ವಿಷ್ಣು ಸಹಸ್ರನಾಮ ಪಠಿಸಿದರೆ ಎಲ್ಲವೂ ಸರಿಹೋಗುತ್ತದೆಯೇ?


Team Udayavani, Oct 28, 2017, 4:00 AM IST

1-bg.jpg

ಯಾವುದೇ ದೇವರುಗಳು ಇರಲಿ, ಒಬ್ಬ ವ್ಯಕ್ತಿಯ ಮೇಲೆ ಮಾಡುವ ಪರಿಣಾಮ ಭಿನ್ನ ನೆಲೆಗಳದ್ದು. ಒಬ್ಬರಿಗೆ ಗಣಪತಿ, ಇನ್ನೊಬ್ಬರಿಗೆ ಶಿವ, ಮಗದೊಬ್ಬರಿಗೆ ಮಾರುತಿ, ಇನ್ಯಾರಿಗೋ ನರಸಿಂಹ, ಹಲವರಿಗೆ ಶ್ರೀಹರಿ ನಂತರ ಕೃಷ್ಣ, ರಾಮ, ರಾಘವೇಂದ್ರಸ್ವಾಮಿ, ಚೌಡಮ್ಮ, ಎಲ್ಲಮ್ಮ, ಲಕ್ಷ್ಮೀ,ಶಾರದೆ ಇತ್ಯಾದಿ ಇತ್ಯಾದಿ ಇಷ್ಟವಾಗಬಹುದು. ಭಕ್ತಿಯ ಪರಾಕಾಷ್ಠೆಯ ಪ್ರದರ್ಶನ ಎಂಬ ವಿಚಾರ ಟೀಕೆ ಏನೇ ಇರಲಿ, ಆದರೆ ಕೋಟ್ಯಂತರ ಜನ ಮನಸಾ, ಕಾಯಾ, ವಾಚಾ ದೇವರನ್ನು ಆರಾಧಿಸುತ್ತಾರೆ. ತಮ್ಮ ತಂದೆ ತಾಯಂದಿರನ್ನು ಕಂಡಂತೆ, ದೇವರನ್ನು ಕಂಡು ಪರವಶರಾಗುತ್ತಾರೆ. ತಮ್ಮ ಮಕ್ಕಳ ಆರೈಕೆ ಮಾಡಿದಂಥ ದೇವರನ್ನು ಮಮತೆಯಿಂದ ಕಂಡು ಸಂಭ್ರಮಿಸುತ್ತಾರೆ. ದೇವರ ಸಿದ್ಧಿಗಾಗಿ ದೇವರ ಸ್ತೋತ್ರಪಠಣ, ಧ್ಯಾನ, ಜಪದಲ್ಲಿ ತಮ್ಮನ್ನು ತಾವು ಮರೆತು ಶರಣಾಗುತ್ತಾರೆ. ಜೀವನಕ್ಕೆ ಬಂದ ನಂತರ ಧರ್ಮಾರ್ಥ ಕಾಮ ಮೋಕ್ಷಗಳಿಗಾಗಿನ ದೂರವನ್ನು ಕ್ರಮಿಸಲೇ ಬೇಕು. ಇಲ್ಲಿ ಚತುರ್‌ ಸಿದ್ಧಿಯನ್ನು ಪಡೆಯುವ ದಿಕ್ಕಿನಲ್ಲಿ  ದೌರ್ಬಲ್ಯಗಳು, ನಮ್ಮನ್ನು ಅನೇಕ ಅಗ್ನಿದಿವ್ಯಗಳನ್ನು ಎದುರಿಸುವಂತೆ ಸವಾಲು ಹಾಕುತ್ತಲೇ ಇರುತ್ತವೆ. ಅನಾಗರಿಕತೆ ಒಂದು ಶಾಪವಾದರೆ, ನಮ್ಮ ಅರಿಷಡ್ವರ್ಗಗಳ ಕಾರಣದಿಂದಾಗಿ ನಾಗರೀಕತೆಯೂ ಒಂದು ಶಾಪವಾಗುತ್ತದೆ.ಒಳ್ಳೆಯ ಮನುಷ್ಯ ಇದ್ದಿಕ್ಕಿದ್ದಂತೆ ಕಟ್ಟವ ಎಂದು ಟೀಕೆಗೊಳಲ್ಪಡುತ್ತಾನೆ. ದುಷ್ಟನೇ ವಿಜೃಂಭಿಸುತ್ತಾನೆ. ಆಡುವುದೇ ಒಂದು, ನಡೆಯುವುದೇ ಒಂದು ಎಂದು ಹೇಳಲು, ಆಚಾರ ತಿನ್ನುವುದು ಬದನೇಕಾಯಿ ಎಂಬ ಮಾತು ನೆನಪಾಗುತ್ತದೆ. ಆದರೆ ಜೀವನ ಕೇವಲ ಅನರ್ಥಗಳ ಕೂಪವೇ. 

