ಸೈಬೀರಿಯಾದ ಪಶ್ಚಿಮ ಭಾಗ, ಡೋರಿಯಾದ ದಕ್ಷಿಣ ಭಾಗದಲ್ಲಿರುತ್ತವೆ. ಅಲ್ಲಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. 

ಗಂಡು ಹಕ್ಕಿಗಿಂತ ಹೆಣ್ಣು ಹಕ್ಕಿಯ ಕೊಕ್ಕು ಉದ್ದವಾಗಿರುವುದು. ಹೆಣ್ಣು ಹಕ್ಕಿ ಕುಲೂìಊ, ಕುಲೂìಊ ಎಂದು ಕೂಗುತ್ತವೆ.  ಮಿಲನ ಸಂದರ್ಭದಲ್ಲಿ ಹೇಗೆ ವರ್ತಿಸುವುದು, ಹೆಣ್ಣುಗಂಡಿನಲ್ಲಿಯಾವುದು ಗೂಡು ಮಾಡುವುದು?, ಹೆಣ್ಣು ತನ್ನ ಪ್ರಿಯಕರನನ್ನು ಹೇಗೆ ಆರಿಸುವುದು? ಈ ಕುರಿತು ಹೆಚ್ಚಿನ ಮಾಹಿತಿಗಳಿಲ್ಲ. 

 ಹವಾಮಾನ ವ್ಯತ್ಯಾಸ ತಿಳಿದುಕೊಳ್ಳಲು ಈ ಹಕ್ಕಿಗಳಲ್ಲಿರುವ ಯಾವ ಅಂಗ, ಇಲ್ಲವೆ ಯಾವುದು ಅವುಗಳಿಗೆ ತಿಳಿಯಲು ಸಹಾಯಕವಾಗಿದೆ ಎಂಬುದೂ ತಿಳಿದಿಲ್ಲ. ತಿಳಿದಿದ್ದರೆ ಹವಾಮಾನದ ಏರು ಪೇರು, ಸುಂಟರ ಗಾಳಿಗಳಿಂದ ನಮಗೆ ಬರುವ ಅಪಾಯ ತಪ್ಪಿಸ ಬಹುದಾಗಿತ್ತೋ ಏನೋ? ! 

ಏಪ್ರಿಲ್‌, ಮೇ ತಿಂಗಳಲ್ಲಿ ಇವು ಉತ್ತರಕ್ಕೆ ಪ್ರಯಾಣ ಬೆಳೆಸಿ- ಬೇಸಿಗೆಯ ಹೊತ್ತಿಗೆ ತಮ್ಮ ಮೂಲ ಸ್ಥಾನ ಸೇರುತ್ತವೆ. ಅಲ್ಲಿ ಹುಲ್ಲು, ಕಸ ಸೇರಿಸಿ ನೆಲಮಟ್ಟದಲ್ಲಿಗೂಡು ಕಟ್ಟುತ್ತವೆ. ಅದರಲ್ಲಿ ತಿಳಿ ಕಂದುಬಣ್ಣದ, ಅಚ್ಚ ಕಂದು ಚುಕ್ಕೆಗಳಿರುವ 3 ರಿಂದ 6 ಮೊಟ್ಟೆ ಇಡುತ್ತವೆ. ತಿಂಗಳುಗಳ ಕಾಲ ಕಾವುಕೊಟ್ಟು ಮರಿಮಾಡುತ್ತವೆ.

 ಕೆಲವೊಮ್ಮೆ ಸಮುದ್ರದ ತೀರದಲ್ಲಿ ಗುಂಪಾಗಿ ಇದ್ದು ತೆರೆಗಳು ಬಂದು ಹಿಂದೆ ಹೋಗುವಾಗ ಅಲ್ಲಿರುವ ಹುಳಗಳನ್ನು ಆರಿಸಿ ತಿನ್ನುತ್ತವೆ.  ಮರಿಮಾಡುವ ಸಮಯದಲ್ಲಿ, ಸಂಗಾತಿಯನ್ನು ಕರೆಯುವಾಗ, ಮರಿಗಳ ರಕ್ಷಣೆಗೆ ಕರೆಯುವಾಗ, ಇಲ್ಲವೇ ತಮ್ಮ ಟೆರಿ ಟರಿ ಅಂತ ಘೋಷಿಸುವಾಗ ಇವು ತೆಗೆಯುವ ದನಿಗಳು ಅಧ್ಯಯನ ನಡೆಯುವ ವಿಚಾರವಾಗಿದೆ.  ಈ ಸುಂದರ ಪಕ್ಷಿ ಸಂಕುಲವನ್ನು ಉಳಿಸಬೇಕಾದರೆ-ಇವುಗಳು ವಲಸೆ ಬಂದಾಗ ಉಳಿಯುವ ಇರುದಾಣಗಳನ್ನು ಉಳಿಸಬೇಕು.  ಸಮುದ್ರತೀರ, ಜೌಗು ಪ್ರದೇಶದಲ್ಲಿ ಇವುಗಳಿಗೆ ರಕ್ಷಣೆ ಸಿಗುವಂತಾಗಬೇಕು. 

ಟಾಪ್ ನ್ಯೂಸ್

1-aaa

Bangladesh ಹಿಂಸಾಚಾರ: ಕೋಲ್ಕತಾ ಹಿಂದೂ ಸಂಘಟನೆಗಳ ಭಾರೀ ಪ್ರತಿಭಟನೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-aaa

Bangladesh ಹಿಂಸಾಚಾರ: ಕೋಲ್ಕತಾ ಹಿಂದೂ ಸಂಘಟನೆಗಳ ಭಾರೀ ಪ್ರತಿಭಟನೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.