ಜೀವನ ಕೇವಲ ಅರ್ಥಹೀನ ಕಾಲಘಟ್ಟವಲ್ಲ. ಕೆಲವರು ಅತಿ ಆಸೆ ಧೂರ್ತತನ,  ಹಣಬಲ ಎಲ್ಲರನ್ನೂ ದಮನಿಸುವ ತೋಳ್ಬಲ ಇತ್ಯಾದಿಗಳಿಂದ ಹೆಚ್ಚಿದ ಜನರನ್ನು ತೊಂದರೆಗೆ ತಳ್ಳುತ್ತಾರೆ.  

ನಮ್ಮ ಕರ್ಮಫ‌ಲಗಳು ನಮ್ಮನ್ನು ಆರ್ಥಿಕ ದುರವಸ್ಥೆಗೆ ಆಯಸ್ಸು ಆರೋಗ್ಯಗಳ ವಿಷಮತೆಗೆ ಕಾರಣವನ್ನು ಉಂಟಾಗಿಸಿ ಬವಣೆಗೆ ತಳ್ಳುತ್ತದೆ. ಆದರ ದೋಷಗಳು ಜಾತಕದಲ್ಲಿ ಇದ್ದುದ್ದು ಕಂಡು ಬರುತ್ತವೆ. ಆ ಗ್ರಹಗಳು ವಿಷಮ ಪರಿಸ್ಥಿತಿಯಲ್ಲಿ ಸಂಯೋಜನೆ ಗೊಂಡಾಗಲೇ. ಹಾಗಾದರೆ ಯಾಕೆ ಆಗಬಾರದ್ದು ಆಗಿ ಬಿಡುತ್ತದೆ? ಗ್ರಹಗಳಿಗೆ ಕಷ್ಟ ಕೊಡುವುದೇ ಒಂದು ಕಾಯಕವೇ?

ಇಲ್ಲ ಖಂಡಿತವಾಗಿ ಗ್ರಹಗಳ ಕೆಲಸ ಕಾಡುವುದೇ ಅಲ್ಲ. ಒಳಿತುಗಳು ಸಂಭ್ರಮಿಸುತ್ತಿರುವಾಗ ನಮಗೆ ಗ್ರಹಗಳ ನೆನಪೇ ಆಗುವುದಿಲ್ಲ. ಉದಾಹರಣೆಗೆ ತಮ್ಮ ಮಕ್ಕಳೂ ತಾವಾಗಿಯೇ ವಿದ್ಯಾಬುದ್ಧಿ ಹಾಗೂ ವಿನಯವನ್ನು ರೂಢಿಸಿಕೊಂಡು ಮುಂದುವರೆಯುತ್ತಿರುವಾಗ, ಯಾರೂ ಗ್ರಹಗಳ ಸಂಯೋಜನೆ ಸರಿಯಾಗಿದೆ. ಗ್ರಹಗಳ ಅನುಗ್ರಹದ ಕಾರಣದಿಂದ ಒಳಿತಿನೆಡೆಗೆ, ಹೆಜ್ಜೆ ಹಾಕಿದ್ದಾರೆ ಎಂದು ಯೋಚಿಸುವುದಿಲ್ಲ. ದೈವಾನುಗ್ರಹದಿಂದ ಸಧ್ಯಕ್ಕೆ ಚೆನ್ನಾಗಿದ್ದೇವೆ. ಚೆನ್ನಾಗಿದ್ದಾರೆ. ಮುಂದೇನೋ ತಿಳಿಯದು. ಎಲ್ಲವೂ ದಯಾಮಯನಾದ ದೇವರಿಂದ, ದಯಾಮಯಿಯಾದ ಸರ್ವೇಶ್ವರಿ ಕೃಪೆಯಿಂದ ಚೆನ್ನಾಗಿದ್ದೇವೆ ಎಂದು ಹೇಳುವವರು ಇಲ್ಲವೇ ಇಲ್ಲ ಎಂದಲ್ಲ, ಆದರೂ ಹೀಗೆ ಹೇಳುವವರ ಸಂಖ್ಯೆ ಕಡಿಮೆ.

ಆದರೆ ಜ್ಯೋತಿಷಿಯ ಬಳಿ ಎಲ್ಲರೂ ಸುಖವಾಗಿದ್ದಾಗ ಬರುವವರು ಜಾತಕ ವಿಶ್ಲೇಷಣೆ ಮಾಡಿಸುವುದು ಕಡಿಮೆಯೇ. ಆರೋಗ್ಯ ಸರಿ ಇರುವಾಗಲೂ, ಯಾರೂ ಡಾಕ್ಟರರ ಹತ್ತಿರ ಹೋಗುವುದಿಲ್ಲ. ಹಾಗೊಂದು ಪಕ್ಷ ಹೋದರೆ ತಲೆ ಸರಿ ಇಲ್ಲ ಎಂದೇ ಇತರರು ನಗಬಹುದು. ಏನಾದರೂ, ಬಂದರೆ ಕಷ್ಟವಲ್ಲವೇ? ಎಂದು ಹಲವರು ಹೋಗಲೂ ಬಹುದು. ಹೋಗಲಾರರು ಎಂದೇನಲ್ಲ. ವಿರಳವಾದರೂ ಸರಿ ಇದ್ದಾಗಲೂ ವೈದ್ಯರ ಸಲಹೆ ಪಡೆಯುವವರು ಇದ್ದಾರೆ. 

ಮಾಸ್ಟರ್‌ ಚೆಕಪ್‌ ಅಂತ ಪರೀಕ್ಷಿಸಿಕೊಂಡು ಆರೋಗ್ಯ ಸರಿ ಇದೆ ಎಂದು ನಿಟ್ಟುಸಿರು ಬಿಡುವವರು ಕಮ್ಮಿ ಸಂಖ್ಯೆಯಾದರೂ ಇದ್ದಾರೆ. ಆದರೆ ಜ್ಯೋತಿಷಿಯ ಬಳಿ ಮುಂದೂ ಸರಿಯಾಗಿಯೇ ಇರಬಹುದೆ ಎಲ್ಲವೂ ಎಂದು ಯೋಚಿಸಿ ತಿಳಿಯಲು, ಜಾತಕ ಪರೀಕ್ಷಿಸಲು ಹೋಗುವವರು ಕಡಿಮೆಯೇ. ಇಲ್ಲಾ ಯಾರೂ ಎಂಬುದೇ ಸತ್ಯ. ಯಾರೂ ಹೋಗಲಾರರು. ಫ‌ಕ್ಕನೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಷ್ಟವಾದಾಗ, ಓದಿದ ನಂತರವೂ ಕೆಲಸ ಸಿಗುವುದು ಕಷ್ಟವಾದಾಗ, ಕೆಲಸ ಸಿಕ್ಕಿದರೂ ಮನಃ ಸಂತೃಪ್ತಿ ಇರದಿರುವಾಗ, ಹಿಡಿದ ಕೆಲಸದಲ್ಲಿ ಕೈ ಹತ್ತದಿದ್ದಾಗ, ದುಡಿದರೂ ಹಣ ನಿಲ್ಲದೇ ಪರದಾಟವಾದಾಗ ಜ್ಯೋತಿಷಿಯ ಬಳಿ ಗಾಬರಿಬಿದ್ದು ಬರುತ್ತಾರೆ. ಈ ಸಂದರ್ಭ ಉಪಯೋಗಿಸಿಕೊಂಡು ಪರಿಹಾರದ ಮಾರ್ಗ ಎಂದು ಶೋಷಣೆಯೂ ಆದೀತು. ಒಬ್ಬ ಗುರು ಸ್ವರೂಪಿ ಜ್ಯೋತಿಷಿ ದಾರಿ ತಪ್ಪಿಸಲಾರ. ನಂಬಿಕೆ ಇಟ್ಟು ಬಂದವರನ್ನು ಸೂಕ್ತ ದಾರಿಗೆ ಮುಮ್ಮುಖವಾಗಿಸುತ್ತಾನೆ. 

ಶ್ರೀ ವಿಷ್ಣುಸಹಸ್ರ ನಾಮಾವಳಿ ಪಠಣ ತೊಂದರೆ ಪರಿಹರಿಸುವುದೇ?
ವಿಷ್ಣುವಿನ ಬಗೆಗಿನ, ಶಿವನ ಬಗೆಗಿನ, ಶ್ರೀ ಲಲಿತಾಂಬಿಕಾ ಬಗೆಗಿನ, ಗಣಪತಿ, ಮಾರುತಿ, ಮಂಗಳ ಕಾರಕಿ ಶಾರದಾ ಪ್ರಯುಕ್ತವಾದ ಶ್ರೀ ವರಲಕ್ಷ್ಮೀ  ಭೃಗು ಕನ್ಯೆಯ, ದತ್ತಾತ್ರೇಯ ಆರಾಧನಾ ಶಕ್ತಿ ಮಂತ್ರಗಳ ಪ್ರಭಾವಳಿ ವಿಶೇಷ  ಬಹಳಷ್ಟು ಅವಘಡಗಳನ್ನು, ಅನಿಷ್ಟ, ದಾರುಣ ಸ್ಥಿತಿ, ದರಿದ್ರಾವಸ್ಥೆಗಳನ್ನು ತಪ್ಪಿಸಿ ಸಕಾರಾತ್ಮಕ ದಾರಿಗೆ ನಮ್ಮನ್ನು ತಂದು ನಿಲ್ಲಿಸುವ ಚೈತನ್ಯ ಹೊಂದಿದಂಥದ್ದು. ಒಂದೇ ದೇವರ ಸಹಸ್ರನಾಮಾವಳಿಗಳು ನಮ್ಮ ಜೈವಿಕ ರಾಸಾಯನ ವ್ಯವಸ್ಥೆಯನ್ನು ಪುಷ್ಟಿಗೊಳಿಸುತ್ತದೆ. ದೇಹ ಧರ್ಮದ ಕೊರತೆಗಳನ್ನು ನಿವಾರಿಸಿ ದೇಹದ ಕಾಂತಿ ಹಾಗೂ ವರ್ಚಸ್ಸನ್ನು ಸಂವರ್ಧನಗೊಳಿಸುತ್ತದೆ. ಹತಾಶ ಮನೋಭಾವದಿಂದ ದೂರ ಮಾಡಿ ಲವಲವಿಕೆಯನ್ನು ಚಿಗುರಿಸುತ್ತದೆ. ಮೂಕನನ್ನು ಮಾತನಾಡುವಂತೆ ಪವಾಡ ಜರುಗಿಸುತ್ತದೆ. ಕೀಳರಿಮೆಯನ್ನು ತೊಡೆದು ಹಾಕಿ, ಸಮಾಧಾನದಿಂದ ಜನರೊಡನೆ ಬೆರೆತು ಅನ್ಯರ ಗಮನ ಸೆಳೆಯುವ ಪರಿವರ್ತನೆಗೆ ಶಕ್ತಿ ಒದಗಿಸುತ್ತದೆ. ಆಯುಷ್ಯ ವೃದ್ಧಿಗಾಗಿನ ತೇಜಸ್ಸನ್ನು ಒದಗಿಸುತ್ತವೆ. 

 ಹಲವರಿಗೆ ತಮ್ಮ ಅಭಿಪ್ರಾಯವನ್ನು ಮಂಡಿಸಲು ಧೈರ್ಯ ಬರುವುದಿಲ್ಲ. ಬಂದರೂ ಸುಸಂಬದ್ಧವಾಗಿ ಮಾತನಾಡಲಾರರು. ವಿಷ್ಣು ಸಹಸ್ರನಾಮಾವಳಿ ಪಠಣದಿಂದ ಅಚ್ಚುಕಟ್ಟಾಗಿ ನಿಮ್ಮ ಮನಸ್ಸಿನ ಇಂಗಿತವನ್ನ, ಅನ್ಯರು ನಿಮ್ಮನ್ನು ಆದರಿಸಬಹುದಾದ ರೀತಿಯ ಅಕ್ಕರೆಯ, ಗಟ್ಟಿಯಾದ ವಾದ ಮಂಡನೆಯನ್ನು ಮಾಡಬಲ್ಲರು. ಸ್ತವ ಪ್ರಿಯಾಯ ನಮಃ ಎಂಬ ಒಂದೇ ನಾಮವನ್ನು ಲಕ್ಷಗಟ್ಟಲೆ ಸಲ ಧ್ಯಾನಿಸಿ ಮಾತಿನ ಜಾಣ್ಮೆಯನ್ನು ಪಡೆದು ನ್ಯಾಯಾಲಯದಲ್ಲಿ ಪ್ರಕಾಂಡ ವಾಗ್ಮಿಗಳಾಗಿ ವಾದಿಸಿ ಪ್ರಸಿದ್ಧಿ ಪಡೆದವರಿದ್ದಾರೆ. ವ್ಯಾಪ್ತಾಯ ನಮಃ ಎಂಬುದನ್ನೇ ಲಕ್ಷಗಟ್ಟಲೆ ಬಾರಿ ಪಠಿಸಿ, ಶಕ್ತಿ ಸಂಚಯನ ಗೊಳಿಸಿಕೊಂಡು ಅನಂತ ವ್ಯಾಪ್ತಿಯ ವರ್ಚಸ್ಸು, ಸಿದ್ಧಿ, ಅಧಿಕಾರ ಪಡೆದುಕೊಂಡವರಿದ್ದಾರೆ. 
 ಜಾತಕದಲ್ಲಿ ಸೂರ್ಯ, ಗುರು, ಬುಧ, ರಾಹು ಗ್ರಹಗಳ ಸಿದ್ಧಿ ಜೋರಾಗಿ ದಕ್ಕಿದೆ ಎಂದಾಗ, ಇಲ್ಲ ಈ ಗ್ರಹಗಳಿಂದ ದೋಷವಿದೆ ಎಂದಾದರೆ ಶ್ರೀ ವಿಷ್ಣು ಸಹಸ್ರನಾಮಾವಳಿ ಪಠಣ ಲಾಭದಾಯಕ.  “ಜಗತøಭುಂ ದೇವ ದೇವಮನಂತಂ ಪುರುಷೋತ್ತಮ್‌, ಸ್ತುವನ್ನಾಮ ಸಹಸ್ರೇಣ ಪುರುಷಃ ಸತತೋತಿ§ತಃ- ಎಂಬ ಇಷ್ಟೇ ಸಾಲಿನ ಪಠಣ ಒಳಗಿನ ಹೊರಗಿನ ಶತ್ರುಗಳನ್ನು ನಿವಾರಿಸಿ ತೀವ್ರತರವಾದ ಯಶಸ್ಸನ್ನು ಬದುಕಿನಲ್ಲಿ ಸಂಪಾದಿಸಿಕೊಂಡು ಅನೇಕರಿದ್ದಾರೆ. ಈಗ ಅವರ ಹೆಸರಿನ ಪ್ರಸ್ತಾಪಬೇಡ. ದಕ್ಷಿಣ ಕನ್ನಡದ ರಾಜಕಾರಣಿ ಇವರು. ಶ್ರೀ ವಿಷ್ಣು ಸಹಸ್ರನಾಮಾವಳಿ ಪಠಣದಿಂದ ತಮ್ಮ ಪಕ್ಷದ ದೊಡ್ಡ ಯಶಸ್ಸು ಜಿಲ್ಲೆಯಲ್ಲಿ ಸಿಗಲು ಕಾರಣರಾಗಿ ಪ್ರಾಮಾಣಿಕರಾಗಿ, ದೊಡ್ಡ ನಾಯಕರಾಗಿ ಬೆಳೆದರು. ಇವರ ಬಗೆಗೆ ಜನರು (ಇವರ ಜಿಲ್ಲೆಯಲ್ಲಿ ಮಾತ್ರವಲ್ಲ) ದೇಶ ವ್ಯಾಪಿ ಸಾದರ ಪೂರ್ವಕವಾದ ಪ್ರಶಂಸೆಯ ಮಾತುಗಳನ್ನು ಆಡುತ್ತಾರೆ. ಕಿಂಚಿತ್ತೂ ಸ್ವಾರ್ಥವಿರದೆ ಜನರ ಬಗೆಗೆ ದುಡಿದರು. ಯಾವುದನ್ನೂ ಅತಿಯಾಗಿ ಯೋಚಿಸದೆ ಅಜಾತ ಶತ್ರುತ್ವವನ್ನ ನಿರ್ಮಿಸಿಕೊಂಡರು. 

ಜ್ಯೋತಿಷಿಯನ್ನು ಸಂಧಿಸಿದೆಯೇ ವಿಷ್ಣು ಸಹಸ್ರನಾಮ ಪಠಣದ ಮೂಲಕ ಕಷ್ಟಗಳ ನಿವಾರಣೆ ಮಾಡಿಕೊಳ್ಳುವ ಬಗೆಗೆ ಇನ್ನಿಷ್ಟನ್ನು ಮುಂದಿನ ವಾರ ಚರ್ಚಿಸೋಣ. 

 ಅನಂತಶಾಸ್ತ್ರಿ 

ಟಾಪ್ ನ್ಯೂಸ್

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.